M B Patil

19.9K posts

M B Patil banner
M B Patil

M B Patil

@MBPatil

Minister for Commerce & Industries, Infrastructure GoK | Educationist-Engineer-Basava Literature Enthusiast

ವಿಜಯಪುರ - Vijayapura, India Katılım Ekim 2014
1.4K Takip Edilen116.7K Takipçiler
Sabitlenmiş Tweet
M B Patil
M B Patil@MBPatil·
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes! An incredible story of a people’s movement: 1.5 crore trees planted, raising forest cover from just 0.17% to 2%. A true testament to political will, systemic action & the power of collective participation. Proud that Vijayapura’s green success is inspiring the world! My heartfelt thanks to all the stakeholders and the people of Vijayapura. nytimes.com/card/2025/09/0…
M B Patil tweet mediaM B Patil tweet mediaM B Patil tweet mediaM B Patil tweet media
English
129
336
1.8K
210.4K
M B Patil
M B Patil@MBPatil·
ಯುವ ಮನಸುಗಳ ಜೊತೆ ಬಸವನಾಡಿನ ಅಭಿವೃದ್ಧಿಯ ಅರ್ಥಪೂರ್ಣ ಸಂವಾದದ ಮುಂದುವರಿದ ಭಾಗ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ಮುಂದುವರಿದ ಭಾಗವಾಗಿ, ಈ ಸಂಚಿಕೆಯಲ್ಲಿ #ತಿಕೋಟಾ, #ಕನಮಡಿ ಸೇರಿದಂತೆ ಜಿಲ್ಲೆಯ ಅತಿ ಎತ್ತರದ ಪ್ರದೇಶಗಳಲ್ಲಿ ಜಾರಿಗೊಳಿಸಿದ ಐತಿಹಾಸಿಕ ನೀರಾವರಿ ಯೋಜನೆಗಳು, ಕೆರೆ ತುಂಬುವ ಯೋಜನೆಗಳು ಹಾಗೂ ವಿಜಯಪುರದ ಜಲಕ್ರಾಂತಿಯ ಹಿಂದಿನ ನೈಜ ಕಥನವನ್ನು ಹಂಚಿಕೊಂಡಿದ್ದೇನೆ. "ಇಲ್ಲಿ ನೀರಾವರಿ ಅಸಾಧ್ಯ" ಎಂಬುದೇ ಅನೇಕರ ಖಚಿತ ಅಭಿಪ್ರಾಯವಾಗಿತ್ತು! ಆದರೆ ದೃಢ ಸಂಕಲ್ಪ, ದೂರದೃಷ್ಟಿ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದ ಆ ಅಸಾಧ್ಯವನ್ನು ಸಾಧ್ಯವಾಗಿಸಿ, ಇಂದು ಕಾಣುತ್ತಿರುವ ಹಸಿರು ವಿಜಯಪುರಕ್ಕೆ ಭದ್ರ ಅಡಿಪಾಯ ಹಾಕಲಾಯಿತು. ಮುಂದಿನ ವಾರ ಇದೇ ಸಂವಾದದ ಮತ್ತೊಂದು ಆಸಕ್ತಿದಾಯಕ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಕನ್ನಡ
0
0
2
444
M B Patil
M B Patil@MBPatil·
ಸಮಾಜದಲ್ಲಿನ ಮೇಲು-ಕೀಳು ತಾರತಮ್ಯ ನಿವಾರಣೆಯಾಗಿ, ಸಾಮರಸ್ಯ ನೆಲೆಸಬೇಕೆಂಬ ಆಶಯದೊಂದಿಗೆ ನಿರಂತರವಾಗಿ ಶ್ರಮಿಸುತ್ತಿರುವ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರಿಗೆ ಜನ್ಮದಿನದಂದು ಭಕ್ತಿಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಭಗವಂತನು ಶ್ರೀಗಳಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಸೇವಾಶಕ್ತಿ ನೀಡಲಿ. ಪೂಜ್ಯರ ಆಶೀರ್ವಾದ ಮತ್ತು ಮಾರ್ಗದರ್ಶನ ಸದಾ ನಾಡಿನ ಜನತೆಗೆ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.
M B Patil tweet media
ಕನ್ನಡ
0
0
35
902
M B Patil
M B Patil@MBPatil·
ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್‌.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಅಗಲಿಕೆಯ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಶ್ರೀ ದೇವೇಗೌಡ ಅವರ ಸುದೀರ್ಘ ರಾಜಕೀಯ ಜೀವನದ ಏಳು-ಬೀಳುಗಳಲ್ಲಿ ಸದಾ ಬೆನ್ನೆಲುಬಾಗಿ, ಇಡೀ ಕುಟುಂಬವನ್ನು ಮುನ್ನಡೆಸಿದ್ದ ಚೆನ್ನಮ್ಮ ಅವರ ಅಗಲಿಕೆ ಆ ಕುಟುಂಬಕ್ಕಷ್ಟೇ ಅಲ್ಲದೆ, ಅವರ ಇಡೀ ಅಭಿಮಾನಿ ಬಳಗಕ್ಕೆ ಆದ ದೊಡ್ಡ ನಷ್ಟವಾಗಿದೆ. ಈ ದುಃಖ ಭರಿಸುವ ಶಕ್ತಿಯನ್ನು ಶ್ರೀ ಹೆಚ್‌.ಡಿ. ದೇವೇಗೌಡ ಅವರಿಗೂ, ಪುತ್ರ ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರಿಗೂ ಆ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ದಿವಂಗತರ ಆತ್ಮಕ್ಕೆ ಚಿರಶಾಂತಿ ಸಿಗಲಿ.
