Ramalinga Reddy

6.6K posts

Ramalinga Reddy banner
Ramalinga Reddy

Ramalinga Reddy

@RLR_BTM

Minister for Major and Medium Irrigation - Karnataka | MLA - BTM Layout |

Karnataka Katılım Eylül 2016
25 Takip Edilen79.7K Takipçiler
Ramalinga Reddy
Ramalinga Reddy@RLR_BTM·
ಮಾಜಿ ಪ್ರಧಾನಿ ಶ್ರೀ ಎಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ಅವರ ನಿಧನಕ್ಕೆ ನನ್ನ ಸಂತಾಪಗಳು. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಮತ್ತು ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #HDDeveGowda #RamalingaReddy #HDKumaraswamy #HDRevanna
Ramalinga Reddy tweet media
ಕನ್ನಡ
0
1
4
2.2K
Ramalinga Reddy
Ramalinga Reddy@RLR_BTM·
ಅಧಿಕಾರದಲ್ಲಿದ್ದಾಗ ಭೂಸ್ವಾಧೀನ, ವಿರೋಧ ಪಕ್ಷದಲ್ಲಿದ್ದಾಗ ಮೊಸಳೆ ಕಣ್ಣೀರು ಸುರಿಸಿ ರೈತರ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ನಾಯಕರು ‘ಡ್ರಾಮಾ ಮಾಸ್ಟರ್ಸ್'. ⚡️2006ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದಾಗ, ಅಂದಿನ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲೇ ಬಿಡದಿ ಸೇರಿದಂತೆ 5 ಸಮಗ್ರ ಟೌನ್‌ಶಿಪ್‌ಗಳ ಅಭಿವೃದ್ಧಿಗೆ ಅಧಿಕೃತವಾಗಿ ತೀರ್ಮಾನ ಕೈಗೊಳ್ಳಲಾಗಿತ್ತು. ಅಷ್ಟೇ ಅಲ್ಲ, ಅಂದು ಶ್ರೀ ಆರ್. ಅಶೋಕ್ ಅವರು ಆರೋಗ್ಯ ಸಚಿವರಾಗಿದ್ದ ಕಾಲದಲ್ಲೇ (18.10.2006) ಇದಕ್ಕೆ ಅಧಿಕೃತ ಅಧಿಸೂಚನೆ ಹೊರಡಿಸಿ, ನಂತರ ವ್ಯಾಪ್ತಿಯನ್ನೂ ವಿಸ್ತರಿಸಲಾಯಿತು. ⚡️ 2010ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಯೋಜನೆಗಾಗಿ ಮರು ಟೆಂಡರ್ ಕರೆಯಲಾಯಿತು. 2012ರಲ್ಲಿ ಶ್ರೀ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವೇ ಈ ಟೌನ್‌ಶಿಪ್ ಅನುಷ್ಠಾನಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ⚡️ 2020ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 9,000 ಎಕರೆ ಪ್ರದೇಶದಲ್ಲಿ ಸಮಗ್ರ ಟೌನ್‌ಶಿಪ್ ಅಭಿವೃದ್ಧಿಪಡಿಸುವ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಯಿತು. ಆಗಲೂ ಆರ್. ಅಶೋಕ್ ಅವರೇ ಸಚಿವರಾಗಿದ್ದರು! ತದನಂತರ ಶ್ರೀ ಬಸವರಾಜ ಬೊಮ್ಮಾಯಿ ಅವರ 2022ರ ಬಜೆಟ್‌ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ಘೋಷಿಸಿ, ಅನುಷ್ಠಾನಕ್ಕೆ ಮತ್ತೊಂದು ಉನ್ನತ ಮಟ್ಟದ ಸಮಿತಿ ರಚಿಸಲಾಯಿತು. 