Basavaraj S Bommai

13.3K posts

Basavaraj S Bommai banner
Basavaraj S Bommai

Basavaraj S Bommai

@BSBommai

Member of Parliament, Haveri - Gadag Constituency and Former Chief Minister of Karnataka.

Karnataka, India Katılım Ocak 2015
166 Takip Edilen524.4K Takipçiler
Basavaraj S Bommai
Basavaraj S Bommai@BSBommai·
"ಪ್ರಶಿಕ್ಷಣದಲ್ಲಿ ಸಕಾರಾತ್ಮಕ ರಾಜಕಾರಣ ಮಾಡುವುದನ್ನು ಕಲಿಯಬೇಕು" ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ರ ಅಂಗವಾಗಿ ನಡೆದ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಂಡು ಮಾತನಾಡಿದೆನು. ಪಂಡಿತ್ ದೀನದಯಾಳ ಉಪಾಧ್ಯಾಯರು ಜನಸಂಘವನ್ನು ಕಟ್ಟಿದರು. ಅದರ ಮೊದಲನೇ ಅಧ್ಯಕ್ಷರಾಗಿದ್ದರು. ಅವರಿಗೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದು ಒಂದು. ಚುನಾವಣೆಗೆ ಅಥವಾ ಒಂದು ರಾಜಕೀಯ ಪಕ್ಷ ಕಟ್ಟಿದರೆ ಸಾಲದು ರಾಷ್ಟ್ರೀವಾದಿ ರಾಜಕೀಯ ಪಕ್ಷ ಕಟ್ಟಬೇಕು. ರಾಜಕಾರಣ ಮಾಡುವುದೇ ರಾಷ್ಟ್ರಕ್ಕಾಗಿ, ಭಾರತ ಮಾತೆಗೋಸ್ಕರ ರಾಜಕಾರಣ ಮಾಡಬೇಕು. ಆದರೆ, ಈ ವಿಚಾರವನ್ನು ಸ್ವಾತಂತ್ರ ಬಂದಾಗ ಹೇಳುವುದು ಕಷ್ಟವಾಗಿತ್ತು. ಆಗ ಬಿಜೆಪಿ ನಾಯಕರಿಗೆ ಪ್ರಶಿಕ್ಷಣ ವರ್ಗದ ಮೂಲಕ ಪಕ್ಷವನ್ನು ಕಟ್ಟುವ ದೀನದಯಾಳ ಉಪಾಧ್ಯಾಯ ಅವರ ಯುಕ್ತಿಯಿಂದ ಬಂದಿದೆ. ಹೇಗೆ ಒಬ್ಬ ವ್ಯಕ್ತಿ ಜೀವನದ ಉದ್ದಕ್ಕೂ ವಿದ್ಯಾರ್ಥಿ ಆಗಿರುತ್ತಾನೆ. ಅವರು ಯಶಸ್ವಿಯಾಗುತ್ತಾರೆ. ನಾನು ಡಿಗ್ರಿ ಮುಗಿಸಿದ್ದೇನೆ ಎಂದು ಬಿಟ್ಟರೆ ಅವರು ಯಶಸಿಯಾಗುವುದಿಲ್ಲ. ರಾಜಕೀಯ ಪಕ್ಷದಲ್ಲಿ ಕೂಡ ಕಾರ್ಯಕರ್ತರು ರಾಜಕಾರಣ ತಿಳಿದುಕೊಂಡು ಅದನ್ನು ಜನಪರವಾಗಿ ಇರುವಂತ ರಾಜಕಾರಣ ಮಾಡುವ ಮೂಲಕ ಅನುಭವ ಪಡೆದುಕೊಂಡಾಗ ನಾಯಕತ್ವ ಬರುತ್ತದೆ. ಕಾರ್ಯಕ್ರಮದಲ್ಲಿ ಸಂಸದ @DrSudhakar_ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.
