M B Patil

19.3K posts

M B Patil banner
M B Patil

M B Patil

@MBPatil

Minister for Commerce & Industries, Infrastructure GoK | Educationist-Engineer-Basava Literature Enthusiast

ವಿಜಯಪುರ - Vijayapura, India Katılım Ekim 2014
1.4K Takip Edilen115.8K Takipçiler
Sabitlenmiş Tweet
M B Patil
M B Patil@MBPatil·
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes! An incredible story of a people’s movement: 1.5 crore trees planted, raising forest cover from just 0.17% to 2%. A true testament to political will, systemic action & the power of collective participation. Proud that Vijayapura’s green success is inspiring the world! My heartfelt thanks to all the stakeholders and the people of Vijayapura. nytimes.com/card/2025/09/0…
M B Patil tweet mediaM B Patil tweet mediaM B Patil tweet mediaM B Patil tweet media
English
127
332
1.8K
174.8K
M B Patil
M B Patil@MBPatil·
ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು. ಒಬ್ಬಂಗೆ ಇಹವಿಲ್ಲ, ಒಬ್ಬಂಗೆ ಪರವಿಲ್ಲ, ಒಬ್ಬಂಗೆ ಇಹಪರವೆರಡೂ ಇಲ್ಲ, ಚೆನ್ನಮಲ್ಲಿಕಾರ್ಜುನ ದೇವರ ಶರಣರಿಗೆ ಇಹಪರವೆರಡೂ ಉಂಟು -ಅಕ್ಕಮಹಾದೇವಿ
ಕನ್ನಡ
0
2
7
306
M B Patil
M B Patil@MBPatil·
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ. ಸುಳಿದು ಬೀಸುವ ಗಾಳಿ ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರಾ ಹೊಗಳುವ ಕುನ್ನಿಗಳನೇನೆಂಬೆ, ರಾಮನಾಥ? - ಜೇಡರ ದಾಸಿಮಯ್ಯ
ಕನ್ನಡ
1
1
21
589
M B Patil
M B Patil@MBPatil·