M B Patil tweet media
ಕನ್ನಡ
1
5
32
1.1K
M B Patil
M B Patil@MBPatil·
Highlights from the India–UK FTA event. 🇮🇳🤝🇬🇧 A landmark partnership ushering in a new era of trade, investment and economic cooperation between India and the UK, creating greater opportunities for Karnataka's industries, exporters and workforce #IndiaUKFTA #InvestInKarnataka
English
0
3
32
1.5K
M B Patil
M B Patil@MBPatil·
ಮೈಸೂರು ಸಂಸ್ಥಾನದ ಕೊನೆಯ ಅರಸರಾದ, ರಾಜಯೋಗಿ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ರಾಜಸತ್ತೆಯನ್ನು ಅಧಿಕಾರದ ಸಂಕೇತವಾಗಿ ಅಲ್ಲ, ಸೇವೆಯ ಹೊಣೆಗಾರಿಕೆಯಾಗಿ ಕಂಡ ಅಪರೂಪದ ರಾಜನೀತಿಜ್ಞರಾಗಿದ್ದರು. ಸಾಹಿತ್ಯ, ಸಂಗೀತ, ಸಂಸ್ಕೃತಿ, ಶಿಕ್ಷಣ ಹಾಗೂ ಜ್ಞಾನ ಪರಂಪರೆಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಅನನ್ಯ. ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅಪಾರ ಪ್ರೋತ್ಸಾಹ ನೀಡಿ, ಅನೇಕ ಶ್ರೇಷ್ಠ ಕಲಾವಿದರನ್ನು ಬೆಳೆಸಿದ ಅವರ ಸೇವೆ ಸದಾ ಸ್ಮರಣೀಯ. ಮೈಸೂರಿನ ರಾಜಪರಂಪರೆಯ ಗೌರವವನ್ನು ಜಗತ್ತಿನಾದ್ಯಂತ ಎತ್ತಿ ಹಿಡಿದ ಅವರು, ಆಧುನಿಕತೆ ಮತ್ತು ಪರಂಪರೆಯ ನಡುವೆ ಸಮತೋಲನ ಸಾಧಿಸಿದ ದೂರದೃಷ್ಟಿಯ ನಾಯಕರಾಗಿದ್ದರು. ಸರಳತೆ, ಸಜ್ಜನಿಕೆ, ಆಧ್ಯಾತ್ಮಿಕತೆ ಮತ್ತು ಮಾನವೀಯ ಮೌಲ್ಯಗಳಿಂದ ಕೂಡಿದ ಅವರ ಬದುಕು ಇಂದಿಗೂ ಎಲ್ಲರಿಗೂ ಆದರ್ಶವಾಗಿದೆ. #JayachamarajaWadiyar #JayachamarajendraWadiyar
M B Patil tweet media
ಕನ್ನಡ
1
13
95
2.6K
M B Patil
M B Patil@MBPatil·
ವರ್ಷಗಳ ಬೇಡಿಕೆಗೆ ಸ್ಪಂದನೆ: ಮಮದಾಪುರ ದೊಡ್ಡ ಕೆರೆ ಹಿನ್ನೀರಿನ ಮುಳುಗಡೆ ಜಮೀನುಗಳ ಭೂಸ್ವಾಧೀನಕ್ಕೆ ಮಹತ್ವದ ನಿರ್ಧಾರ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮಮದಾಪುರ ಕೆರೆ ತುಂಬಿದಾಗ ಮುಳುಗಡೆಯಾಗುವ 178 ಎಕರೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಗೆ ಕಡೆಗೂ ಕಾಲ ಕೂಡಿಬಂದಿದೆ. ಮುಳುಗಡೆ ಪ್ರದೇಶದ ರೈತರಿಗೆ ಆಗುತ್ತಿರುವ ನಿರಂತರ ನಷ್ಟ ಹಾಗೂ ತೊಂದರೆಗಳನ್ನು ತಪ್ಪಿಸಲು ಈ ಭೂಮಿಯನ್ನು ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಕುರಿತಂತೆ ಬೆಂಗಳೂರಿನ ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರೊಂದಿಗೆ ಜರುಗಿದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಭೂಸ್ವಾಧೀನ ಪ್ರಕ್ರಿಯೆಗೆ ಅಂದಾಜು 42 ಕೋಟಿ ರೂ. ವೆಚ್ಚವಾಗಲಿದ್ದು, ಈ ಪ್ರಸ್ತಾವನೆಯನ್ನು ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟದ ಮುಂದೆ ತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮಹತ್ವದ ನಿರ್ಧಾರವು ರೈತರ ದೀರ್ಘಕಾಲದ ಬೇಡಿಕೆಗೆ ನ್ಯಾಯ ಒದಗಿಸುವುದರ ಜೊತೆಗೆ, ಜನಪರ ಆಡಳಿತದ ಬದ್ಧತೆಗೆ ಮತ್ತೊಂದು ಸಾಕ್ಷಿಯಾಗಲಿದೆ. @RLR_BTM #ಮಮದಾಪುರಕೆರೆ
M B Patil tweet media
ಕನ್ನಡ
5
7
46
3.7K
M B Patil
M B Patil@MBPatil·
ಭಾರತ–ಯುಕೆ ಮುಕ್ತ ವ್ಯಾಪಾರ ಒಪ್ಪಂದ ಕರ್ನಾಟಕಕ್ಕೆ ಸುವರ್ಣಾವಕಾಶ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಹೊಸ ಅವಕಾಶಗಳನ್ನು ತೆರೆದಿದೆ. ರಾಜ್ಯದ ಕಾಫಿ, ಸಾಂಬಾರ ಪದಾರ್ಥಗಳು, ಜವಳಿ, ಫಾರ್ಮಾ, ಜೈವಿಕ ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್ ಉತ್ಪನ್ನಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ವ್ಯಾಪ್ತಿ ಮತ್ತಷ್ಟು ವಿಸ್ತರಿಸಲಿದ್ದು, ಹೂಡಿಕೆ, ರಫ್ತು ಮತ್ತು ಉದ್ಯೋಗ ವೃದ್ಧಿಗೆ ಪೂರಕವಾಗಲಿದೆ. ಈ ಸುವರ್ಣಾವಕಾಶದ ಸಂಪೂರ್ಣ ಲಾಭ ರಾಜ್ಯದ ಕೈಗಾರಿಕೆ, ರೈತರು, ರಫ್ತುದಾರರು ಮತ್ತು ಯುವಜನತೆಗೆ ತಲುಪುವಂತೆ ನಮ್ಮ ಸರ್ಕಾರ ಅಗತ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. #IndiaUKFTA #InvestInKarnataka #futurereadykarnataka
