Team Siddaramaiah

3.1K posts

Team Siddaramaiah banner
Team Siddaramaiah

Team Siddaramaiah

@TMSiddaramaiah

#TeamSiddaramaiah Follow us on Fb: https://t.co/1VyKmls1Dz insta: https://t.co/al8jTiUfhn

Karnataka, India Katılım Mart 2022
13 Takip Edilen1K Takipçiler
Sabitlenmiş Tweet
Team Siddaramaiah
Team Siddaramaiah@TMSiddaramaiah·
ನಿಮ್ಮಲ್ಲಿರುವ ಗುಲಾಮಗಿರಿ ಮನಸ್ಥಿತಿಯನ್ನು ತೊಲಗಿಸಿ, ಸಮಾನತೆಯ ಮನಸ್ಥಿತಿ ಬೆಳೆಸಿಕೊಳ್ಳಿ. - ಸಿದ್ದರಾಮಯ್ಯ. #Teamsiddaramaiah
ಕನ್ನಡ
4
50
187
0
Team Siddaramaiah retweetledi
Siddaramaiah
Siddaramaiah@siddaramaiah·
ಹಜ್ ಯಾತ್ರಿಗರು ಮಾಡುವ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತನ್ನೂ ಬಯಸಿರಿ ಎಂದು ಕೋರುತ್ತಾ, ಹಜ್ ಯಾತ್ರೆಯು ಸುಖಕರವಾಗಿರಲೆಂದು ಹಾರೈಸುತ್ತೇನೆ. ಇಸ್ಲಾಂ ಧರ್ಮದ ಪ್ರಮುಖ ಐದು ಆಧಾರ ಸ್ತಂಭಗಳಲ್ಲಿ ಹಜ್ ಆಚರಣೆಯೂ ಒಂದಾಗಿದ್ದು, ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಲೇಬೇಕಾಗಿದೆ. ಹಜ್ ಯಾತ್ರೆ ಮಾಡುವುದರಿಂದ ಮನುಷ್ಯನ ಹಿಂದಿನ ಎಲ್ಲಾ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ಆತ ಮರುಜನ್ಮ ಪಡೆದ ಮಗುವಿನಂತೆ ಪರಿಶುದ್ಧನಾಗುತ್ತಾನೆ ಎಂಬ ನಂಬಿಕೆಯಿದೆ. ಯಾರಾದರೂ ಒಬ್ಬ ಮನುಷ್ಯನನ್ನು (ಅಪರಾಧ ಮಾಡದಿದ್ದರೂ) ಕೊಂದರೆ, ಅವನು ಇಡೀ ಮಾನವಕುಲವನ್ನೇ ಕೊಂದಂತೆ; ಮತ್ತು ಯಾರಾದರೂ ಒಂದು ಜೀವವನ್ನು ಉಳಿಸಿದರೆ, ಅವನು ಇಡೀ ಮಾನವಕುಲವನ್ನೇ ಉಳಿಸಿದಂತೆ ಎಂದು ಜೀವದ ಬೆಲೆಯ ಬಗ್ಗೆ ಕುರಾನ್ ನೀಡುವ ಅತ್ಯುನ್ನತ ಸಂದೇಶವಾಗಿದೆ. ಪ್ರತಿಯೊಬ್ಬ ಹಜ್ ಯಾತ್ರಿಗನು ನಿಷ್ಕಲ್ಮಶ ಮನದಿಂದ ಯಾತ್ರೆ ಕೈಗೊಳ್ಳಬೇಕು. ಯಾತ್ರೆಯ ಸಂದರ್ಭದಲ್ಲಿ ಮಾಡುವ ಪ್ರಾರ್ಥನೆಯಲ್ಲಿ ಸರ್ಕಾರದ ಒಳಿತನ್ನೂ ಬಯಸಿರಿ ಎಂದು ಕೋರುತ್ತೇನೆ. ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೆ ಮಾನವನು ಪರಸ್ಪರ ದ್ವೇಷವನ್ನು ಸಾಧಿಸುತ್ತಾನೆ. ಮಾನವೀಯತೆಯೇ ನಿಜವಾದ ಧರ್ಮ. ಪರರ ಒಳಿತನ್ನು ಬಯಸುವವರನ್ನು ದೇವರು ರಕ್ಷಿಸುತ್ತಾನೆ. ತನ್ನ ಧರ್ಮವನ್ನು ಪ್ರೀತಿಸಿ, ಆದರೆ ಇತರೆ ಧರ್ಮದ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಭ್ರಾತೃತ್ವ, ಸಮಾನತೆ ಮತ್ತು ಸೌಹಾರ್ದತೆಗಳೇ ನಮ್ಮ ಸಂವಿಧಾನದ ಮೂಲತತ್ವವಾಗಿದೆ. 2026-27ನೇ ಸಾಲಿನ ಆಯವ್ಯಯದಲ್ಲಿ ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಹಜ್ ಯಾತ್ರಾರ್ಥಿಗಳು ಹಾಗೂ ಅವರ ಸಂಬಂಧಿಕರಿಗೆ ಸೌಲಭ್ಯ ಮತ್ತು ಸೌಕರ್ಯಗಳನ್ನು ನೀಡಲು ಅನುಕೂಲವಾಗುವಂತೆ ಹಜ್ ಭವನಗಳ ನಿರ್ಮಾಣ ಮಾಡಲಾಗುತ್ತದೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. - ಇಂದು ಕರ್ನಾಟಕ ಹಜ್ ಸಮಿತಿ ಆಯೋಜಿಸಿದ್ದ "ಹಜ್ -2026" ಹಜ್ ಯಾತ್ರಿಕರ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದೆ
Siddaramaiah tweet media
ಕನ್ನಡ
107
100
1.1K
27.3K
Team Siddaramaiah retweetledi
Sikandar - ಸಿಕಂದರ್.
