Shreeganesh Hegde

3K posts

Shreeganesh Hegde banner
Shreeganesh Hegde

Shreeganesh Hegde

@ShreeganeshH

Katılım Ağustos 2015
129 Takip Edilen124 Takipçiler
Shreeganesh Hegde retweetledi
Madhukara R Maiya 🇮🇳
Madhukara R Maiya 🇮🇳@madhumaiya·
ಯಾಕೆ?ಹತ್ತಂಬೊತ್ತಾನೆ ಶತಮಾನದ ಆದಿಯಲ್ಲಿಯೇ ಗೋವಿಂದಬಟ್ಟರು ಶಿಶುನಾಳ ಶರೀಫರಿಗೆ ಉಪನಾಯನಮಾಡಿ ಸಂಧ್ಯಾವಂದನೆ ಕಲಿಸಿಲ್ಲವ?ಗೊತ್ತಿಲ್ಲದೆ ಇದ್ದರೆ ಸಂತ ಶಿಶುನಾಳ ಚಲನ ಚಿತ್ರವನ್ನೊಮ್ಮೆ ನೋಡಿ. ಕೋನೆಗಳಿಗೆಯಲ್ಲಿ ಆತಂಕದಲ್ಲಿ CET ಪರೀಕ್ಷೆ ಬರೆಯಲು ನಿಂತಿದ್ದ ಅಸಹಾಯಕ 17 ವರ್ಷದ ಬಾಲಕನ ಮೈಮೇಲಿದ್ದ ಜನಿವಾರ ತುಂಡರಿಸಿ ವಿಕೃತಿ ಮೆರೆಯುವವರು ಅದೇನೋ ದೊಡ್ಡ ಸಾಹಸ ಮಾಡಿದ್ದೇವೆ ಯೆಂದುಕೊಳ್ಳಬೇಡಿ. ನಿಮ್ಮ ಮನೆಯ ಮಕ್ಕಳನ್ನೂ CET ಬರೆಯಲು ಪ್ರೇರೇಪಿಸಿ, ಜನವಾರ ಹಾಕಿದ್ದ ಹುಡುಗನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ರ್ಯಂಕ್ ಪಡೆಯಲು ಸಹಕರಿಸಿ. ಅವನು ಜನಿವಾರವನ್ನಾದರೂ ಹಾಕಿಕೊಳ್ಳಲಿ,ಉಡುದಾರವನ್ನಾದರೂ ಹಾಕಿಕೊಳ್ಳಲಿ, ಅದನ್ನು ತುಂಡರಿಸಲು CET ನಿಯಮಾವಳಿಯಲ್ಲಿ ಇದೆಯೇ, ಅಥವಾ ಇಲ್ಲವೇ ಎಂಬುದಷ್ಟೇ ಪ್ರಶ್ನೆ. ಅಂಬೇಡ್ಕರ್ ಸಂವಿಧಾನ ಭಾರತಕ್ಕೆ ಇರುವುದೊಂದೆ. ಬ್ರಹ್ಮಣರಿಗೊಂದು, ಬ್ರಹ್ಮಣೇತರರಿಗೆ ಇನ್ನೊಂದು ಅಂತ ಭಾಗ ಒಂದು, ಭಾಗ ಎರಡು ಎಂದೇನಿಲ್ಲ.
ಕನ್ನಡ
2
16
74
2.1K
Shreeganesh Hegde
Shreeganesh Hegde@ShreeganeshH·
@Subhash_mandya @rangaswamy8108 ಜಾತಿ ಆಧರಿತ ಮೀಸಲಾತಿ ಇಟ್ಟುಕೊಂಡು ಜಾತಿ ಪದ್ಧತಿಯನ್ನು ಹೇಗೆ ತೆಗೆಯಲು ಸಾಧ್ಯ? ಜಾತಿ ಪದ್ಧತಿ ನಿರ್ಮೂಲನೆ ಎನ್ನುವುದು ಒಂದು ಕ್ಷಣದಲ್ಲಿ ಆಗುವ ಬದಲಾವಣೆ ಅಲ್ಲ, ಎಲ್ಲೆಡೆ ಸಮಾನತೆ ಇದ್ದರೆ ಹಂತಹಂತವಾಗಿ ಜಾತಿ ಪದ್ಧತಿ ನಿರ್ಮೂಲನೆ ಸಾಧ್ಯವಾಗುತ್ತದೆ.... ಅಲ್ಲವೇ?