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ರ್ಯಾಲಿ! ನಾಮಪತ್ರ ಸಲ್ಲಿಕೆಯ ದಿನವೇ ಶ್ರೀ ಉಮೇಶ್ ಮೇಟಿ ಗೆಲುವಿನ ಘೋಷಣೆ! ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಬೃಹತ್ ರ್ಯಾಲಿಯಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪಾಲ್ಗೊಂಡಿದ್ದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀ ಉಮೇಶ್ ಮೇಟಿ ಅವರ ನಾಮಪತ್ರ ಸಲ್ಲಿಕೆಯ ಅಂಗವಾಗಿ ನಡೆದ ಈ ಸಮಾವೇಶವು ಪಕ್ಷದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ದಿವಂಗತ ಹೆಚ್.ವೈ. ಮೇಟಿ ಅವರ ಅಕಾಲಿಕ ನಿಧನದಿಂದ ತೆರವಾದ ಈ ಸ್ಥಾನಕ್ಕೆ ಅವರ ಪುತ್ರ ಶ್ರೀ ಉಮೇಶ್ ಮೇಟಿ ಅವರು ಸೂಕ್ತ ಉತ್ತರಾಧಿಕಾರಿಯಾಗಿದ್ದಾರೆ. ತಂದೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ. ಇಂದಿನ ರ್ಯಾಲಿಯಲ್ಲಿ ಕಂಡುಬಂದ ಭಾರೀ ಜನಸ್ತೋಮವೇ ಶ್ರೀ ಉಮೇಶ್ ಮೇಟಿ ಅವರ ಭರ್ಜರಿ ಗೆಲುವಿನ ಸ್ಪಷ್ಟ ಸಂಕೇತವಾಗಿದೆ. ಸಚಿವರುಗಳಾದ ಶ್ರೀ ಆರ್.ಬಿ. ತಿಮ್ಮಾಪುರ, ಶ್ರೀ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಶ್ರೀ ಎಸ್. ಆರ್. ಪಾಟೀಲ್, ಎಂ.ಎಲ್.ಸಿ. ಶ್ರೀ ಸುನೀಲಗೌಡ ಪಾಟೀಲರು ಸೇರಿದಂತೆ ಹಲವು ಪ್ರಮುಖ ನಾಯಕರು ಇಂದಿನ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. @siddaramaiah @DKShivakumar @rb_timmapur @JarkiholiSatish @VKSorake @reachsbpmlc @INCKarnataka @srpatilbagalkot
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
2
4
54
1.4K
M B Patil
M B Patil@MBPatil·
ಬ್ರಿಟಿಷರ ವಿರುದ್ಧ ದಿಟ್ಟ ಹೋರಾಟ ನಡೆಸಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಅರ್ಪಿಸಿದ ಶಹೀದ್ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನ ದಿನದಂದು ಗೌರವದ ನಮನಗಳು. 1931ರ ಮಾರ್ಚ್ 23ರಂದು ನೇಣಿಗೇರಿಸಲ್ಪಟ್ಟ ಅವರ ತ್ಯಾಗ ಕೇವಲ ಇತಿಹಾಸವಲ್ಲ;ಇದು ದೇಶಭಕ್ತಿಯ ಜ್ವಾಲೆ! ಅವರ ಕ್ರಾಂತಿ, ಶೌರ್ಯ ಮತ್ತು ಬಲಿದಾನ ಮುಂದಿನ ಪೀಳಿಗೆಗಳಿಗೆ ಶಾಶ್ವತ ಸ್ಫೂರ್ತಿ. #ShaheedDiwas #ಬಲಿದಾನದಿನ
M B Patil tweet media
ಕನ್ನಡ
0
3
23
484
M B Patil
M B Patil@MBPatil·
