Sabitlenmiş Tweet
Preetham J Gowda
4.8K posts

Preetham J Gowda
@preethamgowda_j
General Secretary @bjp4karnataka | Former MLA Hassan Vidhana Sabha Constituency
Hassan, India Katılım Mayıs 2018
118 Takip Edilen18.6K Takipçiler

ಹಿಜಾಬ್ ವಿವಾದ ಇನ್ನೂ ದೇಶದ ಸುಪ್ರೀಂ ಕೋರ್ಟ್ ಅಂಗಳದಲ್ಲಿರುವಾಗಲೇ, ಏಕಾಏಕಿ ಹಿಜಾಬ್‌ಗೆ ಅವಕಾಶ ಕಲ್ಪಿಸಿರುವ ಕಾಂಗ್ರೆಸ್ ಸರ್ಕಾರದ ನಡೆ ಅಪ್ಪಟ ಕಾನೂನು ಮತ್ತು ಸಂವಿಧಾನ ವಿರೋಧಿ!
ಒಂದೆಡೆ ಹಿಜಾಬ್‌ಗೆ ರೆಡ್ ಕಾರ್ಪೆಟ್ ಹಾಸುವ ಈ ಸರ್ಕಾರ, ಇನ್ನೊಂದೆಡೆ ಹಿಂದೂ ವಿದ್ಯಾರ್ಥಿಗಳ 'ಕೇಸರಿ ಶಾಲು' ಕಂಡರೆ ಮಾತ್ರ ಉರಿದುಬೀಳುತ್ತಿರುವುದು ಯಾಕೆ? ಇದೇನಾ ನಿಮ್ಮ ಸಮಾನತೆ? ಕರ್ನಾಟಕ ಶಿಕ್ಷಣ ಕಾಯಿದೆಯ ವಸ್ತ್ರಸಂಹಿತೆಯನ್ನು ಗಾಳಿಗೆ ತೂರಿ, ಕೇವಲ ಒಂದು ವರ್ಗವನ್ನು ಓಲೈಸುವ ಮೂಲಕ ಸರ್ಕಾರವೇ ಶಾಲಾ ಕಾಲೇಜುಗಳಲ್ಲಿ ಮತೀಯವಾದಕ್ಕೆ ಕುಮ್ಮಕ್ಕು ನೀಡುತ್ತಿದೆ.

ಕನ್ನಡ

ಕಿರಿಯ ವಯಸ್ಸಿನಲ್ಲೇ ದುರ್ಗದ ಸಿಂಹಾಸನವನ್ನೇರಿ, ತಾಯ್ನಾಡು, ಧರ್ಮ-ಸಂಸ್ಕೃತಿಗಳ ರಕ್ಷಿಸಲು ಹಾಗೂ ತನ್ನ ಜನರ ಮಾನ, ಪ್ರಾಣ, ಸ್ವಾಭಿಮಾನಗಳ ರಕ್ಷಣೆಗಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ದುರ್ಗದ ಹುಲಿ, ವೀರ ಮದಕರಿ ನಾಯಕ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
#MadakariNayaka

ಕನ್ನಡ

ಶಿಕ್ಷಣ ಇಲಾಖೆಯನ್ನು ಓಲೈಕೆ ರಾಜಕಾರಣಕ್ಕೆ ಬಳಸಿಕೊಂಡಿದೆ ಕಾಂಗ್ರೆಸ್!
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತಾಂಡವವಾಡುತ್ತಿದೆ. ಶಿಕ್ಷಕರ ನೇಮಕಾತಿಗೆ ಗ್ರಹಣ ಹಿಡಿದಿದೆ. ಅದೆಷ್ಟೋ ಉದ್ಯೋಗಾಕಾಂಕ್ಷಿಗಳು ಆಸೆಗಣ್ಣಿನಿಂದ ಕಾದು ಕುಳಿತಿದ್ದಾರೆ.
ಆದರೆ ನೇಮಕಾತಿಯ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೆ, ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದರೂ, ಹಿಜಾಬ್ ಧರಿಸಲು ಆತುರಾತುರವಾಗಿ ಅವಕಾಶ ನೀಡಿದ್ದಾರೆ.
#CongressFailsKarnataka