ಕನ್ನಡ
0
0
0
9
ಸುಭಾಷ್ ಚಂದ್ರ | subhash chandra
@ShreeganeshH @rangaswamy8108 ಜಾತಿ ಪದ್ಧತಿ ಮೊದಲು ಬಂದಿದ್ದು, ಹಾಗಾಗಿ ಜಾತಿ ಪದ್ಧತಿ ಮೊದಲು ಸಮಾಜದಿಂದ ತೆಗೆದು ಹಾಕಿ ನಂತರ ಮೀಸಲಾತಿ ಸೌಲಭ್ಯ ತೆಗೆದು ಹಾಕುವ.... ಏನಂತೀರಿ? ನಿಮ್ಮ ಮಾಹಿತಿಗಾಗಿ, ನಮ್ಮ ದೇಶದಲ್ಲಿ ಬ್ರಾಹ್ಮಣರು ಸೇರಿದಂತೆ ಎಲ್ಲಾ ಜಾತಿಯವರು ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
ಕನ್ನಡ
1
0
1
14
ರಂಗಸ್ವಾಮಿ N
ರಂಗಸ್ವಾಮಿ N@rangaswamy8108·
ಮಾಂಸದ ಅಂಗಡಿ ಮುಂದೆ ತೂಗು ಹಾಕಿದ ಮಾಂಸ ನೋಡಿದ್ರೆ ಮಕ್ಕಳ ಮನಸ್ಸು ಹಾಳಾಗುತ್ತದಂತೆ! ಇದು ನಿಮ್ಮ ದೊಡ್ಡ ವಾದ. ಒಪ್ಪೋಣ. ಆದ್ರೆ ಒಂದೇ ಪ್ರಶ್ನೆ ಸ್ವಾಮಿಗಳೇ / ನೀತಿಪಾಠ ಹೇಳುವವರೇ 👇 ಮಠಗಳಲ್ಲಿ, ದೇವಸ್ಥಾನಗಳಲ್ಲಿ, ಆಶ್ರಮಗಳಲ್ಲಿ ನೀವು ಮಾಡೋ 👉 ಪಂಕ್ತಿ ಭೇದ 👉 ಜಾತಿ ಭೇದ 👉 ಮೇಲು–ಕೀಳು ಆಚರಣೆಗಳು 👉 ಒಬ್ಬರಿಗೆ ಒಳಗೆ, ಇನ್ನೊಬ್ಬರಿಗೆ ಹೊರಗೆ ಅನ್ನೋ ಮಾನಸಿಕ ಗೋಡೆಗಳು ಇವೆಲ್ಲಾ ನೋಡುತ್ತಾ ಬೆಳೆದ ಮಕ್ಕಳ ಮನಸ್ಸಿನ ಮೇಲೆ ಯಾವ ಕೆಟ್ಟ ಪರಿಣಾಮವೂ ಬೀರಲ್ಲ ಅಲ್ವಾ? ಮಾಂಸ ಕಂಡ್ರೆ ಕ್ರೂರತೆ ಕಲಿಯುತ್ತಾರಂತೆ… ಆದ್ರೆ 👉 ಮನುಷ್ಯ ಮನುಷ್ಯನಿಗೆ ಅಸ್ಪೃಶ್ಯ 👉 ಒಬ್ಬನಿಗೆ ಅನ್ನ, ಇನ್ನೊಬ್ಬನಿಗೆ ಅಪಮಾನ 👉 ಜನ್ಮದ ಆಧಾರದಲ್ಲಿ ಗೌರವ–ಅಗೌರವ ಇವೆಲ್ಲಾ ಮಕ್ಕಳಿಗೆ ಮಾನವೀಯತೆ ಕಲಿಸುತ್ತದೆಯಾ? ಅಥವಾ ದ್ವೇಷ, ಅಹಂಕಾರ, ಜಾತಿ ವಿಷ ತುಂಬುತ್ತದೆಯಾ? ನೈತಿಕತೆ ಬಗ್ಗೆ ಮಾತನಾಡುವವರು ಮೊದಲು 👉 ನಿಮ್ಮ ಆಚರಣೆಗಳನ್ನು ತಿದ್ದಿಕೊಳ್ಳಿ 👉 ನಿಮ್ಮ ಮಠಗಳ ಗೋಡೆಗಳೊಳಗಿನ ಅಸಮಾನತೆಗಳನ್ನು ಪ್ರಶ್ನಿಸಿ ಮಾಂಸ ತಿನ್ನೋದು–ತಿನ್ನದಿರೋದು ವ್ಯಕ್ತಿಗತ ಆಯ್ಕೆ. ಆದ್ರೆ ಮನುಷ್ಯನಿಗೆ ಮನುಷ್ಯನೇ ಶತ್ರು ಆಗೋ ವ್ಯವಸ್ಥೆ ಇದು ಸಮಾಜಕ್ಕೆ ವಿಷ. ಮಕ್ಕಳ ಮನಸ್ಸಿನ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ, 👉 ಮೊದಲು ಜಾತಿ ಭೇದ ಕೊನೆಗಾಣಿಸಿ 👉 ಮಾನವೀಯತೆಯನ್ನು ಮೊದಲ ಪಾಠವಾಗಿ ಕಲಿಸಿ ಮಾಂಸ ಅಲ್ಲ, 👉 ಅಸಮಾನತೆಯೇ ಸಮಾಜದ ನಿಜವಾದ ಕ್ರೂರತೆ. #ದ್ವಂದ್ವನೀತಿ #ಮಾನವೀಯತೆ #ಜಾತಿಭೇದನಿಲ್ಲದಸಮಾಜ #ಆಹಾರವೈಯಕ್ತಿಕಆಯ್ಕೆ
ರಂಗಸ್ವಾಮಿ N tweet media
ಕನ್ನಡ
46
82
425
16.3K
Hank Janardhan Pym