Basavaraj S Bommai tweet mediaBasavaraj S Bommai tweet mediaBasavaraj S Bommai tweet mediaBasavaraj S Bommai tweet media
ಕನ್ನಡ
0
1
17
644
Basavaraj S Bommai
Basavaraj S Bommai@BSBommai·
ಆಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಜನರು ಪ್ರಧಾನಿ ಶ್ರೀ ‌@narendramodi ಹಾಗೂ ಕೇಂದ್ರ ಗೃಹ ಸಚಿವ ಶ್ರೀ @AmitShah ಅವರ ನಾಯಕತ್ವಕ್ಕೆ ಕೊಟ್ಟಿರುವ ಮನ್ನಣೆ ಮತ್ತು ಬೆಂಬಲ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೇ ಆಸ್ಸಾಂ ಮುಖ್ಯಮಂತ್ರಿ ಶ್ರೀ @himantabiswa ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೆಂಧು ಅಧಿಕಾರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕದಲ್ಲಿ ದಾವಣೆಗೆರೆ ಮತ್ತು ಬಾಗಲಕೊಟೆಯಲ್ಲಿ ಹಣ ಮತ್ತು ಹೆಂಡದ ಬಲದಿಂದ ಕಾಂಗ್ರೆಸ್ ಗೆ ಜಯ ಆಗಿದೆ. ಆದರೆ, ರಾಜ್ಯದ ವಾಸ್ತವಿಕ ಸ್ಥಿತಿಯೇ ಬೇರೆ ಇದೆ. @BJP4India @BJP4Karnataka
ಕನ್ನಡ
4
4
60
2.5K
Basavaraj S Bommai
Basavaraj S Bommai@BSBommai·
Warm birthday wishes to Hon'ble Vice President of India Shri C. P. Radhakrishnan Ji. Your dedication to strengthening our democracy, improving Parliamentary functioning, and commitment towards a Viksit Bharat is truly inspiring. Praying for your good health, happiness, and continued service to the nation. @VPIndia @CPR_VP
Basavaraj S Bommai tweet media
English
0
2
8
377
Basavaraj S Bommai
Basavaraj S Bommai@BSBommai·
"ಹೋರಾಟದ ಮೂಲಕವೇ ಜನಪರ ನಾಯಕನಾಗಿ ಗುರುತಿಸಿಕೊಂಡ ಧೀಮಂತ ನಾಯಕ ಇವತ್ತಿನ ರಾಜಕಾರಣದ ಯಜಮಾನ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು" ನನ್ನ ವಿಶೇಷ ಲೇಖನ ಇಂದಿನ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ. @BJP4Karnataka @BSYBJP @VijayaKarnataka
Basavaraj S Bommai tweet media
ಕನ್ನಡ
0
1
17
533
Basavaraj S Bommai
Basavaraj S Bommai@BSBommai·
ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ರಾಜಕೀಯ ಪಯಣ ಸುದೀರ್ಘ ವರ್ಷಗಳ ಇತಿಹಾಸ ಹೊಂದಿದೆ. ಶಿಕಾರಿಪುರದ ಪುರಸಭೆ ಸದಸ್ಯನಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿವರೆಗಿನ ಪ್ರಯಾಣ ಅದ್ಭುತವಾದುದು. ಈ ಪಯಣವನ್ನು ಗೌರವಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ "ಬಿಎಸ್‌ವೈ ಅಭಿಮಾನೋತ್ಸವ" ಕಾರ್ಯಕ್ರಮವನ್ನು ನಾವೆಲ್ಲರೂ ಯಶಸ್ವಿಗೊಳಿಸೋಣ. #BSYಅಭಿಮಾನೋತ್ಸವ #BsyAbhimanotsava @BJP4Karnataka @BSYBJP
ಕನ್ನಡ
1
1
10
470
Basavaraj S Bommai
Basavaraj S Bommai@BSBommai·
ಇಂದು ಚಿತ್ರದುರ್ಗದ ಬಿ.ಡಿ.ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಇದೇ ತಿಂಗಳು ಮೇ 9 ನೇ ತಾರೀಖಿನಂದು ನಡೆಯಲಿರುವ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪನವರ ಅಭಿಮಾನೋತ್ಸವ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಶ್ರೀ @BYVijayendra , ಲೋಕಸಭಾ ಸದಸ್ಯರುಗಳಾದ ಶ್ರೀ @govind_karjol , ಶ್ರೀ @BYRBJP, ಮಾಜಿ ಸಚಿವರುಗಳಾದ ಶ್ರೀ ಬಿ.ಶ್ರೀರಾಮುಲು, ಶ್ರೀ ಅರಗ ಜ್ಞಾನೇಂದ್ರ, ಶ್ರೀ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಶ್ರೀ ತಿಪ್ಪಾರೆಡ್ಡಿ ಸೇರಿದಂತೆ ಪಕ್ಷದ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.
