Boodappa retweetledi

ಹೀಗೊಂದು ಗಣತಿ ಆಗಬೇಕಿದೆ.... ಏನಂತೀರಿ?
ಗಣತಿ ಮಾಡಬೇಕಾಗಿರುವುದು …
ಪ್ರಾಮಾಣಿಕ ಬಡ ವಿದ್ಯಾರ್ಥಿಗಳ ಸ್ಪರ್ಧಾರ್ಥಿಗಳ ಭವಿಷ್ಯದ ಕನಸುಗಳ ಗಣತಿ!
👉ಅತಿ ವೇಗದಲ್ಲಿ ಎಲ್ಲವೂ ಬದಲಾಗುತ್ತಿರುವ ಈ ಕಾಲಮಾನದಲ್ಲಿ ನಮಗೆ ಬೇಕಾಗಿರುವುದು ನಿಮ್ಮ ಈ ವೋಟ್ ಬ್ಯಾಂಕ್ ಓಲೈಸುವ ಗಣತಿ ಅಲ್ಲ......👈
👉ಕೆ.ಪಿ.ಎಸ್ಸಿ ಯಲ್ಲಿ ಎಷ್ಟು ಪ್ರಾಮಾಣಿಕ ಮತ್ತು ಎಷ್ಟು ಕಳಂಕಿತ ಅಧಿಕಾರಿಗಳು ಇದ್ದಾರೆ ಎಂಬುದರ ಗಣತಿ .👈
👉ಕೆ.ಪಿ.ಎಸ್ಸಿ ಯಿಂದ ಎಷ್ಟು ನೇಮಕಾತಿಗಳು ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂಬುದರ ಗಣತಿ..... ನೇಮಕಾತಿಯಲ್ಲಿ ಎಷ್ಟು ಹಗರಣಗಳು ಆಗಿವೆ?
ತಪ್ಪಿತಸ್ಥರಿಗೆ ಆಗಿರುವ ಶಿಕ್ಷೆಯ ಗಣತಿ.... ಇನ್ನೂ ಯಾಕೇ ಹಗರಣಗಳು ಮುಂದುವರೆದಿವೆ? ಎಂಬುದರ ಗಣತಿ 👈
👉ಕೆ.ಪಿ.ಎಸ್ಸಿ ಯಿಂದ ಎಷ್ಟು ಬಡ ಗ್ರಾಮೀಣ ಕನ್ನಡ ಅಭ್ಯರ್ಥಿಗಳು ನೇಮಕಾತಿ ಆಗಿದ್ದಾರೆ ಎಂಬ ಗಣತಿ 👈
👉 ಬೆಂಗಳೂರಿನ ವಿಜಯನಗರ, ಹಂಪಿನಗರ , ಚಂದ್ರ ಲೇಔಟ್, ಧಾರವಾಡ, ವಿಜಯಪುರ ಗಳಲ್ಲಿ ಹೊಟ್ಟೆ ಅರ್ಧಂಬರ್ಧ ಇಟ್ಟುಕೊಂಡು ಹಗಲು ರಾತ್ರಿ ಕಷ್ಟ ಪಟ್ಟು ಪ್ರಾಮಾಣಿಕರಾಗಿ ಓದುತ್ತಿರುವವರ ತಂದೆ ತಾಯಿ ಅವರ ಕನಸುಗಳ ಗಣತಿ 👈
👉 ನನ್ನ ಮಗ / ಮಗಳು ಕುಟುಂಬದ ಬಡತನದಿಂದ ನಮ್ಮನ್ನು ಪಾರು ಮಾಡುತ್ತಾನೆ
ಅವರ ನಂಬಿಕೆಗಳಿಗೆ ಸರ್ಕಾರದ ಕಾರ್ಯವೈಖರಿ ಹಾಗೂ ಕೈಗೊಂಡಿರುವ ಯೋಜನೆಗಳ ಗಣತಿ 👈
👉 ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಆಗಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಗಣತಿ 👈
👉ಸೋ ಕಾಲ್ಡ್ ತಜ್ಞರು ತಜ್ಞರಾಗಲು ಅರ್ಹತೆ ಇದೆಯೇ ಎಂಬುದರ ಗಣತಿ 👈
👉ಸರ್ಕಾರಿ ಅಧಿಕಾರಿಗಳು ಶಾಸಕರು, ಸಂಸದರು,ಮಂತ್ರಿ ಮಹೋದಯರ ಸಂಬಂಧಿಗಳು ಎಷ್ಟು ಜನ ಸರ್ಕಾರಿ ಹುದ್ದೆಗಳಲ್ಲಿ ಇದ್ದಾರೆ ಎಂಬುದರ ಗಣತಿ .👈
👉ಅವರು ಸಮಾಜಕ್ಕೆ ಎಷ್ಟು ಸೇವೆ ಮಾಡಿದ್ದಾರೆ ಅನ್ನೋದರ ಗಣತಿ ಬೇಕು.👈
👉ಅಧಿಕಾರಿಗಳು ಭ್ರಷ್ಟಾಚಾರ ಮಾಡಿ ಕೊಳ್ಳೆ ಹೊಡೆದ ಹಣದ ಗಣತಿ...👈
