Bengaluru East City Corporation

1.4K posts

Bengaluru East City Corporation banner
Bengaluru East City Corporation

Bengaluru East City Corporation

@BECCUPDATES

Official account of the Bengaluru East City Corporation & maintained by the Public Relations Department.

Katılım Mayıs 2024
25 Takip Edilen2.2K Takipçiler
Sabitlenmiş Tweet
Bengaluru East City Corporation
🚨🌧️ Report Issues – Stay Safe Bengaluru! 🌧️🚨 📢 For Waterlogging, Hazardous Trees & Disaster Issues 📞 GBA Control Room: ☎️ 080-22660000 / 080-22975595 / 080-22221188 📞 ICCC Toll-Free: 1533 📲 WhatsApp: 9480685700 🗑️ Garbage Complaints: 9448197197 🏢 Bengaluru East City Corporation Control Room: 📞 9480685706 ☎️ 080-28512300 / 080-28512301 🌳 Hazardous Tree / Branch Removal Contacts: 👤 Dalesh A.L. – Assistant Conservator of Forests 📞 9900245013 👤 Asha S Kasareddy – Range Forest Officer 📞 9480685541 👤 Nagendra P. – Deputy Range Forest Officer 📞 9113530344 ⚠️ Report immediately for quick action 🤝 Your alertness helps prevent disasters #DKShivakumar #GreaterBengaluruAuthority #EmergencyContact #FloodAlert #PublicSafety
Bengaluru East City Corporation tweet media
English
9
5
6
7.1K
Bengaluru East City Corporation
ಆಯುಕ್ತರಿಂದ ʼಅಡಾಪ್ಟ್ ಮಿ – ಸೆಕೆಂಡ್ ಇನ್ನಿಂಗ್ಸ್ʼ ಶ್ವಾನ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ವೈಟ್‌ಫೀಲ್ಡ್‌ನ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಹಮ್ಮಿಕೊಂಡಿದ್ದ ʼಅಡಾಪ್ಟ್ ಮಿ – ಸೆಕೆಂಡ್ ಇನ್ನಿಂಗ್ಸ್ʼ ಎಂಬ ವಿಶೇಷ ಶ್ವಾನ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಅಪಘಾತಕ್ಕೊಳಗಾದ, ಮಾಲೀಕರಿಂದ ತ್ಯಜಿಸಲ್ಪಟ್ಟ ಹಾಗೂ ರಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿರುವ 40ಕ್ಕೂ ಹೆಚ್ಚು ಶ್ವಾನಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳಿಗೆ ರೇಬಿಸ್ ನಿಯಂತ್ರಣ ಹಾಗೂ ಮಾನವ-ಶ್ವಾನ ಸಹಬಾಳ್ವೆಯ ಕುರಿತು ಮಾರ್ಗದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. #DogAdoption #DogAdoptionDrive #RescueDogs #DesiDogs #GreaterBengaluruAuthority #EastCityCorporation #BengaluruEastCityCorporation #BECC #MasterAnand #BengaluruDogs #DKShivakumar #KrishnaByreGowda
ಕನ್ನಡ
0
0
0
35
Bengaluru East City Corporation
ಅನುಪಯುಕ್ತ ಹಾಗೂ ಹಳೆಯ ವಾಹನಗಳ ತೆರವಿಗೆ ನೋಟಿಸ್ ಅಳವಡಿಕೆ ಬೆಂಗಳೂರು ಪೂರ್ವ ನಗರ ಪಾಲಿಕೆ ಹಾಗೂ ಸಂಚಾರ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕೆ.ಆರ್. ಪುರ ಉಪವಿಭಾಗದ ವಿವಿಧ ಪ್ರದೇಶಗಳಲ್ಲಿ ಅನುಪಯುಕ್ತ ಹಾಗೂ ಹಳೆಯ ವಾಹನಗಳನ್ನು ಗುರುತಿಸಿ, ನೋಟಿಸ್ ಅಂಟಿಸುವ ಕಾರ್ಯಾಚರಣೆ ನಡೆಸಲಾಯಿತು. ನಗರದ ಸ್ವಚ್ಛತೆ, ಸುಗಮ ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ವಿಶೇಷ ಅಭಿಯಾನ ನಿರಂತರವಾಗಿ ನಡೆಯುತ್ತಿದೆ. ನೋಟಿಸ್ ನೀಡಿದ 7 ದಿನಗಳೊಳಗೆ ವಾಹನಗಳನ್ನು ತೆರವುಗೊಳಿಸದಿದ್ದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸುವ ವಾಹನಗಳನ್ನು ತೆರವುಗೊಳಿಸುವ ಈ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ. #AbandonedVehicle #AbandonedVehicleDrive #AbandonedVehicleClearance #KRPuram #PublicSafety #GreaterBengaluruAuthority #BengaluruEastCityCorporation #BengaluruTrafficPolice #DKShivakumar #KrishnaByreGowda @GBA_office
Bengaluru East City Corporation tweet media
ಕನ್ನಡ
0
1
5
239
Bengaluru East City Corporation
ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ಹಾಗೂ ವಸತಿ ನಿಲಯ ಪರಿಶೀಲನೆ ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ಕೆ.ಆರ್‌ ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ವಿದ್ಯಾರ್ಥಿ ನಿಲಯದ ಅಡುಗೆಮನೆ, ಆಹಾರ ದಾಸ್ತಾನು, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತ್ಯಾಜ್ಯ ವಿಲೇವಾರಿ ಹಾಗೂ ಪರಿಸರ ನೈರ್ಮಲ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿನಿಯರ ಆರೋಗ್ಯ ಮತ್ತು ಸುರಕ್ಷತೆಗಾಗಿ ಪಾಲಿಕೆ ಬದ್ಧವಾಗಿದೆ. #BengaluruEastCityCorporation #BECC #KRPuram #HealthCamp #HealthCheckup #StudentHealth #GreaterBengaluruAuthority #DKShivakumar #KrishnaByreGowda @GBA_office
Bengaluru East City Corporation tweet media
ಕನ್ನಡ
0
0
0
128
Bengaluru East City Corporation
ಜಿಬಿಎ ಮುಖ್ಯ ಆಯುಕ್ತರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಬೆಳ್ಳಂದೂರು ಮತ್ತು ಮಾರತ್ತಹಳ್ಳಿ ವ್ಯಾಪ್ತಿಯ ವಿವಿಧ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಬೆಳ್ಳಂದೂರು ಲೇಕ್‌ ಬಳಿ ರಸ್ತೆ ನಿರ್ಮಾಣ ಕಾಮಗಾರಿ, ದೇವರಬೀಸನಹಳ್ಳಿಯ ಸಕ್ರ ಆಸ್ಪತ್ರೆ ಬಳಿ ರಾಜಕಾಲುವೆ ಸರ್ವೇ, ಮಾರತ್ತಹಳ್ಳಿ ರಿಂಗ್ ರಸ್ತೆಯ ಬಫರ್ ರಸ್ತೆ ನಿರ್ಮಾಣ ಹಾಗೂ ಬೆಳ್ಳಂದೂರು ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜೊತೆಗೆ, ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಹದೇವಪುರ ಮುಖ್ಯ ಅಭಿಯಂತರರು, ಬಿಡಿಎ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. #GreaterBengaluruAuthority #BengaluruEastCityCorporation #BECC #Bellandur #Marathahalli #Rajakaluve #InfrastructureDevelopment #NammaBengaluru @GBA_office @GBAChiefComm
ಕನ್ನಡ
0
0
0
162
Bengaluru East City Corporation
ಅನಧಿಕೃತ ಫ್ಲೆಕ್ಸ್ ಅಳವಡಿಕೆಗೆ 9,500 ರೂ. ದಂಡ! 📍 ವಾರ್ಡ್ ಸಂಖ್ಯೆ 149, ವರ್ತೂರು ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ಬಾಲಗೆರೆ - ವರ್ತೂರು ರಸ್ತೆಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದವರಿಗೆ 9,500 ರೂ. ದಂಡ ವಿಧಿಸಲಾಗಿದೆ. ಮಾರ್ಷಲ್ ಸೂಪರ್‌ವೈಸರ್ ಹಾಗೂ ಪ್ರಹರಿ ಸ್ಕ್ವಾಡ್ ಮಾರ್ಷಲ್‌ಗಳು ಜಂಟಿ ಕಾರ್ಯಾಚರಣೆ ನಡೆಸಿ ಈ ಕ್ರಮ ಕೈಗೊಂಡಿದ್ದಾರೆ. ನಿಯಮ ಉಲ್ಲಂಘಿಸಿ ಕಟ್ಟಲಾಗಿದ್ದ ಫ್ಲೆಕ್ಸ್, ಬ್ಯಾನರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಇಂತಹ ಕಾನೂನುಬಾಹಿರ ಕೃತ್ಯಗಳನ್ನು ಮತ್ತೊಮ್ಮೆ ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ʼಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯʼ. #BengaluruEastCityCorporation #BECC #Varthur #flex #banners #FlexRemovalDrive #GreaterBengaluruAuthority #DKShivakumar #KrishnaByreGowda @GBA_office
