
ಗದಗ ರೈಲು ಬಳಕೆದಾರರು Gadag Railway Users
1.3K posts

ಗದಗ ರೈಲು ಬಳಕೆದಾರರು Gadag Railway Users
@GadagRailUsers
This account gives information about Gadag District railway activities



ನಮ್ಮ ನಿರಂತರ ಪ್ರಯತ್ನಕ್ಕೆ ಮತ್ತೊಂದು ಫಲ ವಿಜಯಪುರ–ಯಶವಂತಪುರ ಹೈಸ್ಪೀಡ್ ರೈಲು ಸೇವೆ ವಾರದಲ್ಲಿ ಎರಡು ದಿನಗಳಿಗೆ ವಿಸ್ತರಣೆ ಇದೇ ಮೇ 16ರಿಂದ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ವಿಜಯಪುರ–ಯಶವಂತಪುರ ಹೈಸ್ಪೀಡ್ ರೈಲು ಸೇವೆಯನ್ನು ಜೂನ್ 1ರಿಂದ ವಾರದಲ್ಲಿ ಎರಡು ದಿನಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಬಸವನಾಡು ಮತ್ತು ರಾಜಧಾನಿ ನಡುವಿನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. 15-16 ಗಂಟೆಗಳವರೆಗೆ ತೆಗೆದುಕೊಳ್ಳುತ್ತಿದ್ದ ಪ್ರಯಾಣದ ಅವಧಿಯನ್ನು ಈ ರೈಲು ಸುಮಾರು 11 ಗಂಟೆಗಳಿಗೆ ಇಳಿಸಿದ್ದು, ಪ್ರಯಾಣಿಕರ ಅಮೂಲ್ಯ ಸಮಯ ಉಳಿತಾಯವಾಗಲಿದೆ. ಈ ರೈಲು ಸೇವೆಯನ್ನು ಕಾಯಂಗೊಳಿಸುವುದು, ಸಂಚಾರದ ಆವರ್ತನವನ್ನು ಹೆಚ್ಚಿಸುವುದು, ಪ್ರಯಾಣದ ಅವಧಿಯನ್ನು ಮತ್ತಷ್ಟು ಕಡಿಮೆಗೊಳಿಸುವುದು ಹಾಗೂ ಸಮಯದ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರೊಂದಿಗೆ ಹಲವು ಬಾರಿ ಸಭೆ-ಚರ್ಚೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ನಮ್ಮ ಈ ಎಲ್ಲ ಸತತ ಪ್ರಯತ್ನಗಳ ಫಲವಾಗಿ ವಾರಕ್ಕೊಮ್ಮೆ ರೈಲು ಸಂಚಾರ ಆರಂಭವಾಗಿ ಇದೀಗ ವಾರದಲ್ಲಿ ಎರಡು ದಿನಗಳಿಗೆ ವಿಸ್ತರಣೆಯಾಗಿದೆ. ಮುಂದಿನ ದಿನಗಳಲ್ಲಿ ಈ ರೈಲು ಸೇವೆಯನ್ನು ಕಾಯಂಗೊಳಿಸುವ ಹಾಗೂ ಇನ್ನಷ್ಟು ಸುಧಾರಣೆಗಳನ್ನು ತರುವವರೆಗೆ ನಮ್ಮ ಪ್ರಯತ್ನ ಮತ್ತು ಹೋರಾಟ ನಿರಂತರವಾಗಿ ಮುಂದುವರಿಯಲಿದೆ.






















#Speedup Basava Express timings revised between SBC and MYS from 1.5.2026 ex. BGK SBC: 8.05/8.15 hrs MYS: 11.15 hrs







