Yaqub Jamal
17 posts

Yaqub Jamal
@yaqub_jamal
Educationist, deep thinker, currently working on my vocabulary 😅
Kolkata, India Katılım Ocak 2022
60 Takip Edilen2 Takipçiler

#UGCET-26: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಫೆಬ್ರುವರಿ 16ರವರೆಗೆ ಅವಕಾಶ ನೀಡಲಾಗಿದೆ.
ಕೆಇಎ ವೆಬ್ ಸೈಟ್ ನಲ್ಲಿ ಲಿಂಕ್ (share.google/bAql9LD8CEadmA…) ಬಿಡುಗಡೆ ಮಾಡಿದ್ದು, ಅರ್ಜಿ ಶುಲ್ಕ ಪಾವತಿಸಲು ಫೆ.18 ಕೊನೆ ದಿನ.
ಅರ್ಜಿ ಸಲ್ಲಿಸಲು ಸಾಕಷ್ಟು ಸಮಯ ನೀಡಿರುವ ಕಾರಣ ಪೋಷಕರು/ ಅಭ್ಯರ್ಥಿಗಳು ಸಾವಧಾನದಿಂದ ಸಿಇಟಿ ಮಾಹಿತಿಯನ್ನು ಓದಿ, ಮನನ ಮಾಡಿಕೊಂಡ ನಂತರ ಅರ್ಜಿ ಭರ್ತಿ ಮಾಡಬೇಕು. ಅಭ್ಯರ್ಥಿಗಳು ತಮಗೆ ಅನ್ವಯವಾಗುವ ಮೀಸಲಾತಿಗಳಿಗೆ ಪೂರಕವಾಗಿ ದಾಖಲೆಗಳನ್ನು ಸಿದ್ಧ ಮಾಡಿಟ್ಟುಕೊಂಡು ಅರ್ಜಿ ಭರ್ತಿ ಮಾಡಿ.
ಪ್ರಸಕ್ತ ಸಾಲಿನ ಅರ್ಜಿಯು ಆಧಾರ್ ಆಧಾರಿತ ಅರ್ಜಿಯಾಗಿದ್ದು, ಅದರಲ್ಲಿನ ಹೆಸರು ಇತ್ಯಾದಿ ಅಂಶಗಳು ತನ್ನಿಂತಾನೆ ಅರ್ಜಿಯಲ್ಲಿ ಬಂದು ಕೂರಲಿವೆ. ಇದಲ್ಲದೆ, ಇ-ಮೇಲ್ ಮೂಲಕವೂ ಓಟಿಪಿ ಜತೆಗೆ ಪ್ರತಿ ಹಂತದ ಮಾಹಿತಿಯನ್ನು ತಿಳಿಸುವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ವಾಟ್ಸ್ ಅಪ್ ಮೂಲಕವೂ ಸಂದೇಶಗಳು ರವಾನೆಯಾಗಲಿವೆ.
ಆರ್ಜಿ ಭರ್ತಿ ಸಂಬಂಧ ಎಲ್ಲ ಕಾಲೇಜು ಸಿಬ್ಬಂದಿಗೆ ಹತ್ತು ದಿನಗಳ ಆನ್ ಲೈನ್ ತರಬೇತಿ ನೀಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ತಮ್ಮ ಕಾಲೇಜುಗಳಲ್ಲಿಯೇ ಅರ್ಜಿ ಭರ್ತಿ ಮಾಡಿ, ಸಲ್ಲಿಸಬಹುದು. ಅಗತ್ಯಬಿದ್ದಾಗ ಉಪನ್ಯಾಸಕರ ನೆರವು ಪಡೆಯಬಹುದು.
ಹೆಚ್ಚಿನ ಮಾಹಿತಿಗೆ #KEA ವೆಬ್ ಸೈಟ್ ನೋಡಿ.
-ಹೆಚ್. ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@KEA_karnataka @CMofKarnataka
ಕನ್ನಡ