Basavaraj S Bommai tweet mediaBasavaraj S Bommai tweet mediaBasavaraj S Bommai tweet media
ಕನ್ನಡ
0
4
34
778
Basavaraj S Bommai
Basavaraj S Bommai@BSBommai·
ನಾವು ಮಾಡಿರುವ ಸಾಧನೆಗಳು ಮತ್ತು ಚುನಾವಣೆಯಲ್ಲಿ ಸಂಘಟಿತವಾಗಿ ನಡೆಸಿದ ಪ್ರಚಾರದ ಪರಿಣಾಮವಾಗಿ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಸಾಧಿಸುವ ವಿಶ್ವಾಸ ಇದೆ. ಅಲ್ಲದೇ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿಯೂ ಬಿಜೆಪಿ ಗೆಲ್ಲುತ್ತದೆ ಎಂದು ಎಲ್ಲ ಸಮೀಕ್ಷೆಗಳು ಸೂಚಿಸುತ್ತಿವೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪರಿವರ್ತನೆ ಸಂಭವಿಸಲಿದೆ. ಭಾರತದ ರಾಜಕೀಯ ದಿಕ್ಕುಸೂಚಿಯನ್ನು ಬದಲಾಯಿಸುವಂತಹ ಫಲಿತಾಂಶ ಹೊರಬರುತ್ತದೆ. ಚುನಾವಣೆಯನ್ನೂ ಪ್ರಾಚೀನಕಾಲಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ತಂತ್ರಜ್ಞಾನ ಬಹಳಷ್ಟು ಮುಂದೆ ಹೋಗಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಕೂಡಾ ಹಲವು ಚುನಾವಣೆಗಳಾಗಿವೆ. ಕಾಂಗ್ರೆಸ್ ಪಕ್ಷ ಸೋಲುತ್ತಿರುವುದರಿಂದ ಬ್ಯಾಲೇಟ್ ಪೇಪರ್ ಕಡೆಗೆ ಹೋಗುತ್ತಿದೆ. ಆದರೆ, ಬ್ಯಾಲೆಟ್ ಪೇಪರ್ ನಲ್ಲಿ ಮೋಸ ಮಾಡಿ ಗೆದ್ದು ಈಗ ಸೋತಿರುವುದು ಕಾಂಗ್ರೆಸ್ ಗೆ ಮುಖಭಂಗ ಆಗಿದೆ.