M B Patil tweet media
ಕನ್ನಡ
1
8
40
2K
M B Patil
M B Patil@MBPatil·
ಮಮದಾಪುರ ದೊಡ್ಡಕೆರೆ: ರೈತರ ಹಿತ ಕಾಪಾಡುತ್ತಲೇ ಜಲಸಮೃದ್ಧಿಯತ್ತ ಮತ್ತೊಂದು ಹೆಜ್ಜೆ ರಾಜ್ಯದಲ್ಲೇ 3ನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ #ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮಮದಾಪುರ ದೊಡ್ಡಕೆರೆಯ ಹಿನ್ನೀರಿನಿಂದ ಮುಳುಗಡೆಯಾದ ಜಮೀನುಗಳ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದೆ. ಮಮದಾಪುರ ದೊಡ್ಡಕೆರೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಮುಳುಗಡೆಯಾದ ಜಮೀನುಗಳ ಭೂಸ್ವಾಧೀನ ಹಕ್ಕು, ರೈತರ ಭಾವನೆ ಹಾಗೂ ತ್ಯಾಗಕ್ಕೆ ನ್ಯಾಯ ಒದಗಿಸಲಾಗುವುದು. ಅಭಿವೃದ್ಧಿಯ ಪಯಣದಲ್ಲಿ ರೈತರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಮಮದಾಪುರಕೆರೆ ಒಂದು ದೊಡ್ಡ ಕೆರೆಯಷ್ಟೇ ಅಲ್ಲದೆ-ಜಲಾಶಯವಾಗಿದೆ! ಸಾವಿರಾರು ರೈತರ ಬದುಕಿಗೆ ಆಶಾಕಿರಣ, ಇಂದಿನ ಮತ್ತು ಮುಂದಿನ ಪೀಳಿಗೆಯ ಕೃಷಿ ಸಮೃದ್ಧಿಗೆ ಭದ್ರ ಬುನಾದಿಯಾಗಿದೆ. ಜಲ ಕ್ರಾಂತಿಯ ಮೂಲಕ ಉತ್ತರ ಕರ್ನಾಟಕದ ರೈತರ ಬದುಕನ್ನು ಇನ್ನಷ್ಟು ಹಸನಾಗಿಸುವ ನಮ್ಮ ಯೋಜನೆಗಳು ನಿರಂತರವಾಗಿ ಮುಂದುವರೆಯಲಿದೆ... @RLR_BTM #mamadapuralake #ಮಮದಾಪುರಕೆರೆ
M B Patil tweet mediaM B Patil tweet mediaM B Patil tweet media
ಕನ್ನಡ
1
13
87
3.1K
M B Patil
M B Patil@MBPatil·
BLDE ಸಂಸ್ಥೆ – ಅರಣ್ಯ ಇಲಾಖೆ ವತಿಯಿಂದ ವಿಶ್ವ ಹಾವುಗಳ ದಿನಾಚರಣೆ ಹಾವುಗಳ ಬಗ್ಗೆ ಅರಿವು | ಉರಗರಕ್ಷಕರಿಗೆ ಗುಣಮಟ್ಟದ ಕಿಟ್ – ಉಚಿತ ಹೆಲ್ತ್ ಕಾರ್ಡ್ ಗಳ ವಿತರಣೆ ಹಾವುಗಳು ಭಯದ ಪ್ರತೀಕವಲ್ಲ; ಪ್ರಕೃತಿಯ ಸಮತೋಲನವನ್ನು ಕಾಪಾಡುವ ಅಮೂಲ್ಯ ಜೀವಿಗಳು. ರೈತರ ಬೆಳೆಗಳನ್ನು ನಾಶಮಾಡುವ ಇಲಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಆಹಾರ ಭದ್ರತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಅವು ಮಹತ್ವದ ಪಾತ್ರ ವಹಿಸುತ್ತವೆ. ಅಜ್ಞಾನ ಮತ್ತು ಮೂಢನಂಬಿಕೆಗಳಿಂದ ಹಾವುಗಳನ್ನು ಕೊಲ್ಲುವುದಕ್ಕಿಂತ, ಅವುಗಳ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸುವ ಉದ್ದೇಶದಿಂದ ವಿಜಯಪುರದಲ್ಲಿ ಇಂದು BLDE ಡೀಮ್ಡ್ ವಿಶ್ವ ವಿದ್ಯಾಲಯ-ಕರ್ನಾಟಕ ರಾಜ್ಯ ಅರಣ್ಯ ಇಲಾಖೆ-ವಿಜಯಪುರ ಸಹೋಗದೊಂದಿಗೆ ‘ವಿಶ್ವ ಹಾವುಗಳ ದಿನ’ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕರಲ್ಲಿಯೂ ಹಾವುಗಳ ಕಡಿತ-ಚಿಕಿತ್ಸೆ ಕುರಿತು ಜಾಗೃತಿ ಮೂಡಿಸುವ ಜೊತೆಗೆ, ಸರ್ಪಗಳ ಸಂರಕ್ಷಣೆಯಲ್ಲಿ ನಿಸ್ವಾರ್ಥವಾಗಿ ತೊಡಗಿರುವ ಹಲವಾರು ಉರಗ ರಕ್ಷಕರನ್ನು ಸನ್ಮಾನಿಸಲಾಯಿತು. ಅವರಿಗೆ ಗುಣಮಟ್ಟದ ಉರಗ ರಕ್ಷಣಾ ಕಿಟ್ ಗಳನ್ನು ವಿತರಿಸಲಾಯಿತು. ಅವರ ಆರೋಗ್ಯದ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು BLDE ವತಿಯಿಂದ ಉಚಿತ ಹೆಲ್ತ್ ಕಾರ್ಡ್ ಗಳನ್ನು ನೀಡಲಾಯಿತು. ಜೀವ ಉಳಿಸುವವರನ್ನು ಗೌರವಿಸುವ ಸಮಾಜವೇ ನಿಜವಾದ ನಾಗರಿಕ ಸಮಾಜ. ಉರಗ ರಕ್ಷಕರ ಸೇವೆಗೆ ಗೌರವ ಸಲ್ಲಿಸುತ್ತಾ, ಪ್ರಕೃತಿ ಮತ್ತು ಜೀವವೈವಿಧ್ಯ ಸಂರಕ್ಷಣೆಯ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸೋಣ. #WorldSnakeDay
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
