@siddaramaiah ಯಾರು ಏನೇ ಹೇಳಲಿ ಸಿದ್ದರಾಮಯ್ಯ ಜೀ ನಿಮ್ಮ ಯೋಜನೆಗಳು ಮತ್ತು ಗ್ಯಾರಂಟಿ ಯೋಜನೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಬಡವ ಬಲ್ಲಿದ ದೀನ ದಲಿತರಿಗೆ ಹಾಗೂ ಮಕ್ಕಳು ಇಲ್ಲದ ವೃದ್ಧರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ಧನ್ಯವಾದಗಳು ಸಿದ್ದು ಜೀ
ಅನಾರೋಗ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾದ ಈ ಬಡತಾಯಿಯ ಮಗನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
'ಗೃಹಲಕ್ಷ್ಮಿ ಯೋಜನೆ ದುಡ್ಡು ನಿನಗೆ ಬರುತ್ತೆ, ನಾನಿಲ್ಲ ಎಂದು ಚಿಂತಿಸಬೇಡ' ಎಂದು ಮಗನ ಮಾತನ್ನು ನೆನಪು ಮಾಡಿಕೊಂಡು ಆತನ ಶವದೆದುರು ತಾಯಿ ರೋದಿಸುತ್ತಿರುವುದನ್ನು ನೋಡಿ ಎದೆ ಭಾರವಾಯಿತು.
ಯಾವ ತಾಯಿಗೂ ಎದೆಯೆತ್ತರಕ್ಕೆ ಬೆಳೆದ ಮಗನ ಚಿತೆಗೆ ಅಗ್ನಿಸ್ಪರ್ಶ ಮಾಡುವ ಸ್ಥಿತಿ ಬಾರದಿರಲಿ.
ನಾವು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ ದಿನದಿಂದ ಇಂದಿನ ವರೆಗೆ ಕೆಲವರಿಂದ ಅಪಪ್ರಚಾರ, ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಲೇ ಇದೆ, ಇದಾವುದಕ್ಕೂ ನಾನು ತಲೆಕೆಡಿಕೊಂಡಿಲ್ಲ. ಕಾರಣ ಇಂತಹ ಲಕ್ಷಾಂತರ ಬಡತಾಯಂದಿರಿಗೆ ನಮ್ಮ ಯೋಜನೆ ಮೂರು ಹೊತ್ತು ನೆಮ್ಮದಿಯ ಅನ್ನ ನೀಡಿ ಬದುಕಿಗೆ ಆಧಾರವಾಗಿದೆ. ಬಡತನ, ಹಸಿವು, ಅನಾಥಭಾವ ಅನುಭವಿಸಿದವರಿಗಷ್ಟೇ ಅದರ ನೋವು, ಹತಾಶೆ ಅರಿವಾಗಲು ಸಾಧ್ಯ.
ಈ ತಾಯಿಯ ಜೊತೆ ನಮ್ಮ ಸರ್ಕಾರ ಇದೆ, ಮಗನ ಸಾವಿನ ದುಃಖದಿಂದ ಆದಷ್ಟು ಬೇಗ ಹೊರಬರಲಿ ಎಂದು ಹಾರೈಸುತ್ತೇನೆ.
#Gruhalaxmi
@dineshgrao ಮಾನ್ಯ
ಶ್ರೀ ದಿನೇಶ್ ಗುಂಡೂರಾವ್ ಜಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕೂಡಲೇ ಪರ್ಮನೆಂಟ್ ಮಾಡಿ ಮುಂದಿನ ದಿನಗಳಲ್ಲಿ ಬರುವಂತಹ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ದೊಡ್ಡ ಬೆಂಬಲ ನೀಡುತ್ತಾರೆ ಎಂಬುದು ನನ್ನ ಆಶಯ ಬಹಳಷ್ಟು ತೊಂದರೆಯಲ್ಲಿ ಇದ್ದಾರೆ ಸಿಬ್ಬಂದಿಗಳು ವೇತನ ತಾರತಮ್ಯ ನೀತಿ ಸರಿ ಪಡಿಸಬೇಕು
Held a meeting today with the office bearers of the Contract Employees Union working under Rashtriya Arogya Abhiyan at Arogya Soudha.