ಕನ್ನಡ

ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ! 🌾
ಪ್ರಧಾನಿ ಶ್ರೀ @narendramodi ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2026-27ನೇ ಸಾಲಿನ 14 ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಭತ್ತ, ರಾಗಿ, ಹತ್ತಿ, ತೊಗರಿ, ಸೂರ್ಯಕಾಂತಿ ಸೇರಿದಂತೆ ಪ್ರಮುಖ ಬೆಳೆಗಳಿಗೆ ಈ ಏರಿಕೆ ಅನ್ವಯವಾಗಲಿದ್ದು, ರೈತರಿಗೆ ಆರ್ಥಿಕ ಬಲ ತುಂಬಲಿದೆ.
#MSP #FarmersFirst #Agriculture #CabinetDecision #Karnataka

ಕನ್ನಡ

ಹೆಚ್ಚುತ್ತಿರುವ ಉತ್ಪಾದನೆ ಮತ್ತು ರಫ್ತುಗಳು ಜಾಗತಿಕ ಕಾಫಿ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿವೆ.
ಭಾರತೀಯ ರೋಬಸ್ಟಾ ಮತ್ತು ಇನ್ಸ್ಟೆಂಟ್ ಕಾಫಿಗೆ ಬಲವಾದ ಬೇಡಿಕೆ ಸೃಷ್ಟಿಯಾಗುತ್ತಿದ್ದು, ಜನವರಿ-ಏಪ್ರಿಲ್ 2026 ರಲ್ಲಿ ರಫ್ತು 26.6% ರಷ್ಟು ಹೆಚ್ಚಾಗಿ 1.74 ಲಕ್ಷ ಟನ್‌ಗಳಿಗೆ ತಲುಪಿದೆ.
#ViksitBharat

ಕನ್ನಡ

ಇಂಧನದ ಮಿತಬಳಕೆ ವಿದೇಶಿ ವಿನಿಮಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಜವಾಬ್ದಾರಿಯುತ ಬಳಕೆ ಮತ್ತು ಸ್ಥಳೀಯ ಉತ್ಪಾದನೆಗೆ ಬೆಂಬಲ ನೀಡುವುದು ಆರ್ಥಿಕತೆಯನ್ನು ಬಲಪಡಿಸುತ್ತದೆ.
ಸಾಮೂಹಿಕ ಪ್ರಯತ್ನದಿಂದ ನಾವು ಯಾವುದೇ ಸವಾಲನ್ನು ಎದುರಿಸಬಲ್ಲೆವು. ನಮ್ಮ ಜವಾಬ್ದಾರಿಯುತ ನಡೆ ಭಾರತವನ್ನು ಮತ್ತಷ್ಟು ಸದೃಢ ಮತ್ತು ಆತ್ಮನಿರ್ಭರವಾಗಿಸುತ್ತದೆ.
#SelfReliantIndia
ಕನ್ನಡ
Preetham J Gowda retweetledi
Preetham J Gowda retweetledi

ನಾಡಪ್ರಭು ಕೆಂಪೇಗೌಡರ ಕರ್ತವ್ಯನಿಷ್ಠೆ ಮತ್ತು ದೂರದೃಷ್ಟಿ ನಮಗೆ ಸದಾ ಪ್ರೇರಣೆ.
ಇಂದು ಭಾರತ ವೇಗವಾಗಿ ಬೆಳೆಯುತ್ತಿರುವ ಈ ಸಮಯದಲ್ಲಿ, ನಾವು ನಮ್ಮ ಜವಾಬ್ದಾರಿಗಳನ್ನೂ ಅಷ್ಟೇ ಪ್ರಾಮಾಣಿಕತೆಯಿಂದ ನಿಭಾಯಿಸಬೇಕು. ಸಂಪನ್ಮೂಲಗಳ ಸಂರಕ್ಷಣೆ, ದೇಶದ ಹಿತಾಸಕ್ತಿಗಳ ರಕ್ಷಣೆ ಮತ್ತು ಒಗ್ಗಟ್ಟಿನ ಮನೋಭಾವವೇ ಭಾರತದ ಶಕ್ತಿ.
ಕೊರೊನಾ ಕಾಲದಲ್ಲಿ ದೇಶ ಒಂದಾಗಿ ನಿಂತಂತೆ, ಇಂದಿನ ಜಾಗತಿಕ ಸವಾಲುಗಳನ್ನೂ ದೇಶಭಕ್ತಿಯ ಸಂಕಲ್ಪದೊಂದಿಗೆ ಎದುರಿಸಬೇಕಾಗಿದೆ.
-ಪ್ರಧಾನಿ ಶ್ರೀ @narendramodi
#ModiInBengaluru #ViksitBharat
ಕನ್ನಡ
Preetham J Gowda retweetledi
Preetham J Gowda retweetledi

