
🚧 ಅಭಿವೃದ್ಧಿ ಕಾಮಗಾರಿಗಳಿಗೆ ವೇಗ – ಮಾಹಿತಿ ಫಲಕ ಕಡ್ಡಾಯ: ಆಯುಕ್ತ ಡಿ.ಎಸ್. ರಮೇಶ್
ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ರವರು ಹೊರಮಾವು ಅಗರ, ಬಂಜಾರ ಬಡಾವಣೆ, ಕಲ್ಕೆರೆ, ಬಾಬುಸಾಪಾಳ್ಯ ಹಾಗೂ ಚಳ್ಳಕೆರೆ ಪ್ರದೇಶಗಳಲ್ಲಿ ಸಮಗ್ರ ಸ್ಥಳ ಪರಿಶೀಲನೆ ನಡೆಸಿ, ನಡೆಯುತ್ತಿರುವ ಕಾಮಗಾರಿಗಳಿಗೆ ಮಾಹಿತಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಿದರು.
👥 ಸ್ಥಳೀಯ ನಿವಾಸಿಗಳೊಂದಿಗೆ ಚರ್ಚೆ ನಡೆಸಿ, ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
📍 ಪ್ರಮುಖ ಪರಿಶೀಲನೆಗಳು & ಸೂಚನೆಗಳು
🚉 ಬಾಬುಸಾಪಾಳ್ಯ ರೈಲ್ವೆ ಅಂಡರ್‌ಪಾಸ್
• ಭೂ ವಿವಾದದಿಂದ ಕಾಮಗಾರಿ ವಿಳಂಬವಾಗಿದ್ದು – ತಡೆಯಾಜ್ಞೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಾಮಗಾರಿ ತಕ್ಷಣ ಆರಂಭಿಸಲು ಸೂಚನೆ.
🌊 ಹೊರಮಾವು ಅಗರ ಕೆರೆ
• ನಿರ್ವಹಣೆ ಟೆಂಡರ್ ಪ್ರಕ್ರಿಯೆ ಪೂರ್ಣ – ಶೀಘ್ರ ಕಾಮಗಾರಿ ಆರಂಭಿಸಿ.
• ಶೌಚಾಲಯ, ಬೆಂಚ್, ವಾಕ್‌ವೇ, ಲಾನ್ ಅಭಿವೃದ್ಧಿಗೆ ಅಂದಾಜು ಪಟ್ಟಿ ತಯಾರಿಸಿ.
🛣️ ಅಗರ ಕೆರೆ ರಸ್ತೆ
• ಮಳೆ ನೀರು ನಿಲ್ಲುವ ಸಮಸ್ಯೆಗೆ ರಸ್ತೆ ಮಟ್ಟ ಏರಿಕೆ ಕಾಮಗಾರಿ ಮಾಡಲಾಗಿದೆ.
• ಹಾಟ್ ಮಿಕ್ಸ್ ಲಭ್ಯವಾದ ತಕ್ಷಣ ಡಾಂಬರೀಕರಣ ಪೂರ್ಣಗೊಳಿಸಲು ಸೂಚನೆ.
🛣️ ಬಂಜಾರ ಲೇಔಟ್ ಮುಖ್ಯ ರಸ್ತೆ
• ಚರಂಡಿ ಡಿಸಿಲ್ಟ್ ತಕ್ಷಣ ಕೈಗೆತ್ತುಕೊಳ್ಳಿ.
• 500 ಮೀ. ಚರಂಡಿ ನಿರ್ಮಾಣ ಯೋಜನೆ ರೂಪಿಸಿ.
• ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಸೂಚನೆ
🌿 ಕಲ್ಕೆರೆ ಕೆರೆ ಅಭಿವೃದ್ಧಿ
• ಗುತ್ತಿಗೆದಾರರ ವಿಳಂಬಕ್ಕೆ ಕ್ರಮ ವಹಿಸಿ.
• ಕಾಮಗಾರಿಯ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ
• ಒಳಚರಂಡಿ ಪೈಪ್ ಅಳವಡಿಕೆ ಇಂದಾದ ಹಾನಿ ದುರಸ್ತಿ ಮಾಡಲು ಸೂಚನೆ.
⚙️ ಯಾಂತ್ರಿಕ ಸ್ವಚ್ಛತಾ ಯಂತ್ರಗಳು
• ಹೊರಮಾವು ಅಂಡರ್‌ಪಾಸ್ ಬಳಿ ಪರಿಶೀಲನೆ
• ಮುಂದಿನ 3 ವರ್ಷಗಳಿಗೆ ಯಂತ್ರ ನಿಯೋಜನೆಗೆ ಯೋಜನೆ ರೂಪಿಸಲು ಸೂಚನೆ
✨ ಸಮಗ್ರ ಅಭಿವೃದ್ಧಿಗೆ ಆದ್ಯತೆ
ರಸ್ತೆ, ಚರಂಡಿ, ಕೆರೆ ಅಭಿವೃದ್ಧಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸುಧಾರಣೆಗೆ ಯೋಜಿತ ಮತ್ತು ಶಾಶ್ವತ ಕ್ರಮಗಳು ಕೈಗೊಳ್ಳಲಾಗುತ್ತಿದೆ.
👥 ಪರಿಶೀಲನೆ ವೇಳೆ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳು, ಅರಣ್ಯ ಇಲಾಖೆ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.
@CMofKarnataka
@DKShivakumar
@GBA_office @GBAChiefComm
#BECC #InfrastructureDevelopment #LakeDevelopment #UrbanGovernance




ಕನ್ನಡ












































