Ravisuriya
255 posts


ಸೌದಿಯಿಂದ
ಮನೆಗೆ
ಬಂದ ಗೆಳೆಯ
ರಾಜ ಶೇಖರ,
ಈಗ ತಿರುಗುತ್ತಿದ್ದಾನೆ
ಸೌದೆ ಬೇಕೆಂದು
ಊರ ಊರ.
#iran #iranUSWar #kannada #ಇರಾನ್ #ಯುದ್ಧ #iranWar
ಕನ್ನಡ

ಬೆರಳೆಣಿಕೆಗೆ
ಮಾತ್ರ ಸಿಗುವರು
ಇಂಥವರು;
ಎಲ್ಲ ಇದ್ದು,
ನಗುವಿನಿಂದಲೆ
ಹತ್ತಿರವಾಗಿ ಉಳಿದವರು.
❤️💯
#ಪುನೀತ್ #ಅಪ್ಪು #happyBirthday
#puneeth #appu #kannada
ಕನ್ನಡ

ಡಯಟ್ ದಾಮೋಧರನಿಗೆ
ಎಲಿಲ್ಲದ ನಗು ಕಣ್ರೀ;
ಏಕೆಂದರೆ
ಪಿ ಜಿ ಯವರಿಗೆ
ತಿನ್ನಿಸುತ್ತಿದಾನೆ
ದಿನವಿಡಿ
ಹಸಿ ಹಸಿ ತರಕಾರಿ.
#ಇರಾನ್ #ಯುದ್ಧ #iran #iranUSWar #kannada #war
ಕನ್ನಡ

3-14
ಮಾರ್ಚ್ 14 / March 14
π = 3.14159265359
ಈ ಉಳಿದ ಚಿಕ್ಕ ಸ್ಥಿರ ಅಭಾಗಲಬ್ಧ ಸಂಖ್ಯೆಗೆ ಕೊನೆಯಿಲ್ಲ -- a constant number with recurring decimal.
ಜೀವನದ ಸರ್ಕಲ್ನಲ್ಲಿ ಅಂತ್ಯವಿಲ್ಲದ ಸ್ಥಿರ ಬಯಕೆಯೆ ಪೈ -- π.
ಜೀವನ ಸಂಪೂರ್ಣ ಲೆಕ್ಕಚಾರ!
#piDay #mathAndLife #life #kannada #math
ಕನ್ನಡ

ಸ್ವಿಗ್ಗಿ ಮಾಡ್ಕೊಂಡೆ
ಜೊಮೊಟೊ ಮಾಡಿದ್ದೀನಿ
ಎನ್ನುತ್ತಿದ್ದ
ಎದುರು ಮನೆಯವರು,
ಇವತ್ತು
ಟೊಮಟ ಚಿತ್ರಾನ್ನ
ಮಾಡ್ಕೊಂಡೆ ಅಂತ
ನನಗು ಕೊಟ್ಟರು!
#ಇರಾನ್ #ಯುದ್ಧ #iran #iranUSWar #kannada
ಕನ್ನಡ

ಮಹಿಳೆಯರೆ,
ಎಲ್ಲ ದಿನವೂ ನಿಮ್ಮದೆ,
ಇಲ್ಲ ಅಂತ ಹೇಳಿದರೆ
ಆ ತಪ್ಪು ನಮ್ಮದೆ,
ಆದರೂ ಹೇಳುವೆವು ಶುಭಾಶಯ;
ಆಗೊಮ್ಮೆ ಈಗೊಮ್ಮೆ ಮಾಡಿ
ದಯೆ ತೋರುವ ನಿರ್ಣಯ.
🙂
#kannada #hanigavana #womensDay2026 #womensDay
ಕನ್ನಡ

ಊಹೆಯೂ
ಇರಲಿಲ್ಲ ಇಗೆ,
ಸಿಗುವಳೊಬ್ಬಳು ನನಗೆ
ಬಿಟ್ಟಿರಲಾಗದ ಮಹಿಳೆ;
ಅವಳು
ನನ್ನ ಮಗಳೇ!
#womensday #womensDay2026
ಕನ್ನಡ

ಬೇಸಿಗೆ ಬಿಸಿಲಿಗೆ
ಬೆಣ್ಣೆ ಕರಗಿತು,
ಆದರೆ
ಯುದ್ಧದ ಬಿಸಿಗೆ
ಬೆಣ್ಣೆ ದೋಸೆ
ಬೇಯಲಿಲ್ಲ!
😶
#iran #iranUSWar #ಇರಾನ್ #ಯುದ್ಧ #ಕನ್ನಡ #kannada
ಕನ್ನಡ

ಇದ್ದರೇನು
ಕೈಯಲ್ಲಿ
5ಜಿ,
ಹೋಟೆಲ್ ಅಂಕಲ್ಗೆ
ಬೇಗನೆ ಸಿಗುತ್ತಿಲ್ಲ
ಎಲ್ ಪಿ ಜಿ!
😁
#ಇರಾನ್ #ಯುದ್ಧ #iran #iranUSWar #kannada
ಕನ್ನಡ