2006ರ ಮೈತ್ರಿ ಕೂಟ, 2008-13 ರ ಬಿಜೆಪಿ ಆಡಳಿತ, ಹಾಗೂ 2019-23 ರ ಬಿಜೆಪಿ ಆಡಳಿತ ಸೇರಿದಂತೆ ಒಟ್ಟು 3 ಅವಧಿಗಳಲ್ಲಿ ಸುಮಾರು 11 ವರ್ಷ ನೀವೇ ಅಧಿಕಾರದಲ್ಲಿದ್ದವರಲ್ಲವೇ? ರೈತರ ಮೇಲೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಅಂದೇ ನೋಟಿಫಿಕೇಶನ್ ರದ್ದು ಮಾಡಬೇಕಿತ್ತಲ್ಲ? ಅಂದು ಮಾಡದವರು ಇಂದು ಮೊಸಳೆ ಕಣ್ಣೀರು ಸುರಿಸಿದರೆ ಜನ ನಂಬುತ್ತಾರಾ? ಅಂದು ಏನು ಆಗಲೇ ಇಲ್ಲ ಎಂಬಂತೆ ಇದ್ದ ಚಲವಾದಿ ನಾರಾಯಣಸ್ವಾಮಿ ಅವರ ಮೌನಕ್ಕೆ ಈಗೇಕೆ ವಾಚಾಳಿತನ? ಶ್ರೀ ಬಸವರಾಜ ಬೊಮ್ಮಯಿ ಅವರೇ, ಸರ್ಕಾರಿ ಜಮೀನಿನಲ್ಲಿ ಯೋಜನೆ ಮಾಡಿ ಎಂದು ಈಗ ಬಿಟ್ಟಿ ಭಾಷಣ ಬಿಗಿಯುತ್ತಿದ್ದೀರಲ್ಲಾ, ನೀವು ಮುಖ್ಯಮಂತ್ರಿಯಾಗಿದ್ದ 2 ವರ್ಷಗಳ ಅವಧಿಯಲ್ಲಿ ಏನು ಮಾಡದೆ, ಪ್ರತಿಪಕ್ಷದಲ್ಲಿದ್ದಾಗ ಮಾತ್ರ ನಿಮ್ಮ 'ರೈತ ಪ್ರೇಮ' ಜಾಗೃತವಾಗುವುದೇಕೆ? ಅಂದು ನಿಮ್ಮದೇ ಸರ್ಕಾರ ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಹೆಜ್ಜೆ ಇಟ್ಟಾಗ ಅದು 'ಅಭಿವೃದ್ಧಿ'ಯ ಮುಖಪುಟ, ಇಂದು ಅದೇ ಯೋಜನೆಯ ಕಾನೂನಾತ್ಮಕ ಪ್ರಕ್ರಿಯೆಗಳು ಮುಂದುವರಿದರೆ ಅದು 'ರೈತ ವಿರೋಧಿ' ಎನ್ನುವ ನಿಮ್ಮ ಈ ಇಬ್ಬಂದಿ ನೀತಿಗೆ ಏನನ್ನಬೇಕು? #RamalingaReddy #Bidadi #BidadiTownship #Congress #BJP @INCKarnataka
Ramalinga Reddy tweet media
ಕನ್ನಡ
3
1
13
1.4K
Ramalinga Reddy
Ramalinga Reddy@RLR_BTM·
ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡರಾದ ಶ್ರೀ ರಾಮಚಂದ್ರೇ ಗೌಡ ಅವರ ನಿಧನದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಸುದೀರ್ಘ ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಅವರು, ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ, ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #RamalingaReddy #RamachandreGowda
Ramalinga Reddy tweet media
ಕನ್ನಡ
0
2
12
1K
Ramalinga Reddy
Ramalinga Reddy@RLR_BTM·
ಇಂದು ವಿಕಾಸಸೌಧದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಕೃಷ್ಣರಾಜ ಸಾಗರ (KRS) ಜಲಾಶಯದ ಅಚ್ಚುಕಟ್ಟು ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಪರಿಶೀಲನಾ ಸಭೆ ಜರುಗಿತು. ಕಾವೇರಿ ಜಲಾನಯನ ಪ್ರದೇಶದ ನೀರಿನ ಲಭ್ಯತೆ, ಕೃಷಿ ಚಟುವಟಿಕೆಗಳ ನಿರ್ವಹಣೆ ಹಾಗೂ ರೈತರ ಹಿತರಕ್ಷಣೆಗಾಗಿ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಸಚಿವರಾದ ಡಾ. ಯತೀಂದ್ರ, ಶಾಸಕರಾದ ಶ್ರೀ ಜಿ.ಟಿ. ದೇವೇಗೌಡ, ಶ್ರೀ ದರ್ಶನ್ ಧ್ರುವನಾರಾಯಣ್, ಶ್ರೀ ರಮೇಶ್ ಬಂಡಿ ಸಿದ್ದೇಗೌಡ, ಶ್ರೀ ರವಿ ಗಣಿಗ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. #RamalingaReddy #KRS #WaterManagement #CauveryBasin #FarmersWelfare #Mysuru #Mandya #Bengaluru
Ramalinga Reddy tweet mediaRamalinga Reddy tweet mediaRamalinga Reddy tweet media
ಕನ್ನಡ
1
2
35
3.5K
Ramalinga Reddy
Ramalinga Reddy@RLR_BTM·
