
ರಾಮ ಸೀತೆಯನ್ನು ಹುಡುಕಿಕೊಂಡು ಹಂಪಿಗೆ ಬಂದು ಕನ್ನಡ ಕಲಿ ಪುಂಗವ ಹನುಮನನ್ನು ಭೇಟಿಯಾದಾಗ, ಹನುಮ, ರಾಮನಿಗೆ, "ಕನ್ನಡ ಭಾಷೆಯನ್ನು ಕಲಿತುಕೊಳ್ಳಿ ಆಗ ಲಂಕೆ, ಮಾಳದ್ವೀಪ(ಮಾಲ್ಡೀವ್ಸ್), ಮಾರೀಚಪುರಿ (ಮಾರಿಷಸ್ )ಮುಂತಾದ ಪ್ರದೇಶಗಳು ಹಾಗೂ ಇಡೀ ದಕ್ಷಿಣಭಾರತದವರ ಜೊತೆ ಕನ್ನಡದಲ್ಲೇ ಮಾತನಾಡಬಹುದು" ಎಂದು ಬಿನ್ನವಿಸಿಕೊಂಡ. ಅಗಸ್ತ್ಯ ಮುನಿಗಳೂ ಕೂಡ ವನವಾಸಕ್ಕೆ ಹೊರಡುವ ಮುಂಚೆ "ಎಲ್ಲಾ ಭಾಷೆಗಳ ತಾಯಿ ಪವಿತ್ರ ಕನ್ನಡ ಭಾಷೆ ಕಲಿತುಕೊ, ನಿನಗೆ ಮುಂದೆ ಉಪಯೋಗವಾಗುತ್ತದೆ" ಎಂದು ಸೂಚ್ಯವಾಗಿ ಹೇಳಿದ್ದು ರಾಮನಿಗೆ ನೆನಪಾಗುತ್ತದೆ. ಅಂದಿನಿಂದ ರಾಮ ಲಕ್ಷ್ಮಣ ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸಲಾರಂಭಿಸಿದರು. ಮುಂದೆ ರಾಮ ಅಯೋಧ್ಯೆಯಲ್ಲೂ ವೈಜ್ಞಾನಿಕ ಭಾಷೆಯಾದ ಕನ್ನಡವನ್ನೇ ಆಡಳಿತ ಭಾಷೆಯನ್ನಾಗಿ ಮಾಡಿದ. ಕಾಲಾನಂತರ ಪರಕೀಯರ ದಾಳಿಯಿಂದಾಗಿ ಅಲ್ಲಿ ಕನ್ನಡದ ಬಳಕೆ ಕಡಿಮೆಯಾಯಿತು. ಕನ್ನಡ ಕಲಿ ಪುಂಗವ ಹನುಮನಿಗೆ ಹುಟ್ಟು ಹಬ್ಬದ ಶುಭಾಶಯಗಳು youtube.com/clip/UgkxJHWsi…





























