CM of Karnataka

27.1K posts

CM of Karnataka banner
CM of Karnataka

CM of Karnataka

@CMofKarnataka

Official Page of the Chief Minister's Office, Karnataka

Bengaluru, Karnataka Katılım Ağustos 2014
174 Takip Edilen1.6M Takipçiler
CM of Karnataka
CM of Karnataka@CMofKarnataka·
ನವದೆಹಲಿಯಲ್ಲಿ ನಡೆದ ಬ್ರಿಡ್ಜ್ ಟು ಬೆಂಗಳೂರು - ವಿವಿಧ ದೇಶಗಳ ರಾಯಭಾರಿಗಳು ಹಾಗೂ ರಾಜತಾಂತ್ರಿಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ @siddaramaiah ಅವರ ಮಾತುಗಳು: ತಂತ್ರಜ್ಞಾನದ ಜೊತೆಗೆ ವ್ಯಾಪಾರ, ನಾವೀನ್ಯತೆ, ಜನರ ಸಹಯೋಗ ಹಾಗೂ ವಿಶ್ವದೊಂದಿಗಿನ ಪಾಲುದಾರಿಕೆಯತ್ತ ಕರ್ನಾಟಕ ಆಸಕ್ತಿ ಹೊಂದಿದೆ. ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮವು ರಾಜತಾಂತ್ರಿಕ ಮಾತುಕತೆಗಿಂತಲೂ ಭಿನ್ನವಾಗಿದ್ದು, ಆಲೋಚನೆ, ಆರ್ಥಿಕತೆಗಳು ಮತ್ತು ಜನರನ್ನು ಒಂದುಗೂಡಿಸುವ ವೇದಿಕೆಯಾಗಿದೆ. ಜಿಐಎ( Global Innovation Alliance) ಮೂಲಕ ಜಾಗತಿಕ ಪಾಲುದಾರಿಕೆಗಳನ್ನು ಬಲಪಡಿಸುವ ಕರ್ನಾಟಕದ ಬದ್ಧತೆಯ ಸಂಕೇತವಾಗಿದೆಯಲ್ಲದೆ ಮುಂದಿನ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ 2026 ರ ಮುನ್ನುಡಿಯೂ ಹೌದು. ಈ ಕಾರ್ಯಕ್ರಮದ ಮೂಲಕ ನಾವೀನ್ಯತೆ, ಸಂಶೋಧನೆ, ಶಿಕ್ಷಣ, ಕೌಶಲ್ಯ, ಸ್ಟಾಟ್ಟ್ ಅಪ್ ಮತ್ತು ಹೂಡಿಕೆಗಳಲ್ಲಿ ದೀರ್ಘಕಾಲಿಕ ಸಹಯೋಗವನ್ನು ರಾಜ್ಯ ಬಯಸುತ್ತದೆ. ವಿಶ್ವವೇ ಒಂದು ಸಂಪರ್ಕ ಜಾಲವಾಗಿರುವ ಈ ಹೊತ್ತಿನಲ್ಲಿ ಇಂಥ ಪಾಲುದಾರಿಕೆಗಳು ಜಾಗತಿಕ ಸವಾಲುಗಳನ್ನು ಪರಿಹರಿಸಲು ಮತ್ತು ಒಟ್ಟಾಗಿ ಬೆಳೆಯಲು ಹೊಸ ಅವಕಾಶಗಳನ್ನು ದೊರಕಿಸಲು ಅಗತ್ಯವೂ ಆಗಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದೇ ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಬೆಂಗಳೂರು ಸಮಗ್ರ ನಾವೀನ್ಯತಾ ಪರಿಸರ ವ್ಯವಸ್ಥೆಯಾಗಿ ವಿಕಸನಗೊಂಡಿದೆ. ರಾಜ್ಯವು 16,000 ಸ್ಟಾಟ್ಟ್ ಅಪ್ ಗಳಿಗೆ ನೆಲೆಯಾಗಿದ್ದು, ಭಾರತದ ಸ್ಟಾರ್ಟ್ ಅಪ್ ಕೇಂದ್ರವಾಗಿದೆ. ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಸುಮಾರು ಮೂರನೇ ಒಂದು ಭಾಗ, ಅಂದರೆ 550 ಕ್ಕೂ ಹೆಚ್ಚು GCC ಗಳನ್ನು ಹೊಂದಿದೆ. ಅತ್ಯಾಧುನಿಕ ನಾವೀನ್ಯತೆ ಮತ್ತು ಪ್ರತಿಭೆಯನ್ನು ಪೋಷಿಸುವ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಬೃಹತ್ ಜಾಲವನ್ನೇ ಬೆಂಗಳೂರು ಹೊಂದಿದೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಿಂದ ಹಿಡಿದು ಅಂತರಿಕ್ಷಯಾನ, ಅರೆವಾಹಕಗಳು, ಬಾಹ್ಯಾಕಾಶ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಸಂಶೋಧನೆಯವರೆಗೆ ಕರ್ನಾಟಕವು ತಾಂತ್ರಿಕ ಪರಿವರ್ತನೆಯಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದೆ. ನಮ್ಮ ರಾಜ್ಯದಲ್ಲಿ ನಾವೀನ್ಯತೆ ಕೇವಲ ಆರ್ಥಿಕ ಚಟುವಟಿಕೆಯಲ್ಲ, ಅದು ಒಂದು ಜೀವನ ವಿಧಾನವಾಗಿದೆ. ಕೌಶಲ್ಯಯುತ ಯುವಜನ, ವಿಶ್ವ ದರ್ಜೆಯ ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳು, ಬಲಿಷ್ಠ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯ, ತಡೆರಹಿತ ಜಾಗತಿಕ ಸಂಪರ್ಕ ಮತ್ತು ಎಲ್ಲರನ್ನೂ ಒಳಗೊಂಡ ಸಾಮಾಜಿಕ ವಾತಾವರಣ ನಮ್ಮ ಸಾಮರ್ಥ್ಯ. ಮಾನವೀಯ ತಂತ್ರಜ್ಞಾನವನ್ನು ಹೊಂದುವುದು ಕರ್ನಾಟಕ ಸರ್ಕಾರದ ಭವಿಷ್ಯದ ಕಲ್ಪನೆಯಾಗಿದೆ. ನಮ್ಮ ಅಭಿವೃದ್ಧಿ ಮಾದರಿಯು ಸಾಮಾಜಿಕ ನ್ಯಾಯ, ಒಳಗೊಳ್ಳುವಿಕೆ ಮತ್ತು ಸುಸ್ಥಿರತೆಯ ತತ್ವಗಳನ್ನು