M B Patil

19.5K posts

M B Patil banner
M B Patil

M B Patil

@MBPatil

Minister for Commerce & Industries, Infrastructure GoK | Educationist-Engineer-Basava Literature Enthusiast

ವಿಜಯಪುರ - Vijayapura, India Katılım Ekim 2014
1.4K Takip Edilen115.8K Takipçiler
Sabitlenmiş Tweet
M B Patil
M B Patil@MBPatil·
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes! An incredible story of a people’s movement: 1.5 crore trees planted, raising forest cover from just 0.17% to 2%. A true testament to political will, systemic action & the power of collective participation. Proud that Vijayapura’s green success is inspiring the world! My heartfelt thanks to all the stakeholders and the people of Vijayapura. nytimes.com/card/2025/09/0…
M B Patil tweet mediaM B Patil tweet mediaM B Patil tweet mediaM B Patil tweet media
English
127
332
1.8K
181.5K
M B Patil
M B Patil@MBPatil·
#ಬಬಲೇಶ್ವರ ಮತ ಕ್ಷೇತ್ರದ #ಯಕ್ಕುಂಡಿ ಗ್ರಾಮದಲ್ಲಿ ರೂ. 300 ಲಕ್ಷ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 34ರ ಯಕ್ಕುಂಡಿ, ಸಂಗಾಪುರ, ಶೇಗುಣಸಿ, ಕಾಖಂಡಕಿ ವರೆವಿಗೆ ವ್ಹಾಯಾ ಹರಳಯ್ಯನ ಗುಂಡನದವರೆವಿಗಿನ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದೆ. ಈ ಕುರಿತು ಇಂದಿನ ಕನ್ನಡಪ್ರಭ ವರದಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ಧೇನೆ.
M B Patil tweet media
ಕನ್ನಡ
0
1
11
140
M B Patil
M B Patil@MBPatil·
ಪೂಜ್ಯ ಸಿದ್ದೇಶ್ವರ ಸ್ವಾಮಿಗಳವರ ಚಿಂತನೆಗಳು ಮಣ್ಣಿನಿಂದಲೇ ಹಣ್ಣು, ದವಸ ಧಾನ್ಯಗಳು ಎಲ್ಲವೂ ಉಂಟಾಗುತ್ತವೆ. ಆದರೆ ಅವು ಒಂದರಂತೆ ಒಂದು ಇಲ್ಲ. ಎಲ್ಲವೂ ಮಣ್ಣಿನಿಂದಲೇ ಬಂದಿದ್ದರೂ, ಜೋಳ ತಿನ್ನುವಾಗ, ಗೋಧಿ ತಿನ್ನುವಾಗ ಅಥವಾ ಹಣ್ಣು ತಿನ್ನುವಾಗ ನಾವು ಮಣ್ಣನ್ನೇ ತಿನ್ನುತ್ತಿದ್ದೇವೆ ಎನ್ನಿಸುವುದಿಲ್ಲ. ಆದರೆ ಅದರಲ್ಲಿ ಮಣ್ಣು ಬಿಟ್ಟು ಬೇರೆ ಏನೂ ಇಲ್ಲ - ಎಲ್ಲವೂ ಮಣ್ಣಿನಲ್ಲಿಯೇ ಇದೆ! ಅದೇ ರೀತಿ, ಈ ಸೃಷ್ಟಿಯೆಲ್ಲವೂ ಭಗವಂತನಿಂದಲೇ ಉಂಟಾಗಿದೆ. ಆದರೆ ಅದನ್ನು ನೋಡಿದಾಗ ಭಗವಂತನೆಂದು ಅನಿಸದಂತೆ ಆಗಿದೆ! – ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು #SiddeshwaraSwamiji
ಕನ್ನಡ
0
2
14
258
M B Patil
M B Patil@MBPatil·