Hank Janardhan Pym@dr_hankjpym·
@ShreeganeshH @rangaswamy8108 ನನ್ನ ಪ್ರಕಾರ reservation qouta, ನಮ್ಮ ಪೂರ್ವಜರು ಮಾಡಿದ ಕರ್ಮಕ್ಕೆ ನಮಗೆ ಪ್ರತಿಫಲ
ಕನ್ನಡ
1
0
1
31
Shreeganesh Hegde retweetledi
Basanagouda R Patil (Yatnal)
Basanagouda R Patil (Yatnal)@BasanagoudaBJP·
ಶಾಲೆಯಲ್ಲಿ ಮಕ್ಕಳ ಸಂಖ್ಯೆ, ಹಾಜರಾತಿ ಹೆಚ್ಚಿಸಲು ಗುಣಮಟ್ಟದ ಶಿಕ್ಷಣ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಸೃಜನಶೀಲ ಬೋಧನಾ ವಿಧಾನವನ್ನು ಪರಿಚಯಿಸಬೇಕೇ ಹೊರತು ಶಿಕ್ಷಕರನ್ನು ಅಧ್ಯಯನದ ಸಲುವಾಗಿ ವಿದೇಶಕ್ಕೆ ಕಳುಹಿಸುವುದಲ್ಲ . ಸರ್ಕಾರಕ್ಕೆ ಶಿಕ್ಷಕರ ಮೇಲೆ ಅಷ್ಟೊಂದು ಕಾಳಜಿಯಿದ್ದರೆ ಅವರಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಲಿ ಹಾಗೂ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಿ. ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸುವುದರಿಂದ ಯಾರಿಗೂ ಉಪಯುಕ್ತ/ಪ್ರಯೋಜನ ಇರುವುದಿಲ್ಲ. ಶಿಕ್ಷಣ ಸಚಿವರು ಪ್ರಬುದ್ಧರಾಗಿ ಯೋಚಿಸಬೇಕೇ ಹೊರತು ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡಬಾರದು.
Basanagouda R Patil (Yatnal) tweet media
ಕನ್ನಡ
3
8
106
3K
Shreeganesh Hegde
Shreeganesh Hegde@ShreeganeshH·
@DEEPUVAJRAMUNI ಅದು ಹಾಗಲ್ಲ ಗುರೂ... ಬೊಗಳೊದಾದ್ರೆ registration, permission ಎಲ್ಲಾ ಬೇಕಾಗುತ್ತೆ... ಯಾರ ತಂಟೆಗೂ ಹೋಗದೆ ತಮ್ಮಷ್ಟಕ್ಕೆ ತಾವೇ ದೇಶ ಹಾಗೂ ಸಮಾಜ ಸೇವೆ ಮಾಡಲು ಅದೆಲ್ಲ ಬೇಕಾಗಲ್ಲ
ಕನ್ನಡ
0
0
1
10
DEEPU GOWDRU
DEEPU GOWDRU@DEEPUVAJRAMUNI·
ಇತ್ತೀಚಿನ ದಿನಗಳಲ್ಲಿ ನಾಯಿಗಳಿಗೂ ರಿಜಿಸ್ಟ್ರೇಷನ್‌ ನಂಬರ್‌ ಇದೆ... ಆದರೆ 100 ವರ್ಷದ RSS ಗೆ ಇಲ್ಲ. ನಾಯಿಗಿಂತ ಕಡೆಯಾಗಿ ಹೋಯ್ತಲ್ಲ ಚೇ.... #rss
DEEPU GOWDRU tweet media
ಕನ್ನಡ
207
51
473
18.8K
Shreeganesh Hegde
Shreeganesh Hegde@ShreeganeshH·
@ChowkidarPraka @publictvnews ಕನಿಷ್ಠ ಕಠಿಣ ಪ್ರತಿಕ್ರಿಯೆಯನ್ನಾದರೂ ಕೊಡಬಹುದಿತ್ತು ಅಲ್ವಾ sir...