Bengaluru East City Corporation tweet media
ಕನ್ನಡ
0
0
3
248
Bengaluru East City Corporation
🐾❤️ ADOPT ME – SECOND INNINGS ❤️🐾 Open Your Heart. Give a Dog a Home. The Greater Bengaluru Authority – Bengaluru East City Corporation (BECC) invites you to the "Adopt Me – Second Innings" Dog Adoption Drive, where over 30 rescued dogs are waiting for a loving forever home. 📅 Date: 18 July 2026 (Saturday) 🕒 Time: 12PM to 2PM Event kick off & Awareness session 3PM to 7PM Adoption event 📍 Venue: Nexus Shantiniketan Mall, Whitefield ✨ Event Highlights: 🐶 30+ rescued dogs available for adoption ❤️ Active & Passive Dog Adoption 💉 Free vaccination for all dogs up for adoption 📢 Rabies prevention & human–dog coexistence awareness for RWAs & AOAs 🛍️ Pet products exhibition 🐕 Every adoption gives a rescued dog a second chance at life. Join us, meet your new best friend, and be a part of building a kinder and more compassionate Bengaluru. 📱 Scan the QR code on the event poster to view the profiles of dogs available for adoption. #GreaterBengaluruAuthority #BengaluruEastCityCorporation #BECC #AdoptMeSecondInnings #DogAdoptionDrive #AdoptDontShop #AdoptADog #RescueDogs #DesiDogs #AnimalWelfare #ResponsiblePetOwnership #RabiesAwareness #Whitefield #NexusShantiniketan @GBA_office
Bengaluru East City Corporation tweet media
English
0
0
1
276
Bengaluru East City Corporation
ನಿಷೇಧಿತ ಪ್ಲಾಸ್ಟಿಕ್ ಬಳಕೆ, ಅನೈರ್ಮಲ್ಯ ಹಾಗೂ ಪಾದಚಾರಿ ಮಾರ್ಗ ಒತ್ತುವರಿಗೆ 18,500 ರೂ. ದಂಡ! 📍 ವಾರ್ಡ್ ಸಂಖ್ಯೆ 56, ಎ. ನಾರಾಯಣಪುರ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 56ರ ಎ. ನಾರಾಯಣಪುರದಲ್ಲಿ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆ, ಅಸ್ವಚ್ಛತೆ (ಅನೈರ್ಮಲ್ಯ) ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 14 ಪ್ರಕರಣಗಳನ್ನು ದಾಖಲಿಸಿ, ಒಟ್ಟು 18,500 ರೂ. ದಂಡ ವಿಧಿಸಲಾಗಿದೆ. ಮಾರ್ಷಲ್ ಸೂಪರ್‌ವೈಸರ್, ಪ್ರಹರಿ ಸ್ಕ್ವಾಡ್ ಮಾರ್ಷಲ್‌ಗಳು, ವಾರ್ಡ್ ಮಾರ್ಷಲ್ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಎ ನಾರಾಯಣಪುರ ವ್ಯಾಪ್ತಿಯ ಪೈ ಲೇಔಟ್, ಉದಯನಗರ ಮತ್ತು ದರ್ಗಾ ಮಹಲ್ ರಸ್ತೆ ಪ್ರದೇಶಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ. 'ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ - ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ಸ್ವಚ್ಛ ಬೆಂಗಳೂರಿಗೆ ಕೈಜೋಡಿಸಿ'. #BengaluruEastCityCorporation #BECC #KRPuram #PlasticFreeBengaluru #FootpathEncroachment #SingleUsePlastic #PlasticBan #SwachhaBengaluru #CleanBengaluru #DKShivakumar @GBA_office