#UGNEET-25: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವವರಿಗೆ ಶುಲ್ಕ ಪಾವತಿಸಲು ಇಂದು (ಡಿ.11) ಮಧ್ಯಾಹ್ನ 2ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ.
ಶುಲ್ಕ ಪಾವತಿಸಿದ ನಂತರ ಇಂದು ಸಂಜೆಯೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.
ಯುಜಿ ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೂ ಶುಲ್ಕ ಪಾವತಿಸಲು ಇಂದು ಸಂಜೆ 4ಗಂಟೆವರೆಗೂ ಸಮಯ ವಿಸ್ತರಿಸಲಾಗಿದೆ.
- ಹೆಚ್ ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka @drmcsudhakar @KEA_karnataka
ಕನ್ನಡ

#UGNEET-25: ಆಯುಷ್ ಕಾಲೇಜುಗಳಲ್ಲಿ ಪದವಿ ಕೋರ್ಸುಗಳಿಗೆ ಈಗಾಗಲೇ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಸ್ಟ್ರೇ ವೇಕೆನ್ಸಿ ಸುತ್ತಿನ ಎನ್ ಆರ್ ಐ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದ್ದರೆ ನ.13ರ ಸಂಜೆ 6ರವರೆಗೆ ಇಚ್ಛೆಗಳನ್ನು ದಾಖಲಿಸಲು #KEA ಅವಕಾಶ ಕಲ್ಪಿಸಿದೆ.
ರಾಜ್ಯ ಸರ್ಕಾರದ ಆದೇಶದ ಪ್ರಕಾರ ಎನ್ ಆರ್ ಐ ಉಳಿಕೆ ಸೀಟುಗಳನ್ನು ಅದೇ ಎನ್ ಆರ್ ಐ ಶುಲ್ಕದಲ್ಲೇ ಆಡಳಿತ ಮಂಡಲಿ ಕೋಟಾದಡಿ ಹಂಚಿಕೆ ಮಾಡಲಾಗುವುದು.
ಈ ಸುತ್ತಿನ ಸೀಟು ಹಂಚಿಕೆ ಕುರಿತು ಹೆಚ್ಚಿನ ಮಾಹಿತಿಗೆ ನ.6ರಂದು ಹೊರಡಿಸಿರುವ ಪ್ರಕಟಣೆ ಗಮನಿಸಲು ಸೂಚಿಸಲಾಗಿದೆ.
-ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka
@drmcsudhakar
@KEA_karnataka

ಕನ್ನಡ

#UGNEET-25: ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳ 3ನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಅ.29ರವರೆಗೂ ಪ್ರಕಟಿಸದಂತೆ ಹೈಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಅ.27ರಂದು ಅಂತಿಮ ಫಲಿತಾಂಶ ಪ್ರಕಟಿಸಿಲ್ಲ.
ಹೈಕೋರ್ಟ್ ಆದೇಶದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
-ಎಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka
@drmcsudhakar @KEA_karnataka
ಕನ್ನಡ

ಸಾರ್ವಜನಿಕರ ಗಮನಕ್ಕೆ
ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಭಾನುವಾರ ಮತ್ತು ಸೋಮವಾರ (ಅ.19 & 20) #KeaCallCenter ಕಾರ್ಯನಿರ್ವಹಿಸುವುದಿಲ್ಲ. ಸಹಕರಿಸಲು ಕೋರಲಾಗಿದೆ.
-ಎಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka
@drmcsudhakar @KEA_karnataka
ಕನ್ನಡ

#UGNEET-25: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮೂರನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆ ಕುರಿತು #KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು #KEAVikasana YouTube ಚಾನೆಲ್ ನಲ್ಲಿ ಮಾತನಾಡಿದ್ದಾರೆ.
ಅದರ ಲಿಂಕ್ ಈ ಕೆಳಗಿದೆ. ಇದನ್ನು ನೋಡಿ ಸರಿಯಾಗಿ ಅರ್ಥ ಮಾಡಿಕೊಂಡು 3ನೇ ಸುತ್ತಿಗೆ ತಯಾರಿ ನಡೆಸಿ.
youtu.be/2UOOEzbnAFk?si…
@CMofKarnataka @KEA_karnataka @drmcsudhakar