ಹಾಗೂ ತ್ವರಿತ ಆರ್ಥಿಕ ಬೆಳವಣಿಗೆಯ ಮಧ್ಯೆ ಸಮತೋಲನವನ್ನು ಕಾಯ್ದುಕೊಳ್ಳಲಿದೆ. ಈ ದೃಷ್ಟಿಯನ್ನು ಆಧರಿಸಿ ನಾವು ಐಟಿ, ಸ್ಟಾರ್ಟ್‌ಅಪ್‌ಗಳು, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಕೌಶಲ್ಯದಲ್ಲಿ ಭವಿಷ್ಯತ್ ಕಾಲದ ನೀತಿಗಳನ್ನು ಜಾರಿಗೆ ತರುತ್ತಿದ್ದೇವೆ, ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆಯನ್ನು ರಚಿಸಲು ಪ್ರತಿಭಾ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಮತ್ತು ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ ಮತ್ತು ಪರಿಸರ ಸುಸ್ಥಿರತೆಯಲ್ಲಿ ಸಾಮಾಜಿಕ ಸವಾಲುಗಳನ್ನು ಎದುರಿಸುವ ನಾವೀನ್ಯತೆಯನ್ನು ಉತ್ತೇಜಿಸುತ್ತಿದ್ದೇವೆ. 2032 ರ ವೇಳೆಗೆ ಕರ್ನಾಟಕವನ್ನು ಪ್ರತಿಭೆ, ತಂತ್ರಜ್ಞಾನ ಮತ್ತು ಸದೃಢತೆಯುಳ್ಳ USD 1 ಟ್ರಿಲಿಯನ್ ಆರ್ಥಿಕತೆಯಾಗಿ ಪರಿವರ್ತಿಸುವುದು ನಮ್ಮ ಆಕಾಂಕ್ಷೆಯಾಗಿದೆ. ಜಿಐಎ ಮೂಲಕ ಕರ್ನಾಟಕವು -ಸರ್ಕಾರಗಳು, ಶೈಕ್ಷಣಿಕ ಸಂಸ್ಥೆಗಳು , ಉದ್ಯಮದ ನಾಯಕರು ಮತ್ತು ವಿಶ್ವದ ಸ್ಟಾರ್ಟ್ ಅಪ್ ಗಳ ಜೊತೆಗೆ ದೀರ್ಘಕಾಲಿಕ ಪಾಲುದಾರಿಕೆ ಮಾಡಿಕೊಳ್ಳುವ ಗುರಿಹೊಂದಿದೆ. ಇಂಥ ಸಹಯೋಗಗಳು ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ಪ್ರತಿಭಾ ವಿನಿಮಯ ಮತ್ತು ಕೌಶಲ್ಯದ ಚಲನೆ, ಸ್ಟಾರ್ಟ್ ಅಪ್ ಮಾರುಕಟ್ಟೆಯ ಪ್ರವೇಶ, ನೂತನ ತಂತ್ರಜ್ಞಾನಗಳಲ್ಲಿ ಸಹಯೋಗ ಮತ್ತು ಸುಸ್ಥಿರ ಪರಿಸರ ಸಂಬಂಧಿ ಪರಿಹಾರಗಳನ್ನು ಕಂಡುಕೊಳ್ಳಲು ಇಚ್ಚಿಸಿದೆ. ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದ ಮೂಲಕ ಕರ್ನಾಟಕದೊಂದಿಗೆ ಪಾಲುದಾರಿಕೆ, ನಾವೀನ್ಯತೆ ಮತ್ತು ಹೂಡಿಕೆ ಮಾಡಲು ಜಗತ್ತಿಗೆ ಆಹ್ವಾನ ನೀಡುತ್ತೇನೆ. #BridgeToBengaluru
CM of Karnataka tweet media
ಕನ್ನಡ
1
0
10
775
CM of Karnataka
CM of Karnataka@CMofKarnataka·
ಬೆಂಗಳೂರಿನಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ BENGALURU TECH SUMMITನ ಪೂರ್ವಭಾವಿಯಾಗಿ ದೆಹಲಿಯಲ್ಲಿ ಇಂದು ನಡೆದ ವಿವಿಧ ರಾಷ್ಟ್ರಗಳ ರಾಯಭಾರಿಗಳು ಹಾಗೂ ಹೈ ಕಮಿಷನರ್ ಗಳ ಜೊತೆಗಿನ ಸಂವಾದದಲ್ಲಿ (Bridge to BENGALURU) ಮುಖ್ಯಮಂತ್ರಿ @siddaramaiah ಅವರು ಭಾಗವಹಿಸಿ, ಕರ್ನಾಟಕದ ಅಭಿವೃದ್ಧಿಯಲ್ಲಿ ಪಾಲುದಾರರಾಗುವಂತೆ ಕರೆ ನೀಡಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಕಿಯೋನಿಕ್ಸ್ ಚೇರ್ಮನ್ ಶರತ್ ಬಚ್ಚೇಗೌಡ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
CM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
0
1
29
1.7K
CM of Karnataka
CM of Karnataka@CMofKarnataka·
"Attended the “Bridge to Bengaluru–2026: Dialogue with Diplomats” event in New Delhi today, engaging with ambassadors and delegates from nearly 80 nations. I highlighted Karnataka’s position as a global innovation hub - home to 16,000+ startups and 550+ GCCs, and at the forefront of AI, biotech, space, and quantum ecosystems. Through the Global Innovation Alliance, we are building strong international partnerships for innovation, investment, and sustainable growth. I also invited global partners to join us as we work towards transforming Karnataka into a $1 trillion economy by 2032, driven by inclusive and technology-led development." - Chief Minister Shri @siddaramaiah #BridgeToBengaluru #BengaluruTechSummit #GuaranteeSarkara