Bengaluru East City Corporation tweet media
ಕನ್ನಡ
0
0
1
299
Bengaluru East City Corporation
ಡೆಂಗ್ಯೂ ವಿರುದ್ಧ ಕಟ್ಟೆಚ್ಚರ: ತಳಮಟ್ಟದ ಕಣ್ಗಾವಲು ಬಲಪಡಿಸಲು ಆರೋಗ್ಯಾಧಿಕಾರಿಗಳಿಂದ ಪರಿಶೀಲನಾ ಸಭೆ ಡೆಂಗ್ಯೂ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಹಾಗೂ ತಳಮಟ್ಟದ ಕಣ್ಗಾವಲನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ) ಆರೋಗ್ಯ ಇಲಾಖೆಯ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ (ಎಚ್‌ಐಒಗಳು) ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ, ಹೆಚ್ಚಿನ ಅಪಾಯವಿರುವ ಪ್ರದೇಶಗಳಲ್ಲಿ ಫಾಗಿಂಗ್ ಮತ್ತು ರಾಸಾಯನಿಕ ಸಿಂಪಡಣೆ, ಮನೆ-ಮನೆ ಜಾಗೃತಿ ಹಾಗೂ ಆರಂಭಿಕ ಹಂತದಲ್ಲೇ ಜ್ವರದ ಪ್ರಕರಣಗಳನ್ನು ಪತ್ತೆಹಚ್ಚಿ ತ್ವರಿತ ಪರೀಕ್ಷೆಗೆ ಒಳಪಡಿಸುವ ಕುರಿತು ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು. #BECC #BengaluruEastCityCorporation #DenguePrevention #PublicHealth #HealthyBengaluru
Bengaluru East City Corporation tweet media
ಕನ್ನಡ
0
0
1
257
Bengaluru East City Corporation
🚶‍♂️🚧 ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ.. 🚧🚶‍♀️ 📍 ದೊಡ್ಡನೆಕ್ಕುಂದಿ ಮತ್ತು ವೈಟ್‌ಫೀಲ್ಡ್ ಉಪವಿಭಾಗ ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ದೊಡ್ಡನೆಕ್ಕುಂದಿ ಉಪವಿಭಾಗದ ಇಪಿಐಪಿ ಮುಖ್ಯರಸ್ತೆ ಮತ್ತು ವೈಟ್‌ಫೀಲ್ಡ್‌ನ ಇಸಿಸಿ ರಸ್ತೆಯಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಪಾದಚಾರಿ ಮಾರ್ಗವು ಪಾದಚಾರಿಗಳ ನಡಿಗೆಗೆ ಮೀಸಲಾಗಿದ್ದು, ಅವುಗಳನ್ನು ಒತ್ತುವರಿ ಮುಕ್ತವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. 🤝 ಸ್ವಚ್ಛ, ಸುರಕ್ಷಿತ ಮತ್ತು ಪಾದಚಾರಿ ಸ್ನೇಹಿ ಬೆಂಗಳೂರಿನ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ. #FootpathClearance #FootpathEncroachment #Doddanekkundi #GreaterBengaluruAuthority #BengaluruEast #SurakshaPadachari #PedestrianSafety #DKShivakumar #KrishnaByreGowda @GBA_office
ಕನ್ನಡ
22
21
137
8.9K
Bengaluru East City Corporation
🐾❤️ ADOPT ME – SECOND INNINGS ❤️🐾 Open Your Heart. Give a Dog a Home. The Greater Bengaluru Authority – Bengaluru East City Corporation (BECC) invites you to the "Adopt Me – Second Innings" Dog Adoption Drive, where over 30 rescued dogs are waiting for a loving forever home. 📅 Date: 18 July 2026 (Saturday) 🕒 Time: 3:00 PM onwards 📍 Venue: Nexus Shantiniketan Mall, Whitefield ✨ Event Highlights: 🐶 30+ rescued dogs available for adoption ❤️ Active & Passive Dog Adoption 💉 Free vaccination for all dogs up for adoption 📢 Rabies prevention & human–dog coexistence awareness for RWAs & AOAs 🛍️ Pet products exhibition 🐕 Every adoption gives a rescued dog a second chance at life. Join us, meet your new best friend, and be a part of building a kinder and more compassionate Bengaluru. 