ಬಿಜೆಪಿ ಇವ್ರ ಬದಲು ಎರಡು ಎಮ್ಮೆನೋ ಹಸನೋ ಸಾಕಿದ್ರೆ ಚೆನ್ನಾಗಿರೋದು...🚩🤣🤣
Sikandar - ಸಿಕಂದರ್. tweet media
ಕನ್ನಡ
85
270
2.4K
44.8K
Team Siddaramaiah retweetledi
Sikandar - ಸಿಕಂದರ್.
ಮೂರ್ ಕೊಟ್ರೆ ನ್ಯೂಸ್ ಫಸ್ಟ್ ಜೊತೆ , ಆರು ಮತ್ತು ಜೊತೆಗೆ ಒಂದು ಪಕ್ಷಕ್ಕೆ ಬಕೆಟ್ ಹಿಡಿಯೋ ಅವಕಾಶ ಕೊಟ್ರೆ ಆರ್ ಕನ್ನಡ ಜೊತೆ...
Sikandar - ಸಿಕಂದರ್. tweet media
Smitha Ranganath@smitharanganath

ಮೂರ್ ಗೆದ್ರೆ DMK ಜೊತೆ.. ಆರ್ ಗೆದ್ರೆ TVK ಕಡೆ.. #tamilnadulegislativeassemblyelection2026

ಕನ್ನಡ
17
57
370
6.1K
Team Siddaramaiah retweetledi
Satish Jarkiholi
Satish Jarkiholi@JarkiholiSatish·
ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ‌ಇಂದು ದಾವಣಗೆರೆ ಜಿಲ್ಲೆಯ ಮುಖಂಡರಾದ ಶ್ರೀ ಸಾದಿಕ್ ಪೈಲ್ವಾನ್ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ‌ಈ ವೇಳೆ ಪಕ್ಷದ ಅಭ್ಯರ್ಥಿಯ ಪರವಾಗಿ ಹಗಲಿರುಳು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದೆ. #satishjarkiholi #bengaluru
Satish Jarkiholi tweet mediaSatish Jarkiholi tweet mediaSatish Jarkiholi tweet mediaSatish Jarkiholi tweet media
ಕನ್ನಡ
0
7
96
2.5K
Team Siddaramaiah retweetledi
Siddaramaiah
Siddaramaiah@siddaramaiah·
ಸಮಾರಂಭದಲ್ಲಿ ಉಪಸ್ಥಿತರಿರುವ ಎಲ್ಲರಿಗೂ ಶ್ರೀ ಸಿದ್ದರಾಮೇಶ್ವರ ಜಯಂತಿಯ ಶುಭಾಶಯಗಳು. ಸಿದ್ದರಾಮೇಶ್ವರರೂ ಸೇರಿದಂತೆ ಸಂತಮಹಾಶಯರು, ಸಮಾಜದಲ್ಲಿ ಜಾತಿವರ್ಗಗಳ ವ್ಯವಸ್ಥೆ ತೊಲಗಬೇಕು ಎಂದು ಬಯಸಿದ್ದರು. ರಾಜ್ಯದಲ್ಲಿ ಸಮಸಮಾಜ ನಿರ್ಮಿಸುವ ಸಂಕಲ್ಪವನ್ನು ನಮ್ಮ ಸರ್ಕಾರ ಹೊಂದಿದೆ. ಉತ್ಪಾದಿಸಿದ ಸಂಪತ್ತು ಸಮಾನವಾಗಿ ಹಂಚಿಕೆಯಾಗಿಬೇಕು. ರಾಜ್ಯದ ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬುದೇ ಸರ್ಕಾರದ ಉದ್ದೇಶ. ಬಸವಾದಿ ಶರಣರು 12 ನೇ ಶತಮಾನದಲ್ಲಿ ಸಮಾನತೆಯ ಸಿದ್ಧಾಂತವನ್ನು ಬೋಧಿಸಿದ್ದರು. ಶೋಷಣೆಗೊಳಗಾದ ಹಾಗೂ ಅವಕಾಶವಂಚಿತ ಸಮುದಾಯಗಳು ಸಂಘಟಿತರಾಗುವ ಸಮ್ಮೇಳನಗಳು ಉತ್ತಮ ಕಾರ್ಯಗಳಾಗಿವೆ. 