Mr @Udhaystalin, I have not made any kind of statement that Karnataka would not release water to Tamil Nadu. Karnataka’s inability to release water is dictated by negligible flows into Four Karnataka reservoirs namely KRS, Kabini, Harangi and Hemavathy and insufficient storages in these reservoirs. Cauvery Water Management Authority (CWMA) is the competent Authority for taking decision on the release of water from Karnataka Reservoirs based on the recommendations of Cauvery Water Regulatory Committee (CWRC) and Government of Karnataka has no role in this issue. The Cumulative Live Storage (MDDL) in Four reservoirs of Karnataka as on 30th June 2026 was 15.761 TMC, which is insufficient for Drinking water needs of the state for next three months. The cumulative inflows into the into four reservoirs, till the CWRC meeting on 30.06.2026, was 4.05 TMC (Biligundlu 2.915 TMC). Karnataka submitted in the meetings of CWRC on 16.06.2026 and 30.06.2026, CWMA meeting on 23.06.2026 the storage in the four reservoirs will have to be conserved for meeting the drinking water needs to Bengaluru Metropolitan region, Mysuru, Mandya, Chamarajanagar, Ramanagar and other cities. The submissions of Karnataka in the meetings have been considered by the CWMA and CWRC and decisions were rendered as: 1.In view of the grim situation in the Cauvery basin, as of now, and the basin being a deficit basin, the respective Party States need to conserve the water to the extent possible in their designated reservoirs by making the most judicious use of the available scarce water resources. 2. Priority may be given to meet the requirements for drinking water and environmental flows. Since mid of May, the IMD has been publicising in various News Dailies that El-Nino Phenomenon has set in resulting in delayed monsoon and deficit rainfall. I hope that the South-West monsoon will pick up in the coming days and sufficient flows would be available in Karnataka and Tamil Nadu reservoirs. #RamalingaReddy #Karnataka #TamilNadu #Cauvery #CauveryWater