ಹುಟ್ಟು ಹೋರಾಟಗಾರರಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ಬದುಕಿನ ಮೈಲುಗಲ್ಲುಗಳನ್ನು ಸಾರುವ ‘ಕೆಂದಾವರೆ-ಕಮಲ ಅರಳಿದ ಕಥೆ’ ಮತ್ತು ಅವರ ಸುದೀರ್ಘ ಶಾಸಕತ್ವದ ಅವಧಿಯಲ್ಲಿ ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹಗಳನ್ನು ಹೊತ್ತ ‘ಸದನ ಶಿಕಾರಿ-ಯಡಿಯೂರಪ್ಪನವರ ಗುಡುಗಿನ ನುಡಿಗಳು’ ಎರಡು ಕೃತಿಗಳನ್ನು ಶ್ರೀ ಆರ್. ರಘು ಕೌಟಿಲ್ಯ ಅವರು ಸಂಪಾದಿಸಿದ್ದು ಈ ಕೃತಿಗಳನ್ನು ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಎಲ್ಲಾ ಹಿರಿಯ ನಾಯಕರು, ನಾಡಿನ ಎಲ್ಲಾ ಹಿರಿಯ ಸ್ವಾಮೀಜಿಗಳೊಂದಿಗೆ ಲೋಕಾರ್ಪಣೆಗೊಳಿಸಿದರು.
ಇದು ಅವರ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ, ಆಸಕ್ತಿಕರ ಮಾಹಿತಿಯುಕ್ತ, ಸಂಗ್ರಹ ಯೋಗ್ಯ ಕೃತಿಗಳಾಗಿದ್ದು, ಆಸಕ್ತರು ಓದಿ, ಪ್ರೇರಣೆ ಪಡೆದಲ್ಲಿ ಕೃತಿಗಳು ಸಾರ್ಥಕತೆ ಪಡೆಯಲಿವೆ.
#BSYಅಭಿಮಾನೋತ್ಸವ
#BsyAbhimanotsava




ಕನ್ನಡ
Preetham J Gowda retweetledi

Tomorrow, 10th May, I will be attending various programmes in Karnataka and Telangana.
At 11 AM tomorrow, I will join the programme to mark the 45th anniversary celebrations of the establishment of the Art of Living. In line with our ethos of serving society, they have been doing commendable work across a wide range of sectors.
In the afternoon, I will reach Hyderabad, where development works worth around Rs. 9500 crore will be inaugurated or their foundation stones will be laid. These works cover sectors such as roads, logistics, textiles, railways, energy and more. I will then join the programme to dedicate the Sindhu Hospital to the nation.
In the evening, I will address a BJP rally in the city. Fed up of the BRS misrule earlier and the Congress misrule now, Telangana is looking towards the BJP. Our rising support indicates our Party is Telangana’s preferred choice!
pib.gov.in/PressReleasePa…
English

"ಬಿ.ಎಸ್ ಯಡಿಯೂರಪ್ಪ ಅವರು ನಮಗೆ ದೇವರ ಸಮಾನ. ಯಡಿಯೂರಪ್ಪ ಅವರ ಆಡಳಿತ ಸಿದ್ದರಾಮಯ್ಯ ಆಡಳಿತಕ್ಕಿಂತ ಉತ್ತಮವಾಗಿತ್ತು ಎನ್ನುವುದು ಒಬ್ಬ ರೈತನಾಗಿ, ರೈತ ಮುಖಂಡನಾಗಿ ನನ್ನ ಅಭಿಪ್ರಾಯವಾಗಿದೆ" ಎಂದು ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಪಾಲ್ಗೊಂಡ ಅನ್ನದಾತರು ಅಭಿಮಾನದ ಮಾತುಗಳನ್ನಾಡುತ್ತಿದ್ದಾರೆ.
#BSYಅಭಿಮಾನೋತ್ಸವ
#BsyAbhimanotsava
ಕನ್ನಡ