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
English
2
3
14
711
CM of Karnataka
CM of Karnataka@CMofKarnataka·
"The injustice and humiliation that claimed Rohith Vemula’s life must never be allowed to affect another student. Education must open doors to the future, not become a source of pain and exclusion. With this conviction, the State Cabinet has approved the Karnataka Rohith Vemula Bill. The law applies to government and private colleges, universities, and hostels, and provides for punishment in cases of caste-based discrimination against SC/ST, OBC, and minority students. Let caste discrimination end. Let fraternity and equality strengthen our society." - Chief Minister Shri @siddaramaiah #RohithVemulaAct #GuaranteeSarkara
CM of Karnataka tweet media
English
2
1
12
964
CM of Karnataka
CM of Karnataka@CMofKarnataka·
"To dismantle caste hierarchy, social awareness alone is not enough; the force of law is equally important. Strong laws have helped society curb evils such as child marriage, sati, and the devadasi system. With the same resolve, our government is committed to uprooting caste discrimination from the education system. In this direction, the State Cabinet has approved the Karnataka Rohith Vemula Bill. If caste discrimination or exploitation causes mental harassment to SC/ST students or abets suicide, the law provides for up to one year of imprisonment and a fine of up to ₹1 lakh. Let caste discrimination end. Let fraternity and equality strengthen our society." - Chief Minister Shri @siddaramaiah #RohithVemulaAct #GuaranteeSarkara
CM of Karnataka tweet media
English
4
2
14
793
CM of Karnataka
CM of Karnataka@CMofKarnataka·
"No one is born by choice into a caste. Birth must never determine a person’s dignity, achievement, or place in society. Our government is committed to ending the discrimination, humiliation, and injustice faced by students from oppressed communities and to building equality into the education system. In this direction, the State Cabinet has approved the Karnataka Rohith Vemula Bill. Forcing poor SC/ST students to pay donations and humiliating them will now be a punishable offence. Let caste discrimination end. Let fraternity and equality strengthen our society." - Chief Minister Shri @siddaramaiah #RohithVemulaAct #GuaranteeSarkara