📱 Scan the QR code on the event poster to view the profiles of dogs available for adoption. #GreaterBengaluruAuthority #BengaluruEastCityCorporation #BECC #AdoptMeSecondInnings #DogAdoptionDrive #AdoptDontShop #AdoptADog #RescueDogs #DesiDogs #AnimalWelfare #ResponsiblePetOwnership #RabiesAwareness #Whitefield #NexusShantiniketan @GBA_office
Bengaluru East City Corporation tweet media
English
0
0
0
205
Bengaluru East City Corporation
ಅಪರ ಆಯುಕ್ತರಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಪರಿಶೀಲನೆ 📍 ಐಟಿಪಿಎಲ್ ಮುಖ್ಯರಸ್ತೆ, ಫೀನಿಕ್ಸ್ ಮಾಲ್ ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಫೀನಿಕ್ಸ್ ಮಾಲ್ ಮುಂಭಾಗದ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಪರಿಶೀಲಿಸಿದರು. ಈ ವೇಳೆ ಪಾದಚಾರಿಗಳ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಒತ್ತುವರಿಗಳನ್ನು ತ್ವರಿತವಾಗಿ ತೆರವುಗೊಳಿಸಿ, ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಸಂಪೂರ್ಣ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾದಚಾರಿ ಮಾರ್ಗವು ಪಾದಚಾರಿಗಳ ನಡಿಗೆಗೆ ಮೀಸಲಾಗಿದ್ದು, ಅವುಗಳನ್ನು ಒತ್ತುವರಿ ಮುಕ್ತವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. 🤝 ಸ್ವಚ್ಛ, ಸುರಕ್ಷಿತ ಮತ್ತು ಪಾದಚಾರಿ ಸ್ನೇಹಿ ಬೆಂಗಳೂರಿನ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ. #FootpathClearance #FootpathEncroachment #GreaterBengaluruAuthority #BengaluruEast #SurakshaPadachari #PedestrianSafety #DKShivakumar #KrishnaByreGowda @GBA_office
Bengaluru East City Corporation tweet media
ಕನ್ನಡ
2
1
7
467
Bengaluru East City Corporation
ನಿಷೇಧಿತ ಪ್ಲಾಸ್ಟಿಕ್ ಮಾರಾಟಕ್ಕೆ 25,000 ರೂ. ದಂಡ! 📍 ವಾರ್ಡ್ ಸಂಖ್ಯೆ 54, ಹೂಡಿ (ಮಹದೇವಪುರ ವಿಧಾನಸಭಾ ಕ್ಷೇತ್ರ) ಮಹದೇವಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 54ರ ಹೂಡಿ ವ್ಯಾಪ್ತಿಯಲ್ಲಿ ಪರಿಸರಕ್ಕೆ ಮಾರಕವಾಗಿರುವ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಚಿಲ್ಲರೆ ಅಂಗಡಿಗೆ 25,000 ರೂ. ದಂಡ ವಿಧಿಸಲಾಗಿದೆ. ಮಾರ್ಷಲ್ ಸೂಪರ್‌ವೈಸರ್ ಹಾಗೂ ಪ್ರಹರಿ ಸ್ಕ್ವಾಡ್ ಮಾರ್ಷಲ್‌ಗಳು ಜಂಟಿ ಕಾರ್ಯಾಚರಣೆ ನಡೆಸಿ ಈ ಕ್ರಮ ಕೈಗೊಂಡಿದ್ದಾರೆ. ದಂಡ ವಿಧಿಸುವುದರ ಜೊತೆಗೆ, ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ʼಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ - ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ಸ್ವಚ್ಛ ಬೆಂಗಳೂರಿಗೆ ಕೈಜೋಡಿಸಿʼ. #BengaluruEastCityCorporation #BECC #Hoodi #PlasticFreeBengaluru #SingleUsePlastic #Plastic #PlasticBan #SwachhaBengaluru #CleanBengaluru #DKShivakumar @GBA_office
Bengaluru East City Corporation tweet media