0
6
49
2K
M B Patil
M B Patil@MBPatil·
Kolkata Roadshow | Building partnerships. Driving investments. Creating opportunities. Here's a glimpse of my meetings with leading business and industry leaders as we showcased Karnataka's strengths and explored new investment opportunities that will fuel growth and generate employment across the state. #KolkataRoadshow #InvestKarnataka
English
1
11
51
2.6K
M B Patil
M B Patil@MBPatil·
ಕರ್ನಾಟಕದ ಪ್ರಗತಿಗೆ ಮತ್ತೊಂದು ಮಹತ್ವದ ಹೆಜ್ಜೆ! ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ರಾಜ್ಯದ ಐಟಿ, ಕಾಫಿ, ಸಾಂಬಾರ್ ಪದಾರ್ಥ ಹಾಗೂ ಫಾರ್ಮಾ ವಲಯಗಳಿಗೆ ಭಾರಿ ಲಾಭವಾಗಲಿದೆ. ಬ್ರಿಟನ್ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ನಮ್ಮ ರಾಜ್ಯದಲ್ಲಿ ಕ್ಯಾಂಪಸ್ ಆರಂಭಿಸಲಿದ್ದು, ಉದ್ಯೋಗಾವಕಾಶಗಳು ಹೆಚ್ಚಲಿವೆ. ನಮ್ಮ ಸ್ಥಳೀಯ ಬೆಳೆಗಾರರು ಮತ್ತು ಉದ್ಯಮಿಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಸುಂಕ ಮುಕ್ತ ವ್ಯಾಪಾರದ ದೊಡ್ಡ ಅವಕಾಶ ಸಿಗಲಿದೆ.
M B Patil tweet media
ಕನ್ನಡ
0
9
36
1.7K
M B Patil
M B Patil@MBPatil·
ಅಲ್ಲಲ್ಲಿಗೆ ತಕ್ಕ ಹಾಗೆ ಎಲ್ಲರಿಗೂ ಬೋಧಿಸಲಾಗದು. ಬಲ್ಲವರಲ್ಲಿ ನುಡಿದು, ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ನುಡಿದಡೆ, ಅವರು ಕಲ್ಲೆದೆಯವನೆಂಬರು. ಒಳ್ಳಿತು ಹೊಲ್ಲವೆನಬೇಡ ಆರಿಗೂ. ತನ್ನಲ್ಲಿಯೆ ಅರಿಕೆಯೆಂದನಂಬಿಗ ಚೌಡಯ್ಯ. - ಅಂಬಿಗರ ಚೌಡಯ್ಯ
ಕನ್ನಡ
0
6
24
2K
M B Patil
M B Patil@MBPatil·
ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಇಂದಿನಿಂದ ಜಾರಿಗೆ! ಸರಕಾರದ ಚಾರಿತ್ರಿಕ ಹೆಜ್ಜೆ: ರಾಜ್ಯದಿಂದ ರಫ್ತಾಗುವ ಹಲವು ಉತ್ಪನ್ನಗಳ ಮೇಲಿನ ಸುಂಕ ಸೊನ್ನೆಗೆ ಇಳಿಕೆ! ಭಾರತ–ಯುನೈಟೆಡ್ ಕಿಂಗ್‌ಡಮ್ (ಯುಕೆ) ಮುಕ್ತ ವ್ಯಾಪಾರ ಒಪ್ಪಂದ (FTA) ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸ ತರಿಸಿತು. ಇದು ಕೇವಲ ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದವಲ್ಲ; ಕರ್ನಾಟಕದ ಕೈಗಾರಿಕೆ, ಕೃಷಿ, ತಂತ್ರಜ್ಞಾನ, ರಫ್ತು ಹಾಗೂ ಉದ್ಯೋಗ ಕ್ಷೇತ್ರಕ್ಕೆ ಹೊಸ ಅವಕಾಶಗಳ ಬಾಗಿಲು ತೆರೆಯುವ ಚಾರಿತ್ರಿಕ ಮೈಲಿಗಲ್ಲು. ಈ ಒಪ್ಪಂದದ ಅತ್ಯಧಿಕ ಪ್ರಯೋಜನ ಪಡೆಯುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಭಾರತದ ಶೇ.99ರಷ್ಟು ಉತ್ಪನ್ನಗಳು ಸುಂಕರಹಿತವಾಗಿ ಬ್ರಿಟನ್ ಮಾರುಕಟ್ಟೆ ಪ್ರವೇಶಿಸಲಿದ್ದು, ಕರ್ನಾಟಕದ ಜೈವಿಕ ತಂತ್ರಜ್ಞಾನ, ಫಾರ್ಮಾಸ್ಯುಟಿಕಲ್ಸ್, ಜವಳಿ ಮತ್ತು ಗಾರ್ಮೆಂಟ್ಸ್, ಎಂಜಿನಿಯರಿಂಗ್, ಮಷಿನರಿ, ಏರೋಸ್ಪೇಸ್, ಸಮುದ್ರ ಉತ್ಪನ್ನಗಳು, ಕೊಡಗು–ಚಿಕ್ಕಮಗಳೂರಿನ ವಿಶ್ವಪ್ರಸಿದ್ಧ ಕಾಫಿ, ಬ್ಯಾಡಗಿ ಮೆಣಸಿನಕಾಯಿ, ಏಲಕ್ಕಿ, ಕಾಳುಮೆಣಸು, ಸಿರಿಧಾನ್ಯಗಳು ಸೇರಿದಂತೆ ನಮ್ಮ ರೈತರ ಹಾಗೂ ಉದ್ಯಮಿಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಬೆಂಗಳೂರು ಕೇಂದ್ರಿತ ಐಟಿ, ಜಿಸಿಸಿ, ಡೀಪ್-ಟೆಕ್, ಸೆಮಿಕಂಡಕ್ಟರ್, ಶುದ್ಧ ಇಂಧನ ಹಾಗೂ ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರಗಳಿಗೆ ಈ ಒಪ್ಪಂದ ಹೊಸ ಚೈತನ್ಯ ನೀಡಲಿದ್ದು, ಬೆಳಗಾವಿಯ ಏರೋಸ್ಪೇಸ್ ವಲಯಕ್ಕೂ ಮಹತ್ವದ ಉತ್ತೇಜನ ದೊರೆಯಲಿದೆ. ಈಗಾಗಲೇ Rolls-Royce, BAE Systems, Tesco, ARM ಹಾಗೂ HSBC ಸೇರಿದಂತೆ ಹಲವು ಪ್ರಮುಖ ಬ್ರಿಟಿಷ್ ಕಂಪನಿಗಳು