ಕನ್ನಡ
2
5
18
513
Basavaraj S Bommai
Basavaraj S Bommai@BSBommai·
ಇಲ್ಲಿ ಎಲ್ಲವೂ ಮಾನವೀಯತೆಯ ಮಾರುಕಟ್ಟೆ. ಅಂತಃಕರಣವೇ ಮುಖ್ಯ ಎಂಬ ಮೌಲ್ಯವನ್ನು ನೀವು ಬೆಳೆಸುತ್ತಿದ್ದೀರಿ. ಇಂತಹ ಸಂಸ್ಕಾರದಲ್ಲಿ ಓದಿದವರು ನಿಜವಾದ ಸಾಧಕರಾಗಿ ಬೆಳೆಯಬೇಕು. ಸಾಧನೆಯ ಮುಂದೆ ಯಶಸ್ಸು ಬಹಳ ಸಣ್ಣದು. ಸಾಧನೆ ಎಂದರೆ ನಮ್ಮ ಶಕ್ತಿ ಇತರರಿಗೆ ಸಹಾಯವಾಗಬೇಕು; ಸಮುದಾಯಕ್ಕೆ, ನಿರ್ಗತಿಕರಿಗೆ ಉಪಕಾರವಾಗಬೇಕು. ಅದೇ ನಿಜವಾದ ಸಾಧನೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನೇ ನಿಜವಾದ ಸಾಧಕ. ಈ ಮಾತನ್ನು ನಾನು ಹೇಳುತ್ತಿರುವುದೇ ಪರಮಪೂಜ್ಯರನ್ನು ನೋಡಿದಾಗ ಅವರು ನಿಜಕ್ಕೂ ಸಾಧಕರು ಎಂಬ ಭಾವನೆ ಬರುತ್ತದೆ. ಅಂತಹ ಸಾಧನೆಯನ್ನು ಪರಮಪೂಜ್ಯರು ನಿರಂತರವಾಗಿ ಮಾಡುತ್ತಿದ್ದಾರೆ. ಕೊಪ್ಪಳ ವಿದ್ಯಾಕಾಶಿಯಾಗಿ ಇಡೀ ಜಗತ್ತಿನಲ್ಲಿ ಬೆಳಗಲಿ.
ಕನ್ನಡ
0
2
7
294
Basavaraj S Bommai
Basavaraj S Bommai@BSBommai·
ನಮ್ಮ ಭಾರತದ ಭವಿಷ್ಯ ಕರ್ನಾಟಕದ ಭವಿಷ್ಯ ವಿದ್ಯಾಕೇಂದ್ರಗಳಲ್ಲಿ ಇದೆ. ಆದರಲ್ಲೂ ಗವಿ ಸಿದ್ದೇಶ್ವರ ಮಠದ ಪರಮಪೂಜ್ಯರ ವಿಶೇಷತೆ ಏನು ಎಂದರೆ ಜ್ಞಾನವನ್ನೂ ಕೊಡುತ್ತಾರೆ. ವಿದ್ಯೆಯನ್ನೂ ಕೊಡುತ್ತಾರೆ. ಅದರ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಕೊಡುತ್ತಾರೆ. ಸಂಸ್ಕಾರ ಸಂಸ್ಕೃತಿ ಇಲ್ಲದ ಮನುಷ್ಯ ಜನ್ಮ ಜನ್ಮವೇ ಅಲ್ಲ. ಒಬ್ಬ ವ್ಯಕ್ತಿ ಏಕಾಗ್ರತೆಯಿಂದ ಗುರಿಯನ್ನು ಸಾಧನೆ ಮಾಡಲು ಹೊರಟಾಗ ಅದರಲ್ಲಿ ಯಾವುದೇ ರೀತಿಯ ಬೇಧ ಭಾವ ಇರುವುದಿಲ್ಲ. ಗುರುಗಳು 2021-22 ರಿಂದ ಪ್ರಾರಂಭವಾಗಿರುವ ಈ ಸಂಸ್ಥೆ ಕಟ್ಟುವಲಿ ಎಕಾಗ್ರತೆ ಮತ್ತು ಗುರಿ ಇತ್ತು ಅದಕ್ಕಾಗಿ ಈ ಸಾಧನೆ ಆಗಿದೆ. ಕನಸು ಗುರಿ ಇರಬೇಕು. ಅದರ ಜೊತೆ ಸಂಕಲ್ಪ ಇರಬೇಕು. ಆ ಸಂಕಲ್ಪ ಇದ್ದಾಗ ಗುರಿ ಮುಟ್ಟಲು ಸಾಧ್ಯ ಇದೆ.