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಆನಂತರ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಮೈಸೂರು ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಜನ್ಮದಿನದಂದು ಗೌರವದ ನಮನಗಳು. ಪಂಡಿತ್ ನೆಹರು ಪ್ರಧಾನಿಯಾಗಿದ್ದಾಗ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಅಮೂಲ್ಯ ಸೇವೆ ಸಲ್ಲಿಸಿದ ಅವರು, ಬಳಿಕ ಮಧ್ಯಪ್ರದೇಶದ ರಾಜ್ಯಪಾಲರಾಗಿಯೂ ಪ್ರಭಾವಿ ಆಡಳಿತ ನೀಡಿದ್ದರು. ಅವರ ದೂರದೃಷ್ಟಿ, ನಿಷ್ಠೆ ಮತ್ತು ಜನಪರ ಕಾರ್ಯಶೈಲಿ ಎಲ್ಲರಿಗೂ ಪ್ರೇರಣೆಯಾಗಿದೆ. #KCReddy
M B Patil tweet media
ಕನ್ನಡ
3
3
20
298
M B Patil
M B Patil@MBPatil·
ಮದಗುಣಕಿ ಗ್ರಾಮದಲ್ಲಿ KSIIDC ಸಂಸ್ಥೆಯ ಸಿ.ಎಸ್.ಆರ್. ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ 5 ಕೊಠಡಿಗಳ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು ಇಂದು ಸಂಜೆ ಮಮದಾಪುರ ವಿರಕ್ತ ಮಠದ ಪೂಜ್ಯ ಗುರುಗಳಾದ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದಿಶೆಯಲ್ಲಿ ಈ ಹೊಸ ಕಟ್ಟಡ ಪ್ರಮುಖ ಹೆಜ್ಜೆಯಾಗಲಿದೆ. ಇದೇ ಸಂದರ್ಭದಲ್ಲಿನ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಗ್ರಾಮದ ವಿದ್ಯಾರ್ಥಿಗಳನ್ನು ಪ್ರೀತಿ ಪೂರ್ವಕವಾಗಿ ಅಭಿನಂದಿಸಲಾಯಿತು.
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
1
3
30
493
M B Patil
M B Patil@MBPatil·
#ಬಬಲೇಶ್ವರ ಮತಕ್ಷೇತ್ರದ #ಮದಗುಣಕಿ ಗ್ರಾಮದಲ್ಲಿ, ರಾಜ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ₹150 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ 3 ಕಿ.ಮೀ. ರಸ್ತೆ ಸುಧಾರಣಾ ಕಾಮಗಾರಿ ಹಾಗೂ ಗ್ರಾಮದೊಳಗೆ ₹50 ಲಕ್ಷ ವೆಚ್ಚದ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಈ ಕಾಮಗಾರಿ ಪೂರ್ಣಗೊಂಡ ಬಳಿಕ, ಸ್ಥಳೀಯರ ಸಂಚಾರ ಸುಗಮವಾಗುವುದರ ಜೊತೆಗೆ ಗ್ರಾಮೀಣ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ. ಮಮದಾಪುರ ವಿರಕ್ತ ಮಠದ ಪೂಜ್ಯ ಗುರುಗಳಾದ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
1
2
10
260
M B Patil
M B Patil@MBPatil·
ರೂ. 4 ಕೋಟಿ ಮೊತ್ತದ ದೇವರಗೆಣ್ಣೂರ–ಕಂಬಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೇವರಗೆಣ್ಣೂರ – ಕಂಬಾಗಿ ನಡುವಿನ 4 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಸಂಬಂಧ ಇಂದು ದೇವರಗೆಣ್ಣೂರ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು. ಕಬ್ಬು ಸೇರಿದಂತೆ ಕೃಷಿ ಉತ್ಪನ್ನಗಳ ಸುಗಮ ಸಾಗಾಟಕ್ಕೆ ಅನುಕೂಲವಾಗುವಂತೆ ರಸ್ತೆ ಭೂಭಾರ ಮಿತಿಯನ್ನು ಹೆಚ್ಚಿಸಲಾಗುವುದು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಿಗದಿತ ಅವಧಿಯಲ್ಲಿ ರಸ್ತೆಯನ್ನು ಸಾರ್ವಜನಿಕ ಸೇವೆಗೆ ಅರ್ಪಿಸುವ ಗುರಿ ಹೊಂದಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
1
4
31
559
M B Patil
M B Patil@MBPatil·