English
206
752
2.1K
350.4K
Ramalinga Reddy
Ramalinga Reddy@RLR_BTM·
ಇಂದು ಬೆಳಿಗ್ಗೆ ನನ್ನ ಕಚೇರಿಯಲ್ಲಿ ಆನೇಕಲ್ ತಾಲೂಕಿನ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಐಎಡಿಬಿ (KIADB) ಸಿಇಒ ಶ್ರೀ ಗೋವಿಂದ ರೆಡ್ಡಿ IAS ಹಾಗೂ ಪ್ರಮುಖರಾದ ಶ್ರೀ ರಾಮಸ್ವಾಮಿ ರೆಡ್ಡಿ, ಶ್ರೀ ಚಂದ್ರಪ್ಪ ರೆಡ್ಡಿ, ಶ್ರೀ ಜಯಪ್ರಕಾಶ್, ಶ್ರೀ ಬಿಬಿಐ ವೆಂಕಟಸ್ವಾಮಿ ರೆಡ್ಡಿ, ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಲಾಯಿತು. ಕೆಲವು ತಿಂಗಳುಗಳ ಹಿಂದಷ್ಟೇ ನನ್ನ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಎಂ. ಬಿ. ಪಾಟೀಲ್ ಅವರ ನೇತೃತ್ವದಲ್ಲಿಯೂ ಈ ಕುರಿತು ಸಭೆ ನಡೆಸಿ, ರೈತರ ಅಹವಾಲುಗಳನ್ನು ಸ್ವೀಕರಿಸಿ ಕೆಲವು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಇಂದು ನಡೆದ ಸಭೆಯಲ್ಲಿ, ಈ ಭಾಗದ ಕೃಷಿ ಭೂಮಿ ಸ್ವಾಧೀನದಿಂದ ರೈತರ ಜೀವನೋಪಾಯ ಮತ್ತು ಸ್ಥಳೀಯ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ನಿಯೋಗವು ಮತ್ತೊಮ್ಮೆ ಗಮನ ಸೆಳೆಯಿತು. ರೈತರ ವಾಸ್ತವ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಈ ವಿಷಯವನ್ನು ಕೈಗಾರಿಕಾ ಸಚಿವರ ಗಮನಕ್ಕೂ ತಂದು, ಸರ್ಕಾರದ ಉನ್ನತ ಮಟ್ಟದಲ್ಲಿ ಮತ್ತೊಮ್ಮೆ ಸಮಗ್ರವಾಗಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೆಐಎಡಿಬಿ ಸಿಇಒ ಅವರಿಗೆ ಸೂಚನೆ ನೀಡಿದ್ದೇನೆ. ಅನ್ನದಾತರ ಹಿತರಕ್ಷಣೆ ನಮ್ಮ ಮೊದಲ ಆದ್ಯತೆ. #KIADB #RamalingaReddy #SwiftCity #Anekal #Bengaluru #Sarjapur
Ramalinga Reddy tweet media
ಕನ್ನಡ
0
5
45
8.8K
Ramalinga Reddy
Ramalinga Reddy@RLR_BTM·
ಚಿತ್ರದುರ್ಗ ಜಿಲ್ಲೆ ಶಾಖಾ ಕಾಲುವೆಯ ಗೋನೂರು ಅಕ್ವಾಡಕ್ಟ್ ಕಾಮಗಾರಿ, ಕಡೂರಿನ ಭದ್ರಾ ಮೇಲ್ದಂಡೆ ಯೋಜನೆ ಇನ್ ಟೇಕ್ ಕಾಮಗಾರಿ, ಕೆರೆ ತುಂಬಿಸುವ ಯೋಜನೆಯ ಪಂಪ್ ಹೌಸ್ - 2 ಕಾಮಗಾರಿ ಹಾಗೂ ಅಜ್ಜಂಪುರ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯ ವೈ ಜಂಕ್ಷನ್ ಕಾಮಗಾರಿಗಳ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಲಾಯಿತು. ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಅತ್ಯಂತ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಚಿತ್ರದುರ್ಗ ನಗರದ ಭದ್ರಾ ಮೇಲ್ದಂಡೆ ಯೋಜನಾ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಭಾಗವಹಿಸಿ, ಯೋಜನೆಯ ಇಂದಿನ ಸ್ಥಿತಿಗತಿ, ನೀರಾವರಿ ಸೌಲಭ್ಯ ಒದಗಿಸುವಿಕೆ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ವೀರೇಂದ್ರ ಪಪ್ಪಿ, ಶ್ರೀ ಟಿ. ರಘುಮೂರ್ತಿ, ಶ್ರೀ ಗೋವಿಂದಪ್ಪ, ಶ್ರೀ ಶ್ರೀನಿವಾಸ ಗೌಡ ಹನುಮಯ್ಯ , ಶ್ರೀ ಆನಂದ್ ಎಸ್ ಕಡೂರು, ಮಾಜಿ ಸಂಸದರಾದ ಶ್ರೀ ಬಿ.