ಕರ್ನಾಟಕದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 30 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿವೆ. ಬ್ರಿಟಿಷ್ ಹೂಡಿಕೆದಾರರ ವಿಶ್ವಾಸಾರ್ಹ ತಾಣವಾಗಿ ಕರ್ನಾಟಕ ತನ್ನ ಸ್ಥಾನವನ್ನು ಈಗಾಗಲೇ ಸಾಬೀತುಪಡಿಸಿದ್ದು, ಈ ಒಪ್ಪಂದದೊಂದಿಗೆ ಮತ್ತಷ್ಟು ಹೂಡಿಕೆ, ಅತ್ಯಾಧುನಿಕ ತಂತ್ರಜ್ಞಾನ, ಸಂಶೋಧನೆ ಹಾಗೂ ವಿಶ್ವವಿದ್ಯಾಲಯ–ಕೈಗಾರಿಕೆ ಸಹಭಾಗಿತ್ವಕ್ಕೆ ವೇಗ ಸಿಗುವ ವಿಶ್ವಾಸವಿದೆ. ಕರ್ನಾಟಕ ಇಂದು ಭಾರತದ ಬೆಳವಣಿಗೆಯ ಎಂಜಿನ್ ಮಾತ್ರವಲ್ಲ; ಜಾಗತಿಕ ವ್ಯಾಪಾರ, ಹೂಡಿಕೆ ಮತ್ತು ನಾವೀನ್ಯದ ಕೇಂದ್ರವಾಗುವತ್ತ ಮತ್ತೊಂದು ದೃಢ ಹೆಜ್ಜೆ ಇಟ್ಟಿದೆ. @chandruiyer @UKinBengaluru @UKinIndia @Lindy_Cameron @HMTCSouthAsia #IndiaUKFTA #InvestInKarnataka #FutureReadyKarnataka
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
0
12
52
2.4K
M B Patil
M B Patil@MBPatil·
India-UK Free Trade Agreement: Opening a New Chapter in Economic Partnership It was a pleasure to attend the event hosted by the British Deputy High Commission in Bengaluru to mark the coming into force of the India–UK Free Trade Agreement (FTA), a landmark milestone that ushers in a new era of economic cooperation, trade and investment between our two nations. Karnataka stands to be one of the biggest beneficiaries of this agreement. Home to several leading British companies - including Rolls-Royce, BAE Systems, Tesco, ARM and HSBC - and nearly 30,000 jobs created by UK firms, our state has long been a trusted destination for British investment. We are confident this partnership will grow even stronger, attracting many more UK businesses to Karnataka. With zero-duty market access for 99% of Indian exports, the agreement will enhance the global competitiveness of our industries, open new opportunities for exporters and MSMEs, strengthen supply chains, and accelerate growth across sectors such as advanced manufacturing, aerospace & defence, semiconductors, clean mobility, biotechnology and deep technology. The Government of Karnataka remains committed to empowering our exporters, supporting innovation, strengthening industry-academia collaboration, and providing investors with speed in approvals, stability in policy, and unwavering support. As India and the UK embark on this new chapter of economic partnership, Karnataka is ready to lead the way in translating this landmark agreement into greater investments, stronger exports, high-quality jobs, and shared prosperity. @chandruiyer @UKinBengaluru @UKinIndia @Lindy_Cameron @HMTCSouthAsia #IndiaUKFTA #InvestInKarnataka #FutureReadyKarnataka
M B Patil tweet mediaM B Patil tweet mediaM B Patil tweet mediaM B Patil tweet media