CM of Karnataka tweet media
English
5
2
14
809
CM of Karnataka
CM of Karnataka@CMofKarnataka·
"Many lives have already been lost across the country to the injustice, inequality, and humiliation caused by caste discrimination in educational institutions. Our government is determined to put an end to such tragedies in Karnataka. In this direction, the State Cabinet has approved the Karnataka Rohith Vemula Bill. Denying students access to laboratory work, or deliberately awarding lower marks in viva and practical exams due to caste despite strong performance in written and physical tests, will now be punishable offences. Let caste discrimination end. Let fraternity and equality strengthen our society." - Chief Minister Shri @siddaramaiah #RohithVemulaAct #GuaranteeSarkara
CM of Karnataka tweet media
English
1
0
7
733
CM of Karnataka
CM of Karnataka@CMofKarnataka·
"Caste-based oppression is deeply inhuman and cruel. Our government is committed to dismantling caste discrimination in education. In this direction, the State Cabinet has approved the Karnataka Rohith Vemula Bill to uphold students’ right to education and dignity. Segregating students by caste in colleges or making derogatory remarks against Scheduled Castes and Scheduled Tribes will now be a punishable offence. Let caste discrimination end. Let fraternity and equality strengthen our society." - Chief Minister Shri @siddaramaiah #RohithVemulaAct #GuaranteeSarkara
CM of Karnataka tweet media
English
1
0
9
634
CM of Karnataka
CM of Karnataka@CMofKarnataka·
"Caste discrimination is like a cancer afflicting Indian society. Our government is committed to uprooting it. In this direction, the State Cabinet has approved the Karnataka Rohith Vemula Bill to protect students’ right to education and dignity. Questioning students about their social background or family occupation, instead of their academic merit, will now be a punishable offence. Let caste discrimination end. Let fraternity and equality shape our society." - Chief Minister Shri @siddaramaiah #RohithVemulaAct #GuaranteeSarkara
CM of Karnataka tweet media
English
5
0
8
690
CM of Karnataka
CM of Karnataka@CMofKarnataka·
