Agastya International Foundation retweetledi

ಕುಪ್ಪಂ: ಅಗಸ್ತ್ಯ ಫೌಂಡೇಶನ್ ಕೇಂದ್ರ ; ಒಂದು ಅದ್ಭುತ ವಿಜ್ಞಾನ ಲೋಕ!
ಕುಪ್ಪಂನ ಅಗಸ್ತ್ಯ ಫೌಂಡೇಶನ್ ಕೇಂದ್ರಕ್ಕೆ ಭೇಟಿ ನೀಡಿದ್ದು, ನಿಜಕ್ಕೂ ಮತ್ತೊಂದು ವಿಸ್ಮಯ ಲೋಕಕ್ಕೆ ಪಯಣಿಸಿದ ಅನುಭವ ನೀಡಿತು.
ಇಲ್ಲಿನ ವೈಜ್ಞಾನಿಕ ಪ್ರದರ್ಶಿಕೆಗಳು ಹಾಗೂ ಪ್ರಾಯೋಗಿಕವಾಗಿ ಕಲಿಯಲು ಇರುವ ವಿಪುಲ ಅವಕಾಶಗಳು ವಿಜ್ಞಾನದ ಜಗತ್ತಿನಲ್ಲಿ ವಿಹರಿಸಿದಂತಹ ಅನುಭವ ನೀಡಿದವು.
ಅತಿ ಕ್ಲಿಷ್ಟಕರವಾದ ವೈಜ್ಞಾನಿಕ ಸಂಗತಿಗಳನ್ನು ಸಹ ಮಕ್ಕಳು ಅತಿ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ರೂಪಿಸಿರುವ ವಿಧಾನ ಶ್ಲಾಘನೀಯ. ಕೇವಲ ಪುಸ್ತಕದ ಓದಿಗೆ ಸೀಮಿತವಾಗದೆ, ‘ಕೈಯಾರೆ ಕಲಿಕೆ’ ಮೂಲಕ ವಿಜ್ಞಾನವನ್ನು ಸರಳಗೊಳಿಸಿರುವ ಈ ಪ್ರಯತ್ನ ಪರಿಣಾಮಕಾರಿಯೂ ಹೌದು.
ಇಂತಹ ಅನುಭವಾತ್ಮಕ ಕಲಿಕೆ ಮಕ್ಕಳಲ್ಲಿ ಸೃಜನಶೀಲತೆ, ಕುತೂಹಲ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ವಿಜ್ಞಾನವನ್ನು ಅನುಭವದ ಮೂಲಕ ಕಲಿಯುವ ಸಂಸ್ಕೃತಿಯನ್ನು ಬೆಳೆಸುತ್ತಿರುವ ಈ ಕೇಂದ್ರವು ನಿಜಕ್ಕೂ ಪ್ರೇರಣಾದಾಯಕವಾಗಿದೆ.
#agastyafoundation




ಕನ್ನಡ
















