ಎನ್. ಚಂದ್ರಪ್ಪ, ಶ್ರೀ ಆಂಜಿನಯ್ಯ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಜಿ.ಎಸ್. ಮಂಜುನಾಥ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. #RamalingaReddy #UpperBhadraProject #Chitradurga #Tarikere #Chikkamagalur #IrrigationDevelopment #Karnataka #Kaduru
Ramalinga Reddy tweet mediaRamalinga Reddy tweet mediaRamalinga Reddy tweet mediaRamalinga Reddy tweet media
ಕನ್ನಡ
0
3
51
4.7K
Ramalinga Reddy
Ramalinga Reddy@RLR_BTM·
ರಿಪಬ್ಲಿಕ್ ಕನ್ನಡ (Republic Kannada) ವಾಹಿನಿಯ ವಿಶೇಷ ‘ಮುಖಾಮುಖಿ’ (Mukha Mukhi) ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜ್ಯದ ಪ್ರಚಲಿತ ವಿದ್ಯಮಾನಗಳ ಕುರಿತು ಸಮಗ್ರವಾಗಿ ಚರ್ಚಿಸಿದೆ. #RamalingaReddy #WaterResources #Karnataka #Congress #RepublicKannada #WaterDepartment #SIR #GovernmentOfKarnataka
ಕನ್ನಡ
0
3
19
1.7K
Ramalinga Reddy
Ramalinga Reddy@RLR_BTM·
Inspected the ongoing construction of the Yettinahole Project to review its progress. Directed officials to expedite the balance works on priority. This vital project will solve the drinking water crisis for over 75 lakh people across Kolar, Chikkaballapur, Tumakuru, Bengaluru Rural, Ramanagara, Hassan, and Chikkamagaluru districts. Our Government is committed to fill 527 minor irrigation tanks and lakes to recharge critically low groundwater levels and to deliver water to the drought-prone regions at the earliest. #RamalingaReddy #YettinaholeProject #WaterSecurity #KarnatakaProgress #Congress #AICC #KPCC #DKShivakumar #Siddaramaiah
English
3
4
24
1.7K
Ramalinga Reddy
Ramalinga Reddy@RLR_BTM·
ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾಗಿ ನೇಮಕಗೊಂಡ ಬಳಿಕ ಶ್ರೀ ಬಿ. ವಿ. ಶ್ರೀನಿವಾಸ್ ಅವರು ನನ್ನ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಿದ ಸಂದರ್ಭ ಅವರಿಗೆ ಶುಭ ಹಾರೈಸಿದೆ. ಶ್ರೀನಿವಾಸ್ ಅವರು ಬದ್ಧತೆ ಹಾಗೂ ಸಮರ್ಪಣಾ ಭಾವದೊಂದಿಗೆ ಸೇವಾದಳವನ್ನು ಮತ್ತಷ್ಟು ಬಲಪಡಿಸಲಿ ಎಂದು ಆಶಿಸುತ್ತೇನೆ. #RamalingaReddy #SevaDal
Ramalinga Reddy tweet mediaRamalinga Reddy tweet media
ಕನ್ನಡ
1
3
55
3.5K
Ramalinga Reddy
Ramalinga Reddy@RLR_BTM·