English
0
19
80
4.2K
M B Patil
M B Patil@MBPatil·
ಗುಳೆ ಹೋದವರು ಮರಳಿ ತವರಿಗೆ: ನೀರಾವರಿ ತಂದ ಸಮೃದ್ಧಿ ಕಲ್ಲುಗುಡ್ಡದಲ್ಲೂ ಹಸಿರು ಕಂಡ ರೈತನ ಯಶೋಗಾಥೆ! ನೀರಿನ ಪ್ರತಿಯೊಂದು ಹನಿಯನ್ನೂ ಅಭಿವೃದ್ಧಿಯ ಶಕ್ತಿಯನ್ನಾಗಿ ಪರಿವರ್ತಿಸುವ ನಮ್ಮ ಸಂಕಲ್ಪದ ಫಲವಾಗಿ, ವಿಜಯಪುರ ಜಿಲ್ಲೆ ಇಂದು ಸಂಪತ್ಬರಿತವಾಗಿದೆ. ಒಂದು ಕಾಲದಲ್ಲಿ ಕೃಷಿ ಕಾರ್ಮಿಕರಾಗಲು ಕೂಡ ಅವಕಾಶವಿಲ್ಲದೆ ಗುಳೆ ಹೋಗಿದ್ದ ಅನೇಕ ಕುಟುಂಬಗಳು ಇಂದು ಜಿಲ್ಲೆಗೆ ಮರಳಿ ಬಂದು, ತಮ್ಮ ನೆಲದಲ್ಲೇ ಯಶಸ್ವಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸಹಸ್ರಾರು ರೈತ ಕುಟುಂಬಗಳ ಯಶೋಗಾಥೆಗೆ ಬಸವನಾಡು ಜೀವಂತ ಸಾಕ್ಷಿಯಾಗಿದೆ.ಅಂತಹ ಸ್ಪೂರ್ತಿದಾಯಕ ಕಥೆಗಳಲ್ಲಿ ಮಲಕದೇವರಹಟ್ಟಿಯ ಶ್ರೀ ದೇವರಾಜ ಶ್ರೀಶೈಲ ರಾಮೋಜಿ ಅವರ ಯಶೋಗಾಥೆಯೂ ಒಂದು. ಕಲ್ಲುಗುಡ್ಡ ಪ್ರದೇಶದಲ್ಲಿರುವ ಕೇವಲ 2.5 ಎಕರೆ ಭೂಮಿಯಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆದು, ವರ್ಷಕ್ಕೆ ₹6 ರಿಂದ ₹7 ಲಕ್ಷ ಆದಾಯ ಗಳಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ತಮ್ಮ ಹೊಲದಲ್ಲಿ ಬೆಳೆದ ಹೀರೇಕಾಯಿಗಳನ್ನು ಪ್ರೀತಿಯಿಂದ ನೀಡಿ ಕೃತಜ್ಞತೆ ವ್ಯಕ್ತಪಡಿಸಿದ ಅವರ ಆತ್ಮೀಯತೆ ಮನಸಿಗೆ ಸಂತಸ ತಂದಿದೆ. ನಮ್ಮ ರೈತರ ಯಶೋಗಾಥೆಗಳೇ ನಮ್ಮ ಅಭಿವೃದ್ಧಿಯ ದಿಕ್ಕು ಸರಿಯಾಗಿದೆ ಎಂಬುದಕ್ಕೆ ತಕ್ಕ ಉದಾಹರಣೆಯಾಗಿದೆ.
ಕನ್ನಡ
2
29
159
4.9K
M B Patil
M B Patil@MBPatil·
ಕೋಲ್ಕತ್ತ: ಕರ್ನಾಟಕದ ಕೈಗಾರಿಕಾ ಸಾಮರ್ಥ್ಯಕ್ಕೆ ಮತ್ತಷ್ಟು ಮನ್ನಣೆ! ಕೋಲ್ಕತ್ತಾದಲ್ಲಿ ನಡೆದ ಫಲಪ್ರದ ಮಾತುಕತೆಯ ಫಲವಾಗಿ ಎಂಟು ಪ್ರಮುಖ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿವೆ. ಇದು ನಮ್ಮ ರಾಜ್ಯದ ಉದ್ಯಮ ಸ್ನೇಹಿ ನೀತಿಗಳು, ಪಾರದರ್ಶಕ ಆಡಳಿತ ಮತ್ತು ದೂರದೃಷ್ಟಿಯ ನಾಯಕತ್ವದ ಮೇಲಿರುವ ವಿಶ್ವಾಸಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಬೆಂಗಳೂರು ಮಾತ್ರವಲ್ಲದೆ, "Beyond Bengaluru" ಪರಿಕಲ್ಪನೆಯಡಿ ರಾಜ್ಯದ ಎಲ್ಲಾ ಭಾಗಗಳಿಗೆ ಕೈಗಾರಿಕೆಗಳನ್ನು ವಿಸ್ತರಿಸುವ ನಮ್ಮ ಸಂಕಲ್ಪಕ್ಕೆ ಉದ್ಯಮ ವಲಯದಿಂದ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ಪ್ರಾದೇಶಿಕ ಸಮತೋಲನದ ಅಭಿವೃದ್ಧಿಯೂ ನಮ್ಮ ಆದ್ಯತೆಯಾಗಿದೆ. ಹೊಸ ಹೂಡಿಕೆಗಳು ಎಂದರೆ ಕೇವಲ ಕಾರ್ಖಾನೆಗಳ ನಿರ್ಮಾಣವಲ್ಲ; ಸಾವಿರಾರು ಯುವಕರಿಗೆ ಉದ್ಯೋಗ, ಸ್ಥಳೀಯ ಉದ್ಯಮಿಗಳಿಗೆ ಹೊಸ ಅವಕಾಶಗಳು, ಉತ್ತಮ ಮೂಲಸೌಕರ್ಯ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಗೆ ಹೊಸ ಚೈತನ್ಯ. ಕರ್ನಾಟಕ ಇಂದು ಕೇವಲ ಹೂಡಿಕೆಗಳಿಗೆ ಸೂಕ್ತ ತಾಣವಾಗಿರುವುದಷ್ಟೇ ಅಲ್ಲದೆ, ಭಾರತದ ಕೈಗಾರಿಕಾ ಭವಿಷ್ಯವನ್ನು ರೂಪಿಸುತ್ತಿರುವ ವಿಶ್ವಾಸಾರ್ಹ ಪಾಲುದಾರ ಎಂಬ ಹೆಗ್ಗಳಿಕೆಯನ್ನು ಮತ್ತಷ್ಟು ಬಲಪಡಿಸುತ್ತಿದೆ. ಹೂಡಿಕೆ ಸೆಳೆಯುವ ನಮ್ಮ ಪ್ರಯತ್ನ ನಿರಂತರ… ಅಭಿವೃದ್ಧಿಯ ಪಯಣ ಇನ್ನಷ್ಟು ವೇಗವಾಗಿ ಮುಂದುವರಿಯಲಿದೆ! #BeyondBengaluru #KolkataRoadshow #InvestKarnataka
M B Patil tweet media
ಕನ್ನಡ
1
5
36
1.6K
M B Patil
M B Patil@MBPatil·