Supporting Merit, Enabling Dreams Extending financial assistance to meritorious yet economically challenged students who have secured MBBS seats under the government quota through NEET is a step towards ensuring that talent is never held back by financial barriers. At our residence in Vijayapura, cheques were handed over to support their tuition, hostel, and related expenses - helping them move forward with confidence in their medical journey. Education should never be hindered by financial constraints, and it is our responsibility to stand by deserving students. I encouraged them to pursue their medical education with dedication and purpose. Empowering our youth is key to building a stronger, healthier society. #MBBS
M B Patil tweet mediaM B Patil tweet mediaM B Patil tweet media
English
2
5
27
800
M B Patil
M B Patil@MBPatil·
ವಿಜಯಪುರಜಿಲ್ಲೆಯ ಗ್ರಾಮೀಣ ರಸ್ತೆಗಳಿಗೆ ಹೊಸ ಮೆರುಗು: ರೂ. 300 ಲಕ್ಷಗಳಲ್ಲಿ - ರಾ. ಹೆದ್ದಾರಿ 34ರ ಯಕ್ಕುಂಡಿ–ಕಾಖಂಡಕಿ ಮಾರ್ಗದ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ವಿಜಯಪುರ ತಾಲ್ಲೂಕಿನ ಜನತೆಯ ಬಹುದಿನಗಳ ನಿರೀಕ್ಷೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ 34ರಿಂದ ಹರಳಯ್ಯನಗುಂಡ ರಸ್ತೆಯವರೆಗೆ ಸುಧಾರಣಾ ಕಾಮಗಾರಿಗೆ ಯಕ್ಕುಂಡಿ ಗ್ರಾಮದಲ್ಲಿ ಇಂದು ಭೂಮಿಪೂಜೆ ನೆರವೇರಿಸಿದೆ. ಬಜೆಟ್: ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ಸುಮಾರು ₹3 ಕೋಟಿ ವೆಚ್ಚದ ಬೃಹತ್ ಯೋಜನೆ ಪ್ರಮುಖ ಮಾರ್ಗಗಳು: ಯಕ್ಕುಂಡಿ, ಸಂಗಾಪುರ, ಶೇಗುಣಸಿ ಹಾಗೂ ಕಾಖಂಡಕಿ ವಯ್ಯಾ ಹರಳಯ್ಯನಗುಂಡ ಈ ಕಾಮಗಾರಿ ಪೂರ್ಣಗೊಂಡ ನಂತರ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ಸುಲಭ ಸಂಚಾರ ಸಾಧ್ಯವಾಗಲಿದೆ.
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
1
8
34
612
M B Patil
M B Patil@MBPatil·
ಅನ್ನದಾತರ ಆಶೋತ್ತರಗಳಿಗೆ ಸ್ಪಂದಿಸಿ, ಜಲಸಂಪನ್ಮೂಲಗಳ ಪುನಶ್ಚೇತನಕ್ಕೆ ಬದ್ಧತೆ ತೋರಿ ಮುನ್ನಡೆಯುತ್ತಿದ್ದೇವೆ. ಮತ್ತಷ್ಟು ನೀರಾವರಿ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಲೋಹಗಾಂವದಲ್ಲಿ ಬಾಂದಾರ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಗೆ ತೆರಳಿದ ವೇಳೆ ನಮ್ಮ ರೈತರು ಎತ್ತಿನಬಂಡಿಯಲ್ಲಿ ಮೆರವಣಿಗೆ ಮಾಡಿ, ತುಲಾಭಾರ ಮಾಡಿದ್ದು ಮರೆಯಲಾಗದ ಮಹಾಕ್ಷಣಗಳು... @NsBoseraju
ಕನ್ನಡ
1
9
45
689
M B Patil
M B Patil@MBPatil·