ಕನ್ನಡ
1
0
0
18
Shreeganesh Hegde retweetledi
ನಿರ್ಮಿತ್
ನಿರ್ಮಿತ್@RuralGene·
@publictvnews ನೌಕರರನ್ನ ಸರ್ಕಾರದ ಗುಲಾಮರಂತೆ ನಡೆಸಿಕೊಳ್ಳುವ ಸರ್ಕಾರದ ಧೋರಣೆ ‌ಬದಲಾಗಬೇಕು. ಆರ್ ಎಸ್ ಎಸ್‌‌ ರಾಷ್ಟ್ರದ ಹಿತಾಸಕ್ತಿ ಮೊದಲು ಇಟ್ಟುಕೊಂಡು, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡ ಉತ್ಕೃಷ್ಟ ಸಂಘಟನೆ. ಈ ದೇಶದ ಸಂಸ್ಕತಿ ಮೌಲ್ಯಗಳ ಉಳಿಸಿ ಬೆಳಸುತ್ತಿರುವ ದೇಶಭಕ್ತರ ಸಂಘಟನೆ. ಅಮಾನತು ದುರದೃಷ್ಟಕರ @BJP4Karnataka @BYVijayendra fight
ಕನ್ನಡ
1
1
11
862
Shreeganesh Hegde
Shreeganesh Hegde@ShreeganeshH·
@HescomHubli       ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲೂಕು ಹೊನ್ನಾವರ ವಿಭಾಗದ section officer (9480881902) ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕರೆಗಳನ್ನು ಸ್ವೀಕರಿಸುವುದು ತುಂಬಾ ವಿರಳ, ಒಮ್ಮೆ ಕರೆಯನ್ನು ಸ್ವೀಕರಿಸಿದರು ಸಹ ಬೇಜವಾಬ್ದಾರಿಯುತವಾದ ಹಾರಿಕೆ ಉತ್ತರವನ್ನು ನೀಡುತ್ತಾರೆ.
ಕನ್ನಡ
0
0
0
9
Shreeganesh Hegde
Shreeganesh Hegde@ShreeganeshH·
@HescomHubli ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ಹೊಸಮಠ ಎಂಬ ಸ್ಥಳದಲ್ಲಿ ನಿನ್ನೆಯಿಂದ ವಿದ್ಯುತ್ ಸರಬರಾಜು ಇರುವುದಿಲ್ಲ,ವಿಷಯವನ್ನು section officer ಹೊನ್ನಾವರ (9480881902)  ಇವರ ಬಳಿ ಹೇಳಿದಾಗ ಬೇಜವಾಬ್ದಾರಿಯುತವಾಗಿ ಮಾತನಾಡುತ್ತಾರೆ ಹಾಗೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ.
ಕನ್ನಡ
0
0
0
10
Shreeganesh Hegde
Shreeganesh Hegde@ShreeganeshH·
@CMofKarnataka ಹಾಗೆಯೇ ಶರಾವತಿ ಪಂಪೆಡ್ ಸ್ಟೋರೇಜ್ ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟು ಸಹಸ್ರಾರು ಪ್ರಾಣಿ ಹಾಗೂ ಸಸ್ಯ ಸಂಕುಲವನ್ನು ಸಂರಕ್ಷಿಸಿ. #SaveSharavati #StopSharavariPumpedStorage
ಕನ್ನಡ
0
0
0
5
CM of Karnataka
CM of Karnataka@CMofKarnataka·
ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಮಾಹಿತಿ ಇಂದಿನ ಪತ್ರಿಕೆಗಳಲ್ಲಿ #ಕನ್ನಡಸುದ್ದಿ
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
1
2
23
2K
Shreeganesh Hegde
Shreeganesh Hegde@ShreeganeshH·
@CMofKarnataka @siddaramaiah ಹಾಗೆಯೇ ಶರಾವತಿ ಪಂಪೆಡ್ ಸ್ಟೋರೇಜ್ ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟು ಸಹಸ್ರಾರು ಪ್ರಾಣಿ ಹಾಗೂ ಸಸ್ಯ ಸಂಕುಲವನ್ನು ಸಂರಕ್ಷಿಸಿ. #SaveSharavati #StopSharavariPumpedStorage
ಕನ್ನಡ
0
0
0
2
CM of Karnataka
CM of Karnataka@CMofKarnataka·
ಇಂದು ಬೆಂಗಳೂರು ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಯಲ್ಲಿ ಮುಖ್ಯಮಂತ್ರಿ @siddaramaiah ಅವರ ಮಾತುಗಳು: • ಬೆಂಗಳೂರು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ವಿಶ್ವದ ಹಲವು ದೇಶಗಳ ಜನರು ಇಲ್ಲಿ ಬಂಡವಾಳ ಹೂಡಿಕೆ ಮಾಡಿರುವುದು ಮಾತ್ರವಲ್ಲ, ಇಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇಂದು ಬೆಂಗಳೂರಿನ ಜನಸಂಖ್ಯೆ ಸುಮಾರು 1.40 ಕೋಟಿ ಇದೆ. ಇಂತಹ ಬೃಹತ್‌ ನಗರದ ಸಮರ್ಪಕ ಆಡಳಿತ ಕೇವಲ ಒಂದು ಪಾಲಿಕೆಯಿಂದ ಸಾಧ್ಯವಿಲ್ಲ ಎಂಬ ಚರ್ಚೆ ಇತ್ತು. • ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಹೆಚ್ಚು ಕಾರ್ಪೊರೇಶನ್‌ ರಚನೆ ಸಾಧ್ಯತೆಗಳ ಕುರಿತು ವರದಿ ನೀಡಲು ಸಮಿತಿ ರಚಿಸಿದ್ದೆ. ಸಮಿತಿ ಮಧ್ಯಂತರ ವರದಿಯನ್ನು ಸಹ ನೀಡಿತ್ತು. ಆದರೆ ನಂತರ ಬಂದ ಸರ್ಕಾರಗಳಲ್ಲಿ ಈ ಕುರಿತು ಯಾವುದೇ ತೀರ್ಮಾನ ಆಗಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಸಮಿತಿ ಪುನರ್ರಚಿಸಿದೆವು. ಇದೀಗ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಸ್ವೀಕರಿಸಿ ನಾವು ಕಾನೂನು ತಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಿದ್ದೇವೆ. ಇದೀಗ ಐದು ನಗರಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. • ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮೇ 15 ರಂದು ಜಾರಿಗೆ ಬಂತು. ಜನರಿಗೆ ಪೂರಕವಾದ, ಅವರ ಆಶೋತ್ತರಗಳನ್ನು ಈಡೇರಿಸುವ ಆಡಳಿತ ನೀಡುವ ಉದ್ದೇಶದಿಂದ ಪ್ರಜಾಪ್ರಭುತ್ವದ ಆಶಯಕ್ಕೆ ಅನುಗುಣವಾಗಿ ಬಿಜಿಎ ರಚಿಸಿದ್ದೇವೆ. ಅಧಿಕಾರದ ವಿಕೇಂದ್ರೀಕರಣ ಇದರಿಂದ ಸಾಧ್ಯವಾಗಲಿದೆ. • ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮುಂದಿನ ದಿನಗಳಲ್ಲಿ ಬೆಂಗಳೂರಿನ ನಾಗರಿಕರಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವುದು, ಸಮರ್ಪಕ ಕಸ ವಿಲೇವಾರಿ, ಸಂಚಾರ ದಟ್ಟಣೆ ಕಡಿಮೆ ಮಾಡುವುದು, ರಸ್ತೆ, ಚರಂಡಿ ವ್ಯವಸ್ಥೆ ಚೆನ್ನಾಗಿರುವಂತೆ ಮಾಡಲಿದೆ. ಬೆಂಗಳೂರು ನಗರವನ್ನು ಚೊಕ್ಕಟವಾಗಿ ಇಡಲು, ನಗರದ ಸೌಂದರ್ಯ ಹೆಚ್ಚಿಸಲು ಮತ್ತು ಎಲ್ಲಾ ಐದು ನಗರ ಪಾಲಿಕೆಗಳ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. • ಈ ಎಲ್ಲಾ ಕಾರ್ಯಕ್ಕೆ ಸರ್ಕಾರದ ಜೊತೆಗೆ ಸಮನ್ವಯ ಅಗತ್ಯ. ಮುಂದಿನ ದಿನಗಳಲ್ಲಿ ಎಲ್ಲಾ ಸಂಬಂಧಪಟ್ಟ ಇಲಾಖೆಗಳು, ಬೆಂಗಳೂರು ನಾಗರಿಕರಿಗೆ ಸೇವೆ ಒದಗಿಸುತ್ತಿರುವ ಬಿಡಿಎ, ಬಿಡಬ್ಲುಎಸ್‌ಎಸ್‌ಬಿ, ಬೆಸ್ಕಾಂ, ಬಿಎಂಆರ್‌ಸಿಎಲ್‌ನಂತಹ ಸಂಸ್ಥೆಗಳು ಜಿಬಿಎ ಜತೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಿವೆ. • ಐದು ನಗರಪಾಲಿಕೆಗಳಿಗೆ ಸಮರ್ಪಕವಾದ ಆಡಳಿತ ಕಚೇರಿಗಳನ್ನು ನಿರ್ಮಿಸಲು ಸ್ಥಳವನ್ನು ಗುರುತಿಸಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ಸೂಚನೆ ನೀಡಿದ್ದೇನೆ. ಆಯಾ ಕಾರ್ಪೊರೇಶನ್‌ಗಳು ತಮ್ಮ ಹಂತದಲ್ಲಿಯೇ ಕಸ ವಿಲೇವಾರಿ ಸಮರ್ಪಕವಾಗಿ ಇರುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದೇನೆ. • ಎಲ್ಲಾ ನಗರಸಭೆ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು. ಕಸ ವಿಲೇವಾರಿ, ಸ್ವಚ್ಚತೆಗೆ ಆದ್ಯತೆ ನೀಡಬೇಕು. ಫುಟ್‌ಪಾತ್‌ಗಳು ಸಾಧ್ಯವಾದಷ್ಟು ವಿಸ್ತಾರವಾಗಿರುವಂತೆ ನೋಡಿಕೊಳ್ಳಬೇಕು. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾದರೆ ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ. ಇದಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ನೀಡಿದ್ದೇನೆ. • ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೊ ಲೈನ್‌ನಲ್ಲಿ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಯನ್ನು ಹೆಚ್ಚಿಸುವ ಕುರಿತು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ಸಣ್ಣ ಬಸ್ಸುಗಳನ್ನು ನಿಯೋಜಿಸುವ ಬಗ್ಗೆ ಪರಿಶೀಲಿಸಲು ಸಾರಿಗೆ ಸಚಿವರಿಗೆ ಸೂಚನೆ. • ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಜನರಿಗೆ ಅತ್ಯುತ್ತಮ ನಾಗರಿಕ ಸೌಲಭ್ಯ, ಉತ್ತಮ ಆಡಳಿತ ನೀಡಬೇಕೆಂಬ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದ್ದೇನೆ. • ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಇಲ್ಲಿ ಅವಕಾಶವಿದೆ. ಆದರೆ ಕೆಲವು ಜನಪ್ರತಿನಿಧಿಗಳು ಈ ಅವಕಾಶ ಕಳೆದುಕೊಂಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ವಿರೋಧವಿರುವವರು, ಅಧಿಕಾರ ವಿಕೇಂದ್ರೀಕರಣಕ್ಕೆ ವಿರೋಧವಿರುವವರು ಈ ಸಭೆಯನ್ನು ಬಹಿಷ್ಕರಿಸಿದ್ದಾರೆ.
CM of Karnataka tweet media
ಕನ್ನಡ
3
7
72
5K
Shreeganesh Hegde
Shreeganesh Hegde@ShreeganeshH·
@siddaramaiah ಹಾಗೆಯೇ ಶರಾವತಿ ಪಂಪೆಡ್ ಸ್ಟೋರೇಜ್ ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟು ಸಹಸ್ರಾರು ಪ್ರಾಣಿ ಹಾಗೂ ಸಸ್ಯ ಸಂಕುಲವನ್ನು ಸಂರಕ್ಷಿಸಿ. #SaveSharavati #StopSharavariPumpedStorage
ಕನ್ನಡ
0
0
0
5
Siddaramaiah
Siddaramaiah@siddaramaiah·
ಕೆರೆಗಳಿಗೆ ನೀರು ತುಂಬಿಸುವುದರಲ್ಲಿ ಏಷ್ಯಾದಲ್ಲೇ ಉತ್ತಮ‌ ಕಾರ್ಯ ನಮ್ಮ ರಾಜ್ಯದಲ್ಲಿ ಆಗುತ್ತಿದೆ. ನಾಗರಿಕತೆ ಬೆಳೆದದ್ದು - ಉಳಿದಿರುವುದು ನೀರಿನಿಂದಲೇ. ಜನರಲ್ಲಿ ನೀರಿನ ಬಳಕೆ, ನೀರಿನ ಮೌಲ್ಯ ಮತ್ತು ಅಂತರ್ಜಲ ವೃದ್ಧಿ ಬಗ್ಗೆ ಸಚಿವ ಬೋಸರಾಜು ಅವರು ಇಲಾಖೆಯ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಇದು ಆರೋಗ್ಯಕರ ಸಂಗತಿ. ರಾಜ್ಯದಲ್ಲಿ 37 ಲಕ್ಷ ಬೋರ್ ವೆಲ್ ಗಳ ಮೂಲಕ ಅಂತರ್ಜಲ ಬಳಕೆ ಆಗುತ್ತಿದೆ. ದಾಖಲೆಗಳಲ್ಲಿ ಇಲ್ಲದ ಲಕ್ಷಾಂತರ ಅನಧಿಕೃತ ಬೋರ್ ವೆಲ್ ಗಳೂ ಇವೆ. ರಾಷ್ಟ್ರೀಯ ಸರಾಸರಿಗಿಂತ ಶೇ.8 ರಷ್ಟು ಹೆಚ್ಚಿನ‌ ಬಳಕೆ ಆಗುತ್ತಿದೆ ಎನ್ನುವ ವರದಿಗಳಿವೆ. 