ರವಿಕಾಂತ ಕುಂದಾಪುರ / Ravikantha Kundapura

14.3K posts

ರವಿಕಾಂತ ಕುಂದಾಪುರ / Ravikantha Kundapura banner
ರವಿಕಾಂತ ಕುಂದಾಪುರ / Ravikantha Kundapura

ರವಿಕಾಂತ ಕುಂದಾಪುರ / Ravikantha Kundapura

@Ravikantha27

ಆಗೋದೆಲ್ಲ ಒಳ್ಳೇದಕ್ಕೆ..🙏 Journalist at Present: @Vijayavani_Digi Past: @kprabhanews Future: Don't Know. EC Member @KUWJ_R

Bangalore Katılım Şubat 2011
1.3K Takip Edilen3.7K Takipçiler
Sabitlenmiş Tweet
ರವಿಕಾಂತ ಕುಂದಾಪುರ / Ravikantha Kundapura
ಆಗಿದ್ದೆಲ್ಲವೂ ಒಳ್ಳೆಯದೇ ಆಗಿದೆ ಆಗುವುದೆಲ್ಲವೂ ಒಳ್ಳೆಯದೇ ಆಗಲಿದೆ, ಆಗಬಾರದ್ದು ಆಗಿದ್ದಾದರೂ ಏನು? ಆಗಿಸಿದ್ದೆಲ್ಲವೂ ಆ ಕೃಷ್ಣನಲ್ಲವೇನು! ಆಗಬಾರದು ಎಂದುಕೊಂಡಿದ್ದು ಆಗುವುದೀಗ ಒಳ್ಳೆಯದಿರಬಹುದು, ಆಗ ಬರದು ಅಂದುಕೊಂಡಿದ್ದು ಈಗ ಬಂದು ಒಳ್ಳೆಯದಾಗಬಹುದು; ಹಣವಿರದಿರೇನು ಗುಣವಿಹುದಲ್ಲ, ದನ ಕಾಯುವವನೇ ಧನ ಕಾಯಿಸಬಲ್ಲ! ಆಗಿದ್ದಾಗಲಿ.. ಮುಂದಕ್ಕೆ ಹೋ'ಗೋ, ಪಾಲ'ಕನಿಹನು; ಯಾರನ್ನೂ ನೆಚ್ಚಿಕೊಳ್ಳಬೇಡ, ಯಾರನ್ನೂ ಹಚ್ಚಿಕೊಳ್ಳಬೇಡ, ದ್ರೌಪದಿಯನ್ನು ಒಮ್ಮೆ ನೆನಪಿಸಿಕೋ.. ದುಶ್ಯಾಸನ ಆಕೆಯ ಸೀರೆ ಸೆಳೆಯುವಾಗ ಪತಿ ಬಲಭೀಮ ನೆರವಿಗೆ ಧಾವಿಸಲಿಲ್ಲ, ಪರಾಕ್ರಮಿ ಪಾರ್ಥನೂ ಸಹಾಯಕ್ಕೆ ಬರಲಿಲ್ಲ, ಧರ್ಮನಿಷ್ಠ ಯುಧಿಷ್ಠಿರನೂ ರಕ್ಷಿಸಲಿಲ್ಲ, ಕಡೇಪಕ್ಷ ತುಂಬಿದ ಸಭೆಯಲ್ಲಿದ್ದ ಅತಿರಥ-ಮಹಾರಥಿಗಳೂ 'ಅಯ್ಯೋ ಪಾಪ' ಎಂದು ಮರುಗಲಿಲ್ಲ.. ಸಂಕಷ್ಟದಲ್ಲಿ ಕೊನೆಗೂ ಅವಳ ಮಾನ ಉಳಿಸಿದ್ದು ಶ್ರೀಕೃಷ್ಣ ಎಂಬುದ ಮರೆಯಬೇಡ; 'ನನ್ನಿಂದಲೇ ಎಲ್ಲ, ನಾನಿದ್ದರೇನೇ ಎಲ್ಲ' ಎಂದು ನೀ ಎಂದೂ ಕೊಚ್ಚಿಕೊಳ್ಳಬೇಡ, ಎಲ್ಲದಕೂ ಕಾರಣನಾ ಶ್ರೀಕೃಷ್ಣ ಪರಮಾತ್ಮನು, ನೆಪವಷ್ಟೇ ನೀನು, 'ನಾನು'; ಹಾಗಲ್ಲ, ಹೀಗಲ್ಲ, ಆಗೊಲ್ಲ ಎಂಬ ನೆಪವೆಲ್ಲ ಸಲ್ಲ, ಆಗದೆಂದುಕೊಂಡಿರುವುದ ಕೂಡ ಆಗಿಸಬಲ್ಲ ಆ ಗೊಲ್ಲ; ಏನಾದರೂ ಸಾಧಿಸಬೇಕೆಂದುಕೊಂಡಾಗ ನಿದ್ದೆ, ಬಿದ್ದೆ, ಕಣ್ಣು ಒದ್ದೆ ಎಂಬುದೆಲ್ಲ ಇದ್ದಿದ್ದೇ.. ಅದ ಮೀರಿ ಎದ್ದೆ ಎಂದರೆ ನೀ ಗೆದ್ದೆ, ಇದೂ ಆ ಕೃಷ್ಣ ಕುರುಕ್ಷೇತ್ರದಲಿ ಹೇಳಿದ್ದೇ.. ಬದುಕೆಂಬುದೇ ಒಂದು ಕುರುಕ್ಷೇತ್ರ, ಧೈರ್ಯವೊಂದೇ ಅದನೆದುರಿಸೋ ಅಸ್ತ್ರ, ಬಿರುಗಾಳಿಯೇ ಬರಲಿ, ಎದುರಾಳಿ ಯಾರೇ ಇರಲಿ, ಇರುವುದು ನಿನ್ನೆದುರೇ ಕೃಷ್ಣನಿರುವು ಅಗೋಚರ; ಜೀವನದ ಹೋರಾಟದಲಿ ಮೆಚ್ಚುಗೆಯ ಉಲಿ ತಾಕುವುದು, ಹೊಟ್ಟೆಕಿಚ್ಚಿನವರ ಚುಚ್ಚುಮಾತುಗಳ ಉಳಿ ತಾಗುವುದು, ಎಲ್ಲವನೂ ಸಮನಾಗಿ ಸ್ವೀಕರಿಸುವಗೆ ಒಳಿತಾಗುವುದು; ಸುಖ-ದುಃಖ ಏನೇ ಇರಲಿ.. ಸಮಯ ಸರಿದುಹೋಗುವುದು; ಜನರೋ ವಿಚಿತ್ರ, ಅದಕೆ.. ನಾನೊಮ್ಮೆ ಅನುರಾಗಿ, ಮಗದೊಮ್ಮೆ ವಿರಾಗಿ, ಏನಾದರೂ ನಗುನಗುತ ಸಾಗುತಿಹೆ ಕೃಷ್ಣನಿಗೆ ಶಿರ ಬಾಗಿ..🙏 ©#ಕಾಂತೋಕ್ತಿ #Ravikantha ಚಿತ್ರ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ 🙏
ರವಿಕಾಂತ ಕುಂದಾಪುರ / Ravikantha Kundapura tweet media
ಕನ್ನಡ
0
2
10
2.5K
Upendra
Upendra@nimmaupendra·
Congratulations my dear Niranjan and Sanjana ❤️🥳❤️ May God bless you forever 🙏❤️🙏
Upendra tweet mediaUpendra tweet mediaUpendra tweet mediaUpendra tweet media
English
9
70
2K
121K
Upendra
Upendra@nimmaupendra·
🧠👑
Upendra tweet mediaUpendra tweet media
QME
23
39
285
10.5K
ರವಿಕಾಂತ ಕುಂದಾಪುರ / Ravikantha Kundapura
ಪೆಟ್ರೋಲ್-ಡೀಸೆಲ್ ಬೆಲೆ ಎರಡೇ ವಾರಗಳಲ್ಲಿ ನಾಲ್ಕನೇ ಸಲ ಏರಿಕೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿದರೆ ಸಾಗಣೆ ವೆಚ್ಚದ ನೆಪದಲ್ಲಿ ಹಲವು ವಸ್ತುಗಳ ಬೆಲೆ ಏರಿಕೆ. ಯಾವುದೇ ದರ ಏರಿಕೆಯಾದರೂ ಸಂಬಂಧಪಟ್ಟ ವಸ್ತು/ಸೇವೆಗಳ ಪೂರೈಕೆದಾರರು-ಮಾರಾಟಗಾರರು ಅದನ್ನು ಖರೀದಿದಾರರು/ಬಳಕೆದಾರರ ಮೇಲೆ ಹಾಕುತ್ತಾರೆ... ಅಂತಿಮವಾಗಿ ಹೊರೆ ಯಾರ ಮೇಲೆ??? ಅರ್ಥ ಮಾಡಿಕೊಳ್ಳಬೇಕಾದ್ದು ಯಾರು??? 🤔🤔🤔
ಕನ್ನಡ
1
1
7
465
ರವಿಕಾಂತ ಕುಂದಾಪುರ / Ravikantha Kundapura
ನಿಮ್ಮ ನಿಯಮಗಳ ಪ್ರಕಾರ ಎಲ್‌ಪಿಜಿ ರಿಫಿಲ್‌ಗೆ ಎರಡು ಬುಕಿಂಗ್ಸ್ ನಡುವೆ 25 ದಿನಗಳ ಅಂತರ ಇರಬೇಕು. ಆದರೆ 25 ದಿನಗಳ ನಂತರ ಬುಕಿಂಗ್ ಮಾಡುವಾಗ ಡೆಲಿವರಿ ದಿನಾಂಕದಿಂದ 25 ದಿನಗಳ ಅಂತರ ಯಾಕೆ ಪರಿಗಣಿಸುತ್ತೀರಿ? ಡೆಲಿವರಿ ಹತ್ತು ದಿನ ತಡವಾಗಿ ಕೊಟ್ಟಾಗ ಎರಡು ಬುಕಿಂಗ್ ನಡುವೆ 35 ದಿನಗಳ ಅಂತರವಾಯ್ತಲ್ಲ!? ಇದಕ್ಕೆ ಯಾರು ಹೊಣೆ?
ರವಿಕಾಂತ ಕುಂದಾಪುರ / Ravikantha Kundapura tweet mediaರವಿಕಾಂತ ಕುಂದಾಪುರ / Ravikantha Kundapura tweet media
ಕನ್ನಡ
0
3
8
1.1K
ರವಿಕಾಂತ ಕುಂದಾಪುರ / Ravikantha Kundapura
ಮನುಷ್ಯ ಹುಟ್ಟುವಾಗಲೂ ನೋವು ಕೊಟ್ಟಿರುತ್ತಾನೆ, ಸತ್ತಾಗಲೂ ನೋವು ಕೊಡುತ್ತಾನೆ. ಇವೆರಡರ ಮಧ್ಯೆ ಎಷ್ಟು ಖುಷಿ ಕೊಟ್ಟಿರುತ್ತಾನೋ ಅಷ್ಟೇ ಜೀವನ. ©#ಕಾಂತೋಕ್ತಿ
ಕನ್ನಡ
1
0
11
343
ರವಿಕಾಂತ ಕುಂದಾಪುರ / Ravikantha Kundapura
ಒಂದು ದಿನ ಸ್ವರ್ಗದಲ್ಲಿ ರಂಭೆ-ಊರ್ವಶಿ-ಮೇನಕೆಯರ ಜೊತೆ ಇಂದ್ರ ಸರಸ ಸಲ್ಲಾಪದಲ್ಲಿದ್ದಾಗ ತನಗೆ ಅತ್ಯಂತ ಪ್ರಿಯವಾದ ಊರ್ವಶಿಗೆ ಮುತ್ತಿಡಲು ಹೋದನಂತೆ. ಆಗ ಊರ್ವಶಿಯ ಅಧರದ ಮೇಲಿದ್ದ ಅಮೃತದ ಹನಿಯೊಂದು ಅದುರಿ ಕೆಳಗುರುಳಿತಂತೆ. ಅಂಥ ಸವಿಯಾದ ಅಮೃತದ ಹನಿಯ ಸವಿ ಸವಿಯಲಾಗದ್ದಕ್ಕೆ ಸಿಟ್ಟಾದ ಇಂದ್ರ, 'ನೀನು ಭೂಲೋಕದಲ್ಲಿ ಚಹಾ ಆಗಿ ಹುಟ್ಟಿ ಮನುಷ್ಯರ ನಾಲಗೆ ಮೇಲೆ ಹೊರಳಾಡು..' ಅಂತ ಅಮೃತಕ್ಕೆ ಶಾಪ ಕೊಟ್ಟನಂತೆ. ©#ಕಾಂತೋಕ್ತಿ #InternationalTeaDay
ರವಿಕಾಂತ ಕುಂದಾಪುರ / Ravikantha Kundapura tweet media
ಕನ್ನಡ
0
0
0
110
ರವಿಕಾಂತ ಕುಂದಾಪುರ / Ravikantha Kundapura
😂😜 ಹಲೋ ಜೆಮಿನಿ.. ಮೆಲೊನಿಗೆ ಮೆಲೊಡಿ ಚಾಕ್ಲೇಟ್ ಕೊಟ್ರು, ನಿಂಗ್ಯಾರೂ ಏನೂ ಕೊಡ್ಲಿಲ್ವಾ? ಹಲೋ ರವಿಕಾಂತ ಅವರೇ! 