2013 ಮೇ 13ರ ಬಸವ ಜಯಂತಿಯಂದು ನಾನು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದೆ. ಬಸವಣ್ಣನವರು ಬೋಧಿಸಿದಂತೆ ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರಿಸಿದ್ದೇನೆ. ರಾಜಕೀಯ ಸ್ವಾತಂತ್ರ್ಯವು, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ನಿಂತಿದೆ. ಶಿಕ್ಷಣ ಪಡೆದಾಗ ಮಾತ್ರ ಸಾಮಾಜಿಕ ಆರ್ಥಿಕ ಶಕ್ತಿ ದೊರಕಲು ಸಾಧ್ಯ. ನಮ್ಮ ಸರ್ಕಾರ ಭೋವಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ ಮಾಡಿದೆ. ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿನ ಅಸಮಾನತೆ ಹೋಗಲಾಡಿಸಲು ಐತಿಹಾಸಿಕ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆ. ಎಡಗೈಗೆ 5.25%, ಬಲಗೈಗೆ 5.25%, ಹಾಗೂ ಇತರ ಉಪಜಾತಿಗಳಿಗೆ 4.5% ಹಂಚಿಕೆ ಮಾಡಲಾಗಿದೆ. ಭೋವಿ ಸಮುದಾಯದವರು ಇಟ್ಟಿರುವ ಬೇಡಿಕೆಗಳ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ. ಸಮುದಾಯದವರಿಗೆ ಕುಲಪತಿ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಏಳು ಕೋಟಿ ಜನರಿಗೂ ನ್ಯಾಯ ಸಿಗಬೇಕು ಹಾಗೂ ಯಾರೂ ಅವಕಾಶಗಳಿಂದ ವಂಚಿತರಾಗಬಾರದು. ಸಂವಿಧಾನ ರಚನೆಯಾದ ನಂತರ ಸಮಾನತೆಯನ್ನು ಸಾಧಿಸುವತ್ತ ದೇಶ ಸಾಗಿದ್ದು, ಸಂವಿಧಾನ ಹೇಳುವಂತೆಯೇ ನಡೆದುಕೊಳ್ಳುತ್ತೇವೆ. ಎಲ್ಲಾ ಜಾತಿಗಳನ್ನು ಪ್ರೀತಿಸಿ, ಅವರೂ ನಮ್ಮನ್ನು ಪ್ರೀತಿಸುವಂತೆ ಮಾಡಬೇಕು ಹಾಗೂ ಸಹಿಷ್ಣುತೆಯನ್ನು ರೂಢಿಸಿಕೊಳ್ಳಬೇಕು. ಉತ್ಪಾದನೆಯಲ್ಲಿ ಎಲ್ಲರೂ ಭಾಗವಹಿಸಿ, ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ಧರಾಮೇಶ್ವರರು ಬೋಧಿಸಿದ್ದರು. ಅವರು ನಡೆದ ಹಾದಿಯಲ್ಲಿಯೇ ನಮ್ಮ ಸರ್ಕಾರವೂ ನಡೆಯುತ್ತಿದೆ. - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದೆ
Siddaramaiah tweet media
ಕನ್ನಡ
4
24
177
2.8K
Team Siddaramaiah retweetledi
Dr Yathindra Siddaramaiah
Dr Yathindra Siddaramaiah@Dr_Yathindra_S·
ಭಗೀರಥ ಜಯಂತಿಯ ಅಂಗವಾಗಿ ಮೈಸೂರಿನಲ್ಲಿ ಇಂದು ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಲಾಯಿತು. #BhagirathaJayanti
Dr Yathindra Siddaramaiah tweet mediaDr Yathindra Siddaramaiah tweet mediaDr Yathindra Siddaramaiah tweet mediaDr Yathindra Siddaramaiah tweet media
ಕನ್ನಡ
0
3
19
127
Team Siddaramaiah retweetledi
Sikandar - ಸಿಕಂದರ್.
