
ʻʻಸರ್ಕಾರಿ ಕಾಲೇಜುಗಳು ಬೇರೆ ಕಾಲೇಜುಗಳಿಗಿಂತ ಕಡಿಮೆಯಿಲ್ಲʼʼ ಇದು ರಾಜ್ಯದ ಸರ್ಕಾರಿ ಕಾಲೇಜುಗಳ ವಿಜ್ಞಾನ ವಿಭಾಗದ ಟಾಪರ್ ಜ್ಯೂಡಿತ್ ಜೆಸ್ಸಿಕಾ ಪಿಂಟೋ ಅವರ ಹೆಮ್ಮೆಯ ನುಡಿ. ಹಾಸನ ಜಿಲ್ಲೆ ಅರಸಿಕೆರೆಯ ಬಿ.ಎಚ್. ರಸ್ತೆಯಲ್ಲಿರುವ ಬಾಲಕರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜ್ಯೂಡಿತ್ ಜೆಸ್ಸಿಕಾ ಪಿಂಟೋ, ವಿಜ್ಞಾನ ವಿಭಾಗದಲ್ಲಿ 600ಕ್ಕೆ 593 ಅಂಕಗಳನ್ನು ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಕೀರ್ತಿ ಇವರದಾಗಿದೆ. ಶಿಸ್ತು ಮತ್ತು ಕಠಿಣ ಪರಿಶ್ರಮವಿದ್ದರೆ ಸರ್ಕಾರಿ ಕಾಲೇಜುಗಳಲ್ಲಿಯೂ ಉನ್ನತ ಸಾಧನೆ ಸಾಧ್ಯ ಎಂದು ತೋರಿಸಿಕೊಟ್ಟ ಜ್ಯೂಡಿತ್ ಜೆಸ್ಸಿಕಾ ಪಿಂಟೋ, ಅವರ ಪೋಷಕರಿಗೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅರಸಿಕೆರೆ ಸರ್ಕಾರಿ ಕಾಲೇಜಿನ ಎಲ್ಲಾ ಉಪನ್ಯಾಸಕರಿಗೆ ಹೃತ್ಪೂರ್ವಕ ಅಭಿನಂದನೆಗಳು!
"Government colleges are second to none!" – A proud statement from Judith Jessica Pinto, the Science topper among state government college students. Judith Jessica Pinto, a student at the Government Boys' PU College on B.H. Road, Arsikere, Hassan, has secured an incredible 593/600 in the Science stream. She holds the distinction of being the highest scorer in the Science stream among all government college students in the state. Her success is a testament to the fact that with discipline and hard work, one can achieve greatness in government institutions. Heartiest congratulations to Judith Jessica Pinto, her proud parents, and the dedicated faculty of the Arsikere college for their commitment to excellence!
#SuccessStory #Hassan #GovernmentCollege #ScienceTopper #Inspiration #GirlsEducation #Shalashikshana #GovernmentSchoolsofKarnataka #2ndPUC2026
ಕನ್ನಡ





