ಜಾತಿ ಅಸಮಾನತೆ, ಅಪಮಾನಕ್ಕೆ ಬಲಿಯಾದ ರೋಹಿತ್ ವೇಮುಲನ ಸ್ಥಿತಿ ನಾಡಿನ ಇನ್ಯಾವ ಮಕ್ಕಳಿಗೂ ಎದುರಾಗಬಾರದು. ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿಯಾಗಬೇಕೇ ವಿನಃ ಬದುಕಿಗೆ ಮಾರಕವಾಗಬಾರದು ಎನ್ನುವುದು ನಮ್ಮ ಸರ್ಕಾರದ ಸದಾಶಯ. ಈ ನಿಟ್ಟಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ "ಕರ್ನಾಟಕ ರೋಹಿತ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ" ಕ್ಕೆ ಅನುಮೋದನೆ ನೀಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಾಲೇಜು, ವಿಶ್ವವಿದ್ಯಾಲಯ, ವಿದ್ಯಾರ್ಥಿ ನಿಲಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲೆ ಜಾತಿ ಆಧಾರಿತ ತಾರತಮ್ಯ ಎಸಗಿದಲ್ಲಿ ಶಿಕ್ಷೆ ವಿಧಿಸಲು ಅವಕಾಶವಾಗಲಿದೆ. ಜಾತಿ ತಾರತಮ್ಯ ತೊಲಗಲಿ, ಭ್ರಾತೃತ್ವ - ಬಂಧುತ್ವ ಸಮಾಜವನ್ನು ಬೆಸೆಯಲಿ. • ಮುಖ್ಯಮಂತ್ರಿ @siddaramaiah #socialjustice
CM of Karnataka tweet media
ಕನ್ನಡ
1
0
12
688
CM of Karnataka
CM of Karnataka@CMofKarnataka·
ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯಲು ಸಾಮಾಜಿಕ ಜಾಗೃತಿಯ ಜೊತೆಗೆ ಕಾನೂನಿನ ಭಯವೂ ಮುಖ್ಯ. ಬಲಿಷ್ಠ ಕಾನೂನಿನ ಫಲವಾಗಿಯೇ ಇಂದು ಬಾಲ್ಯ ವಿವಾಹ, ಸತಿಪದ್ಧತಿ, ದೇವದಾಸಿ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಇಂದು ಇಲ್ಲವಾಗಿವೆ. ಇದೇ ಮಾದರಿಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯನ್ನು ಕಿತ್ತುಹಾಕಲು ನಾವು ಪಣತೊಟ್ಟಿದ್ದು, ಈ ನಿಟ್ಟಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ "ಕರ್ನಾಟಕ ರೋಹಿತ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ" ಕ್ಕೆ ಅನುಮೋದನೆ ನೀಡಲಾಗಿದೆ. ಜಾತಿ ತಾರತಮ್ಯ, ಶೋಷಣೆಯ ಮೂಲಕ‌ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದಲ್ಲಿ 1 ವರ್ಷ ಶಿಕ್ಷೆ ಹಾಗೂ ಗರಿಷ್ಠ ₹1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಾಗಲಿದೆ. ಜಾತಿ ತಾರತಮ್ಯ ತೊಲಗಲಿ, ಭ್ರಾತೃತ್ವ - ಬಂಧುತ್ವ ಸಮಾಜವನ್ನು ಬೆಸೆಯಲಿ. • ಮುಖ್ಯಮಂತ್ರಿ @siddaramaiah #socialjustice
CM of Karnataka tweet media
ಕನ್ನಡ
2
0
10
840
CM of Karnataka
CM of Karnataka@CMofKarnataka·
ಯಾರೊಬ್ಬರೂ ತಾವು ಇಂತದ್ದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಹುಟ್ಟು ಎನ್ನುವುದು ವ್ಯಕ್ತಿಯ ಘನತೆ, ಸಾಧನೆ ಮತ್ತು ಸಾಮಾಜಿಕ ಸ್ಥಾನಮಾನವನ್ನು ನಿರ್ಧರಿಸುವ ಮಾನದಂಡವಾಗಬಾರದು. ಶೋಷಿತ ಸಮುದಾಯಗಳ ವಿದ್ಯಾರ್ಥಿಗಳು ಈ ವರೆಗೆ ಎದುರಿಸಿದ ತಾರತಮ್ಯ, ನೋವು, ಅಪಮಾನ, ಅನ್ಯಾಯಗಳನ್ನು ಕೊನೆಗಾಣಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ತರುವುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ "ಕರ್ನಾಟಕ ರೋಹಿತ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ" ಕ್ಕೆ ಅನುಮೋದನೆ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ವಿದ್ಯಾರ್ಥಿಗೆ ದೇಣಿಗೆ ನೀಡುವಂತೆ ಒತ್ತಾಯಿಸಿ ಅವಮಾನಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಜಾತಿ ತಾರತಮ್ಯ ತೊಲಗಲಿ, ಭ್ರಾತೃತ್ವ - ಬಂಧುತ್ವ ಸಮಾಜವನ್ನು ಬೆಸೆಯಲಿ. - ಮುಖ್ಯಮಂತ್ರಿ @siddaramaiah #socialjustice
CM of Karnataka tweet media
ಕನ್ನಡ
3
1
11
642
CM of Karnataka
CM of Karnataka@CMofKarnataka·
ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯ ಕಾರಣಕ್ಕಾಗಿ ಎದುರಾಗುವ ಅನ್ಯಾಯ, ಅಸಮಾನತೆ, ಅವಮಾನಗಳಿಂದಾಗಿ ಈಗಾಗಲೇ ಹಲವು ಜೀವಗಳು ಬಲಿಯಾಗಿದ್ದು, ರಾಜ್ಯದಲ್ಲಿ ಇಂತಹ ಸಾವುಗಳಿಗೆ ಕೊನೆಹಾಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ "ಕರ್ನಾಟಕ ರೋಹಿತ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ" ಕ್ಕೆ ಅನುಮೋದನೆ ನೀಡಲಾಗಿದೆ. ಪ್ರಯೋಗಾಲಯದಲ್ಲಿ ಪ್ರಯೋಗಗಳನ್ನು ಮಾಡಲು ಅವಕಾಶ ನಿರಾಕರಣೆ ಮಾಡುವುದು, ಲಿಖಿತ ಹಾಗೂ ಭೌತಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ವೈವಾ, ಪ್ರಾಯೋಗಿಕ ಪರೀಕ್ಷೆಗಳಲ್ಲಿ ಜಾತಿಯ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ಕಡಿಮೆ ಅಂಕ ನೀಡುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಜಾತಿ ತಾರತಮ್ಯ ತೊಲಗಲಿ, ಭ್ರಾತೃತ್ವ - ಬಂಧುತ್ವ ಸಮಾಜವನ್ನು ಬೆಸೆಯಲಿ. • ಮುಖ್ಯಮಂತ್ರಿ @siddaramaiah #socialjustice
CM of Karnataka tweet media
ಕನ್ನಡ
1
0
6
656
CM of Karnataka
CM of Karnataka@CMofKarnataka·
ಜಾತಿಯಾಧಾರಿತ ಶೋಷಣೆ ಅತ್ಯಂತ ಅಮಾನವೀಯ ಮತ್ತು ಕ್ರೂರ. ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಿಸಿರುವ ಜಾತಿ ವ್ಯವಸ್ಥೆಯನ್ನು ಕಿತ್ತೆಸೆಯಲು ನಾವು ಬದ್ಧರಿದ್ದು, ಈ ನಿಟ್ಟಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ "ಕರ್ನಾಟಕ ರೋಹಿತ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ" ಕ್ಕೆ ಅನುಮೋದನೆ ನೀಡಲಾಗಿದೆ. ಕಾಲೇಜು ಕೊಠಡಿಯಲ್ಲಿ ಜಾತಿಯಾಧರಿಸಿ ಪ್ರತ್ಯೇಕಿಸುವುದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಗ್ಗೆ ಕೀಳಾಗಿ ಮಾತನಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಜಾತಿ ತಾರತಮ್ಯ ತೊಲಗಲಿ, ಭ್ರಾತೃತ್ವ - ಬಂಧುತ್ವ ಸಮಾಜವನ್ನು ಬೆಸೆಯಲಿ. - ಮುಖ್ಯಮಂತ್ರಿ @siddaramaiah #socialjustice
CM of Karnataka tweet media
ಕನ್ನಡ
6
2
29
1.3K
CM of Karnataka
CM of Karnataka@CMofKarnataka·
ಜಾತಿ ತಾರತಮ್ಯ ಎನ್ನುವುದು ಭಾರತೀಯ ಸಮಾಜಕ್ಕಂಟಿದ ಕ್ಯಾನ್ಸರ್‌ನಂತೆ. ಇದನ್ನು ಬುಡಸಮೇತ ಕಿತ್ತೆಸೆಯುವ ಸಂಕಲ್ಪ ನಮ್ಮ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ "ಕರ್ನಾಟಕ ರೋಹಿತ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ" ಕ್ಕೆ ಅನುಮೋದನೆ ನೀಡಲಾಗಿದೆ. ಶೈಕ್ಷಣಿಕ ದಾಖಲಾತಿ, ಸಂದರ್ಶನದ ಪ್ರಶ್ನೆಗಳ ವೇಳೆ ಶೈಕ್ಷಣಿಕ ಮತ್ತು ವಿಷಯಾಧಾರಿತ ಮಾಹಿತಿಯ ಬದಲಿಗೆ ವಿದ್ಯಾರ್ಥಿಗಳ ಸಾಮಾಜಿಕ ಹಿನ್ನೆಲೆ ಹಾಗೂ ಕೌಟುಂಬಿಕ ವೃತ್ತಿಯ ಬಗ್ಗೆ ಪ್ರಶ್ನಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಜಾತಿ ತಾರತಮ್ಯ ತೊಲಗಲಿ, ಭ್ರಾತೃತ್ವ - ಬಂಧುತ್ವ ಸಮಾಜವನ್ನು ಬೆಸೆಯಲಿ. - ಮುಖ್ಯಮಂತ್ರಿ @siddaramaiah #socialjustice
CM of Karnataka tweet media
ಕನ್ನಡ
11
6
24
4.4K
CM of Karnataka
CM of Karnataka@CMofKarnataka·