ಸರ್ಕಾರಿ ಸೈಟಿನ ಆಸೆಗೆ ಹೆಂಡತಿಯನ್ನು ತಂಗಿ ಎಂದು ಸುಳ್ಳು ಹೇಳಿದ್ದ ಹರಾಮ್ ಕೋರ್ ನೀನು @mepratap ಲೋಕಸಭೆಗೆ ಪಾಸ್ ಕೊಟ್ಟು ಸಿಕ್ಕಾಕೊಂಡಾಗ ನಿನ್ನ ಮೊಬೈಲ್ ಜಪ್ತಿ ಆಗಿತ್ತಲ್ಲ ಆವಾಗ್ಲೇ ಅದರಲ್ಲಿದ್ದ ನಿನ್ನ ತುದಿಯನ್ನು ಮತ್ತು ಅದರ ಆಟವನ್ನು ನೋಡಿ ನಿನ್ನ ಹೈ ಕಮಾಂಡ್ ನಿನಗೆ ಟಿಕೆಟ್ ನಿರಾಕರಿಸಿದ್ದು ಅಲ್ವೇನೋ ಚಪ್ಪರ್, ಲೋಫರ್, ಹಲ್ಕಟ್?
ಕನ್ನಡ
8
21
85
2.7K
Team Siddaramaiah retweetledi
M B Patil
M B Patil@MBPatil·
ವಿಜಯಪುರ ವಿಮಾನ ನಿಲ್ದಾಣದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ! ಪರಿಸರ ಸಂಬಂಧಿತ ವಿವಿಧ ಪ್ರಕರಣಗಳ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಪೂರ್ಣಗೊಂಡಿದ್ದು, ತೀರ್ಪಿನ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ. ಸಕಾರಾತ್ಮಕ ತೀರ್ಪು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದ್ದು, ಅದರೊಂದಿಗೆ ತ್ವರಿತವಾಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. #ನಮ್ಮಸರ್ಕಾರ ದಿಂದ ₹220 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದ್ದು, ಅಗ್ನಿಶಾಮಕ ವಾಹನಗಳ ವ್ಯವಸ್ಥೆ, ವಿಮಾನಗಳ ನೈಟ್ ಲ್ಯಾಂಡಿಂಗ್ ಸೌಲಭ್ಯಗಳ ಜೊತೆಗೆ, ಯಾವುದೇ ಬಗೆಯ ಬೃಹತ್ ವಿಮಾನಗಳ ಹಾರಾಟಕ್ಕೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ವಿಜಯಪುರ ವಿಮಾನ ನಿಲ್ದಾಣವು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಮೈಲುಗಲ್ಲಾಗಲಿದೆ. #ವಿಜಯಪುರವಿಮಾನನಿಲ್ದಾಣ
M B Patil tweet media
ಕನ್ನಡ
5
9
88
2.6K
Team Siddaramaiah retweetledi
Dr Yathindra Siddaramaiah
Dr Yathindra Siddaramaiah@Dr_Yathindra_S·
ಕನ್ನಡಿಗರ ವಿಜಯ ದಿನ ಇಮ್ಮಡಿ ಪುಲಿಕೇಶಿ ಮಹಾರಾಜರು ಉತ್ತರ ಭಾರತದ ಹರ್ಷವರ್ಧನನನ್ನು ಸೋಲಿಸಿ, ದಕ್ಷಿಣ ಭಾರತದ ಸ್ವಾಯತ್ತತೆಯನ್ನು ಕಾಪಾಡಿದ ಐತಿಹಾಸಿಕ ದಿನ. #ಕನ್ನಡಿಗರವಿಜಯದಿನ
Dr Yathindra Siddaramaiah tweet media
ಕನ್ನಡ
1
57
249
1.6K
Team Siddaramaiah retweetledi
Siddaramaiah
Siddaramaiah@siddaramaiah·
