Anusha Morching retweetledi

ಬೆಂಗಳೂರಿನ ಪ್ರಾಚೀನ ವೀರರು: ಭಾಗ 3 – ಪೆರ್ವ್ವೊಣಶೆಟ್ಟಿ ಮತ್ತು ಬುಟ್ಟಣಪತಿ
ಪೆರ್ವ್ವೊಣಶೆಟ್ಟಿ ಮತ್ತು ಬುಟ್ಟಣಪತಿ ಬೆಂಗಳೂರಿನ ಐತಿಹಾಸಿಕ ವೀರರಾಗಿದ್ದು, ಇವರ ಶೌರ್ಯದ ಕಥೆಯು ಬೇಗೂರಿನ ಪಂಚಲಿಂಗೇಶ್ವರ ದೇವಾಲಯದ ಆವರಣದಲ್ಲಿ ಕಂಡುಬರುವ ಸಾ.ಶ.900ರ ಕಾಲದ ಒಂದು ವೀರಗಲ್ಲು ಶಾಸನದಲ್ಲಿ ಸಂರಕ್ಷಿಸಲ್ಪಟ್ಟಿದೆ. ಈ ವೀರಗಲ್ಲು ಶಾಸನವು ಒಂದು ಸುಪ್ರಸಿದ್ಧ ಹಾಗೂ ಐತಿಹಾಸಿಕ ದಾಖಲೆಯಾಗಿದ್ದು, ಇದರಲ್ಲಿ ಬೆಂಗಳೂರು ಹೆಸರಿನ ಪ್ರಪ್ರಥಮ ಉಲ್ಲೇಖವು (ಬೆಂಗುಳೂರ - Bĕṃgul̤ūra) ಕಂಡುಬರುತ್ತದೆ.
ಈ ವೀರಗಲ್ಲು ಶಾಸನವನ್ನು 'ಬೆಂಗಳೂರು ಕಾಳಗ'ದಲ್ಲಿ (ಯುದ್ಧ/ಹೋರಾಟ) ವೀರಮರಣ ಹೊಂದಿದ ಪೆರ್ವ್ವೊಣಶೆಟ್ಟಿ ಮತ್ತು ಬುಟ್ಟಣಪತಿ ಅವರ ಸ್ಮರಣಾರ್ಥವಾಗಿ ಹಾಕಿಸಲಾಗಿದೆ. ಇವರಿಬ್ಬರು ಗಂಗ ಅರಸ ಎರೆಯಪ್ಪನ ಸಾಮಂತನಾಗಿ ಬೇಗೂರು ಪ್ರಾಂತ್ಯವನ್ನು ಆಳ್ವಿಕೆ ಮಾಡುತ್ತಿದ್ದ ನಾಗತ್ತರನ ಮಕ್ಕಳು. ಈ ಶಾಸನವು ಇವರಿಬ್ಬರ ನಡುವಿನ ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸುತ್ತದೆ. ಇದರಲ್ಲಿ ಪೆರ್ವ್ವೊಣಶೆಟ್ಟಿಯನ್ನು 'ಮನೆವಗತಿ' (ಮನೆತನದ ನಿಕಟ ಸೇವಕ ಅಥವಾ ದತ್ತು ಪುತ್ರ) ಎಂದು, ಬುಟ್ಟಣಪತಿಯನ್ನು ಮಗ ಎಂದು ಕರೆಯಲಾಗಿದೆ. ಅಂದರೆ ನಾಗತ್ತರನಿಗೆ ಒಬ್ಬ ದತ್ತುಪುತ್ರ ಹಾಗೂ ಮತ್ತೊಬ್ಬ ಸ್ವಂತ ಮಗನಿದ್ದನು ಎಂಬುದು ತಿಳಿಯುತ್ತದೆ.
ಈ ಶಾಸನದ ಮೂಲಕ ತಿಳಿಯುವ ಇವರಿಬ್ಬರ ತ್ಯಾಗವು ಬೆಂಗಳೂರು ನಗರದ ಇತಿಹಾಸದ ಪ್ರಮುಖ ಭಾಗವಾಗಿದೆ. ಹಾಗೂ ನಮ್ಮ ಬೆಂಗಳೂರು ಹೆಸರಿನ ಮೂಲವನ್ನು ಅರಿಯಲು ಸಹಾಯಕವಾಗಿದೆ. ಅಲ್ಲದೇ ಇಂದಿನ ಆಧುನಿಕ ಬೆಂಗಳೂರು ಮಹಾನಗರವಾಗಿ ರೂಪುಗೊಳ್ಳುವುದಕ್ಕೆ ಶತಮಾನಗಳಷ್ಟು ಮುಂಚೆಯೇ ಬೆಂಗಳೂರು ಎಂಬ ಐತಿಹಾಸಿಕ ಊರು ಇತ್ತೆಂದು, ಆ ಪ್ರಾಚೀನ ಊರೇ ಇಂದಿನ ಆಧುನಿಕ ಬೆಂಗಳೂರಿಗೆ ಅಡಿಪಾಯ ಎಂಬುದಕ್ಕೆ ಈ ಶಾಸನವು ಒಂದು ಪ್ರಮುಖ ಮೂಲಾಧಾರವಾಗಿದೆ.
ಈ ಪೋಸ್ಟ್‌ನೊಂದಿಗೆ ಬೇಗೂರಿನ ಬೆಂಗಳೂರು ಉಲ್ಲೇಖ ಶಾಸನದ 3ಡಿ ಡಿಜಿಟಲ್ ಚಿತ್ರಗಳನ್ನು ಹಂಚಿಕೊಳ್ಳಲಾಗಿದ್ದು, ಇವುಗಳಲ್ಲಿ ಪೆರ್ವ್ವೊಣಶೆಟ್ಟಿ, ಬುಟ್ಟಣಪತಿ ಮತ್ತು ಬೆಂಗಳೂರ ಎಂಬ ಹೆಸರುಗಳನ್ನು ನೀವು ಸ್ಪಷ್ಟವಾಗಿ ಗುರುತಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಈ ವಿಕಿಪೀಡಿಯಾ ಲಿಂಕ್‌ನ್ನು ನೋಡಿ: en.wikipedia.org/wiki/Begur_ins…
ಶಾಸನವಿರುವ ಪ್ರಸ್ತುತ ಸ್ಥಳ: ಪಂಚಲಿಂಗೇಶ್ವರ ದೇವಾಲಯ, ಬೇಗೂರು, ಬೆಂಗಳೂರು.
ಗೂಗಲ್ ಮ್ಯಾಪ್ ಲಿಂಕ್: maps.app.goo.gl/qZk8JUbuB178hU…
ಚಿತ್ರಕೃಪೆ – ದಿ ಮಿಥಿಕ್ ಸೊಸೈಟಿ – ಬೆಂಗಳೂರು ಶಾಸನಗಳ 3D ಡಿಜಿಟಲ್ ಸಂರಕ್ಷಣಾ ಯೋಜನಾ ತಂಡ.
#HeroesOfBengaluru #AncientHeroes #BengaluruHistory #AncientBengaluru #AncientKannada #Herostones #Archaeology #HeritageDocumentation #MythicSociety #MoreThanITCity #NammaBengaluru #bengalurucity



ಕನ್ನಡ















