The meeting was held to address the problems of the contract employees. I have assured my support to the union and will discuss with the concerned authorities to fulfill their demands at the earliest.
Appreciated the role of Contract Employees and encouraged them to continue their selfless service to the public.
@dineshgrao ಮಾನ್ಯ ಆರೋಗ್ಯ ಸಚಿವರೇ NHM ಯೋಜನೆಯಡಿ ನರ್ಸಿಂಗ್ officer ಹತ್ತು ಹದಿನೈದು ವರ್ಷಗಳ ನಿರಂತರ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಹೆಚ್ಚಳ ಮತ್ತು ಸೇವಾ ಭದ್ರತೆ ಬಗ್ಗೆ ನಿಮ್ಮ ಕಾಳಜಿ ಇಲ್ಲ ಖಾಯಂ ಅಂತೂ ಮರೀಚಿಕೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಏನಾಯ್ತು ರೀ
@DrSudhakar_@narendramodi ಇದರಿಂದ ನಮ್ಮ ಹೈದರಾಬಾದ್ ಕರ್ನಾಟಕಕ್ಕೆ ನಯಾ ಪೈಸಾ ಉಪಯೋಗ ಇಲ್ಲ ಹಿಂದುಳಿದ ಭಾಗ ಹಾಗೆ ಹಿಂದುಳಿದಿದೆ ಇನ್ನೂ ಹತ್ತಕ್ಕೂ ಹೆಚ್ಚು ತಾಲೂಕು ರೈಲು ಹಳಿ ಕಂಡಿಲ್ಲ ಇನ್ನೂ ಧಮಾಕಾ ಎಲ್ಲಿಗೆ ಬಂತು ರೀ ಡಾಕ್ಟರ್ ಸುಧಾಕರ್ ರವರೆ ತಾರತಮ್ಯ ನೀತಿ ಎದ್ದು ಕಾಣುತ್ತದೆ .
ಕನ್ನಡಿಗರಿಗೆ ಟ್ರಿಪಲ್ ಧಮಾಕಾ!
ಎರಡು ವಂದೇ ಭಾರತ್ ರೈಲು ಹಾಗೂ ಒಂದು ಅಮೃತ್ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ರಾಜ್ಯಕ್ಕೆ ಸಂಪರ್ಕ ಕಲ್ಪಿಸಲಿರುವ ಮೂರು ನೂತನ ರೈಲುಗಳಿಗೆ ಪ್ರಧಾನಿ @narendramodi ಅವರು ಇಂದು ಚಾಲನೆ ನೀಡಲಿದ್ದಾರೆ.
ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ದಿಗೆ ಸದಾ ಆದ್ಯತೆ ನೀಡಿರುವ ಪ್ರಧಾನಿ ಮೋದಿಜಿ ಹಾಗೂ ಕೇಂದ್ರ ರೈಲ್ವೆ ಸಚಿವ ಶ್ರೀ @AshwiniVaishnaw ಅವರಿಗೆ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳು.
@dineshgrao
ಸರ್
NHM ಗುತ್ತಿಗೆ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅವರುಗಳನ್ನು ಖಾಯಂ ಮಾಡುತ್ತವೆ ಎಂದು ನಿಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದು ಇನ್ನೂ ಇದರ ಬಗ್ಗೆ ಸದನದಲ್ಲಿ ಚರ್ಚೆ ನಡೆಯಲಿಲ್ಲ ಮುಂದಿನ ನಡೆ ಏನು ಸರ್.