ಅರಸೀಕೆರೆ ತಾಲೂಕು, ಕಸಬಾ ಹೋಬಳಿಯ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸಾಗರ ಗ್ರಾಮದ ಮೂಲಕ ಹಾದು ಹೋಗುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ವೀಕ್ಷಣೆ ಮಾಡಿದೆ. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಕೆ.ಎಂ ಶಿವಲಿಂಗೇಗೌಡ, ಹಾಸನ ಲೋಕಸಭಾ ಸಂಸದರಾದ ಶ್ರೀ ಶ್ರೇಯಸ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಟ್ರೋ ಬಾಬು ಹಾಗೂ ಬಿ.ಸಿ. ಶ್ರೀನಿವಾಸ್, ಬೆಳಗುಂಬ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳ ನಾಮನಿರ್ದೇಶಿತ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. #RamalingaReddy #KMShivalingeGowda #ShreyasPatel #Arsikere #Hassan #YettinaholeProject #Irrigation #Development
ಕನ್ನಡ
2
12
112
6.9K
Ramalinga Reddy
Ramalinga Reddy@RLR_BTM·
ಜಲಸಂಪನ್ಮೂಲ ಇಲಾಖೆ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ'ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಎತ್ತಿನಹೊಳೆ ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ರೈತರು ಹಾಗೂ ಶಾಸಕರು ಸಲ್ಲಿಸಿದ ಮನವಿ ಮತ್ತು ಅಹವಾಲುಗಳನ್ನು ಸ್ವೀಕರಿಸಿ, ಸಕಾರಾತ್ಮಕವಾಗಿ ಸ್ಪಂದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಧೀರಜ್ ಮುನಿರಾಜ್, ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. #RamalingaReddy #EttinaholeProject #Doddaballapura #WaterResources #Karnataka
Ramalinga Reddy tweet mediaRamalinga Reddy tweet mediaRamalinga Reddy tweet media
ಕನ್ನಡ
2
2
28
1.9K
Ramalinga Reddy
Ramalinga Reddy@RLR_BTM·
ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಇತ್ತೀಚೆಗೆ ಮುಳುಗಿ ಐವರು ದುರಂತ ಮರಣ ಹೊಂದಿದ ಸ್ಥಳಕ್ಕೆ ಇಂದು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದೆನು. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಸಾವು-ನೋವುಗಳು ಮರುಕಳಿಸಬಾರದು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂಬ ನಿಟ್ಟಿನಲ್ಲಿ, ನದಿಯ ದಡದಲ್ಲಿ ಪ್ರವಾಸಿಗರಿಗೆ ಸುರಕ್ಷಿತವಾದ "ಸ್ನಾನದ ಕಾಲುವೆಗಳನ್ನು" (Safe Bathing Channels) ತಕ್ಷಣವೇ ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾವೇರಿ ನದಿ ತೀರ ಹಾಗೂ ಅಗತ್ಯವಿರುವ ಕಡೆಗಳಲ್ಲಿ 20 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೂಡಿ ಪ್ರತಿದಿನ 8 ಭದ್ರತಾ ಸಿಬ್ಬಂದಿ ನಿಯೋಜನೆಗೆ ಸೂಚಿಸಲಾಗಿದೆ. ಮುತ್ತತ್ತಿಯಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡಿ ಹಬ್ಬ, ವಿಶೇಷ ದಿನಗಳು, ರಜಾ ದಿನಗಳಲ್ಲಿ ಒಬ್ಬ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಿಯೋಜಿಸಲು ಎಸ್ಪಿ ಅವರಿಗೆ ಸೂಚಿಸಲಾಗುವುದು. ಪ್ರವಾಸಿಗರ ಜೀವ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. #RamalingaReddy #Muthatti #Mandya #CauveryRiver #SafetyFirst #PublicSafety #Karnataka