ಕನ್ನಡ
0
2
8
389
Basavaraj S Bommai
Basavaraj S Bommai@BSBommai·
ಒಂದು ಕಾಲ ಇತ್ತು ಯಾರ ಬಳಿ ಭೂಮಿ ಇತ್ತು ಅವರು ಜಗತ್ತು ಆಳುತ್ತಿದ್ದರು. ಅದಕ್ಕೆ ನಮ್ಮ ರಾಜಮಹಾರಾಜರು ಭೂಮಿಗಾಗಿ ಯುದ್ಧ ಮಾಡುತ್ತಿದ್ದರು. ಮತ್ತೊಂದು ಕಾಲ ಯಾರ ಬಳಿ ದುಡ್ಡಿದೆ. ಅವರು ಜಗತ್ತು ಆಳುತ್ತಿದ್ದರು. ಕರ್ನಾಟಕಕ್ಕಿಂತ ಚಿಕ್ಕದಿರುವ ಇಂಗ್ಲೆಂಡ್ 139 ದೇಶಗಳನ್ನು ಆಳಿದರು. ಆದರೆ, 21 ನೇ ಶತಮಾನ ದುಡ್ಡಿದ್ದವರು, ಹಣ ಇದ್ದವರದಲ್ಲ ಯಾರ ಬಳಿ ಜ್ಞಾನ ಇದೆ ಅವರು ಜಗತ್ತನ್ನು ಆಳುತ್ತಾರೆ. ಒಳ್ಳೆಯ ಕೆಲಸವನ್ನು ತಡ ಮಾಡದೇ ಮಾಡಬೇಕು. ಒಳ್ಳೆಯ ಕೆಲಸಕ್ಕೆ ಸಮಯ ಹೋದರೆ ಮತ್ತೆ ಆ ಕೆಲಸ ಮಾಡಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ನಾನು ಒಂದು ಸಣ್ಣ ಸಹಾಯ ಮಾಡಿದೆ. ಆ ಒಂದು ಸಣ್ಣ ಸಹಾಯ ಇವತ್ತು ಅಭೂತಪೂರ್ವ ಸಂಸ್ಥೆಯಾಗಿ ಬೆಳೆದಿದೆ.
ಕನ್ನಡ
1
6
26
1.2K
Basavaraj S Bommai
Basavaraj S Bommai@BSBommai·
ಇಂದು ಕೊಪ್ಪಳದ ಕೋಳೂರು - ಕಾಟ್ರಳ್ಳಿ ಗ್ರಾಮದಲ್ಲಿ ಶ್ರೀ ಗವಿಸಿದ್ದೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜಿನ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆನು. ಈ ಸಂಧರ್ಭದಲ್ಲಿ ಶ್ರೀ ಮ.ನಿ.ಪ್ರ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಗವಿಮಠ ಕೊಪ್ಪಳ ಶ್ರೀಗಳು ಸೇರಿದಂತೆ ನಾಡಿನ ಹಲವಾರು ಪರಮಪೂಜ್ಯರು ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
Basavaraj S Bommai tweet mediaBasavaraj S Bommai tweet mediaBasavaraj S Bommai tweet mediaBasavaraj S Bommai tweet media
ಕನ್ನಡ
1
4
43
1K
Basavaraj S Bommai
Basavaraj S Bommai@BSBommai·
ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಕಾಂ ಗಾಂಧಿ ಮನಸ್ಸು ಯಾರು ಗೆಲ್ಲುತ್ತಾರೆ ಅವರು ಸಿಎಂ ಆಗುತ್ತಾರೆ. ಇದು ಪ್ರಜಾಪಭುತ್ವದ ವ್ಯವಸ್ಥೆಗೆ ನಾಚಿಗೇಡಿನ ಸಂಗತಿ. ಸಿದ್ದರಾಮಯ್ಯ ಅವರ ಕಳೆದ ಬಜೆಟ್ ನಲ್ಲಿ ಒದಗಿಸಿದ್ದನ್ನು ಸುಮಾರು 14 ಸಾವಿರ ಕೋಟಿ ಬಳಕೆ ಮಾಡಿಲ್ಲ. ಅದರ ಹಿಂದಿನ ವರ್ಷವೂ ಕೂಡ ಸುಮಾರು 10 ಸಾವಿರ ಕೋಟಿ ಬಳಕೆ ಮಾಡಿಲ್ಲ. ರಾಜಕೀಯವಾಗಿ ತಿಕ್ಕಾಟ ಮಾಡಿದರೆ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ. ಸಿಎಂ ಒಂದು ಹೇಳಿದರೆ ಡಿಸಿಎಂ ಒಂದು ಹೇಳುತ್ತಾರೆ, ಜನರ ದೃಷ್ಟಿಯಿಂದ ಈ ಸರ್ಕಾರ ಸಂಪೂರ್ಣ ನಿಂತು ಹೋಗಿದೆ.