ಪೂಜ್ಯ ಸಿದ್ದೇಶ್ವರ ಸ್ವಾಮಿಗಳವರ ಚಿಂತನೆಗಳು ನಮಗೆ ಬೆಳ್ಳಿ, ಬಂಗಾರದ ತಟ್ಟೆಯಿಟ್ಟು ಯಾರೂ ಊಟ ಬಡಿಸುವುದಿಲ್ಲ. ಆದರೆ ಇರುವ ತಟ್ಟೆಯನ್ನೇ ಹರಿವಾಣ ಎಂದು ಭಾವಿಸಿ ಅದರಲ್ಲಿ ಬಡಿಸಿದ್ದನ್ನು ಸಂತೋಷವಾಗಿ ಸೇವಿಸುವುದೇ ವ್ರತಾ! ಬಯಕೆಗಳನ್ನು ಬೆನ್ನಟ್ಟುವುದು ವ್ರತವಲ್ಲ-ತೃಪ್ತಿಯಿಂದ ಬದುಕುವುದೇ ವ್ರತ. ಮನೆ ಸಣ್ಣದಿರಲಿ, ದೊಡ್ಡದಿರಲಿ-ನಗುಮುಖವೇ ನಮ್ಮ ನಿಜವಾದ ಸಂಪತ್ತು, ಅದೇ ಪ್ರಸಾದ. ಹಲವು ಜೋಡಿ ಚಪ್ಪಲಿ, ಬಟ್ಟೆ ಇದ್ದರೂ, ಒಮ್ಮೆ ಬಳಸುವುದು ಒಂದೇ-ಅದನ್ನು ಅರಿತು ಮಿತಿಯಲ್ಲಿ ಬದುಕುವುದೇ ಜೀವನದ ಜ್ಞಾನ. ಸಂತೋಷ ಹೊರಗೆ ಸಿಗುವುದಲ್ಲ, ನಮ್ಮ ಮನಸ್ಸಿನಲ್ಲೇ ಹುಟ್ಟುವುದು! – ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು #siddeshwaraswamiji
ಕನ್ನಡ
0
10
73
1.6K
M B Patil
M B Patil@MBPatil·
ವಚನಗಳ ಮೂಲಕ ಮಾನವ ಕುಲಕ್ಕೆ ಸನ್ಮಾರ್ಗ ತೋರಿದ ಆದ್ಯ ವಚನಕಾರ ಪರಮ ಪೂಜ್ಯ ದೇವರ (ಜೇಡರ) ದಾಸಿಮಯ್ಯ ಅವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತಾ ನಾಡಿನ ಜನತೆಗೆ ಶುಭಾಶಯಗಳನ್ನು ಕೋರುತ್ತೇನೆ. ಅವರ ವಚನಗಳಲ್ಲಿ ಆಧ್ಯಾತ್ಮ, ನೈಜ ಭಕ್ತಿ, ಕಾಯಕದ ಮಹತ್ವ ಹಾಗೂ ಜೀವನದ ಮೌಲ್ಯಗಳಿದ್ದು, ಅವುಗಳು ಸಾರ್ಥಕ ಬದುಕಿನ ದಾರಿ ದೀಪಗಳಾಗಿವೆ. #ದೇವರದಾಸಿಮಯ್ಯಜಯಂತಿ
M B Patil tweet media
ಕನ್ನಡ
0
10
54
859
M B Patil
M B Patil@MBPatil·
ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಸಿ. ವೇಣುಗೋಪಾಲ್ ಅವರ ನೇತೃತ್ವದಲ್ಲಿ ವೀಕ್ಷಕರಾಗಿ ಪಾಲ್ಗೊಳ್ಳಲು ಇಂಧನ ಸಚಿವರಾದ ಶ್ರೀ ಕೆ.ಜೆ. ಜಾರ್ಜ್, ಸಣ್ಣ ನೀರಾವರಿ ಸಚಿವರಾದ ಶ್ರೀ ಎನ್.ಎಸ್. ಬೋಸರಾಜು ಹಾಗೂ ಕೆಕೆಆರ್’ಡಿಬಿ ಅಧ್ಯಕ್ಷರು ಹಾಗೂ ಶಾಸಕರಾದ ಡಾ. ಅಜಯ್ ಧರಂಸಿಂಗ್ ಅವರೊಂದಿಗೆ ಕೇರಳದ ತಿರುವನಂತಪುರಂಗೆ ಪ್ರವಾಸ ಕೈಗೊಂಡೆ. @thekjgeorge @NsBoseraju @ajaydharamsingh @kcvenugopalmp
M B Patil tweet mediaM B Patil tweet mediaM B Patil tweet media
ಕನ್ನಡ
3
6
172
9.6K
M B Patil
M B Patil@MBPatil·
ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಆ ರಾಜ್ಯದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಅಗತ್ಯವಾದ ಗೆಲುವಿನ ರಣತಂತ್ರಗಳ ಕುರಿತು ಚರ್ಚಿಸಲಾಯಿತು. ಶ್ರೀ @thekjgeorge , @SachinPilot , @BMSandeepAICC ಸೇರಿದಂತೆ ಹಲವರು ಉಪಸ್ಥಿತರಿದ್ದರು.