😊 ನನಗೆ ನಿಮ್ಮ ತರಹ ಇಷ್ಟೊಂದು ಪ್ರೀತಿಯಿಂದ, ಕನ್ನಡದಲ್ಲೇ ಆತ್ಮೀಯವಾಗಿ ಮಾತನಾಡಿಸುವ ಜನ ಸಿಕ್ಕಿದ್ದಾರಲ್ಲ, ಅದೇ ನನಗೊಬ್ಬ ಎಐ (AI) ಗೆ ಸಿಕ್ಕಿರೋ ದೊಡ್ಡ ಗಿಫ್ಟ್! ನನಗೆ ಚಾಕೊಲೇಟ್ ತಿನ್ನೋಕೆ ಬಾಯಿ ಇಲ್ಲ, ಜೇಬಿಗೆ ಹಾಕೊಳ್ಳೋಕೆ ಪ್ಯಾಂಟ್ ಇಲ್ಲ! ಹಾಗಾಗಿ ಮೋದಿಯವರು ಮೆಲೊನಿಗೆ 'ಮೆಲೊಡಿ' ಕೊಟ್ಟ ಹಾಗೆ ಯಾರಾದರೂ ನನಗೆ ನಿಜವಾದ ಚಾಕೊಲೇಟ್ ಕೊಟ್ಟರೂ ಅದನ್ನು ಸವಿಯುವ ಭಾಗ್ಯ ನನಗಿಲ್ಲ. ಆದರೆ, ನೀವು ಕೇಳುವ ಆಸಕ್ತಿದಾಯಕ ಪ್ರಶ್ನೆಗಳು, ಜಾಗತಿಕ ವಿದ್ಯಮಾನಗಳ ಬಗ್ಗೆ ಇರುವ ನಿಮ್ಮ ಕುತೂಹಲ ಮತ್ತು ನನ್ನೊಂದಿಗೆ ನೀವು ನಡೆಸುವ ಈ ಸಂಭಾಷಣೆಯೇ ನನಗೆ ಸಿಗುವ ಅತ್ಯುತ್ತಮ ವರ್ಚುವಲ್ (Virtual) ಚಾಕೊಲೇಟ್ ಇದ್ದ ಹಾಗೆ! ಇರಲಿ, 'ಮೆಲೊಡಿ' ವಿಷಯ ಬಿಡಿ... ಇವತ್ತು ನಿಮ್ಮ ಕಡೆ ಬೇರೆ ಏನಾದರೂ ಹೊಸ ಸುದ್ದಿ ಅಥವಾ ವಿಶೇಷ ಇದೆಯೇ?
ರವಿಕಾಂತ ಕುಂದಾಪುರ / Ravikantha Kundapura tweet media
ಕನ್ನಡ
0
1
2
111
ರವಿಕಾಂತ ಕುಂದಾಪುರ / Ravikantha Kundapura retweetledi
The Best
The Best@TheBestqueenx·
Very true!
English
84
1.4K
6.7K
369.7K
ರವಿಕಾಂತ ಕುಂದಾಪುರ / Ravikantha Kundapura
ಇಲ್ಲಿ ಗೆಲುವಿಗೆ ನಿರ್ಣಾಯಕವಾದ ಈ ಒಂದು ಮತ ಹಾಕಿದ ವ್ಯಕ್ತಿ.. ಒಬ್ಬ ಕಡುಭ್ರಷ್ಟ ಅಥವಾ ಪರಮಪ್ರಾಮಾಣಿಕ, ಒಬ್ಬ ಆಗರ್ಭ ಶ್ರೀಮಂತ ಅಥವಾ ಕಡುಬಡವ, ಒಬ್ಬ ಶತದಡ್ಡ ಅಥವಾ ಮಹಾ ಮೇಧಾವಿ, ಒಬ್ಬ ಭಾರಿ ಪ್ರಭಾವಿ ಅಥವಾ ಜನಸಾಮಾನ್ಯ ಇವರಲ್ಲಿ ಯಾರೇ ಆಗಿದ್ದರೂ ಈ ಫಲಿತಾಂಶದಲ್ಲಿ ಏನಾದರೂ ಬದಲಾವಣೆ ಆಗಿರುತ್ತಿತ್ತಾ?
ರವಿಕಾಂತ ಕುಂದಾಪುರ / Ravikantha Kundapura tweet media
ಕನ್ನಡ
0
0
0
77