"In 2022, just days before the Karnataka Assembly election, PM Modi boasted that the 40-year-stalled project would be completed within 40 months, by the end of 2026. But today, the deadline has slipped to 2030, far beyond that promise, and Bengaluru is being asked to wait again. This is not just about a delayed project. It is about the daily struggle of commuters and rising transport stress in a city that keeps contributing to India’s growth while being denied timely infrastructure support. My question to the Union Government is this: If Bengaluru’s suburban rail was promised as a priority before the election, why has the city been left to suffer delay after delay?" - Chief Minister Shri @siddaramaiah #Bengaluru #SuburbanRail #Karnataka #AnswerMadiModi
CM of Karnataka tweet media
English
35
27
79
7.8K
CM of Karnataka
CM of Karnataka@CMofKarnataka·
"The Union Government speaks of modern rail connectivity and high-speed bullet trains. If that is truly the vision, why does Mysuru remain outside it? The Bengaluru–Mysuru route is not a marginal one. It is one of Karnataka’s most important economic, educational, tourism, and cultural corridors. Better high-speed connectivity on this stretch would benefit lakhs of commuters, strengthen regional growth, and deepen integration between two major cities in our state. Karnataka deserves clarity. Why is one of South India’s most important corridors not getting the priority it deserves?" - Chief Minister Shri @siddaramaiah #Bengaluru #Mysuru #HighSpeedRail #AnswerMadiModi
CM of Karnataka tweet media
English
36
19
89
8.4K
CM of Karnataka
CM of Karnataka@CMofKarnataka·
"Karnataka fulfilled its commitment for the Kolar Railway Coach Factory. Land was provided. The project was approved. Hope was created in a backward region that deserved industrial growth and jobs. But even after all these years, the promised coach manufacturing unit has not materialised. Kolar was not asking for charity. It was asking for its due. A full coach factory could have transformed the region through employment, and long-term economic activity. My question to the Union Government is simple: When Karnataka honoured its responsibility, why was Kolar’s future pushed aside?" - Chief Minister Shri @siddaramaiah #AnswerMadiModi
CM of Karnataka tweet media
English
5
11
30
1.7K
CM of Karnataka
CM of Karnataka@CMofKarnataka·
ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು #CabinetDecisions
CM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
0
1
16
1.4K
CM of Karnataka
CM of Karnataka@CMofKarnataka·
ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಮಾಹಿತಿ ಇಂದಿನ ಪತ್ರಿಕೆಗಳಲ್ಲಿ #ಕನ್ನಡಸುದ್ದಿ
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
1
0
4
684