ಕನ್ನಡ
0
1
0
240
Bengaluru East City Corporation
🐾 ಒಂದು ದತ್ತು, ಒಂದು ಹೊಸ ಬದುಕು..🐾 ನಮಸ್ಕಾರ ಬೆಂಗಳೂರು ನಾಗರಿಕರೇ.. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ʼಅಡಾಪ್ಟ್ ಮಿ – ಸೆಕೆಂಡ್ ಇನ್ನಿಂಗ್ಸ್ʼ ಎಂಬ ವಿಶೇಷ ಶ್ವಾನ ದತ್ತು ಸ್ವೀಕಾರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ ಕನ್ನಡ ನಟ ಮಾಸ್ಟರ್ ಆನಂದ್ ಅವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಶಾಶ್ವತ ಪ್ರೀತಿಯ ಸೂರಿನ ಹುಡುಕಾಟದಲ್ಲಿರುವ ದೇಸಿ ತಳಿಯ ಶ್ವಾನಗಳನ್ನು ದತ್ತು ಪಡೆದುಕೊಳ್ಳುವಂತೆ ಎಲ್ಲಾ ಶ್ವಾನ ಪ್ರಿಯರಲ್ಲಿ ಮನವಿ ಮಾಡಿದ್ದಾರೆ. ಬನ್ನಿ, ಈ ದತ್ತು ಅಭಿಯಾನದಲ್ಲಿ ಭಾಗವಹಿಸಿ, ಆರೋಗ್ಯವಂತ ದೇಸಿ ಶ್ವಾನವನ್ನು ಮನೆಗೆ ಕರೆದೊಯ್ದು, ಒಂದು ಮೂಕ ಜೀವಕ್ಕೆ ಹೊಸ ಬದುಕು ನೀಡಿ.❤️ 📌 ಕಾರ್ಯಕ್ರಮದ ವಿವರಗಳು: 📅 ದಿನಾಂಕ: 18 ಜುಲೈ 2026 🕒 ಸಮಯ: ಮಧ್ಯಾಹ್ನ 3:00 ಗಂಟೆಯಿಂದ 📍 ಸ್ಥಳ: ನೆಕ್ಸಸ್ ಶಾಂತಿನಿಕೇತನ ಮಾಲ್, ವೈಟ್‌ಫೀಲ್ಡ್ #DogAdoption #DogAdoptionDrive #RescueDogs #DesiDogs #GreaterBengaluruAuthority #EastCityCorporation #BengaluruEastCityCorporation #BECC #MasterAnand #BengaluruDogs #DKShivakumar #KrishnaByreGowda
ಕನ್ನಡ
0
0
1
325
Bengaluru East City Corporation
ಅಪರ ಆಯುಕ್ತರು ಲೋಖಂಡೆ ಸ್ನೇಹಲ್ ಸುಧಾಕರ್ ಅವರ ನೇತೃತ್ವದಲ್ಲಿ ಟಿಡಿಆರ್ ಸಮನ್ವಯ ಸಭೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಮೇಡಹಳ್ಳಿ–ಕುರುಡು ಸೊನ್ನೇನಹಳ್ಳಿ ಮುಖ್ಯರಸ್ತೆ ಅಗಲಿಕರಣಕ್ಕೆ ಸಂಬಂಧಿಸಿದ ಟಿಡಿಆರ್ (Transferable Development Rights) ಪ್ರಕ್ರಿಯೆ ಕುರಿತು ಅಪರ ಆಯುಕ್ತರು ಲೋಖಂಡೆ ಸ್ನೇಹಲ್ ಸುಧಾಕರ್ ಅವರ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಯಿತು. ಸಭೆಯಲ್ಲಿ ರಸ್ತೆ ಅಗಲಿಕರಣಕ್ಕೆ ಸಂಬಂಧಿಸಿದ ಟಿಡಿಆರ್ ಪ್ರಕ್ರಿಯೆಯ ಪ್ರಗತಿ, ಭೂಸ್ವಾಧೀನ, ದಾಖಲೆಗಳ ಪರಿಶೀಲನೆ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. "ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಟಿಡಿಆರ್ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಮೂಲಕ ರಸ್ತೆ ಅಗಲಿಕರಣ ಕಾಮಗಾರಿಗೆ ವೇಗ ನೀಡಬೇಕು" ಎಂದು ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು (ಟಿಡಿಆರ್), ಸಹಾಯಕ ಕಂದಾಯ ಅಧಿಕಾರಿ ಸೇರಿದಂತೆ ಕೆ.ಆರ್.ಪುರ ಅಧಿಕಾರಿಗಳು ಉಪಸ್ಥಿತರಿದ್ದರು.#GreaterBengaluruAuthority #GBA #DSRamesh #LokhandeSnehalSudhakar #BESCOM #BWSSB #RevenueDepartment #KRPuram #Mahadevapura #TDR #RoadWidening #InfrastructureDevelopment #NammaBengaluru
ಕನ್ನಡ
1
0
1
361
Bengaluru East City Corporation
Adopt, Don't Shop! Give a Desi Dog a Forever Home The Greater Bengaluru Authority – Bengaluru East City Corporation (BECC) is hosting a Dog Adoption Drive on 18 July 2026 at Nexus Shantiniketan Mall. Come meet our lovable rescued dogs, including the inspiring 3-legged Veer and the affectionate Labrador Mocha, who are waiting to find their forever families. Every adoption gives a rescued dog a second chance at life and helps build a more compassionate and pet-friendly Bengaluru. 