ಯುವಶಕ್ತಿಯ ಕೈಯಲ್ಲಿ ಕೌಶಲ್ಯವಿದ್ದರೆ ಅದು ವ್ಯಕ್ತಿಯ ಬದುಕನ್ನಷ್ಟೇ ಅಲ್ಲ, ಕುಟುಂಬದ ಭವಿಷ್ಯ, ಸಮಾಜದ ಅಭಿವೃದ್ಧಿ ಹಾಗೂ ರಾಷ್ಟ್ರದ ಆರ್ಥಿಕ ಬೆಳವಣಿಗೆಯನ್ನೂ ರೂಪಿಸುವ ಶಕ್ತಿಯಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿಯೊಂದೇ ಸಾಲದು. ಕೌಶಲ್ಯ, ತಂತ್ರಜ್ಞಾನದ ಅರಿವು ಹಾಗೂ ನಿರಂತರ ಕಲಿಕೆಯ ಮನೋಭಾವವೇ ಯಶಸ್ಸಿನ ನಿಜವಾದ ಬಂಡವಾಳ. ಕೈಗಾರಿಕೆ, ಕೃಷಿ, ಸೇವಾ ವಲಯ, ಸ್ಟಾರ್ಟ್‌ಅಪ್‌ಗಳು, ಕೃತಕ ಬುದ್ಧಿಮತ್ತೆ(AI) ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಅವುಗಳನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಂಡರೆ ಉದ್ಯೋಗ ಮಾತ್ರವಲ್ಲದೆ ಉದ್ಯಮಿಯಾಗುವ ಹೊಸ ದಾರಿಗಳೂ ತೆರೆದುಕೊಳ್ಳುತ್ತವೆ. ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಎಲ್ಲ ಯುವಜನತೆಗೆ ಹಾರ್ದಿಕ ಶುಭಾಶಯಗಳು. #WorldYouthSkillsDay
M B Patil tweet media
ಕನ್ನಡ
0
3
34
1.2K
M B Patil
M B Patil@MBPatil·
Meeting with Shyam Steel Had a productive meeting with Mr. Nikunj Beriwal, Group CFO of Shyam Steel, one of India's leading integrated steel manufacturers with a strong presence in TMT bars and value-added steel products. We discussed the company's interest in establishing a steel manufacturing plant in Karnataka and also explored opportunities for investments beyond the steel sector. I highlighted Karnataka's industry-friendly ecosystem and assured the Government's full support in providing end-to-end investment facilitation. ಶ್ಯಾಮ್ ಸ್ಟೀಲ್ ನೊಂದಿಗೆ ಮಹತ್ವದ ಮಾತುಕತೆ: ಬಳ್ಳಾರಿಯಲ್ಲಿ ಘಟಕ ಸ್ಥಾಪಿಸಲು ಆಹ್ವಾನ ಭಾರತದ ಪ್ರಮುಖ ಸಮಗ್ರ ಉಕ್ಕು ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಶ್ಯಾಮ್ ಸ್ಟೀಲ್ ನ ಸಮೂಹ ಮುಖ್ಯ ಹಣಕಾಸು ಅಧಿಕಾರಿ ಶ್ರೀ ನಿಕುಂಜ್ ಬೆರಿವಾಲ್ ಅವರೊಂದಿಗೆ ಮಹತ್ವದ ಸಭೆ ನಡೆಸಲಾಯಿತು. ಮೂಲಸೌಕರ್ಯ ಹಾಗೂ ನಿರ್ಮಾಣ ಕ್ಷೇತ್ರಗಳಿಗೆ ಅಗತ್ಯವಿರುವ ಟಿಎಂಟಿ ಉಕ್ಕು (TMT ಕಂಬಿಗಳು) ಸೇರಿದಂತೆ ವಿವಿಧ ಮೌಲ್ಯವರ್ಧಿತ ಉಕ್ಕಿನ ಉತ್ಪನ್ನಗಳನ್ನು ತಯಾರಿಸುತ್ತಿರುವ ಶ್ಯಾಮ್ ಸ್ಟೀಲ್, ಕರ್ನಾಟಕದಲ್ಲಿ ಹೊಸ ಉಕ್ಕು ಉತ್ಪಾದನಾ ಘಟಕ ಸ್ಥಾಪಿಸುವ ಸಾಧ್ಯತೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಉಕ್ಕು ಕ್ಷೇತ್ರದ ಹೊರತಾಗಿ, ರಾಜ್ಯದಲ್ಲಿ ಲಭ್ಯವಿರುವ ಇತರ ಹೂಡಿಕೆ ಅವಕಾಶಗಳ ಬಗ್ಗೆಯೂ ವಿಚಾರ ವಿನಿಮಯ ನಡೆಸಿದೆವು. ವಿಶೇಷವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಸೂಕ್ತ ಭೂಮಿ ಗುರುತಿಸುವುದು, ಭೂಸ್ವಾಧೀನ ಪ್ರಕ್ರಿಯೆಗೆ ನೆರವು, ಅನ್ವಯವಾಗುವ ಪ್ರೋತ್ಸಾಹಧನಗಳು ಹಾಗೂ ಯೋಜನೆ ಜಾರಿಯ ಪ್ರತಿ ಹಂತದಲ್ಲೂ ಕರ್ನಾಟಕ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಲಾಯಿತು. ಸೂಕ್ತ ಭೂಮಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಕಂಪನಿಯ ಹೂಡಿಕೆ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವ ನಿಟ್ಟಿನಲ್ಲಿ ಮಾತುಕತೆಯನ್ನು ಮುಂದುವರಿಸಲು ಉಭಯ ಪಕ್ಷಗಳು ಒಪ್ಪಿಗೆ ಸೂಚಿಸಿವೆ. #KolkataRoadshow #InvestKarnataka #ShyamSteel
M B Patil tweet media
English
0
7
45
1.9K
M B Patil
M B Patil@MBPatil·