ರಾಜ್ಯದಲ್ಲಿ ಬಡವರು ಹಸಿದು ಮಲುಗಬಾರದು ಎನ್ನುವ ಕಾರಣಕ್ಕೆ ಅನ್ನ ಭಾಗ್ಯ ಜಾರಿಗೆ ತಂದಿದ್ದೇನೆ.‌ ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿ ಆಗಿದ್ದಾಗ ಆಹಾರ‌ ಭದ್ರತಾ ಕಾಯ್ದೆ ಜಾರಿ ಮಾಡಿದ್ದರಿಂದ ಇಲ್ಲಿ ನಾನು ಅನ್ನಭಾಗ್ಯ ಜಾರಿಗೆ ತರಲು ಸಾಧ್ಯವಾಯಿತು. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾಳಜಿಯನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಎಚ್.ವೈ.ಮೇಟಿಯವರು ಐದು ಬಾರಿ ಶಾಸಕರು, ಎರಡು ಬಾರಿ ಸಚಿವರು ಮತ್ತು ಒಮ್ಮೆ ಸಂಸದರಾಗಿ ಎಲ್ಲರನ್ನೂ ಗೌರವವಾಗಿ ಕಾಣುತ್ತಾ ಜಾತಿ ಸೋಂಕನ್ನು ಸೋಕಿಸಿಕೊಂಡಿರಲಿಲ್ಲ. ಬಡವರು ಮತ್ತು ಹಿಂದುಳಿದವರ ಪರವಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಉಮೇಶ್ ಮೇಟಿಯವರನ್ನು ಗೆಲ್ಲಿಸಿದರೆ ಎಚ್.ವೈ.ಮೇಟಿಯವರ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಒಂದು ಬಾರಿಯೂ ಅಧಿಕಾರಕ್ಕೆ ಬರಲಿಲ್ಲ. ಬಿಜೆಪಿಗೆ ರಾಜ್ಯದ ಜನರ ಆಶೀರ್ವಾದ ಇಲ್ಲದಿದ್ದರಿಂದ ಆಪರೇಷನ್ ಕಮಲದ ಮೂಲಕ ಅಪಾರ ಹಣ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿದ್ದಾರೆ. ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವ ಯಡಿಯೂರಪ್ಪ ಅವರಿಗೆ ಆಪರೇಷನ್ ಕಮಲ ಮಾಡಲು ಅಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವುದನ್ನು ನೀವೆಲ್ಲಾ ಕೇಳಬೇಕಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅತ್ಯಂತ ಭ್ರಷ್ಟರು ಎಂದು ಯತ್ನಾಳ್ ಅವರು ಹೇಳುತ್ತಾರೆ. ಅದೇ ಯತ್ನಾಳ್ ಅವರನ್ನು ಬಿಜೆಪಿ ನಾಯಕರು ಬಾಗಲಕೋಟೆಗೆ ಕರೆಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಗುತ್ತಿಗೆದಾರರ ಸಂಘದವರು ಬಿಜೆಪಿ ಸರ್ಕಾರದಲ್ಲಿ ನಡೆಯುವ ಕಮಿಷನ್ ದಂಧೆ ಬಗ್ಗೆ ಪತ್ರ ಬರೆದಿದ್ದರು. ಇಂಥಾ ಬಿಜೆಪಿಯವರಿಂದ ನಾವು ಭ್ರಷ್ಟಾಚಾರದ ಮಾತು ಕೇಳಬೇಕಾ? ಹಸಿವುಮುಕ್ತ ರಾಜ್ಯ ನಮ್ಮದಾಗಬೇಕು ಎನ್ನುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ತಂದಿದ್ದೆ. ಆದ್ದರಿಂದ ನಾನು ಸಾಲದ ರಾಮಯ್ಯ ಅಲ್ಲ , ಅನ್ನದ ರಾಮಯ್ಯ. ಇದು ಜನರೇ ಪ್ರೀತಿಯಿಂದ ಕೊಟ್ಟ ಹೆಸರು. ದುಡಿಯುವವರ, ಮಹಿಳೆಯರ, ಶ್ರಮಿಕರ ಮತ್ತು ಹಿಂದುಳಿದವರ, ದಲಿತರ ವಿರೋಧ ಪಕ್ಷವಾದ ಬಿಜೆಪಿಯನ್ನು ಬೆಂಬಲಿಸಬೇಡಿ. ಉಮೇಶ್ ಮೇಟಿಯವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ. - ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಿರೂರ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನನ್ನ ಮಾತುಗಳು
Siddaramaiah tweet mediaSiddaramaiah tweet mediaSiddaramaiah tweet mediaSiddaramaiah tweet media
ಕನ್ನಡ
12
18
114