@DrHCMahadevappa
ಮಾನ್ಯರೇ
ದೇವದುರ್ಗ ವಿಧಾನ ಸಭಾ ಕ್ಷೇತ್ರದ ಗುಡ್ಡ ಗಾಡು ಪ್ರದೇಶ ಹೊಂದಿ ಕೊಂಡಿರುವ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮನಮರಡಿ ಗ್ರಾಮದಲ್ಲಿ ಒಂದು ಹೋಸ ವಸತಿ ಶಾಲೆ ಮುರಾರ್ಜಿ ದೇಸಾಯಿ ಅಥವಾ ಅಂಬೇಡ್ಕರ್ ವಸತಿ ಶಾಲೆ ಮಂಜೂರು ಮಾಡಿದ್ರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮನವಿಯಾಗಿದೆ.
@drmcsudhakar ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸೋಮನಮರಡಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಒಂದು ಪಿ.ಯು. Arts college ಅವಶ್ಯಕತೆ ಇದೆ SSLC ಮುಗಿದ ನಂತರ ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣಕ್ಕಾಗಿ ದೂರದ ಪಟ್ಟಣಕ್ಕೆ ಹೋಗಿ ಬರಲು ಆಗದೆ ಇರುವುದರಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ ಕಳಕಳಿಯ ಮನವಿ 🙏
ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆಯಲ್ಲಿ ಕೊಂಡೆನಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಹಾಗೂ ಮುಖಂಡರು ಇಂದು ನನ್ನನ್ನು ಭೇಟಿ ಮಾಡಿ ಸಂತಸ ಹಂಚಿಕೊಂಡು ಅಭಿನಂದನೆ ಸಲ್ಲಿಸಿದರು.
ಈ ಜಯಕ್ಕೆ ಶ್ರಮಿಸಿದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳು.
@mla_sudhakar ನಿಮ್ಮ ಅಳಿಲು ಸೇವೆ ಸಾಕು ಹೋಸ ಶಾಸಕರು ಇದ್ದಾರೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸೇವೆ ಮಾಡಲು ಹಿಂದೆ NHM ಸಿಬ್ಬಂದಿಗಳ ಸಮಸ್ಯೆ ಬಗೆಹರಿಸಿ ಬಿಟ್ಟ ಪಾಪ ವಿಶ್ರಾಂತಿ ತೆಗೆದುಕೊಳ್ಳಿ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ತಾಲ್ಲೂಕಿನಲ್ಲಿ ಇಂದು ತೆಲುಗು ಚಿತ್ರರಂಗದ ಹೆಸರಾಂತ ಹಾಸ್ಯ ನಟರಾದ ಶ್ರೀ ಬ್ರಹ್ಮಾನಂದಮ್ ಅವರು ಬಿಜೆಪಿ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.
#BJPWinningKarnataka#PoornaBahumata4BJP
@mla_sudhakar@narendramodi ಆಯ್ತು ಬಿಡಿ ಕರ್ನಾಟಕಕ್ಕೆ ನೆರೆಹಾವಳಿ ಬಂದಾಗ ರೈತರು ಸಂಕಷ್ಟದಲ್ಲಿ ಬಾರದೆ ಈಗ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಕಿವಿ ಮೇಲೆ ಹೂ ಇಡಲು ಬಂದರೆ ಎನ್ ಪ್ರಯೋಜನ ಸುಧಾಕರ್ ಅವರೇ ನಾಟಕ ಎಲ್ಲರಿಗೂ ಗೊತ್ತಿರುವ ಸಂಗತಿ
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಇಂದು ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಲು ಆಗಮಿಸಿದ್ದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಅವರನ್ನು ಸ್ವಾಗತಿಸಿದ ಕ್ಷಣ.
