
Lipsa
317 posts











Bar Data - VoteIndia: Voter Trend Karnataka 2026: (4/4) Key Insights of this Voter Trend: *BJP is regaining in few seats of Coastal Karnataka where it lost in 2023. *JD(S) gaining in Mandya and Tumkur. *Congress retaining most seats in North Karnataka and Old Mysore Region.




























ಸದೃಢ ಪ್ರಜಾಪ್ರಭುತ್ವದ ಮೂಲಕವೇ ವಿಕಸಿತ ಭಾರತ ನಿರ್ಮಾಣ ಸಾಧ್ಯ! ಹಿರಿಯ ಲೋಕಸಭಾ ಸದಸ್ಯರಾದ ಶ್ರೀ @ppchaudharybjp ರವರ ಘನ ಅಧ್ಯಕ್ಷತೆಯಲ್ಲಿ, "ಒಂದು ರಾಷ್ಟ್ರ, ಒಂದು ಚುನಾವಣೆ" ಪರಿಕಲ್ಪನೆ ಹಾಗೂ ಮಸೂದೆಗಳ ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯ ಮುಂದೆ ರಾಜ್ಯದಲ್ಲಿ ಪಕ್ಷದ ವತಿಯಿಂದ ನಿಲುವನ್ನು ಮಂಡಿಸುವ ಅವಕಾಶ ದೊರಕಿತ್ತು. ಸದೃಢ ಪ್ರಜಾತಂತ್ರದ ನಿಟ್ಟಿನಲ್ಲಿ "ಒಂದು ರಾಷ್ಟ್ರ, ಒಂದು ಚುನಾವಣೆ" ಕೇವಲ ಚುನಾವಣಾ ಸುಧಾರಣೆ ಮಾತ್ರವಲ್ಲ, ಇದು ಒಂದು ರಚನಾತ್ಮಕ ಅವಶ್ಯಕತೆಯೂ ಆಗಿದೆ. ಏಕಕಾಲಿಕ ಚುನಾವಣೆಗಳಿಂದ, ದೇಶದಲ್ಲಿ ಒಂದರ ಹಿಂದೆ ಒಂದರಂತೆ, ನಿರಂತರ ಎನ್ನುವಂತಾಗಿರುವ ಚುನಾವಣಾ ವಿಧಾನದ ಚಕ್ರವನ್ನು ಕೊನೆಗೊಳಿಸಬಹುದು, ದೇಶದ ಖಜಾನೆ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು ಮತ್ತು ಸರ್ಕಾರಗಳು ಆಡಳಿತ, ಅಭಿವೃದ್ಧಿ ಕಾರ್ಯಗಳು ಮತ್ತು ಜನ ಸೇವೆಯತ್ತ ಸಂಪೂರ್ಣವಾಗಿ ಗಮನಹರಿಸಲು ಅವಕಾಶ ಸಿಗಲಿದೆ. 'ಒಂದು ರಾಷ್ಟ್ರ ಒಂದು ಚುನಾವಣೆ'ಯ ಈ ಸುಧಾರಣಾ ಪರಿಕಲ್ಪನೆಯನ್ನು ನಮ್ಮ ಪಕ್ಷ ದೃಢವಾಗಿ ಪ್ರತಿಪಾದಿಸುತ್ತದೆ. ಈ ಸಂಬಂಧ ಸಮಗ್ರ ಸಮಾಲೋಚನೆಗಳನ್ನು ನಡೆಸಲು ರಾಜ್ಯಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಅವಕಾಶ ನೀಡಿದ್ದಕ್ಕಾಗಿ ಜಂಟಿ ಸಂಸದೀಯ ಸಮಿತಿಗೆ ಕೃತಜ್ಞತೆಗಳು. ಭವಿಷ್ಯದ ನಿಶ್ಚಿತ ದೃಷ್ಟಿಕೋನದೊಂದಿಗೆ ಎಲ್ಲ ಪಾಲುದಾರರನ್ನೊಳಗೊಂಡ ಇಂತಹ ಸಮಾಲೋಚನೆಗಳೇ ನಮ್ಮ ಪ್ರಜಾಪ್ರಭುತ್ವದ ನೈಜ ಶಕ್ತಿ! #OneNationOneElection