ಕನ್ನಡ
7
8
53
2.4K
Basavaraj S Bommai
Basavaraj S Bommai@BSBommai·
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ'ದ ಶುಭಾಶಯಗಳು. ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಪತ್ರಿಕಾ ಸ್ವಾತಂತ್ರ್ಯ ಅತ್ಯಗತ್ಯ ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸುತ್ತಿರುವ ಎಲ್ಲಾ ಪತ್ರಕರ್ತರಿಗೆ ವಂದನೆಗಳು. #WorldPressFreedomDay
Basavaraj S Bommai tweet media
ಕನ್ನಡ
0
1
11
353
Basavaraj S Bommai
Basavaraj S Bommai@BSBommai·
ಮಹಿಳೆಯರ ಬಗ್ಗೆ ನಮ್ಮ ಧರ್ಮದಲ್ಲಿ ಗೌರವ ಇದೆ. ಮಹಿಳೆಯನ್ನು ದೇವಿಯ ಸ್ಥಾನದಲ್ಲಿ ನೋಡುತ್ತೇವೆ. ಅದೇ ಭಾವನೆ ಇತರ ಧರ್ಮದಲ್ಲಿ ಇರಬೇಕೆಂದು ತ್ರಿಬಲ್ ತಲಾಖ್ ಅನ್ನು ಮೋದಿಯವರು ತೆಗೆದು ಹಾಕಿದರು. ಅಲ್ಪ ಸಂಖ್ಯಾತರ ಮತ ಪಡೆಯುವ ಕಾಂಗ್ರೆಸ್‌ವರಿಗೆ ಈ ವಿಚಾರ ಬರಲಿಲ್ಲ. ಡಿಲಿಮಿಟೇಷನ್ ಆದರೆ ಕಾಗ್ರೆಸ್ ನವರು ದಕ್ಷಿಣದಲ್ಲಿ ಸೀಟು ಕಡಿಮೆಯಾಗುತ್ತವೆ ಎಂದು ಹೇಳುತ್ತಾರೆ. ಮೋದಿಯವರು ತಂದಿರುವ ಕಾಯ್ದೆಯಲ್ಲಿ ಎಲ್ಲ ರಾಜ್ಯದಲ್ಲಿ ಶೇ 50 ರಷ್ಟು ಸೀಟುಗಳು ಹೆಚ್ಚಳವಾಗುತ್ತವೆ. ಈಗ ಕಾಂಗ್ರೆಸ್‌ನವರು ಮಾಡುತ್ತಿರುವ ವಾದದಂತೆ ಮಾಡಿದರೆ ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ಸೀಟುಗಳು ಕಡಿಮೆಯಾಗಲಿವೆ. ಅದಕ್ಕೆ ಕಾಂಗ್ರೆಸ್‌ನವರೇ ಕಾರಣರಾಗುತ್ತಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕಾಲದಲ್ಲಿ ಸಂಸತ್ತಿನಲ್ಲಿ ಮೂರನೆ ಎರಡು ಭಾಗ ಬಹುಮತ ಇದ್ದರೂ ಅವರು ಮಹಿಳಾ ಮಿಸಲಾತಿ ಜಾರಿಗೆ ತರಲಿಲ್ಲ.
