Ravi Miraskar

8.6K posts

Ravi Miraskar banner
Ravi Miraskar

Ravi Miraskar

@MiraskarRavi

Dept of information & Public Relations (GoK) https://t.co/XQQkda8oWt

Kalaburagi 가입일 Eylül 2017
243 팔로잉1.6K 팔로워
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಕಲಬುರಗಿ ದೇಶದಲ್ಲಿಯೆ ಮಂಗಳವಾರ (ಏ.14) ಹೆಚ್ಚು ತಾಪಮಾನ(44.0) ದಾಖಲಾಗಿದೆ. ಏ.15-17ರ ವರೆಗೆ ಜಿಲ್ಲೆಯಲ್ಲಿ ಹೀಟ್ ವೇವ್ ಕುರಿತು @Indiametdept ಆರೆಂಜ್ ಅಲರ್ಟ್ ಘೋಷಿಸಿದ್ದು, ಮಧ್ಯಾಹ್ನ 12 ರಿಂದ ಸಂಜೆ 4ರ ವರೆಗೆ ಮನೆಯಿಂದ ಹೊರಬರುವುದನ್ನು ತಪ್ಪಿಸುವುಂತೆ @DCKalaburagi ಬಿ.ಫೌಜಿಯಾ ತರನ್ನುಮ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ
DIPR-KALABURAGI tweet media
ಕನ್ನಡ
1
10
36
1.7K
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಅವರು ಶನಿವಾರ ಕಲಬುರಗಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪಾಲಿಕೆ ಪ್ರಗತಿ ಪರಿಶೀಲನಾ‌ ಸಭೆ ನಡೆಸಿ ಪ್ರಸ್ತುತ ಬೇಸಿಗೆ ಕಾಲ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲಾ‌ ರೀತಿಯ ಮುನ್ಮೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು
DIPR-KALABURAGI tweet media
ಕನ್ನಡ
4
3
23
701
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
@CEOZPKalaburagi ಭಂವರ್ ಸಿಂಗ್ ಮೀನಾ ಅವರು ಬೇಸಿಗೆ ಹಿನ್ನೆಲೆಯಲ್ಲಿ ಬುಧವಾರ ಆಳಂದ ತಾಲೂಕಿನ ಸಂಭಾವ್ಯ ಕುಡಿಯುವ ನೀರಿನ ಸಮಸ್ಯಾತ್ಮಕ ಜನವಸತಿ ಪ್ರದೇಶಗಳಾದ ವೈಜಾಪುರ, ಕಡಗಂಚಿ, ಖಾತ್ರಬಾದ್, ಸಾವಳೇಶ್ವರ, ಕಾಮನಹಳ್ಳಿ, ಸರಸಂಬಾ, ತಡಕಲ್, ಹಾಲತಡಕಲ್ ಗ್ರಾಮಗಳಿಗೆ ಭೇಟಿ ನೀಡಿ ಜಲಮೂಲಗಳನ್ನು ಪರಿಶೀಲಿಸಿದರು @PriyankKharge
DIPR-KALABURAGI tweet mediaDIPR-KALABURAGI tweet mediaDIPR-KALABURAGI tweet mediaDIPR-KALABURAGI tweet media
ಕನ್ನಡ
1
1
9
282
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಹಸಿರು ಕ್ರಾಂತಿಯ ಹರಿಕಾರ ಡಾ. ಜಗಜೀವನರಾಮ ರವರ 119ನೇ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜಯಂತಿ ಹಿನ್ನೆಲೆಯಲ್ಲಿ @DCKalaburagi ಬಿ.ಫೌಜಿಯಾ ತರನ್ನುಮ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆದಿದ್ದು, ಇಬ್ಬರು ಮಹಾನ್ ನಾಯಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು
DIPR-KALABURAGI tweet mediaDIPR-KALABURAGI tweet mediaDIPR-KALABURAGI tweet mediaDIPR-KALABURAGI tweet media
ಕನ್ನಡ
1
1
6
271
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಕಲಬುರಗಿ ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ಮತ್ತು ಎಲ್.ಪಿ.ಜಿ ಸಿಲಿಂಡರ್‌ಗಳ ಯಾವುದೇ ಕೊರತೆ ಇಲ್ಲ. ಎಲ್ಲವು ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಸಾರ್ವಜನಿಕರು ಕೊವಿಗೊಡಬಾರದೆಂದು @DCKalaburagi ಬಿ.ಫೌಜಿಯಾ ತರನ್ನುಮ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ
DIPR-KALABURAGI tweet media
ಕನ್ನಡ
2
3
7
258
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಏಪ್ರಿಲ್ 1-15ರ ವರೆಗೆ ಜಿಲ್ಲೆಯಾದ್ಯಂತ ಭಾರತದ ಜನಗಣತಿ-2027ರ ಮೊದಲನೇ ಹಂತದ ಗಣತಿ ಕಾರ್ಯ se.census.gov.in ಅಂತರ್ಜಾಲದ ಮೂಲಕ ಸ್ವಯಂ ನೋಂದಣಿಗೆ ಅವಕಾಶ ಕಲ್ಪಿಸಿದ್ದು, ಜಿಲ್ಲೆಯ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಜನಗಣತಿ ಯಶಸ್ಸಿಗೆ ಸಹಕರಿಸಬೇಕೆಂದು@DCKalaburagi ಬಿ.ಫೌಜಿಯಾ ತರನ್ನುಮ್ ಜನತೆಯಲ್ಲಿ ಮನವಿ ಮಾಡಿದ್ದಾರೆ
DIPR-KALABURAGI tweet media
ಕನ್ನಡ
2
1
8
276
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
@KalaburgiCorp ಪಾಲಿಕೆಯ 2026-27ನೇ ಸಾಲಿನ ₹ 234.44 ಕೋಟಿ ಮೊತ್ತದ ಬಜೆಟ್ ಮಂಗಳವಾರ ಮಂಡಿಸಲಾಯಿತು. ಇಂದಿರಾ ಸ್ಮಾರಕ ಭವನದಲ್ಲಿ ಮೇಯರ್ ವರ್ಷಾ ರಾಜೀವ ಜಾನೆ ಅಧ್ಯಕ್ಷತೆಯಲ್ಲಿ ಜರುಗಿದ ವಿಶೇಷ ಮುಂಗಡ ಪತ್ರ ಮಂಡನೆ ಸಭೆಯಲ್ಲಿ ತೆರಿಗೆ, ಹಣಕಾಸು & ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಪಮಾ ರಮೇಶ್ ಕಮಕನೂರು ಅವರು ಬಜೆಟ್ ಮಂಡಿಸಿದರು
DIPR-KALABURAGI tweet mediaDIPR-KALABURAGI tweet mediaDIPR-KALABURAGI tweet mediaDIPR-KALABURAGI tweet media
ಕನ್ನಡ
1
2
12
571
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಫೂಟ್ ಸೆಕ್ಯೂರ್, ಸ್ಟ್ರೇಟ್ ಏಡ್ ಸಂಸ್ಥೆ ಹಾಗೂ ಕಲಬುರಗಿಯ ಜಿಮ್ಸ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಇಲ್ಲಿನ‌ ಜಿಮ್ಸ್ ಆವರಣದಲ್ಲಿ ಪ್ಯಾನ್ ಇಂಡಿಯಾ ಮಧುಮೇಹ ಪಾದಗಳ ಆರೋಗ್ಯ - ಜಾಗೃತಿ, ಸಲಹೆ ಮತ್ತು ಸ್ಕ್ರೀನಿಂಗ್ (ಪ್ರಯಾಸ್) ಅಭಿಯಾನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ @S_PrakashPatil ಚಾಲನೆ ನೀಡುವರು
ಕನ್ನಡ
2
1
4
227
Ravi Miraskar 리트윗함
Priyank Kharge / ಪ್ರಿಯಾಂಕ್ ಖರ್ಗೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ಥಳೀಯ ವೃಂದ ಮತ್ತು ಉಳಿಕೆ ಮೂಲ ವೃಂದದಲ್ಲಿನ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂದರ್ಭದಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ 371 (ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆ ಕುರಿತ ಸಂಪುಟ ಉಪ ಸಮಿತಿ ನಡೆಸಲಾಯಿತು. ■ ಉನ್ನತ ಶಿಕ್ಷಣ ಇಲಾಖೆ ಮೂಲಕ ಪ್ರಥಮ ದರ್ಜೆ ಕಾಲೇಜುಗಳ 310 ಹುದ್ದೆಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ಕೆಲವು ಅಭ್ಯರ್ಥಿಗಳು ದೂರು ನೀಡಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿ ಡಿಪಿಎಆರ್‌ ನೀಡಿರುವ ಸ್ಪಷ್ಟ ನಿರ್ದೇಶನಗಳನ್ನು ಪಾಲಿಸುವಲ್ಲಿ ಲೋಪವಾಗಿರುವುದು ಕಂಡುಬಂದಿದ್ದು, ಆಯ್ಕೆ ಪಟ್ಟಿಯನ್ನು ಮರು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ■ ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ತಪ್ಪಿದಲ್ಲಿ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ನೀಡಲಾಯ್ತು. @S_PrakashPatil