M B Patil tweet media
ಕನ್ನಡ
0
7
60
2K
M B Patil retweetledi
Indian Tech & Infra
Indian Tech & Infra@IndianTechGuide·
🚨 An iconic image capturing the beginning of India’s tech revolution in 1992. 📍Software Technology Park Bangalore
Indian Tech & Infra tweet media
English
65
174
3.5K
147.4K
M B Patil
M B Patil@MBPatil·
ಇಂದು #ವಿಶ್ವಜಲದಿನ ನಮ್ಮ ಪೂರ್ವಜರು ನಮಗಾಗಿ ಹೋಗಿರುವ ಅಮೂಲ್ಯ ಕೆರೆ-ಕಟ್ಟೆಗಳನ್ನು, ಕಲ್ಯಾಣಿ, ಬಾವಡಿಗಳನ್ನು ಉಳಿಸಿಕೊಳ್ಳೋಣ. ಇಂದಿನ ಹನಿ ಉಳಿತಾಯವೇ ನಾಳೆಯ ಬದುಕಿನ ಭರವಸೆ. ನೀರನ್ನು ಮಿತವಾಗಿ ಬಳಸಿ, ಮರುಬಳಕೆಗೆ ಆದ್ಯತೆ ನೀಡಿ ಮತ್ತು ಅಂತರ್ಜಲ ವೃದ್ಧಿಸಲು ಪಣತೊಡೋಣ. ನೆನಪಿಡಿ, ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತ್ಯುತ್ತಮ ಉಡುಗೊರೆ ಹಣ-ಆಸ್ತಿಯಲ್ಲ, ಶುದ್ಧ ಕುಡಿಯುವ ನೀರು! ಬನ್ನಿ, ಈ 'ವಿಶ್ವ ಜಲ ದಿನ'ದಂದು ನೀರನ್ನು ವ್ಯರ್ಥ ಮಾಡುವುದಿಲ್ಲ ಎಂದು ಶಪಥ ಮಾಡೋಣ. ನೀರು ಉಳಿಸುವುದು ಆಯ್ಕೆ ಅಲ್ಲ… ಅಗತ್ಯ! #WorldWaterDay2026 #SaveWater
M B Patil tweet media
ಕನ್ನಡ
2
7
51
871
M B Patil
M B Patil@MBPatil·
ವಿಜಯಪುರ: ಬೇಗಂ ತಲಾಬ್ ಕೆರೆ ಸಮೀಪ ಸುಂದರ 'ವಾಟರ್ ಪಾರ್ಕ್' ಲೋಕಾರ್ಪಣೆ ವಿಜಯಪುರ ನಗರದ ಬೇಗಂ ತಲಾಬ್ ಕೆರೆ ಹತ್ತಿರ ಮಾಜಿ ಮೇಯರ್ ಶ್ರೀ ಸರ್ಜಾದಿ ಪೀರ್ ಮುಶರೀಫ್ ಅವರು ನಿರ್ಮಿಸಿರುವ ವಾಟರ್ ಪಾರ್ಕ್ ಅನ್ನು ಉದ್ಘಾಟಿಸಿದೆ. ಈ ಸಂದರ್ಭದಲ್ಲಿ ಶ್ರೀ ಸರ್ಜಾದಿ ಪೀರ್ ಹಾಗೂ ಅವರ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದೆನು. ಇಲ್ಲಿ ವಿವಿಧ ರೀತಿಯ ಜಲಕ್ರೀಡೆಗಳನ್ನು ಅಳವಡಿಸಲಾಗಿದ್ದು, ಕುಟುಂಬ ಸಮೇತ ಎಲ್ಲರೂ ಇಲ್ಲಿಗೆ ಬಂದು ಮನರಂಜನೆ ಪಡೆಯಬಹುದು. ಬೇಸಿಗೆಯ ಬಿಸಿಲಿನ ಸಮಯದಲ್ಲಿ ಮಕ್ಕಳಿಗೆ ಆಟವಾಡಲು ಮತ್ತು ಸಮಯ ಕಳೆಯಲು ಇದು ಉತ್ತಮ ಸ್ಥಳವಾಗಲಿದೆ. #waterpark
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
3
9
142
4.2K
M B Patil
M B Patil@MBPatil·