ಕನ್ನಡ
0
1
13
706
Basavaraj S Bommai
Basavaraj S Bommai@BSBommai·
ಭೇಟಿ ಪಡಾವೊ ಬೇಟಿ ಬಚಾವೊ ಅದಕ್ಕೆ ಭಾರತದಲ್ಲಿ ಅಡಿಪಾಯ ಹಾಕಿದ್ದು ಮಾಜಿ ಮುಖ್ಯಮಂತಿ ಯಡಿಯೂರಪ್ಪ ಅವರು., ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೆ ತಂದು ಹೆಣ್ಣು ಮಗು ಹುಟ್ಟಿದಾಗ ಒಂದು ಲಕ್ಷ ರೂ. ಡಿಪಾಜಿಟ್ ಇಡಲಾಗಿತ್ತು. ಈಗ ಸುಮಾರು 40 ಲಕ್ಷ ಹೆಣ್ಣು ಮಕ್ಕಳು ಹದಿನೆಂಟು ವರ್ಷ ಪೂರೈಸಿದ್ದಾರೆ. ಅವರಿಗೆ ಒಂದು ಲಕ್ಷ ಸಿಗುತ್ತಿದೆ. ಅವರು ಶಾಲೆಗೆ ಹೋಗುತ್ತಿದ್ದಾರೆ. ಮಹಿಳೆಯರು ಶಾಲೆ ಬಿಡಬಾರದು ಎಂದು ಸೈಕಲ್ ಕೊಟ್ಟರು. ನನ್ನ ಅವಧಿಯಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿಗೆ ತಂದಿದ್ದೆ. ಹೆಣ್ಣು ಮಕ್ಕಳು ಸ್ವಯಂ ಉದ್ಯೋಗ ಮಾಡಬೇಕೆಂದು ತಂದಿದ್ದೆ. ನರೇಂದ್ರ ಮೋದಿಯವರು ಕೇಂದ್ರದಲ್ಲಿ ಸಂಜೀವಿನಿ ಎನ್ನುವ ಕಾರ್ಯಕ್ರಮ ಕರ್ನಾಟಕದಲ್ಲಿ 10 ಲಕ್ಷ ಮಹಿಳೆಯರಿಗೆ ಅನುಕೂಲವಾಗಿದೆ.
ಕನ್ನಡ
0
4
15
544
Basavaraj S Bommai
Basavaraj S Bommai@BSBommai·
ಕರ್ನಾಟಕದ ಇತಿಹಾಸದಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮ ನಾರಿಶಕ್ತಿಯ ಪ್ರತೀಕ. ರಾಣಿ ಅಬ್ಬಕ್ಕ, ಒನಕೆ ಓಬವ್ವ, ಹಲವಾರು ಹೆಸರುಗಳಿವೆ. ಆಧ್ಯಾತ್ಮದಲ್ಲಿ ಯಾರಿಗೂ ಕಡಿಮೆ ಇಲ್ಲದ ಅಕ್ಕ ಮಹಾದೇವಿ, ಸೇರಿ ಮುಂತಾದವರಿದ್ದಾರೆ. ನರೇಂದ್ರ ಮೋದಿಯವರಿಂದ ಮಾತ್ರ ಮಹಿಳೆಯರಿಗೆ ಮೀಸಲಾತಿ ಕೊಡಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ. 