Priyank Kharge / ಪ್ರಿಯಾಂಕ್ ಖರ್ಗೆ tweet mediaPriyank Kharge / ಪ್ರಿಯಾಂಕ್ ಖರ್ಗೆ tweet media
ಕನ್ನಡ
31
32
188
10.7K
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಮುಖ್ಯಮಂತ್ರಿ @siddaramaiah ಅವರು ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ @KarnatakaWorld ಹೊರತಂದಿರುವ ಕಲಬುರಗಿ ಜಿಲ್ಲೆಯ ಪ್ರವಾಸಿ ತಾಣಗಳ ಸಂಕ್ಷಿಪ್ತ ಮಾಹಿತಿ ನೀಡುವ “ಕಾಫಿ-ಟೇಬಲ್” ಪುಸ್ತಕ ಮತ್ತು ಪ್ರವಾಸಿ ಮಡಿಕೆ ಪತ್ರಗಳನ್ನು (ಬ್ರೋಚರ್) ಬಿಡುಗಡೆ ಮಾಡಿದರು @CMofKarnataka @DKShivakumar @KarnatakaVarthe
DIPR-KALABURAGI tweet mediaDIPR-KALABURAGI tweet mediaDIPR-KALABURAGI tweet media
ಕನ್ನಡ
2
2
11
402
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಕಲಬುರಗಿ ಜಿಲ್ಲೆಯಾದ್ಯಂತ ಇದೇ ಮಾರ್ಚ್ 18 ರಿಂದ ಏಪ್ರಿಲ್ 2 ವರೆಗೆ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಸುಸೂತ್ರವಾಗಿ ನಡೆಯುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಪುಸ್ತಕ-ಝರಾಕ್ಸ್ ಅಂಗಡಿ ಮುಚ್ಚುವಂತೆ @DCKalaburagi ಬಿ.ಫೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ
DIPR-KALABURAGI tweet mediaDIPR-KALABURAGI tweet media
ಕನ್ನಡ
2
3
15
1K
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಪಿ.ಎಂ-ಉಷಾ ಯೋಜನೆಯಡಿ ₹ 7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾತ್ತಿರುವ ಕೌಶಲ್ಯ ಅಭಿವೃದ್ಧಿ ಕೇಂದ್ರ & ಸಂಯೋಜಿತ ಉಪನ್ಯಾಸ ಮಂದಿರ ಕಟ್ಟಡಗಳ ನಿರ್ಮಾಣಕ್ಕೆ ಶನಿವಾರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಡಿಗಲ್ಲು ನೆರವೇರಿಸಿದರು @CMofKarnataka @DKShivakumar
DIPR-KALABURAGI tweet media
ಕನ್ನಡ
1
1
9
324
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಕಲಬುರಗಿ ಜಿಲ್ಲೆಯ ಕಾಳಗಿಯ ಸೂರ್ಯನಾರಾಯಣ ದೇವಸ್ಥಾನ, ಪ್ರಜಾ‌ ಸೌಧ ಸೇರಿದಂತೆ ತಾಲೂಕಿನ ₹ 56.36 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಅವರು ಶನಿವಾರ ಚಾಲನೆ ನೀಡಿದರು @CMofKarnataka @DKShivakumar @S_PrakashPatil @KarnatakaVarthe @krishnabgowda
DIPR-KALABURAGI tweet mediaDIPR-KALABURAGI tweet mediaDIPR-KALABURAGI tweet mediaDIPR-KALABURAGI tweet media
ಕನ್ನಡ
1
2
4
248
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಸುಮಾರು ₹ 1.39 ಕೋಟಿ ರೂ. ವೆಚ್ಚದಲ್ಲಿ‌ ನವೀಕೃತಗೊಂಡ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಕಪಲ್ಲಿ ಸಾಲು ಮರದ‌ ತಿಮ್ಮಕ್ಕ ವೃಕ್ಷೋದ್ಯಾನವನ್ನು ಶನಿವಾರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಅವರು ಉದ್ಘಾಟಿಸಿದರು @S_PrakashPatil @eshwar_khandre @KarnatakaVarthe