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಚುನಾವಣಾ ಚಾಣಕ್ಯ, ದೇಶ ಕಂಡ ಬಲಿಷ್ಠ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಅವರಿಂದ ಗೌರವಾರ್ಪಣೆ.
#BSYಅಭಿಮಾನೋತ್ಸವ
#BsyAbhimanotsava
ಕನ್ನಡ

ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಂದೇಶ.
-------------------------------
ಶ್ರೀ ಬಿ. ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಪಯಣ ಪ್ರತಿ ಯುವ ಕಾರ್ಯಕರ್ತನಿಗೆ ಪರಿಶ್ರಮ, ಶಿಸ್ತು ಮತ್ತು ಸಮರ್ಪಣೆ - ಇವು ಅತಿ ದೊಡ್ಡ ಸವಾಲುಗಳನ್ನು ಕೂಡ ಮೆಟ್ಟಿ ನಿಲ್ಲಬಲ್ಲದು ಎಂಬುದನ್ನು ತೋರಿಸಿಕೊಡುತ್ತದೆ. ಸಾಮಾಜಿಕ ಬದುಕು ರಾತೋರಾತ್ರಿ ನಿರ್ಮಾಣವಾಗುವುದಿಲ್ಲ. ವರ್ಷಗಳ ಕಠಿಣ ಪರಿಶ್ರಮ ಮತ್ತು ತ್ಯಾಗದಿಂದ, ಸ್ಥಿರತೆ ಮತ್ತು ತಾಳ್ಮೆಯಿಂದ ನಿರ್ಮಾಣವಾಗುತ್ತದೆ.
ಇಂದು ಅಗಣಿತ ಬೆಂಬಲಿಗರು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕಾರ್ಯಕರ್ತರು ಶ್ರೀ ಬಿ. ಎಸ್. ಯಡಿಯೂರಪ್ಪ ಅವರನ್ನು ಗೌರವಿಸಲು ಒಟ್ಟು ಸೇರಿದ್ದಾರೆ. ನಾನೂ ಅವರೊಂದಿಗೆ ಸೇರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ಸಾಮಾಜಿಕ ಸೇವೆಗೆ ಅಮೋಘ ಕೊಡುಗೆಯನ್ನು ಸ್ಮರಿಸಿ ಶ್ಲಾಘಿಸುತ್ತೇನೆ. 50 ವರ್ಷಗಳ ಸಮಾಜ ಸೇವೆಯ ಈ ಅಪೂರ್ವ ಮೈಲುಗಲ್ಲಿನ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತೇನೆ ಮತ್ತು ಶುಭ ಕೋರುತ್ತೇನೆ.
#BSYಅಭಿಮಾನೋತ್ಸವ
#BsyAbhimanotsava




ಕನ್ನಡ

ಯಡಿಯೂರಪ್ಪ ಎನ್ನುವ ಹೆಸರಿನಲ್ಲೇ ಒಂದು ಶಕ್ತಿ ಇದೆ. ರಾಜ್ಯದ ಬಡವರ ಮನೆ-ಮನೆಗಳಲ್ಲಿ, ದೀನ ದಲಿತರ ಹೃದಯದಲ್ಲಿ ಯಾರದ್ದಾದರೂ ಹೆಸರು ಅಚ್ಚೊತ್ತಿದ್ದರೆ ಅದು ಯಡಿಯೂರಪ್ಪ ಅವರದ್ದು ಮಾತ್ರ. ಅಸಂಖ್ಯಾತ ರೈತರ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿದ ಭಗೀರಥ ಬಿಎಸ್‌ವೈ ಅವರು.
- ಶ್ರೀ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು
#BSYಅಭಿಮಾನೋತ್ಸವ
#BsyAbhimanotsava
ಕನ್ನಡ