2023 ರಲ್ಲಿ ನಮ್ಮದು ಮೂರನೇ ಎರಡಷ್ಟು ಬಹುಮತ ಇರದಿದ್ದರೂ ಎಲ್ಲ ಪಕ್ಷಗಳ ಬೆಂಬಲದಿಂದ ಈಗಾಗಲೇ ಶೇ 33 ರಷ್ಟು ಮೀಸಲಾತಿ ಕೊಡಲು ತೀರ್ಮಾನ ಮಾಡಿದ್ದಾರೆ. ಅದನ್ನು ಯಾವುದೇ ಸರ್ಕಾರ ಇದ್ದರೂ ಜಾರಿ ಮಾಡಲೇಬೇಕಾಗುತ್ತದೆ. ಅದನ್ನು 2034 ಕ್ಕೆ ಮಾಡಲು ತೀರ್ಮಾಣ ಮಾಡಿದ್ದರು. ಆದರೆ, ಮೋದಿಯವರು 2029 ಕೆ ಜಾರಿಗೆ ತರಲು ಪ್ರಯತ್ನ ಮಾಡಿದರು. ಆದರೆ, ಪ್ರತಿಪಕ್ಷಗಳು ಅದನ್ನು ಹತ್ಯೆ ಮಾಡಿದವು. ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಭ್ರೂಣ ಹತ್ಯೆ ಎಂದು ಕರೆದರು. ಕಾಂಗ್ರೆಸ್ ನವರು ಮಹಿಳೆಯರ ರಾಜಕೀಯ ಶಕ್ತಿಗೆ ಭ್ರೂಣ ಹತ್ಯೆ ಮಾಡಿದ್ದಾರೆ. ನರೇಂದ್ರ ಮೋದಿಯವರು ಯಾವುದೇ ಕೆಲಸ ಕೈಗೆತ್ತಿಕೊಂಡರೆ ಅದನ್ನು ಮಾಡಿಯೇ ಮಾಡುತ್ತಾರೆ. ಮೋದಿಯವರು 2029 ಕ್ಕೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದೆ ತರುತ್ತಾರೆ ಎನ್ನುವ ವಿಶ್ವಾಸ ಇದೆ. ಅದಕ್ಕೆ ಶಕ್ತಿ ತುಂಬಲು ನಾವು ಇದನ್ನು ಎಲ್ಲರ ಮನೆ ಮನೆಗೆ ತಲುಪಿಸಬೇಕು. ವಿರೋಧ ಮಾಡಿದವರನ್ನು ಕಟಕಟೆಯಲ್ಲಿ ನಿಲ್ಲಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ದೊಡ್ಡ ದ್ರೋಹ ಮಾಡಿದೆ.
ಕನ್ನಡ
2
1
32
708
Basavaraj S Bommai
Basavaraj S Bommai@BSBommai·
ರಾಜ್ಯದಲ್ಲಿ ಕೊಲೆ ಸುಲಿಗೆ ಪ್ರತಿ ದಿನ ಲವ್ ಜಿಹಾದ್, ಮಹಿಳಾ ಹತ್ಯೆಗಳು ನಡೆಯುತ್ತಿವೆ. ನಮ್ಮ ಮಹಿಳೆಯರು ಮೈಸೂರು, ಮುಂಬೈಗೆ ಹೋಗುತ್ತಿದ್ದಾರೆ. ರಾಜ್ಯ ಸರ್ಕಾರ ಮಹಿಳೆಯರ ರಕ್ಷಣೆಗೆ ಏನೂ ಮಾಡುತ್ತಿಲ್ಲ. ನಮ್ಮ ಹೆಣ್ಣು ಮಕ್ಕಳು ಶಾಲೆಗೆ ಹೋದರೆ, ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಬರುವ ಭರವಸೆ ಇಲ್ಲ. ರಾಜ್ಯದಲ್ಲಿ ಅನೀತಿ, ಅತ್ಯಾಚಾರ ನಿಲ್ಲಬೇಕಾದರೆ ನಮ್ಮ ರಕ್ಷಣೆ ಮಾಡಿಕೊಳ್ಳಲು ನಾವು ಸಿದ್ದರಿದ್ದೇವೆ. ನಮಗೆ ಅಧಿಕಾರ ಕೊಡಿ, ವಿಧಾನಸಭೆ, ಲೋಕಸಭೆಯಲ್ಲಿ ಸ್ಥಾನ ಕೊಡಿ ಎಂದು ನಾರಿ ಶಕ್ತಿ ಕೂಗಿ ಕೂಗಿ ಹೇಳುತ್ತಿದೆ.
ಕನ್ನಡ
0
2
8
613