Ramalinga Reddy tweet mediaRamalinga Reddy tweet media
ಕನ್ನಡ
0
4
45
3.1K
Ramalinga Reddy
Ramalinga Reddy@RLR_BTM·
ಇಂದು ಬೆಂಗಳೂರಿನ ನನ್ನ ಕಚೇರಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಭೇಟಿ ಮಾಡಿ, ತಮ್ಮ ಕ್ಷೇತ್ರದ ವ್ಯಾಪ್ತಿಯ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಮನವಿ ಸಲ್ಲಿಸಿದರು. ಮನವಿಯಲ್ಲಿನ ಪ್ರಮುಖ ವಿಷಯಗಳು: ತುಂಗಾ ಏತ ನೀರಾವರಿ ಯೋಜನೆ: ಈ ಯೋಜನೆಯ ಆಧುನೀಕರಣ ಹಾಗೂ ಪ್ರವಾಹ ನಿಯಂತ್ರಣ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಕೋರಿದ್ದಾರೆ. ವಿದ್ಯುತ್ ಬಿಲ್ ಬಾಕಿ ಪಾವತಿ: ಉಡುಗಣಿ-ತಾಳಗುಂದ ಸೇರಿದಂತೆ 8 ಪ್ರಮುಖ ಏತ ನೀರಾವರಿ ಯೋಜನೆಗಳ ಬಾಕಿ ವಿದ್ಯುತ್ ಬಿಲ್ ಪಾವತಿಗೆ ತುರ್ತು ಅನುದಾನ ಹಾಗೂ ನಿರಂತರ ವಿದ್ಯುತ್ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ. ಸಿದ್ಧಾಪುರ ಏತ ನೀರಾವರಿ ಯೋಜನೆ: ಬೈಂದೂರು ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ಸಿದ್ಧಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಪುನರಾರಂಭಿಸಲು ಪ್ರತ್ಯೇಕ ಮನವಿ ನೀಡಿದ್ದಾರೆ. ರಾಜ್ಯದ ಅನ್ನದಾತರ ಹಿತರಕ್ಷಣೆ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ಎಲ್ಲಾ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗಿದ್ದು, ತಾಂತ್ರಿಕ ಹಾಗೂ ಆರ್ಥಿಕ ಸಾಧ್ಯತೆಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದೇನೆ. #RamalingaReddy #IrrigationDepartment #KarnatakaGovernment #Shivamogga #WaterResources @BYRBJP
Ramalinga Reddy tweet media
ಕನ್ನಡ
0
3
42
1.8K
Ramalinga Reddy
Ramalinga Reddy@RLR_BTM·
ನವದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರನ್ನು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರ ಜೊತೆ ಭೇಟಿಯಾಗಿ, ರಾಜ್ಯದ ಮಹತ್ವಾಕಾಂಕ್ಷಿ 'ಭದ್ರಾ ಮೇಲ್ದಂಡೆ ಯೋಜನೆ' ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಈ ಹಿಂದೆ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾಗಿದ್ದ ₹5,300 ಕೋಟಿ ಕೇಂದ್ರ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಹಾಗೂ ಯೋಜನೆಯ ಪ್ರಗತಿಯನ್ನು ವೇಗಗೊಳಿಸುವಂತೆ ಪ್ರಮುಖವಾಗಿ ಒತ್ತಾಯಿಸಲಾಯಿತು. ನಮ್ಮ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು, ರಾಜ್ಯದ ರೈತರ ಹಿತದೃಷ್ಟಿಯಿಂದ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಕಾವೇರಿ, ಮಹದಾಯಿ (ಕಳಸಾ-ಬಂಡೂರಿ) ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಅಗತ್ಯವಿರುವ ತಾಂತ್ರಿಕ ಅನುಮೋದನೆಗಳು, ಕಾನೂನಾತ್ಮಕ ಅನುಮತಿಗಳು ಹಾಗೂ ಕೇಂದ್ರದ ಧನಸಹಾಯವನ್ನು ಒದಗಿಸುವ ಭರವಸೆ ನೀಡಿದ್ದಾರೆ. ಪಕ್ಷಾತೀತವಾಗಿ ರಾಜ್ಯದ ಹಿತ ಕಾಯುವುದು ಮತ್ತು ನಮ್ಮ ಅನ್ನದಾತರ ಕೈಬಲಪಡಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಶೀಘ್ರದಲ್ಲೇ ಅನುದಾನ ಪಡೆದು, ಭದ್ರಾ ಮೇಲ್ದಂಡೆ ಮತ್ತು ಇನ್ನಿತರೆ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಸಂಪೂರ್ಣ ವಿಶ್ವಾಸ ನಮಗಿದೆ. #RamalingaReddy #DKShivakumar #WaterResources #UpperBhadraProject #Kaveri #Mahadayi #Krishna #KarnatakaFarmers #Development #BJP #Congress
Ramalinga Reddy tweet media
ಕನ್ನಡ
1
2
26
2.1K
Ramalinga Reddy
Ramalinga Reddy@RLR_BTM·
ಇಂದು ನನ್ನ ಕಚೇರಿಯಲ್ಲಿ ಹಿರಿಯ ನಾಯಕರಾದ ಶ್ರೀ ಎಸ್.ಆರ್. ಪಾಟೀಲ್, ಶ್ರೀ ಅಜಯಕುಮಾರ ಸರನಾಯಕ, ಶ್ರೀ ಜೆ.ಟಿ. ಪಾಟೀಲ ಹಾಗೂ ಶ್ರೀ ಮುತ್ತು ದೇಸಾಯಿ ಅವರ ನೇತೃತ್ವದಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಉಭಯ ಜಿಲ್ಲೆಗಳ ನಿಯೋಗವು ಭೇಟಿ ನೀಡಿ ಮನವಿ ಸಲ್ಲಿಸಿತು. ಪ್ರಮುಖ ಬೇಡಿಕೆಗಳು: ಮುಳುಗಡೆ ಸಂತ್ರಸ್ತರ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು. ಈ ಹಿಂದೆ ಸರ್ಕಾರ ಘೋಷಿಸಿದಂತೆ ನೀರಾವರಿ ಭೂಮಿಗೆ ಪ್ರತಿ ಎಕರೆಗೆ ₹40 ಲಕ್ಷ ಹಾಗೂ ಖುಷ್ಕಿ ಭೂಮಿಗೆ ಪ್ರತಿ ಎಕರೆಗೆ ₹30 ಲಕ್ಷ ಪರಿಹಾರವನ್ನು ಶೀಘ್ರವಾಗಿ ವಿತರಿಸುವುದು. ಈ ನ್ಯಾಯಸಮ್ಮತ ಮನವಿಯನ್ನು ಧನಾತ್ಮಕವಾಗಿ ಪರಿಗಣಿಸಲಾಗುವುದು ಹಾಗೂ ಸಂತ್ರಸ್ತರಿಗೆ ಶೀಘ್ರದಲ್ಲೇ ಸೂಕ್ತ ನ್ಯಾಯ ಕೊಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಸಂದರ್ಭದಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಹಲವಾರು ಸಂತ್ರಸ್ತರು ಉಪಸ್ಥಿತರಿದ್ದರು. #RamalingaReddy #Bagalkot #Vijayapura #FarmersSupport #Karnataka
Ramalinga Reddy tweet mediaRamalinga Reddy tweet media
ಕನ್ನಡ
1
4
41
7.1K
Ramalinga Reddy
Ramalinga Reddy@RLR_BTM·
ವಿಧಾನಸೌಧದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಅನುಷ್ಠಾನದ ಕುರಿತು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದೆ. #RamalingaReddy #MekedatuProject #KarnatakaWaterRights #Bengaluru #Mekedatu #SouthKarnataka #Karnataka
ಕನ್ನಡ
2
7
41
2K