2.8K
Team Siddaramaiah retweetledi
Siddaramaiah
Siddaramaiah@siddaramaiah·
ಸಂಪುಟ ಸಹೋದ್ಯೋಗಿಗಳು, ಆತ್ಮೀಯರು ಆದ ಕೃಷ್ಣ ಬೈರೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಸರಳತೆ, ಸೈದ್ಧಾಂತಿಕ ಬದ್ಧತೆ, ಅರ್ಥ ವ್ಯವಸ್ಥೆಯ ಬಗೆಗಿನ ಅರಿವು ಹಾಗೂ ಜನಪರ ಕಾಳಜಿಯು ರಾಜಕೀಯವಾಗಿ ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿ, ದೀರ್ಘ ಆಯಸ್ಸು ಆರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇನೆ. @krishnabgowda
Siddaramaiah tweet media
ಕನ್ನಡ
6
19
202
2.9K
Team Siddaramaiah retweetledi
Siddaramaiah
Siddaramaiah@siddaramaiah·
ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ, ದೇವೇಗೌಡ‌ ಅವರ ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ? ಅದು ಕುಟುಂಬ ರಾಜಕಾರಣ ಅಲ್ಲವೇ? ಸಮರ್ಥ್ ಅತ್ಯಂತ ವಿದ್ಯಾವಂತ ಮತ್ತು ರಾಜಕಾರಣದ ಎಲ್ಲ ಅರ್ಹತೆಗಳಿರುವ ಸಮರ್ಥ ಅಭ್ಯರ್ಥಿ. ಇವರು ಗೆದ್ದು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ. ಎಲ್ಲಾ ಜನಪರ ಗುಣಗಳು ಸಮರ್ಥ್ ಅವರಲ್ಲಿದೆ.‌ ದಾವಣಗೆರೆಗೆ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಸಾಕಷ್ಟಿದೆ. ಹೀಗಾಗಿ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಗೆಲ್ಲುತ್ತಾರೆ. ಗ್ಯಾರಂಟಿ ಯೋಜನೆಗಳಿಗೆ 1.43 ಲಕ್ಷ ಕೋಟಿ ರೂ. ಹಣ ಖರ್ಚು ಮಾಡಿದ್ದೇವೆ. ಸಮರ್ಥ ಶಾಮನೂರು ಗೆದ್ದರೆ ನನಗೆ ಶಕ್ತಿ ಬರುತ್ತದೆ. ದಾವಣಗೆರೆಗೆ ಮಾತ್ರವೇ 538 ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗಾಗಿ ಖರ್ಚು ಮಾಡಿದ್ದೇವೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಅಷ್ಟೂ ಹಣ ದಾವಣಗೆರೆ ಜನರ ಬದುಕಿಗೆ ಜಮೆ ಆಗಿದೆ. ಈ ಹಣ ಕೊಟ್ಟಿದ್ದನ್ನು ಬಿಜೆಪಿಯವರು ವಿರೋಧಿಸಿದ್ದರು. ಜನರ ಹಣವನ್ನು ಜನರಿಗೆ ವಾಪಾಸ್ ಕೊಡುವುದು ತಪ್ಪಾ? ಬಿಜೆಪಿ 2018 ರಲ್ಲಿ ತಮ್ಮ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿ, ಅದರಲ್ಲಿ ಹತ್ತು ಪರ್ಸೆಂಟ್ ಕೂಡ ಭರವಸೆ ಈಡೇರಿಸಲಿಲ್ಲ. ಆದರೆ 2013 ರಲ್ಲಿ ನಾವು ನಮ್ಮ ಪ್ರಣಾಳಿಕೆಯಲ್ಲಿ 165 ಭರವಸೆ ನೀಡಿ ಅದರಲ್ಲಿ 158 ಈಡೇರಿಸಿ ನುಡಿದಂತೆ ನಡೆದಿದ್ದೇವೆ. 