ಆರ್ಥಿಕ ಸಂಕಷ್ಟದಲ್ಲಿದ್ದ ಇಬ್ಬರು MBBS ವಿದ್ಯಾರ್ಥಿಗಳ ಕೈ ಹಿಡಿದ BLDEA ವೈದ್ಯರಾಗುವ ಕನಸಿಗೆ ಬಡತನ ಅಡ್ಡಿಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದ ಸಂತೃಪ್ತಿ ನನ್ನದು. ಈ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುವ ವೈದ್ಯರಾಗಿ ರೂಪುಗೊಳ್ಳಲಿ ಎಂಬುದು ನಮ್ಮ ಆಶಯ. ಈ ಕುರಿತು ಇಂದಿನ ಮಾಧ್ಯಮದಲ್ಲಿ ಪ್ರಕಟಗೊಂಡಿರುವ ವರದಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. #MBBS
M B Patil tweet media
ಕನ್ನಡ
1
8
45
804
M B Patil
M B Patil@MBPatil·
ದೇವರ ಹಿಪ್ಪರಗಿ: ಮುಂದಿನ ಚುನಾವಣೆಗೆ ಇಂದಿನಿಂದಲೇ ತಯಾರಿ - ಒಗ್ಗಟ್ಟೇ ನಮ್ಮ ಶಕ್ತಿ! ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದೆ. ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ನಮ್ಮ ಪಕ್ಷ ಸದೃಢವಾಗಿಯೇ ಇದೆ. ಆದರೂ ಕಳೆದ ಎರಡು ಚುನಾವಣೆಯಲ್ಲಿ ಸೋಲು ಕಂಡಿದ್ದೇವೆ. ಅದರ ಕಾರಣಗಳನ್ನು ವಿವರಿಸಬೇಕಿಲ್ಲ - ಅದು ಎಲ್ಲರಿಗೂ ತಿಳಿದೇ ಇದೆ. ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳ ಜೊತೆಗೆ 2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು, ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕವೇ ಗೆಲುವು ಸಾಧಿಸಬಹುದು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಕೇವಲ ಭರವಸೆಗಳಲ್ಲ, ಅವು ಜನರ ಬದುಕನ್ನು ಬದಲಿಸುತ್ತಿರುವ ಕ್ರಾಂತಿಕಾರಿ ನಿರ್ಧಾರಗಳು. ನಾವು ನುಡಿದಂತೆ ನಡೆದು ತೋರಿಸಿದ್ದೇವೆ ಎಂಬ ವಿಶ್ವಾಸವನ್ನು ಜನರಲ್ಲಿ ಮತ್ತಷ್ಟು ಬಲಪಡಿಸಬೇಕು. ದೇವರ ಹಿಪ್ಪರಗಿಯ ಪ್ರತಿ ಹಳ್ಳಿಯಲ್ಲೂ, ಪ್ರತಿ ಮನೆಯಲ್ಲೂ ನಮ್ಮ ಸರ್ಕಾರದ ಜನಪರ ಯೋಜನೆಗಳ ಧ್ವನಿ ಮೊಳಗಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ನಮ್ಮ ಹೆಜ್ಜೆಯನ್ನು ತಡೆಯಬಾರದು. ನಾವು ಒಂದಾಗಿ ನಿಂತರೆ, 2028ರಲ್ಲಿ ವಿಜಯಪುರ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ನಮ್ಮ ವಿಜಯ ಪತಾಕೆ ಹಾರಲಿದೆ. ಇದೇ ವೇಳೆ, ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದು, ನಮ್ಮ ಶಕ್ತಿಗೆ ಮತ್ತಷ್ಟು ಬಲ ನೀಡಿತು.
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
1
4
41
885
M B Patil
M B Patil@MBPatil·
ದೇವರ ಹಿಪ್ಪರಗಿ: 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ ನೆರವೇರಿಸಿದೆ. ಆಧುನಿಕ ಸೌಲಭ್ಯಗಳಿಂದ ಸಜ್ಜುಗೊಂಡ 30 ಹಾಸಿಗೆಗಳ ಆಸ್ಪತ್ರೆ ಇದಾಗಿದ್ದು, ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಶಕ್ತಿಯುತ ಆಧಾರವಾಗಲಿದೆ. ಶಾಸಕರಾದ ಶ್ರೀ ರಾಜುಗೌಡ ಪಾಟೀಲರು, ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ವೈದ್ಯರು-ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉದ್ಘಾಟನಾ ಸಮಾರಂಭವನ್ನು ಯಶಸ್ವಿಗೊಳಿಸಿದರು.