ರೂಪಾ & ಕಂಪನಿಯೊಂದಿಗೆ ಮಹತ್ವದ ಸಭೆ: ಕರ್ನಾಟಕದಲ್ಲಿ ಉತ್ಪಾದನಾ ವಿಸ್ತರಣೆಗೆ ಹೊಸ ಅವಕಾಶಗಳ ಕುರಿತು ಚರ್ಚೆ ಭಾರತದ ಪ್ರಮುಖ ನಿಟ್‌ ವೇರ್ ಹಾಗೂ ಉಡುಪು ತಯಾರಿಕಾ ಕಂಪನಿಗಳಲ್ಲಿ ಒಂದಾದ ರೂಪಾ & ಕಂಪನಿ ಲಿಮಿಟೆಡ್‌ ನ ಮುಖ್ಯ ಹಣಕಾಸು ಅಧಿಕಾರಿಗಳಾದ ಶ್ರೀ ಸುಮಿತ್ ಖೋವಾಲಾ ಹಾಗೂ ಹಣಕಾಸು ವಿಭಾಗದ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಅವರೊಂದಿಗೆ ಮಹತ್ವದ ಸಭೆ ನಡೆಸಲಾಯಿತು. ಕರ್ನಾಟಕದಲ್ಲಿ ತನ್ನ ಉತ್ಪಾದನಾ ವಲಯವನ್ನು ಮತ್ತಷ್ಟು ವಿಸ್ತರಿಸುವ ಕಂಪನಿಯ ಯೋಜನೆಗಳ ಕುರಿತು ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದೆವು. ರಾಜ್ಯದಲ್ಲಿ ಲಭ್ಯವಿರುವ ಕೈಗಾರಿಕಾ ಅವಕಾಶಗಳು ಹಾಗೂ ಹೂಡಿಕೆಗೆ ಪೂರಕವಾದ ಪರಿಸರದ ಕುರಿತು ವಿವರಿಸಿದೆವು. ಕಂಪನಿಯ ಪ್ರತಿನಿಧಿಗಳನ್ನು ಮುಂದಿನ ವಾರವೇ ಕರ್ನಾಟಕಕ್ಕೆ ಭೇಟಿ ನೀಡಿ ಸೂಕ್ತ ಭೂಮಿಯ ಆಯ್ಕೆ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಆಹ್ವಾನಿಸಿದೆವು. ಈ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ರಾಜ್ಯ ಸರ್ಕಾರದಿಂದ ಒದಗಿಸುವ ಭರವಸೆ ನೀಡಲಾಯಿತು. ಜೊತೆಗೆ, ಕರ್ನಾಟಕದ ಪ್ರಗತಿಪರ ಕೈಗಾರಿಕಾ ಪ್ರೋತ್ಸಾಹಧನ ನೀತಿಗಳು ಹಾಗೂ Ease of Doing Business ಅನ್ನು ಮತ್ತಷ್ಟು ಬಲಪಡಿಸಿರುವ ಇತ್ತೀಚಿನ ಸುಧಾರಣೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡೆವು. ಪ್ರಸ್ತಾವಿತ ಹೂಡಿಕೆ ಯೋಜನೆಯನ್ನು ಶೀಘ್ರಗತಿಯಲ್ಲಿ ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆ ಹಾಗೂ ರೂಪಾಕಂಪೆನಿ ನಿರಂತರ ಸಂಪರ್ಕದಲ್ಲಿದ್ದು, ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸಿವೆ. #RupaCompany #KolkataRoadshow #InvestKarnataka
M B Patil@MBPatil

Weaving New Growth Opportunities with Rupa & Company Rupa & Company Limited, one of India's leading knitwear and apparel manufacturers, is exploring opportunities to further expand its manufacturing presence in Karnataka. During our meeting with Mr. Sumit Khowala, CFO, and Mr. Praveen, Manager - Finance, we discussed the company's growth plans and the State's readiness to support its next phase of investment. We invited the company to undertake a site visit next week to explore suitable land options and assured full support in facilitating the process. We also shared an overview of Karnataka's progressive incentive framework and recent reforms that have further strengthened the ease of doing business. #KolkataRoadshow #InvestKarnataka

ಕನ್ನಡ
0
2
23
1.6K
M B Patil
M B Patil@MBPatil·
Weaving New Growth Opportunities with Rupa & Company Rupa & Company Limited, one of India's leading knitwear and apparel manufacturers, is exploring opportunities to further expand its manufacturing presence in Karnataka. During our meeting with Mr. Sumit Khowala, CFO, and Mr. Praveen, Manager - Finance, we discussed the company's growth plans and the State's readiness to support its next phase of investment. We invited the company to undertake a site visit next week to explore suitable land options and assured full support in facilitating the process. We also shared an overview of Karnataka's progressive incentive framework and recent reforms that have further strengthened the ease of doing business. #KolkataRoadshow #InvestKarnataka
M B Patil tweet media
English
0
4
32
2.6K