2023ರಲ್ಲೂ ನಾವು ಐದು ಗ್ಯಾರಂಟಿಗಳನ್ನು ಘೋಷಿಸಿ ಐದಕ್ಕೆ ಐದೂ ಜಾರಿ ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಜನರ ಕೆಲಸ ಮಾಡಲಿಲ್ಲ. ಕಾಂಗ್ರೆಸ್ ಸರ್ವ ಜಾತಿ ಜನಾಂಗಗಳನ್ನು ಒಟ್ಟಿಗೇ ಕರೆದೊಯ್ಯುತ್ತದೆ. ನಮ್ಮ ಗ್ಯಾರಂಟಿಗಳ ಫಲವನ್ನು ಎಲ್ಲಾ ಪಕ್ಷದವರೂ, ಎಲ್ಲಾ ಜಾತಿ, ಎಲ್ಲಾ ಧರ್ಮದವರೂ ಪಡೆಯುತ್ತಿದ್ದಾರೆ. ಆದ್ದರಿಂದ ನಮ್ಮದು "ಸರ್ವ ಜನಾಂಗದ ಶಾಂತಿಯ ತೋಟ". ಕಾಂಗ್ರೆಸ್ ಮಹಾತ್ಮಗಾಂಧಿ, ಅಂಬೇಡ್ಕರ್, ಬಸವಣ್ಣನವರ ಆಶಯದ ಹಾದಿಯಲ್ಲಿ ನಡೆದರೆ, ಬಿಜೆಪಿ ಗೋಡ್ಸೆ, ಮನುವಾದಿಗಳ ಮಾತಿನಂತೆ ನಡೆಯುತ್ತದೆ. ಬಿಜೆಪಿಯವರು ನನ್ನನ್ನು ಸಾಲದ ರಾಮಯ್ಯ ಅಂತಾರೆ. ಈ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ನಾನು ಅನ್ನದ ರಾಮಯ್ಯ ಎನ್ನುವುದನ್ನು ತೋರಿಸಿ. ನಮ್ಮ ಮೂಲ ಉದ್ದೇಶ ತಳ ಸಮುದಾಯದ ಅಭಿವೃದ್ದಿ. ಬಸವಣ್ಣ ಅವರ ಪರಿಕಲ್ಪನೆಯಲ್ಲಿ ನಾವು ಸರ್ಕಾರ ನಡೆಸುತ್ತಿದ್ದೇವೆ. ಮಧ್ಯವರ್ತಿಗಳ ಕಾಟ ಇಲ್ಲದೆ ಬಡವರ ಖಾತೆಗೆ ಹಣ ಹಾಕುತ್ತಿದ್ದೇವೆ. - ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರ ಪರ ರೋಡ್ ಶೋ ನಡೆಸಿ, ಮಾತನಾಡಿದೆ
Siddaramaiah tweet media
ಕನ್ನಡ
19
16
177
9.1K
Team Siddaramaiah retweetledi
Team Siddaramaiah retweetledi
Siddaramaiah
Siddaramaiah@siddaramaiah·
ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ನವೀಕೃತ ಪ್ರವೇಶ ದ್ವಾರವನ್ನು ಉದ್ಘಾಟಿಸಿದ ಕ್ಷಣ
ಕನ್ನಡ
8
20
120
3.4K
Team Siddaramaiah retweetledi
Siddaramaiah
Siddaramaiah@siddaramaiah·
ಜನರ ಆಶೀರ್ವಾದ, ನಮ್ಮ ಪಕ್ಷದ ಶಾಸಕರ ಬೆಂಬಲದಿಂದ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ, ನನ್ನ ರಾಜಕೀಯ ಜೀವನದ ದಾಖಲೆಯ 17ನೇ ಬಜೆಟ್ ಮಂಡಿಸಲು ಸಾಧ್ಯವಾಗಿದೆ. ಇದಕ್ಕಾಗಿ ರಾಜ್ಯದ ಜನತೆಗೆ, ಪಕ್ಷದ ವರಿಷ್ಠರಿಗೆ ಹಾಗೂ ಶಾಸಕರಿಗೆ ನಾನು ಆಭಾರಿ. ಸರ್ವರನ್ನೂ ಒಳಗೊಳ್ಳುವ, ಸರ್ವತೋಮುಖ ಪ್ರಗತಿಯ ಜನಪರವಾದ ಬಜೆಟ್ ಮಂಡಿಸಿದ ನನ್ನನ್ನು ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮೆಲ್ಲಾ ಶಾಸಕರುಗಳು ಅಭಿನಂದಿಸಿದರು. ನಿಮ್ಮೆಲ್ಲರ ಪ್ರೀತಿ - ಬೆಂಬಲಕ್ಕೆ ಧನ್ಯವಾದಗಳು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷದ ಶಾಸಕರ ಪರವಾಗಿ ಅಭಿನಂದಿಸಿ, ಶುಭ ಹಾರೈಸಿದೆ.
Siddaramaiah tweet mediaSiddaramaiah tweet mediaSiddaramaiah tweet mediaSiddaramaiah tweet media
ಕನ್ನಡ
28
64
701
13.2K
Team Siddaramaiah retweetledi
Sikandar - ಸಿಕಂದರ್.
ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಗ್ಯಾಸ್ ಬೆಲೆ ಏರಿಸಿದ ಬಡವರ ವಿರೋಧಿ ಮೋದಿ.. 2 ರೂಪಾಯಿ ಮೆಟ್ರೋ ರೇಟ್ ಜಾಸ್ತಿ ಆದ್ರೆ ಬೀದೀಲಿ ಬಿದ್ದು ಒದ್ದಾಡೋ @Tejasvi_Surya ಎಲ್ಲಿದಿಯಪ್ಪ? @BJP4Karnataka ಮಾನ ಮರ್ಯಾದೆ ಇದ್ರೆ ಬನ್ರೋ ಬೀದಿಗೆ ಇವಾಗ. #lpgpricehike #lpgprice
Sikandar - ಸಿಕಂದರ್. tweet media
ಕನ್ನಡ
3
15
55
887
Team Siddaramaiah retweetledi
Siddaramaiah
Siddaramaiah@siddaramaiah·
ಕರ್ನಾಟಕ ಬಜೆಟ್ 2026-27 "ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ" ಗೃಹಜ್ಯೋತಿ * ಗೃಹ ಜ್ಯೋತಿ ಯೋಜನೆಯಡಿ ಈ ವರೆಗೆ 1.74 ಕೋಟಿ ಗ್ರಾಹಕರಿಂದ ನೋಂದಣಿ * ಕಳೆದ 3 ವರ್ಷಗಳಲ್ಲಿ ಈ ಯೋಜನೆಗೆ 28 ಸಾವಿರ ಕೋಟಿ ರೂ. ವಿನಿಯೋಗ * ಪ್ರಸಕ್ತ ವರ್ಷದಲ್ಲಿ 10,578 ಕೋಟಿ ರೂ. ಅನುದಾನ #KarnatakaBudget #KarnatakaEmpowermentBudget
Siddaramaiah tweet media
ಕನ್ನಡ
2
13
28
1.1K
Team Siddaramaiah retweetledi
Dr H C Mahadevappa(Buddha Basava Ambedkar Parivar)
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧ - ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಕನ್ನಡ
9
13
99
3K
Team Siddaramaiah retweetledi
M B Patil
M B Patil@MBPatil·
ಕರ್ನಾಟಕದ ಆರ್ಥಿಕ ಇತಿಹಾಸದಲ್ಲಿ ನಾಳೆ ಮತ್ತೊಂದು ಸುವರ್ಣಾಕ್ಷರದ ದಿನ! ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರು ನಾಳೆ ರಾಜ್ಯದ 17ನೇ ಆಯವ್ಯಯವನ್ನು ಮಂಡಿಸುವ ಮೂಲಕ, ಕರ್ನಾಟಕದ ಇತಿಹಾಸದಲ್ಲೇ ಅತ್ಯಧಿಕ ಬಾರಿ ಬಜೆಟ್ ಮಂಡಿಸಿದ ನಾಯಕರಾಗಿ ತಮ್ಮ ಹೆಸರನ್ನು ಮತ್ತೊಮ್ಮೆ ದಾಖಲಿಸಲಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದೊಂದಿಗೆ ನಾಡಿನ ಸಮಗ್ರ ಅಭಿವೃದ್ಧಿಯತ್ತ ಅವರ ದೂರದೃಷ್ಟಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಶೋಷಿತರು, ದಮನಿತರು ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಸಮಾಜದ ಎಲ್ಲಾ ಸ್ತರದ ಜನರ ಆಸೆ-ಆಕಾಂಕ್ಷೆಗಳಿಗೆ ಸ್ಪಂದಿಸುತ್ತಾ, ಎಲ್ಲ ಕನ್ನಡಿಗರ ಉಜ್ವಲ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಈ ಬಜೆಟ್ ಅತ್ಯಂತ ಮಹತ್ವದ್ದಾಗಿದೆ. ಈ ಬಾರಿಯ ಆಯವ್ಯಯವು ರಾಜ್ಯದ ಸರ್ವತೋಮುಖ ಪ್ರಗತಿಗೆ ಮತ್ತಷ್ಟು ಶಕ್ತಿ ತುಂಬಲಿದ್ದು, ಜನಸಾಮಾನ್ಯರ ಬದುಕಿನಲ್ಲಿ ಹೊಸ ಭರವಸೆ ಮೂಡಲಿದೆ. #KarnatakaBudget #karnatakabudget2026
M B Patil tweet media
ಕನ್ನಡ
9
24
236
6.4K