Naguvk
196 posts

Naguvk
@NagappaVK
Senior Reporter at Vijaya karnataka, views expressed here are personal























ನಾಡಿನ ಮನೆ ಮಾತಾಗಿರುವ @Vijaykarnataka ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಶಕೆಯನ್ನು ಆರಂಭಿಸಿ ಯಶಸ್ವಿಯಾಗಿ 25ನೇ ವರ್ಷಕ್ಕೆ ಕಾಲಿಟ್ಟಿರುವದು ಸಂತಸದ ವಿಷಯ. ವಸ್ತುನಿಷ್ಠ ವಿಚಾರಪೂರ್ಣ ಹಾಗೂ ಸಮೃದ್ಧ ಸುದ್ದಿಯನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುತ್ತಿರುವ ಪತ್ರಿಕೆ, ಆಧುನಿಕ ಯುಗಮಾನದ ಅಗತ್ಯಗಳಿಗೆ ಅನುಗುಣವಾಗಿ ಪತ್ರಿಕಾ ರಂಗದಲ್ಲಿ "ವಿಜಯ ಕರ್ನಾಟಕ" ಬೆಳಗಲಿ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ.










ಹೊಸ ಪ್ರಯೋಗಗಳ ಮೂಲಕ ಪತ್ರಿಕಾರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ @Vijaykarnataka 25ನೇ ವರ್ಷಕ್ಕೆ ಕಾಲಿರಿಸಿದೆ. ರಾಜ್ಯದ ಜನರ ಬೇಕು ಬೇಡಗಳ ಬಗ್ಗೆ ಬೆಳಕು ಚೆಲ್ಲುತ್ತಾ ಅವರ ನಿರೀಕ್ಷೆಗಳ ಬಗ್ಗೆ ಸರಕಾರಗಳ ಗಮನ ಸೆಳೆದು ಈಡೇರುವಂತೆ ಮಾಡುವಲ್ಲಿ ಪತ್ರಿಕೆ ನಿರ್ವಹಿಸುತ್ತಿರುವ ಪಾತ್ರವನ್ನು ಮರೆಯುವಂತಿಲ್ಲ. ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿ ಹಿಡಿದು ಜನರ ದನಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಪತ್ರಿಕೆಯು ಮುಂದೆಯೂ ಇದೇ ರೀತಿ ಜವಾಬ್ದಾರಿ ನಿರ್ವಹಿಸಲಿ. #VijayKarnataka #Karnataka #RamalingaReddy