YouTube
ಕನ್ನಡ

#UGNEET-25: ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ ಗಳ ಸೀಟು ಹಂಚಿಕೆಗೆ ಇಚ್ಛೆ/ಆಯ್ಕೆಗಳನ್ನು ಅದಲು/ಬದಲು ಅಥವಾ ತೆಗೆದುಹಾಕಲು ಸೆ.20ರಂದು ಬೆಳಿಗ್ಗೆ 8 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ.
ಮೈಸೂರಿನ ಫಾರೂಕ್ ವೈದ್ಯಕೀಯ ಕಾಲೇಜಿಗೆ ಹೊಸದಾಗಿ ಸೀಟ್ ಮ್ಯಾಟ್ರಿಕ್ಸ್ ನೀಡಿರುವ ಕಾರಣ ಆ ಕಾಲೇಜಿಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ. ಉಳಿದಂತೆ ಆಪ್ಷನ್ಸ್ ಗಳನ್ನು ಮರು ಕ್ರಮಗೊಳಿಸಿಕೊಳ್ಳಬಹುದು.
ಇದು ಕೊನೆಯ ದಿನಾಂಕ ವಿಸ್ತರಣೆ. ಪುನಃ ಅದಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ಎಚ್ಚರವಹಿಸಿ ಕಾರ್ಯಪ್ರವೃತ್ತರಾಗಬೇಕು.
- ಎಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka
@KEA_karnataka @drmcsudhakar
ಕನ್ನಡ

#UGNEET-25: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಬಂದಿರುವ ಸೀಟುಗಳನ್ನೂ ಸೇರಿಸಿಕೊಂಡು ಮತ್ತೊಮ್ಮೆ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. #MCC ಯವರು 2ನೇ ಸುತ್ತಿನ ಫಲಿತಾಂಶ ಪ್ರಕಟಿಸಿದ ನಂತರ #MCC ಯಲ್ಲಿ ಸೀಟು ಪಡೆದವರು ಅಲ್ಲಿ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಅವರಿಗೆ #KEA ಯಿಂದ ಉಚಿತವಾಗಿ ಹೊರಗೆ ಹೋಗಲು ಅವಕಾಶ ನೀಡಿ, ನಂತರ #KEA 2ನೇ ಸುತ್ತಿನ ಅಂತಿಮ ಫಲಿತಾಂಶ ಪ್ರಕಟಿಸುತ್ತದೆ.
#MCC ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು ಭಾಗವಹಿಸಲು ಕೋರಿದೆ. ಫಲಿತಾಂಶ ಪ್ರಕಟಣೆ ನಂತರ ಸಹ ಅಭ್ಯರ್ಥಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದು.
- ಎಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka
@drmcsudhakar @KEA_karnataka
ಕನ್ನಡ

#UGCET/UGNEET-25: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಎರಡನೇ ಮುಂದುವರಿದ ಸುತ್ತು ಹಾಗೂ ಯುಜಿಸಿಇಟಿ ಕೋರ್ಸ್‌ಗಳ 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಇಚ್ಛೆ/ಆಯ್ಕೆಗಳನ್ನು ಅದಲು-ಬದಲು ಹಾಗೂ ಹೊಸದಾಗಿ ಸೇರಿಸುವುದಕ್ಕೆ ಸೆ.9ರಂದು ಬೆಳಿಗ್ಗೆ 8ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ.
ಎಲ್ಲ ವರ್ಗದ ಅರ್ಹ ಅಭ್ಯರ್ಥಿಗಳು 10 ಸಾವಿರ ರೂಪಾಯಿ ಕಾಷನ್ ಡೆಪಾಸಿಟ್ ಪಾವತಿಸುವುದಕ್ಕೂ ಬೆಳಿಗ್ಗೆ 8 ಗಂಟೆವರೆಗೆ ಸಮಯ ನೀಡಲಾಗಿದೆ.
ಅಭ್ಯರ್ಥಿಗಳ ಕೋರಿಕೆ ಮೇರೆಗೆ ಸಮಯ ವಿಸ್ತರಣೆ ಮಾಡಿದ್ದು, ಈ ಅವಧಿಯೊಳಗೆ ಅಭ್ಯರ್ಥಿಗಳು ಕಾಷನ್ ಡೆಪಾಸಿಟ್ ಕಟ್ಟಿ, ಇಚ್ಛೆ/ ಆಯ್ಕೆ ದಾಖಲಿಸಿಕೊಳ್ಳಬೇಕು. ಇದು ಕೊನೆ. ಪುನಃ ಸಮಯ ವಿಸ್ತರಣೆ ಇರುವುದಿಲ್ಲ.
- ಎಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka @drmcsudhakar @KEA_karnataka
ಕನ್ನಡ