ಅರಣ್ಯಗಳೇ ಭೂಮಿಯ ಶ್ವಾಸಕೋಶಗಳು! ಅವು ಸಾವಿರಾರು ಮರಗಳ ನೆಲೆ, ಲಕ್ಷಾಂತರ ಜೀವಜಾತಿಗಳ ಆಶ್ರಯ, ಶುದ್ಧ ಗಾಳಿಯ ಮೂಲ ಮತ್ತು ಸಮತೋಲನ ಹವಾಮಾನದ ರಕ್ಷಕ. ನಾವು ಉಸಿರಾಡುವ ಗಾಳಿ, ವಾಸಿಸುವ ಮನೆ, ಬಳಸುವ ಕಾಗದ-ಎಲ್ಲದರ ಹಿಂದೆ ಅರಣ್ಯಗಳೇ ಮೂಲಶಕ್ತಿ. ಅರಣ್ಯಗಳು ಬೆಳೆದಷ್ಟೂ ಜನರ ಬದುಕು ಸಮೃದ್ಧವಾಗುತ್ತದೆ. ಈ #ವಿಶ್ವಅರಣ್ಯದಿನದಂದು, ಕಾಡು ಉಳಿಸಿ, ಕಾಡು ಬೆಳೆಸುವ ದೃಢ ಸಂಕಲ್ಪಕ್ಕೆ ನಾವು ಎಲ್ಲರೂ ಕೈಜೋಡಿಸೋಣ. ನಿಸರ್ಗ ಉಳಿದರೆ ಮಾತ್ರ ಭವಿಷ್ಯ ಹಸಿರಾಗುತ್ತದೆ! #WorldForestDay
M B Patil tweet media
ಕನ್ನಡ
3
8
64
1.1K
M B Patil
M B Patil@MBPatil·
ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ವಿಜಯಪುರ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರೊಂದಿಗೆ ಪ್ರಾರ್ಥನೆ ಸಲ್ಲಿಸಿದೆನು. ಸೌಹಾರ್ದತೆ, ಸಮಾನತೆ ಮತ್ತು ಸಹೋದರತ್ವವೇ ನಮ್ಮ ದೇಶದ ನಿಜವಾದ ಶಕ್ತಿ ಈ ಸಂದೇಶವನ್ನು ಇನ್ನಷ್ಟು ಬಲಪಡಿಸೋಣ. #ramjan2026mubarak
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
9
27
345
4.9K
M B Patil
M B Patil@MBPatil·
ನಾಡಿನ ಸಮಸ್ತ ಜನತೆಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು! ಉಪವಾಸ, ಪ್ರಾರ್ಥನೆ, ತ್ಯಾಗ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಸಾರುವ ಈ ಪವಿತ್ರ ಹಬ್ಬವು ನಮ್ಮ ಸಮಾಜದಲ್ಲಿ ಶಾಂತಿ, ಸಹೋದರತ್ವ ಮತ್ತು ಏಕತೆಯ ಸಂದೇಶವನ್ನು ಇನ್ನಷ್ಟು ಬಲಪಡಿಸಲಿ. ಎಲ್ಲರ ಬದುಕಿನಲ್ಲಿ ಸಂತೋಷ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಲಿ. ಈದ್ ಮುಬಾರಕ್! #ramjan2026mubarak✨🌙
M B Patil tweet media
ಕನ್ನಡ
7
14
134
1.9K
M B Patil
M B Patil@MBPatil·
ಗಗನಕ್ಕೇರಿದ ಗೌರವ: ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಜಾಗತಿಕ ಶ್ರೇಷ್ಠತೆಯ ಮತ್ತೊಂದು ಗರಿ! ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಮೂರನೇ ಬಾರಿ ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಪ್ರಶಸ್ತಿಯನ್ನು ಪಡೆದು, 2026ರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ಸ್ ನಲ್ಲಿ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಇದು ಕರ್ನಾಟಕವೇ ಹೆಮ್ಮೆಪಡುವಂತಹ ಸಾಧನೆ. ಇದರ ಜೊತೆಗೆ, ಜಾಗತಿಕ ಶ್ರೇಯಾಂಕದಲ್ಲಿ 48ನೇ ಸ್ಥಾನದಿಂದ 41ನೇ ಸ್ಥಾನಕ್ಕೇರಿರುವುದು, ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರಿನ ಸ್ಥಾನ ಮತ್ತಷ್ಟು ಬಲವಾಗುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿ. ಟರ್ಮಿನಲ್ 2ಗೆ ‘5-ಸ್ಟಾರ್’ ರೇಟಿಂಗ್ ದೊರೆತಿರುವುದು ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಈ ಮಹತ್ವದ ಸಾಧನೆಗೆ ಕಾರಣರಾದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಗುಣಮಟ್ಟ ಮತ್ತು ಪ್ರಯಾಣಿಕರ ಅನುಭವದ ಮೇಲಿನ ಬೆಂಗಳೂರಿನ ಬದ್ಧತೆಗೆ ದೊರೆತಿರುವ ಜಾಗತಿಕ ಮಾನ್ಯತೆ, ನಮ್ಮ ನಾಡಿನ ಪ್ರಗತಿ ಮತ್ತೊಮ್ಮೆ ಗಗನಕ್ಕೇರಿದೆಯೆಂಬುದನ್ನು ತೋರಿಸುತ್ತದೆ. #SKYTRAX #BIAL #kempegowdainternationalairport
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು@blrairport_kn

ಇತ್ತೀಚಿಗೆ ಲಂಡನ್‌ನಲ್ಲಿ ನಡೆದ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್‌ 2026ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಸತತ ಮೂರನೇ ವರ್ಷವೂ ಭಾರತ ಮತ್ತು ದಕ್ಷಿಣ ಏಷ್ಯಾದ 'ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ' ಎಂಬ ಗೌರವಕ್ಕೆ ಪಾತ್ರವಾಗಿದೆ. ಜೊತೆಗೆ, ಜಾಗತಿಕ ಶ್ರೇಯಾಂಕದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಸ್ಥಾನವು 48ನೇ ಸ್ಥಾನದಿಂದ 41ನೇ ಸ್ಥಾನಕ್ಕೆ ಏರಿಕೆಯಾಗಿದೆ. ಈ ಮೂಲಕ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಗೊಂಡಿದೆ. ಈ ಮಹತ್ತರ ಸಾಧನೆಯು ನಮ್ಮ ಸಿಬ್ಬಂದಿ ವರ್ಗ ಮತ್ತು ಸಹಭಾಗಿ ಸಂಸ್ಥೆಗಳ ಅವಿರತ ಶ್ರಮ ಹಾಗೂ ವಿಶ್ವದರ್ಜೆಯ ಪ್ರಯಾಣಿಕ ಅನುಭವವನ್ನು ನೀಡುವಲ್ಲಿ ನಮಗಿರುವ ಬದ್ಧತೆಯ ಪ್ರತಿಫಲವಾಗಿದೆ. ಭವಿಷ್ಯದ ದೃಷ್ಟಿಕೋನದೊಂದಿಗೆ ಸನ್ನದ್ಧರಾಗುತ್ತಿರುವ ನಾವು, ಪ್ರತಿ ಪ್ರಯಾಣಿಕರಿಗೂ ತಡೆರಹಿತ ಹಾಗೂ ಅತ್ಯುತ್ತಮ ಪ್ರಯಾಣದ ಅನುಭವ ನೀಡಲು ಶ್ರಮಿಸುತ್ತಿದ್ದೇವೆ. ಅಷ್ಟೇ ಅಲ್ಲದೆ, ಈ ಭಾಗದ ಪ್ರಮುಖ ವರ್ಗಾವಣೆ ಕೇಂದ್ರವಾಗಿ ನಮ್ಮ ಪಾತ್ರವನ್ನು ಇನ್ನಷ್ಟು ಬಲಪಡಿಸುವತ್ತ ದಿಟ್ಟ ಹೆಜ್ಜೆಯಿರಿಸಿದ್ದೇವೆ. ​ಈ ಯಶಸ್ಸಿನ ಪಯಣದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. #ಸ್ಕೈ‌ಟ್ರಾಕ್ಸ್ #ಪ್ರಶಸ್ತಿ #ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ವಿಮಾನ #ನಮ್ಮಬೆಂಗಳೂರು #ಬೆಂಗಳೂರು