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
1
9
61
1.5K
M B Patil
M B Patil@MBPatil·
ದೇವರ ಹಿಪ್ಪರಗಿ : ಪಟ್ಟಣ ಪಂಚಾಯತ್ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದ ಅಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲು! ಇಂದು ಪಟ್ಟಣ ಪಂಚಾಯತ್ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಆಡಳಿತ ವ್ಯವಸ್ಥೆಗೆ ಹೊಸ ಬಲ ನೀಡಲಾಯಿತು. ಈ ಮಹತ್ವದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಶ್ರೀ ರಾಜುಗೌಡ ಪಾಟೀಲ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಸಾಕ್ಷಿಯಾದರು. ಉದ್ಘಾಟನೆಗೂ ಮುನ್ನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವಪೂರ್ಣ ನಮನಗಳನ್ನು ಸಲ್ಲಿಸಿ, ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಸ್ಮರಿಸಲಾಯಿತು
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
1
6
65
1.4K
M B Patil
M B Patil@MBPatil·
ಪ್ರತಿಭೆಗೆ ಪ್ರೋತ್ಸಾಹ, ಭವಿಷ್ಯಕ್ಕೆ ಬಲ: ಇಬ್ಬರು ಬಡ ವಿದ್ಯಾರ್ಥಿಗಳ ಎಂಬಿಬಿಎಸ್ ಶಿಕ್ಷಣಕ್ಕೆ ಆರ್ಥಿಕ ನೆರವು ‘ನೀಟ್’ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿದ್ದರೂ ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದ ಇಬ್ಬರು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಿದ ತೃಪ್ತಿ ನನ್ನದು! ವಿಜಯಪುರ ಜಿಲ್ಲೆಯ ಆಲಮೇಲ ಗ್ರಾಮದ ಉದಯಕುಮಾರ ನಾರಾಯಣಕರ ಮತ್ತು ರತ್ನಾಪುರ ಗ್ರಾಮದ ಮನೋಹರ ಹರಗೆ ಅವರ ಎಂ.ಬಿ.ಬಿ.ಎಸ್ ಶಿಕ್ಷಣಕ್ಕೆ ಸಂಬಂಧಿಸಿದ ಬೋಧನಾ ಶುಲ್ಕ, ಊಟ ಹಾಗೂ ವಸತಿ (ಹಾಸ್ಟೆಲ್ ಮತ್ತು ಮೆಸ್) ಖರ್ಚಿಗೆ ಅಗತ್ಯವಿರುವ ಹಣದ ಚೆಕ್ಕುಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಶ್ರಮ ಮತ್ತು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಶಿಕ್ಷಣಕ್ಕಾಗಿ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಸದ್ಬಳಕೆ ಮಾಡಿಕೊಂಡು ಬಸವನಾಡಿಗೆ ಕೀರ್ತಿ ತರಬೇಕು ಎಂದು ಶುಭಹಾರೈಸಿದೆ. ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ, ಅಕೌಂಟ್ಸ್ ಸುಪರಿಂಟೆಂಡೆಂಟ್ ಶ್ರೀ ಎಸ್.ಎಸ್. ಪಾಟೀಲ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ವಿವರ ಮತ್ತು ನೆರವು: •ಉದಯಕುಮಾರ ನಾರಾಯಣಕರ (ಆಲಮೇಲ): ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (HIMS) ಸೀಟು ಪಡೆದಿರುವ ಈತನ ತಂದೆ-ತಾಯಿ ಕೃಷಿ ಕಾರ್ಮಿಕರು. ಈ ವಿದ್ಯಾರ್ಥಿಯ ಓದಿಗೆ ₹1,88,850 ಮೊತ್ತದ ಚೆಕ್ ನೀಡಲಾಯಿತು. ಮುಂದೆ 'ಚಿಕ್ಕಮಕ್ಕಳ ತಜ್ಞ'ನಾಗಿ ಸೇವೆ ಸಲ್ಲಿಸುವುದು ಈತನ ಗುರಿ. • ಕೃಷಿ ಕುಟುಂಬದ ಹಿನ್ನಲೆ ಹೊಂದಿರುವ ಮನೋಹರ ಹರಗೆ (ರತ್ನಾಪುರ): ಬೆಂಗಳೂರಿನ ಬಿ.