#UGCET/UGNEET-25: ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಕಾಷನ್ ಡೆಪಾಸಿಟ್ ಪಾವತಿ ಮತ್ತು ಆಯ್ಕೆ/ಇಚ್ಛೆಗಳನ್ನು ಬದಲಿಸಿಕೊಳ್ಳುವ/ ತೆಗೆದುಹಾಕಲು ಇಂದು ಸಂಜೆ 4 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ.
@CMofKarnataka @drmcsudhakar @KEA_karnataka
ಕನ್ನಡ

#UGCET/UGNEET-25: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ಎಲ್ಲ ವೃತ್ತಿಪರ ಕೋರ್ಸ್ ಗಳ ಎರಡನೇ ಸುತ್ತಿನ ಪ್ರವೇಶ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ.
ಲಭ್ಯ ಸೀಟುಗಳ ವಿವರಗಳನ್ನು ಕೂಡ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಗುರುವಾರದಿಂದ (ಆ.21) ಇಚ್ಛೆ/ಆಯ್ಕೆಗಳನ್ನು ಬದಲಿಸುವ/ತೆಗೆಯುವ ಕೆಲಸವನ್ನೂ ಮಾಡಬಹುದು.
ಆ.25ರವರೆಗೆ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆ.29ರಂದು ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುವುದು.
ಆರ್ಯುವೇದ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಕೂಡ ಪ್ರಕಟಿಸಿದ್ದು, ಈ ಕೋರ್ಸ್ ಗೆ ಮಾತ್ರ ಇಚ್ಚೆ/ಆಯ್ಕೆಗಳನ್ನು ದಾಖಲು ಮಾಡಲು ಅವಕಾಶ ನೀಡಲಾಗಿದೆ.
ಮೊದಲ ಸುತ್ತಿನಲ್ಲಿ ಚಾಯ್ಸ್-1 ಆಯ್ಕೆ ಮಾಡಿಕೊಂಡು ಪ್ರವೇಶ ಪಡೆದಿರುವವರನ್ನು ಹೊರತುಪಡಿಸಿ, ಛಾಯ್ಸ್- 2 ಹಾಗೂ 3 ಆಯ್ಕೆ ಮಾಡಿದವರಿಗೂ ಆಯುರ್ವೇದ ಕೋರ್ಸ್ ಗಳ ಪ್ರವೇಶಕ್ಕೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ಇರುತ್ತದೆ.
ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ ನೋಡಿ.
- ಎಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka
@drmcsudhakar @KEA_karnataka
ಕನ್ನಡ

#UGCET/UGNEET-25: ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಕುರಿತು #KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು #KEAVikasana YouTube ಚಾನಲ್ ನಲ್ಲಿ ಮಾತನಾಡಿದ್ದಾರೆ. ಅದರ ಲಿಂಕ್ ಇಲ್ಲಿದೆ ನೋಡಿ. ಎಚ್ಚರದಿಂದ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಕೋರಿಕೆ.
@CMofKarnataka
@drmcsudhakar
@KEA_karnataka
youtu.be/Lru55vhebjk?si…

YouTube
ಕನ್ನಡ

@ShahaanSiddiqui Just trying another option to reach out to you.
English

@yaqub_jamal Finally seeing @yaqub_jamal active on twitter makes my twitter feed feel alive 🤗
English
Yaqub Jamal retweetledi
Yaqub Jamal retweetledi