DIPR-KALABURAGI tweet mediaDIPR-KALABURAGI tweet mediaDIPR-KALABURAGI tweet mediaDIPR-KALABURAGI tweet media
ಕನ್ನಡ
1
2
20
323
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಕಲಬುರಗಿ ಜಿಲ್ಲೆಯ ಚಿಂಚೋಳಿ‌ ವನ್ಯಜೀವಿ ಧಾಮ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸಿಗರಿಗೆ ಅರಣ್ಯ ಸಫಾರಿ ಕೈಗೊಳ್ಳಲು ₹ 24 ಲಕ್ಷ ವೆಚ್ಚದಲ್ಲಿ ಎರಡು ಕ್ಯಾಂಪರ್ ವಾಹನಗಳನ್ನು ಖರೀದಿಸಲಾಗಿದ್ದು, ಶನಿವಾರಬಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಚಾಲನೆ ನೀಡಿದರು
DIPR-KALABURAGI tweet media
ಕನ್ನಡ
1
1
7
229
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ಕಲಬುರಗಿ ಜಿಲ್ಲೆಯ ಚಿಂಚೋಳಿ‌ಯ‌ ಚಂದ್ರಂಪಳ್ಳಿ ಜಲಾಶಯದ‌ ಪ್ರಕೃತಿ ಸೊಬಗನ್ನು‌ಸವಿಯಲು ಪ್ರವಾಸಿಗರ ಅನುಕೂಲಕ್ಕೆ ದೋಣಿ‌ ವಿಹಾರ ಆರಂಭಿಸಲಾಗಿದ್ದು, ಶನಿವಾರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಚಾಲನೆ ನೀಡಿ ಒಂದು ಸುತ್ತು ಬೋಟ್ ರೈಡಿಂಗ್ ಮಾಡಿ ರಮ್ಯ ಪರಿಸರ ಆನಂದಿಸಿದರು
DIPR-KALABURAGI tweet mediaDIPR-KALABURAGI tweet mediaDIPR-KALABURAGI tweet media
ಕನ್ನಡ
1
2
9
243
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
#ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯಗಳು ರಾಜ್ಯ ಸರ್ಕಾರದ ಸಾರ್ಥಕ ‌ಸಾವಿರ ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ ಇಲಾಖೆಯಿಂದ ಕಲಬುರಗಿ ಜಿಲ್ಲೆಯ ಪಂಚ ಗ್ಯಾರಂಟಿ ಯೋಜನೆಗಳ ಸಾಧನೆ ಮತ್ತು ಪಲಾನುಭವಿಗಳ ಕುರಿತು ತಯಾರಿಸಲಾದ ಡಾಕ್ಯೂಮೆಂಟರಿ
ಕನ್ನಡ
1
2
3
121
Ravi Miraskar 리트윗함
DIPR-KALABURAGI
DIPR-KALABURAGI@Kalaburgivarthe·
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ & ಕಲಬುರಗಿ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಇದೇ ಮಾರ್ಚ್ 10 ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಮಾಜಿಕ ಮಹಾನ್ ಚಿಂತನೆಗೆ ಗಾನ ನಮನ‌ ಅರ್ಪಿಸುವ "ಭೀಮ ಗಾಯನ" ಕಾರ್ಯಕ್ರಮ ಆಯೋಜಿಸಲಾಗಿದೆ
DIPR-KALABURAGI tweet media
ಕನ್ನಡ
1
1
3
155
Ravi Miraskar 리트윗함
Priyank Kharge / ಪ್ರಿಯಾಂಕ್ ಖರ್ಗೆ
ಗ್ರಾಮಸ್ವರಾಜ್ಯದ ಪರಿಕಲ್ಪನೆಯ ಮೂಲಕ ದೇಶದ ಗ್ರಾಮೀಣ ಪ್ರದೇಶದ ಆರ್ಥಿಕ ಬಲವರ್ಧನೆ, ಸ್ವಯಂ ಅಧಿಕಾರ, ಸುಸ್ಥಿರ ಪ್ರಗತಿಯ ಕನಸನ್ನು ಕಂಡಿದ್ದ ಮಹಾತ್ಮ ಗಾಂಧಿಯವರ ಹೆಸರನ್ನು ಗ್ರಾಮಗಳಲ್ಲಿ ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ "ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ" ಎಂದು ಮರುನಾಮಕರಣ ಮಾಡಲಾಗುವುದು. #ಗ್ರಾಮಕಲ್ಯಾಣ #KarnatakaEmpowermentBudget
Priyank Kharge / ಪ್ರಿಯಾಂಕ್ ಖರ್ಗೆ tweet media
ಕನ್ನಡ
4
22
71
1.4K