144 ತಾಲ್ಲೂಕುಗಳನ್ನು ಹೊರತು ಪಡಿಸಿ ಉಳಿದ ತಾಲ್ಲೂಕುಗಳಲ್ಲಿ ನೀರಿನ ಅಂತರ್ಜಲದ ಪ್ರಮಾಣ ಕೊರತೆ ಇದೆ. ಈ ಕಾರಣಕ್ಕೇ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಲ್ಯೂ ಯೋಜನೆ ಜಾರಿ ಮಾಡಲಾಯಿತು. ಇದರಿಂದ ಈಗ ಅಂತರ್ಜಲ ವೃದ್ಧಿಯಾಗಿದೆ. ಆದರೆ ಇದನ್ನೂ ವಿರೋಧಿಸುವವರು ಇದ್ದಾರೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಂತರ್ಜಲ ವೃದ್ಧಿಗೆ ಸಾವಿರಾರು ಕೋಟಿ ಖರ್ಚು ಮಾಡಿದ್ದೇವೆ. ಇದರಿಂದ ಅಂತರ್ಜಲ ಉತ್ತಮವಾಗಿ ವೃದ್ಧಿಯಾಗಿದೆ. - ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ "ನೀರಿದ್ದರೆ ನಾಳೆ" ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದೆ
Siddaramaiah tweet media
ಕನ್ನಡ
22
22
261
8.6K
Shreeganesh Hegde
Shreeganesh Hegde@ShreeganeshH·
@CMofKarnataka ಹಾಗೆಯೇ ಶರಾವತಿ ಪಂಪೆಡ್ ಸ್ಟೋರೇಜ್ ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟು ಸಹಸ್ರಾರು ಪ್ರಾಣಿ ಹಾಗೂ ಸಸ್ಯ ಸಂಕುಲವನ್ನು ಸಂರಕ್ಷಿಸಿ. #SaveSharavati #StopSharavariPumpedStorage
ಕನ್ನಡ
0
0
0
3
CM of Karnataka
CM of Karnataka@CMofKarnataka·
ಜನರಲ್ಲಿ ನೀರಿನ ಬಳಕೆ, ನೀರಿನ ಮೌಲ್ಯ ಹಾಗೂ ಅಂತರ್ಜಲ ವೃದ್ಧಿಯ ಬಗ್ಗೆ ಅರಿವು ಮೂಡಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ‘ನೀರಿದ್ದರೆ ನಾಳೆ’ ಎಂಬ ಮಹತ್ವದ ಜಲ ಅಭಿಯಾನಕ್ಕೆ ಮುಂದಾಗಿದೆ. ನೈಸರ್ಗಿಕವಾಗಿ ನಿರ್ಮಾಣಗೊಂಡ ಹಾಗೂ ಪೂರ್ವಜರು ನಿರ್ಮಿಸಿರುವ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಸಮೃದ್ಧ ಕರ್ನಾಟಕ ನಿರ್ಮಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ. ನೀರಿನ ಮಹತ್ವ ಸಾರುವ ಈ ಜಲಗೀತೆಯೊಂದಿಗೆ ʼನೀರಿದ್ದರೆ ನಾಳೆʼ ಅಭಿಯಾನ ಆರಂಭಿಸೋಣ. #NeeriddareNale #WaterIsFuture
ಕನ್ನಡ
2
1
30
2.2K
Shreeganesh Hegde
Shreeganesh Hegde@ShreeganeshH·
@CMofKarnataka @siddaramaiah ಹಾಗೆಯೇ ಶರಾವತಿ ಪಂಪೆಡ್ ಸ್ಟೋರೇಜ್ ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟು ಸಹಸ್ರಾರು ಪ್ರಾಣಿ ಹಾಗೂ ಸಸ್ಯ ಸಂಕುಲವನ್ನು ಸಂರಕ್ಷಿಸಿ. #SaveSharavati #StopSharavariPumpedStorage
ಕನ್ನಡ
0
0
0
2
CM of Karnataka
CM of Karnataka@CMofKarnataka·
ಇಂದು ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಹೀಗಿವೆ.. #CabinetDecision
CM of Karnataka tweet media
ಕನ್ನಡ
5
4
61
3.2K
CM of Karnataka
CM of Karnataka@CMofKarnataka·
ಮುಖ್ಯಮಂತ್ರಿ @siddaramaiah ಅವರು ಇಂದು ಸಣ್ಣ ನೀರಾವರಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ "ನೀರಿದ್ದರೆ ನಾಳೆ" ಕಾರ್ಯಕ್ರಮವನ್ನು ಉದ್ಘಾಟಿಸಿ, ಜಲಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು.‌ ಉಪಮುಖ್ಯಮಂತ್ರಿ @DKShivakumar, ಕಾನೂನು ಸಚಿವರಾದ @HKPatilINC, ಸಣ್ಣ ನೀರಾವರಿ ಸಚಿವರಾದ @NsBoseraju, ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ @eshwar_khandre, ಕೆಕೆಆರ್‌ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಮ್ಯಾಗ್ಸೆಸ್ಸೇ ಪ್ರಶಸ್ತಿ ಪುರಸ್ಕೃತ ಪರಿಸರವಾದಿ ರಾಜೇಂದ್ರ ಸಿಂಗ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