ಎಂ.ಸಿ.ಆರ್.ಐ (BMCRI) ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ. ಈತನ ಶಿಕ್ಷಣಕ್ಕಾಗಿ ₹1,28,400 ಮೊತ್ತದ ಚೆಕ್ ವಿತರಿಸಲಾಯಿತು. ಈತ ಮುಂದೆ 'ಹೃದ್ರೋಗ ತಜ್ಞ'ನಾಗುವ ಕನಸು ಹೊಂದಿದ್ದಾನೆ. ನಮ್ಮ ಮಾನವೀಯ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳು ವೈದ್ಯರಾದ ಬಳಿಕ ಬಡವರ ಸೇವೆ ಮಾಡುವುದಾಗಿ ಭರವಸೆ ನೀಡಿದ್ದು ಸಂತಸ ಮೂಡಿಸಿತು. #MBBS #NEET
M B Patil tweet mediaM B Patil tweet mediaM B Patil tweet media
ಕನ್ನಡ
4
13
89
3.4K
M B Patil
M B Patil@MBPatil·
ವಿಜಯಪುರ ಜಿಲ್ಲೆಯ ವಿವಿಧೆಡೆ ಅಭಿವೃದ್ಧಿ ಕಾರ್ಯಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ತೋರಿದ ಪ್ರೀತಿ, ಅಭಿಮಾನ ಹಾಗೂ ಸನ್ಮಾನಗಳು ಮನಸಿಗೆ ತುಂಬಾ ಸ್ಪರ್ಶಿಸಿದವು. ಈ ಕುರಿತು ಇಂದಿನ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಹಂಚಿಕೊಳ್ಳುತ್ತಿರುವೆ...
M B Patil tweet media
ಕನ್ನಡ
0
5
40
579
M B Patil
M B Patil@MBPatil·
ಪವಾಡವಲ್ಲ - ಪರಿಶ್ರಮದ ಫಲ! 110 ವರ್ಷಗಳ ಭವ್ಯ ಇತಿಹಾಸವಿರುವ ಕೆಎಸ್&ಡಿಎಲ್ ಇದೀಗ ಮಹಾದಾಖಲೆ ಬರೆದಿದೆ. ವಹಿವಾಟು: ₹2,016 ಕೋಟಿ; ನಿವ್ವಳ ಲಾಭ: ₹507 ಕೋಟಿ ಗುಣಮಟ್ಟದ ಉತ್ಪನ್ನಗಳು, ದಕ್ಷ ಆಡಳಿತ ಮತ್ತು ದೂರದೃಷ್ಟಿಯ ಕಾರ್ಯಯೋಜನೆ ;ಇವೆಲ್ಲವೂ ಒಂದಾಗಿ ಈ ಸಾಧನೆಗೆ ದಾರಿ ಮಾಡಿಕೊಟ್ಟಿವೆ. ‘ಮೈಸೂರು ಸ್ಯಾಂಡಲ್ ಸೋಪ್’ ಎಂಬ ವಿಶ್ವಾಸದ ಚಿಹ್ನೆಯನ್ನು ಹೊತ್ತ ಈ ಸಂಸ್ಥೆ, ಇಂದು ದೇಶದಾದ್ಯಂತ ತನ್ನ ಪ್ರಭಾವವನ್ನು ಇನ್ನಷ್ಟು ವಿಸ್ತರಿಸುತ್ತಿದೆ. ಇದು ಪವಾಡವಲ್ಲ… ಶತಮಾನಗಳ ನಂಬಿಕೆ, ಕಾರ್ಮಿಕರ ಪರಿಶ್ರಮ ಮತ್ತು ಸಮರ್ಪಿತ ನಾಯಕತ್ವದ ಸಮೂಹ ಜಯ! @MysoreSandalIn @CSNadagoudaINC @siddaramaiah @DKShivakumar #mysoresandalsoap #ಸಾಧನೆಯಶಿಖರ
ಕನ್ನಡ
12
27
194
4.8K
M B Patil
M B Patil@MBPatil·
ಲೋಹಗಾಂವದಲ್ಲಿ ಬಾಂದಾರ ನಿರ್ಮಾಣಕ್ಕೆ ಭೂಮಿಪೂಜೆ “ವಿಜಯಪುರ ಜಿಲ್ಲೆ ಹಳ್ಳ ತುಂಬುವ ಯೋಜನೆ ದೇಶಕ್ಕೆ ಮಾದರಿ” ಸಣ್ಣ ನೀರಾವರಿ ಸಚಿವರಾದ ಶ್ರೀ ಬೋಸರಾಜು ಮೆಚ್ಚುಗೆ ಬತ್ತಿದ ಹಳ್ಳಗಳಿಗೆ ಜೀವಕಳೆ ನೀಡುವ ನಿಟ್ಟಿನಲ್ಲಿ ನಾವು ಕೈಗೊಂಡಿರುವ ಚೆಕ್ ಡ್ಯಾಂಗಳ ನಿರ್ಮಾಣದ ಅಭಿಯಾನ ಮುಂದುವರೆದಿದೆ. ಈ ದಿನ ವಿಜಯಪುರ ಜಿಲ್ಲೆಯ ಲೋಹಗಾಂವ, ಟಕ್ಕಳಕಿ, ಹುಬನೂರ, ಜಾಲಗೇರಿ, ಇಟ್ಟಂಗಿಹಾಳ, ಸಿದ್ದಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಹಳ್ಳಗಳಿಗೆ ಬಾಂದಾರ ನಿರ್ಮಿಸುವ ಕಾಮಗಾರಿಗೆ ಸಣ್ಣ ನೀರಾವರಿ, ವಿಜ್ಞಾನ & ತಂತ್ರಜ್ಞಾನ ಸಚಿವರಾದ ಶ್ರೀ ಎನ್. ಎಸ್. ಬೋಸರಾಜು ಅವರೊಂದಿಗೆ ಲೋಹಗಾಂವ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎನ್. ಎಸ್. ಬೋಸರಾಜು ಅವರು “ವಿಜಯಪುರ ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಹಳ್ಳ ತುಂಬುವ ಯೋಜನೆಯು ನೀರಿನ ಸಂರಕ್ಷಣೆ ಮತ್ತು ಭೂಗರ್ಭ ಜಲಮಟ್ಟವನ್ನು ಹೆಚ್ಚಿಸುವ ದಿಸೆಯಲ್ಲಿ ಅತ್ಯಂತ ಪರಿಣಾಮಕಾರಿ ಹೆಜ್ಜೆಯಾಗಿದ್ದು, ದೇಶಕ್ಕೆ ಮಾದರಿಯಾಗುವಂತಿದೆ” ಎಂದು ಅಭಿಮಾನದಿಂದ ನುಡಿದರು. 9 ಕೋಟಿ 78 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೊಂಡಿದ್ದು, ಇದರಿಂದಾಗಿ ಲೋಹಗಾಂವ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ರೈತರ ಕೃಷಿ, ಹೈನುಗಾರಿಕೆ, ತೋಟಗಾರಿಕೆಗಳಿಗೆ ಶಕ್ತಿ ತುಂಬಲಿದೆ. ಜನರ ಪ್ರೀತಿ ಮತ್ತು ಸಂಭ್ರಮ: ಕಾರ್ಯಕ್ರಮಕ್ಕೂ ಮುನ್ನ ರೈತ ಬಾಂಧವರು ನಮ್ಮನ್ನು ಅತ್ಯಂತ ಅಭಿಮಾನದಿಂದ ಎತ್ತಿನ ಗಾಡಿಯಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಬರಮಾಡಿಕೊಂಡರು. ಸುಮಂಗಲಿಯರು ಪೂರ್ಣಕುಂಭಗಳನ್ನು ಹಿಡಿದು ಸ್ವಾಗತಿಸಿದರು. ಕ್ಷೇತ್ರದಲ್ಲಿನ ನೀರಾವರಿ ಕ್ರಾಂತಿಯನ್ನು ಸ್ಮರಿಸಿದ ನಮ್ಮ ರೈತರು ಸಚಿವರಾದ ಶ್ರೀ ಬೋಸರಾಜು ಅವರಿಗೆ ಹಾಗೂ ನನಗೆ ಹಣ್ಣುಗಳ ಮೂಲಕ ತುಲಾಭಾರ ನೆರವೇರಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ. @NsBoseraju
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
1
10
54
1.4K
M B Patil
M B Patil@MBPatil·
Karnataka’s pride, Mysore Sandal - where legacy meets renewed purpose 2015–16 marked a landmark year in the journey of KS&DL - ₹2,016 crore turnover, ₹507 crore profit, and 48,496 MT production. From ₹1,000 crore in 105 years to crossing ₹2,000 crore in just 4 years, KSDL stands as a testament to what focused governance, efficiency, and clear vision can achieve - without adding new machinery or expanding the workforce. This milestone reflects our unwavering commitment to strengthening state PSUs and carrying their rich legacy forward with renewed strength. The upcoming manufacturing unit in Vijayapura opens a new chapter - bringing growth and new opportunities to the region. With firm resolve, we now look ahead to ₹3,000 crore by 2028 and ₹5,000 crore by 2030 - taking Karnataka’s legacy to even greater heights. #PinnacleOfAchievement #ಸಾಧನೆಯಶಿಖರ @MysoreSandalIn @CSNadagoudaINC #KSDL @siddaramaiah @DKShivakumar @INCKarnataka
English
1
9
65
1.3K
M B Patil
M B Patil@MBPatil·
ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ತೊರವಿ, ಭೂತನಾಳ, ಭರಟಗಿ, ಇಟ್ಟಂಗಿಹಾಳ, ವಿಠ್ಠಲವಾಡಿ, ಯತ್ನಾಳ, ಅರಕೇರಿ, ಸಿದ್ದಾಪುರ , ಜಾಲಗೇರಿ ಸೇರಿದಂತೆ ಬಹುಗ್ರಾಮದಲ್ಲಿನ ಹಳ್ಳಗಳಿಗೆ ಅಡ್ಡಲಾಗಿ ಚೆಕ್ ಡ್ಯಾಂ ಹಾಗೂ ರಿಚಾರ್ಜ್ ಶಾಪ್ಟ್ ಗಳ ನಿರ್ಮಾಣಕ್ಕೆ ಶ್ರೀ ಎನ್. ಎಸ್. ಬೋಸರಾಜು ಸಣ್ಣ ನೀರಾವರಿ, ವಿಜ್ಞಾನ & ತಂತ್ರಜ್ಞಾನ ಸಚಿವರೊಂದಿಗೆ ಬರಟಗಿ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿದೆ. ಸುಮಾರು ರೂ. 734.63 ಲಕ್ಷಗಳಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯು ಈ ಭಾಗದ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ಮತ್ತು ಕೃಷಿ ಚಟುವಟಿಕೆಗಳಿಗೆ ಆಸರೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. @NsBoseraju
M B Patil tweet mediaM B Patil tweet mediaM B Patil tweet mediaM B Patil tweet media
ಕನ್ನಡ
1
6
48
780
M B Patil
M B Patil@MBPatil·
Cabinet approval for ₹227 crore KS&DL unit in Vijayapura - a major boost to North Karnataka’s industrial growth. The State Cabinet has approved a new KS&DL manufacturing unit in Vijayapura with an investment of approximately ₹227 crore. There is strong demand for KS&DL products, including Mysore Sandal Soap, across North Karnataka and in neighbouring Telangana, Andhra Pradesh, and Maharashtra. Vijayapura is strategically located to meet this demand efficiently while reducing transportation costs. This unit will generate thousands of jobs for local youth and contribute significantly to regional economic development. @siddaramaiah @CSNadagoudaINC @MysoreSandalIn
M B Patil tweet media
English
5
18
85
2.1K