
🏢📢 “ನನ್ನ ಇ-ಖಾತಾ – ನನ್ನ ಹಕ್ಕು” ಅಭಿಯಾನ
ಸನ್ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ರವರ ಆಶಯದಂತೆ, ಬೆಂಗಳೂರು ನಗರದ ಭೂಮಾಲೀಕರ ಹಿತಕ್ಕಾಗಿ ಸರ್ಕಾರದ 6ನೇ ಗ್ಯಾರಂಟಿ “ಭೂ ಗ್ಯಾರಂಟಿ” ಯೋಜನೆಯಡಿ “ನನ್ನ ಇ-ಖಾತಾ – ನನ್ನ ಹಕ್ಕು” ಅಭಿಯಾನ ಹಾಗೂ ‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಯ ಸದುಪಯೋಗ ಪಡೆದು, ತಮ್ಮ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಸುರಕ್ಷಿತ ಇ-ಖಾತಾ ಸೇವೆ ಪಡೆಯುವಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ನಾಗರಿಕರಲ್ಲಿ ಮನವಿ ಮಾಡಿದರು.
"ನಿಮ್ಮ ಆಸ್ತಿ ಭದ್ರತೆಗೆ- ಇ ಖಾತಾ ಅತ್ಯಗತ್ಯ"
@DKShivakumar
@GBA_office
@GBAChiefComm
#BhooGuarantee #EKhata #DigitalGovernance #CitizenServices
ಕನ್ನಡ