@mla_sudhakar ಸುಧಾಕರ್ ಸಚಿವರೆ ನಿಮಗೆ ಕಿವಿ ಇಲ್ಲ ನೋಡಲು ಕಣ್ಣು ಇಲ್ಲವೇ ರಾಜ್ಯದಲ್ಲಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಇಲ್ಲ ಎಲ್ಲರೂ ಫ್ರೀಡಂ ಪಾರ್ಕ್ ನಲ್ಲಿ ನಿರಂತರವಾಗಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ನಿಮಗೆ ಸಚಿವ ಸ್ಥಾನ ನಿಭಾಯಿಸಲು ಆಗಿಲ್ಲ ಅಂದ್ರೆ ರಾಜೀನಾಮೆ ನೀಡಿ ಮನೆಗೆ ಹೋಗಿ ರಾಜ್ಯದ ಬಡವರ ಜೀವನದ ಆಟ ಬೇ
ಚಿಕ್ಕಬಳ್ಳಾಪುರದಲ್ಲಿ ಇದೇ ಪ್ರಪ್ರಥಮ ಬಾರಿಗೆ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ವತಿಯಿಂದ ನಾಳೆ ಆಯೋಜಿಸಿರುವ 'ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ' ಪೂಜಾ ಕಾರ್ಯಕ್ರಮಕ್ಕೆ ನಡೆಯುತ್ತಿರುವ ಸಿದ್ಧತೆಗಳ ಅಪೂರ್ವ ನೋಟ.
ಸಮಯ: ನಾಳೆ ಸಂಜೆ 4ರಿಂದ ಪ್ರಾರಂಭ
ಸ್ಥಳ: ಸುಲಾಲಪ್ಪನ ದಿಣ್ಣೆ, ಚಿಕ್ಕಬಳ್ಳಾಪುರ ನಗರ
@mla_sudhakar ತಿಂಗಳ ಗಟ್ಟಲೆ ನಿಮ್ಮ ಇಲಾಖೆ ಸಿಬ್ಬಂದಿಗಳ ಬೇಡಿಕೆ ಬಗೆಹರಿಸದೆ ನಿಮಗೆ ಸ್ವಲ್ಪ ಆದರೂ ನಾಚಿಕೆ ಆಗುತ್ತೆ ಮಾನ ಮರ್ಯಾದೆ ಇದ್ದರೆ ಈಗೆ ಮಾಡುತ್ತಿರಲಿಲ್ಲ COVID ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಕಾರ್ಯನಿರ್ವಹಣೆ ನಿಯಂತ್ರಣ ವಿಚಾರದಲ್ಲಿ ನಿನಗೆ ಮನವಿತೆ ಇದೆಯೇ
@mla_sudhakar ಮಾನ್ಯ ಸುಧಾಕರ್ ಅವರೇ ಇಂತಹ ಒಂದು ಆದೇಶ ಮಾಡೊದು ಇಷ್ಟು ಬೇಕಿತ್ತಾ ಇವತ್ತು 7th class ಓದಿ ಆಶಾ ಕಾರ್ಯಕರ್ತೆಯರು ಹಾಗೂ ನರ್ಸ್ ಸಂಬಳದಲ್ಲಿ ವ್ಯತ್ಯಾಸ ಎನ್ ರೀ ಡಿಪ್ಲೊಮಾ ಕೋರ್ಸ್ ಗೆ ಡಾಕ್ಟರ್ ಡಿಗ್ರಿ ಗೆ ಬೆಲೆ ಇಲ್ಲವೇ..? ನಿಮಗೆ ಸಿಬ್ಬಂದಿಗಳ ವೇತನ ಹೆಚ್ಚಳ ಮತ್ತು ಖಾಯಂ ಮಾಡಲು ಹಣ ಇಲ್ಲಾಂದ್ರೆ ಸಾರ್ವಜನಿಕ ತೆರಿಗೆ ಎಲ್ಲಿ ಹೋಯಿತು
ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಶೇ.15ರಷ್ಟು ವೇತನ ಹೆಚ್ಚಿಸಿ ನಮ್ಮ ಸರ್ಕಾರ ಆದೇಶ ಮಾಡಿದ್ದು, NHM ಗುತ್ತಿಗೆ ನೌಕರರ ಬಹುದಿನದ ಬೇಡಿಕೆ ಈಡೇರಿಸಲಾಗಿದೆ.
1/2