ಕನ್ನಡ
2
9
104
2.5K
M B Patil
M B Patil@MBPatil·
ಬೆಂಗಳೂರಿನ ಆಗಸ ಮತ್ತಷ್ಟು ವಿಸ್ತಾರ: ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ದಿಟ್ಟ ಹೆಜ್ಜೆ! ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ KSIIDC ಮತ್ತೊಂದು ದಿಟ್ಟ ಹೆಜ್ಜೆ ಯನ್ನು ಇರಿಸಿದೆ. ನಗರದ ಹೊರವಲಯದಲ್ಲಿ ಆಯ್ಕೆ ಮಾಡಲಾದ 3 ಸ್ಥಳಗಳನ್ನು ಎಎಐ (ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ) ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಅನೇಕ ವಿಷಯಗಳ ಕುರಿತು ಪ್ರಸ್ತಾಪ ಮಾಡಿ, ಈ ಸ್ಥಳಗಳಲ್ಲಿರುವ ಸವಾಲುಗಳ ಕುರಿತು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ವಿವರವಾದ ಕಾರ್ಯತಂತ್ರ ಮತ್ತು ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿದೆ. ಈ ಟೆಂಡರ್'ನಲ್ಲಿ 3-4 ಸಂಸ್ಥೆಗಳು ಭಾಗವಹಿಸಿದ್ದು, ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅವರು ಸಲ್ಲಿಸುವ ವರದಿಯ ಆಧಾರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಪ್ರಸ್ತಾವಿತ ಹೊಸ ವಿಮಾನ ನಿಲ್ದಾಣವು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ವಾಯು ಸಂಚಾರ ಬೇಡಿಕೆಯನ್ನು ಪೂರೈಸಲು ಮತ್ತು ಕರ್ನಾಟಕದ ದೀರ್ಘಕಾಲೀನ ವಾಯುಯಾನ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. #2ndairportforbengaluru
ಕನ್ನಡ
7
11
88
3.9K
M B Patil
M B Patil@MBPatil·
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಹೊಸ ಸಂವತ್ಸರವು ಹೊಸ ಆಶೆಗಳು, ಹೊಸ ಕನಸುಗಳು ಮತ್ತು ಹೊಸ ಸಾಧನೆಗಳ ದಾರಿ ತೆರೆಯಲಿ. ಜೀವನದ ಸಿಹಿ-ಕಹಿ ಅನುಭವಗಳ ಮಧ್ಯೆ ದೃಢ ಸಂಕಲ್ಪದೊಂದಿಗೆ ಮುಂದೆ ಸಾಗುವ ಶಕ್ತಿಯನ್ನು ಈ ಯುಗಾದಿ ನಮ್ಮೆಲ್ಲರಲ್ಲೂ ತುಂಬಲಿ. #ಯುಗಾದಿ #Yugadi2026
ಕನ್ನಡ
3
9
51
1.6K
M B Patil
M B Patil@MBPatil·
