ದಿನಾಂಕ:14-02-2022 ರಂದು ಮಾನ್ಯ ಆಯುಕ್ತರು ನಗರದ ಹೃದಯ ಭಾಗದಲ್ಲಿನ ಬಹುಹಂತದ ಕಾರ್ ಪಾರ್ಕಿಂಗ್ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ:14-02-2022 ರಂದು ಪೂಜ್ಯ ಮಹಾಪೌರರು ಪಾಲಿಕೆ ವ್ಯಾಪ್ತಿಯ ಶೂನ್ಯ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಆಯುಕ್ತರು, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಯುತ ಚಿದಾನಂದ ವಟಾರೆಯವರು , ದಿನಾಂಕ:12-02-2022 ರಂದು ಅಶ್ವತ್ಥ್ ನಗರದ ಸ್ವಾಮಿ ವಿವೇಕಾನಂದ ಪಾರ್ಕಿಗೆ ಆಗಮಿಸಿ ತಾವು ನೆಟ್ಟ ಗಿಡಕ್ಕೆ ನೀರೆರೆದರು.
ದಿನಾಂಕ:03-02-2022 ರಂದು ಮಾನ್ಯ ಆಯುಕ್ತರು ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯ ವಿದ್ಯಾನಗರ, ಮಲ್ಲಿಕಾರ್ಜುನ ನಗರ ಹಾಗೂ ಗೋಪಾಳ ಇಲ್ಲಿನ ಕಾಮಗಾರಿಯನ್ನು ಪರಿಶೀಲಿಸಿದರು, ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ:27-12-2021 ರಂದು ಮಾನ್ಯ ಆಯುಕ್ತರು ಅಮೃತ್ ಕಾರ್ಯಕ್ರಮದಡಿ ಪಾಲಿಕೆ ವ್ಯಾಪ್ತಿಯ ವಿವಿಧ ಯು.ಜಿ.ಡಿ. ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು, ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ಇಂದು ಸಂವಿಧಾನ ದಿನಾಚರಣೆಯ ಅಂಗವಾಗಿ ಪಾಲಿಕೆಯ ಸಭಾಂಗಣದಲ್ಲಿ ಪ್ರತಿಜ್ಞಾ ವಿಧಿಯನ್ನು ಉಪ ಆಯುಕ್ತರು (ಕಂದಾಯ) ರವರು ಬೋಧಿಸಿದ್ದು, ಕಛೇರಿಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ದಿನಾಂಕ:27-09-2021 ರಂದು ಮಾನ್ಯ ಆಯುಕ್ತರು, ಮಹಾನಗರಪಾಲಿಕೆ ಶಿವಮೊಗ್ಗ ಇವರು ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಪ್ಯಾಕೇಜ್ – 2, 3, 5, 6 & 10 ರಲ್ಲಿನ ಚರಂಡಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ದು, ಕಾರ್ಯಪಾಲಕ ಅಭಿಯಂತರರು ಹಾಗೂ ಪಾಲಿಕೆ ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ:27-09-2021 ರಂದು ಮಾನ್ಯ ಆಯುಕ್ತರು, ಮಹಾನಗರಪಾಲಿಕೆ ಶಿವಮೊಗ್ಗ ಇವರು ಮಹಾನಗರಪಾಲಿಕೆ ವ್ಯಾಪ್ತಿಯ ಡೇ-ನಲ್ಮ್ ಯೋಜನೆಯಡಿ ನಗರ ನಿರಾಶ್ರಿತರು ಹಾಗೂ ನಿರಾಶ್ರಿತ ಕೂಲಿ ಕಾರ್ಮಿಕರಿಗೆ ನಿರ್ಮಿಸಲಾಗಿರುವ ಕಟ್ಟಡದ ಪರಿಶೀಲನೆ ನೆಡಸಿದರು. ಪಾಲಿಕೆ ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ:03-09-2021 ರಂದು ಮಾನ್ಯ ಆಯುಕ್ತರು ನಗರದ ಗೋಪಾಳ ಬಡಾವಣೆಯಲ್ಲಿ ಪಾಲಿಕೆ ವತಿಯಿಂದ ಕೈಗೊಂಡಿರುವ ಸ್ವಚ್ಛತಾ ಕಾರ್ಯದ ಪರಿಶೀಲನೆ ನಡೆಸಿದರು, ಈ ಸಮಯದಲ್ಲಿ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (Tech) ಹಾಗೂ ವಾರ್ಡ್ ನ ಸ್ವಚ್ಛತಾ ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ:02-09-2021 ರಂದು ಮಾನ್ಯ ಆಯುಕ್ತರು ಹಾಗೂ ವ್ಯವಸ್ಥಾಪಕ ನಿರ್ದೇಶಕರು SSCL ರವರು ಪ್ಯಾಕೇಜ್-5 ಕನ್ಸರ್ ವೇನ್ಸಿ ಅಭಿವೃದ್ಧಿ (ಬಸವನಗುಡಿ, ಟ್ಯಾಂಕ್ ಮೊಹಲ್ಲ), ನೆಹರು ರಸ್ತೆ, ಯೋಗಭವನ, ಮಲ್ಲೇಶ್ವರ ಪಾರ್ಕ್ & ಹೊಳೆ ಬಸ್ ಸ್ಟಾಪ್ ಹತ್ತಿರದ ಕಾಮಗಾರಿಗಳ ಪರಿಶೀಲನೆ ನಡೆಸಿದರು, ಸ್ಮಾರ್ಟ್ ಸಿಟಿಯ ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ:25-08-2021 ರಂದು ಮಾನ್ಯ ಆಯುಕ್ತರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳುತ್ತಿರುವ ಪ್ಯಾಕೇಜ್-2ಬಿ (ಕುವೆಂಪು ರಸ್ತೆ) ಕಾಮಗಾರಿಯ ತಪಾಸಣೆ ನಡೆಸಿದರು. ಈ ಸಮಯದಲ್ಲಿ ಸ್ಮಾರ್ಟ್ ಸಿಟಿಯ ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ:18-08-2021 ರಂದು ಮಾನ್ಯ ಆಯುಕ್ತರು ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 4 ಮತ್ತು 31 ರಲ್ಲಿ ಸ್ವಚ್ಛತಾ ಕಾರ್ಯ ಪರಿಶೀಲನೆ ನಡೆಸಿದರು. ಪಾಲಿಕೆಯ ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ನಗರದ ಒಳಚರಂಡಿ ವ್ಯವಸ್ಥೆ ನಿರ್ವಹಣೆಯ ಕಾರ್ಮಿಕರ ಸುರಕ್ಷತೆ ಹಾಗೂ ಒಳಚರಂಡಿ ಕಾಮಗಾರಿಗಳ ಸಂಧರ್ಭದಲ್ಲಿ ತೆಗೆದುಕೊಳ್ಳಬಹುದಾದ ಸುರಕ್ಷತೆ ವಿಧಾನ ಕುರಿತು ಕಾರ್ಯಗಾರವನ್ನು ನಡೆಸಿದರು. ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ:05-08-2021 ರಂದು ಮಾನ್ಯ ಆಯುಕ್ತರು, ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ನಗರದ ತಿಲಕ್ ನಗರ, ಸವಳಂಗ ರಸ್ತೆ ಹಾಗೂ ರಾಣಿ ಚೆನ್ನಮ್ಮ ರಸ್ತೆಯಲ್ಲಿ ನಿರ್ವಹಿಸುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ:05-08-2021 ರಂದು ಮಾನ್ಯ ಆಯುಕ್ತರು, ಪಾಲಿಕೆ ವ್ಯಾಪ್ತಿಯ ಕಂದಾಯ ಸುಸ್ತಿಧಾರರಿಗೆ ಬಾಕಿ ಇರುವ ಕಂದಾಯ ಪಾವತಿಸುವಂತೆ ಹಾಗೂ ಆಸ್ತಿ ತೆರಿಗೆ ಮೇಲಿನ ಶೇ. 5% ರ ರಿಯಾಯಿತಿಯ ಪ್ರಯೋಜನವನ್ನು ಈ ತಿಂಗಳ ಅಂತ್ಯಕ್ಕೆ ಪಾವತಿಸಿ ಪಡೆದುಕೊಳ್ಳಲು ಸೂಚಿಸಿದರು. ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ:23-07-2021 ರಂದು ಮಾನ್ಯ ಆಯುಕ್ತರು ಪಾಲಿಕೆ ವ್ಯಾಪ್ತಿಯ ಹಿಮಾಮ್ ಬಡ ಮತ್ತು ಭಾರತಿನಗರದ ತಗ್ಗುಪ್ರದೇಶಗಳಲ್ಲಿ ಮಳೆ ನೀರು ನುಗ್ಗಿರುವ ಬಗ್ಗೆ ಪರಿಶೀಲಿಸಿದರು. ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.