2
7
85
3.6K
Shreeganesh Hegde
Shreeganesh Hegde@ShreeganeshH·
@CMofKarnataka @siddaramaiah ಹಾಗೆಯೇ ಶರಾವತಿ ಪಂಪೆಡ್ ಸ್ಟೋರೇಜ್ ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟು ಸಹಸ್ರಾರು ಪ್ರಾಣಿ ಹಾಗೂ ಸಸ್ಯ ಸಂಕುಲವನ್ನು ಸಂರಕ್ಷಿಸಿ. #SaveSharavati #StopSharavariPumpedStorage
ಕನ್ನಡ
0
0
0
2
CM of Karnataka
CM of Karnataka@CMofKarnataka·
ಇಂದು ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಹೀಗಿವೆ.. #CabinetDecision
CM of Karnataka tweet mediaCM of Karnataka tweet media
ಕನ್ನಡ
3
2
23
3.4K
Shreeganesh Hegde
Shreeganesh Hegde@ShreeganeshH·
@eshwar_khandre ಹಾಗೆಯೇ ಶರಾವತಿ ಪಂಪೆಡ್ ಸ್ಟೋರೇಜ್ ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟು ಸಹಸ್ರಾರು ಪ್ರಾಣಿ ಹಾಗೂ ಸಸ್ಯ ಸಂಕುಲವನ್ನು ಸಂರಕ್ಷಿಸಿ. #SaveSharavati #StopSharavariPumpedStorage
ಕನ್ನಡ
0
0
0
2
Eshwar Khandre
Eshwar Khandre@eshwar_khandre·
ಪರಿಸರ ಸಂರಕ್ಷಣೆ- ನಮ್ಮೆಲ್ಲರ ಹೊಣೆ! ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಬಳ್ಳಾರಿಯಲ್ಲಿ ಚಾಲನೆ ನೀಡಿ ಮಾತನಾಡಿದೆನು. ಈ ಸಂದರ್ಭದಲ್ಲಿ ಬಳ್ಳಾರಿ ಮತ್ತು ರಾಯಚೂರು ವಿಭಾಗದ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿರುವ ವ್ಯಕ್ತಿಗಳು ಹಾಗೂ ಸಂಘ–ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ಹೃತ್ಪೂರ್ವಕ ಅಭಿನಂದನೆಗಳು. ಹಸಿರು, ಶುದ್ಧ ಕರ್ನಾಟಕದತ್ತ ನಮ್ಮ ಪ್ರಯತ್ನ ಸದಾ ಮುಂದುವರಿಯುತ್ತದೆ. #EnvironmentProtection #KSPCB
Eshwar Khandre tweet mediaEshwar Khandre tweet mediaEshwar Khandre tweet mediaEshwar Khandre tweet media
ಕನ್ನಡ
4
8
64
1.6K
Shreeganesh Hegde
Shreeganesh Hegde@ShreeganeshH·
@CMofKarnataka ಹಾಗೆಯೇ ಶರಾವತಿ ಪಂಪೆಡ್ ಸ್ಟೋರೇಜ್ ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟು ಸಹಸ್ರಾರು ಪ್ರಾಣಿ ಹಾಗೂ ಸಸ್ಯ ಸಂಕುಲವನ್ನು ಸಂರಕ್ಷಿಸಿ. #SaveSharavati #StopSharavariPumpedStorage
ಕನ್ನಡ
0
0
0
3
CM of Karnataka
CM of Karnataka@CMofKarnataka·
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ "ನೀರಿದ್ದರೆ ನಾಳೆ" ಕಾರ್ಯಕ್ರಮದ ಬಗೆಗಿನ ಪತ್ರಿಕಾ ವರದಿಗಳು #ಕನ್ನಡಸುದ್ದಿ
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
1
3
48
2.6K