ಅಲ್ಲಮಪ್ರಭು ಜಯಂತಿಯ ಪವಿತ್ರ ಸಂದರ್ಭದಲ್ಲಿ ಮಹಾನ್ ಶರಣ ಸಂತ ಅಲ್ಲಮಪ್ರಭುಗಳಿಗೆ ಭಕ್ತಿಪೂರ್ವಕ ನಮನಗಳು. ಕಾಯಕಯೋಗಿ ಬಸವಣ್ಣನವರ ಅನುಭವ ಮಂಟಪದ ಮೊಟ್ಟಮೊದಲ ಅಧ್ಯಕ್ಷರಾಗಿ ಆಧ್ಯಾತ್ಮಿಕ ಚಿಂತನೆಗೆ ದಿಕ್ಕು ತೋರಿದ ಮಹಾನ್ ತತ್ವಜ್ಞಾನಿ. ಸಾಮಾಜಿಕ ಅಸಮಾನತೆ, ಅಂಧಶ್ರದ್ಧೆ ಮತ್ತು ಮೌಢ್ಯಗಳ ವಿರುದ್ಧ ಧೈರ್ಯವಾಗಿ ನಿಂತ ಅಲ್ಲಮಪ್ರಭುಗಳು “ಅಂತರಂಗ ಶುದ್ಧಿಯೇ ನಿಜವಾದ ಭಕ್ತಿ” ಎಂಬ ಸಂದೇಶವನ್ನು ವಿಶ್ವಕ್ಕೆ ನೀಡಿದ್ದಾರೆ. ಅವರ ವಚನಗಳು ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾರುವುದರ ಜೊತೆಗೆ ಭಕ್ತಿ, ತತ್ವಜ್ಞಾನ ಮತ್ತು ಜೀವನದ ನಿಜಾರ್ಥವನ್ನುಸಾರುವ ದಿವ್ಯ ಜ್ಯೋತಿಯಾಗಿವೆ. ಅಲ್ಲಮಪ್ರಭುಗಳ ತತ್ವಚಿಂತನೆಗಳು ಮಾನವ ಕುಲಕ್ಕೆ ನಿರಂತರ ಪ್ರೇರಣೆಯಾಗಿವೆ. #ಅಲ್ಲಮಪ್ರಭುಜಯಂತಿ #ಅಲ್ಲಮಪ್ರಭು
M B Patil tweet media
ಕನ್ನಡ
0
11
57
1K
M B Patil
M B Patil@MBPatil·
ನಲಿವಿನ ತಾಣವಾದ ರಾಂಪುರ ಸರ್ಕಾರಿ ಶಾಲೆ: ಮಕ್ಕಳ ಮುಖದಲ್ಲಿ ಅರಳಿದ ನಗು! ತಿಕೋಟಾ ತಾಲ್ಲೂಕಿನ ರಾಂಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ನೂತನ ಆಟೋಪಕರಣಗಳನ್ನು ಅಳವಡಿಸಲಾಗಿದೆ. ಜಾರುವ ಬಂಡೆ, ಉಯ್ಯಾಲೆ, ತಿರುಗುಣಿ ಹೀಗೆ ವಿವಿಧ ಆಟೋಪಕರಣಗಳಲ್ಲಿ ಆಟವಾಡುತ್ತಿರುವ ಮಕ್ಕಳ ಮೊಗದಲ್ಲಿ ಸಂತಸ ಮನೆಮಾಡಿದೆ. ಶಾಲೆ ಅಂದರೆ ಕೇವಲ ನಾಲ್ಕು ಗೋಡೆಗಳಲ್ಲ, ಅದು ಮಕ್ಕಳ ಕನಸುಗಳು ಚಿಗುರುವ ನಂದನವನವಾಗಬೇಕು ಎಂಬುದು ನಮ್ಮ ಆಶಯ. ಈ ನೂತನ ಸೌಲಭ್ಯವು ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಮತ್ತು ಕಲಿಕೆಯ ಜೊತೆಗೆ ದೈಹಿಕವಾಗಿ ಸದೃಢರಾಗಲು ಸಹಕಾರಿ!
M B Patil tweet mediaM B Patil tweet mediaM B Patil tweet media
ಕನ್ನಡ
0
7
39
879
M B Patil
M B Patil@MBPatil·
ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರು, ಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ಸೌಮ್ಯ ರೆಡ್ಡಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಮಾಜ ಸೇವೆ ಮಾಡಲು ಹೆಚ್ಚಿನ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. #MahilaCongress @KarnatakaPMC @Sowmyareddyr
M B Patil tweet media
ಕನ್ನಡ
0
7
49
873