📍 Venue: Nexus Shantiniketan Mall 📅 Date: 18 July 2026 🐾 Adopt. Love. Change a Life. #BengaluruEastCityCorporation #BECC #GreaterBengaluruAuthority #DogAdoptionDrive #AdoptDontShop #AdoptADog #RescueDogs #DesiDogs #PetAdoption #AnimalWelfare #Compassion #ResponsiblePetOwnership #NexusShantiniketan #EastBengaluru #TeamBECC
English
1
2
3
406
Bengaluru East City Corporation
🏗️✅ No Compromise on the Quality of Development Works: Lokhande Snehal Sudhakar Bengaluru East City Corporation Additional Commissioner Lokhande Snehal Sudhakar chaired a progress review meeting to assess the implementation, quality and progress of infrastructure works under the CMIDP and CSSIP schemes in the K.R. Puram Assembly Constituency. 🔍 The meeting reviewed the quality inspection reports submitted by the Project Management Consultant (PMC) and deliberated on measures to ensure timely completion of all pending works. 📌 Key Directions Issued: ✅ Rectify all deficiencies identified in the PMC quality inspection reports without delay. ✅ Ensure mandatory quality inspections of all road and civil works by the Quality Control Division before project completion. ✅ Complete 100% desilting of roadside drains, restore road shoulders and remove all construction debris from work sites. ✅ Take up asphalting and cement concrete road works only after quality certification of completed civil works. ✅ Coordinate with BESCOM and BWSSB to prevent repeated road cutting after road development works. Any agency cutting newly developed roads must restore them immediately. ✅ Conduct regular site inspections and ensure adequate safety measures to minimise inconvenience to the public. ✅ Prepare a time-bound action plan for all pending works and closely monitor progress to ensure timely completion. The Additional Commissioner emphasised that quality, timely completion and public safety are the highest priorities and directed all departments, contractors and the PMC team to work in close coordination to deliver durable, high-quality infrastructure for the citizens of East Bengaluru. #CMIDP #CSSIP #InfrastructureDevelopment #QualityControl #RoadDevelopment
Bengaluru East City Corporation tweet mediaBengaluru East City Corporation tweet mediaBengaluru East City Corporation tweet media
English
1
0
8
530