👉ಎಷ್ಟು ಅಧಿಕಾರಿಗಳು ಕಳಂಕಿತ ಇದ್ದಾರೆ ಎಂಬುದರ ಗಣತಿ.... ಅವರು ಕೊಳ್ಳೆ ಹೊಡೆದಿರುವ ಆಸ್ತಿಯ ಗಣತಿ 👈
👉ಪ್ರತಿ ಸರ್ಕಾರಿ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಗಣತಿ..👈
👉ಪ್ರತಿ ವರ್ಷ ಎಷ್ಟು ಹುದ್ದೆಗಳು KTTP ಟೆಂಡರ್ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಆಗುತ್ತಿವೆ ಅನ್ನೋದರ ಗಣತಿ.....👈
👉ಸರ್ಕಾರಿ ಇಲಾಖೆಗಳಲ್ಲಿ ಎಷ್ಟು ಜನರು ಹೊರಗುತ್ತಿಗೆ, ಒಳಗುತ್ತಿಗೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಗಣತಿ.. ಇದರಲ್ಲಿ ಎಷ್ಟು ಜನ ಹಿಂಬಾಗಿಲಿನಿಂದ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಆಗಿ ಖಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದರ ಗಣತಿ.....👈
👉Degree , Engineering ಮುಗಿಸಿ ಕೆಲಸ ಇಲ್ಲದೆ ಇರೋ ನಿರುದ್ಯೋಗಿ ಯುವಕರ ಗಣತಿ ಆಗಬೇಕಿದೆ....ಅವರಿಗೆ ಹೊಸ ಹೊಸ skills ಅಂದ್ರೆ Skill Development, Entrepreneurship, Start-up Ecosystem ಕಲಿಸಿ ದುಡಿಮೆಯ ದಾರಿ ತೋರಿಸುವ ಬಗ್ಗೆ ಗಣತಿ ಆಗಬೇಕಿದೆ. 👈
👉ಕಳೆದ 15-20 ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಗಣತಿ...
ಕೃಷಿಕರ ಬದುಕನ್ನು ಹೇಗೆ Technolgy ಬಳಸಿ ಬದಲಾವಣೆ ಮಾಡಬಹುದು ಅನ್ನೋದರ ಗಣತಿ. 👈
👉ಪ್ರತಿ ವರ್ಷ ಮುಚ್ಚುತ್ತಿರುವ ಸರ್ಕಾರಿ ಕನ್ನಡ ಶಾಲೆಗಳ ಗಣತಿ👈
ಯಾಕೆ ಮುಚ್ಚುತ್ತಿವೆ ಅನ್ನುವುದರ ಗಣತಿ
ಹೇಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಬಹುದು ಅನ್ನೋದರ ಗಣತಿ👈
👉 ಶಿಕ್ಷಣ ಎಂಬ ಹೆಸರಲ್ಲಿ ಹೊಸ ಹೊಸ ಯೋಜನೆ ಜಾರಿಗೆ ತಂದು , ಅದರಲ್ಲಿ ಸಿಕ್ಕ ಸಿಕ್ಕವರು ಕೊಳ್ಳೆ ಹೊಡೆದ ದುಡ್ಡಿನ ಗಣತಿ.👈
👉 ಶಿಕ್ಷಣ ಫಲಿತಾಂಶದಲ್ಲಿ ಕುಸಿತ ಯಾಕೆ ಎಂಬ ಅಂಶಗಳನ್ನು ಗಮನಿಸಿ ಫಲಿತಾಂಶ ಹೆಚ್ಚಾಗಲು ಆಗಬೇಕಾಗಿದೆ ಗಣತಿ👈
👉 ಸಾಕ್ಷರತಾ ಪ್ರಮಾಣ ಹೆಚ್ಚಾಗಲು ಡ್ರಾಪ್ ಔಟ್ ಸಂಖ್ಯೆ ಹೋಗಿಸಲು ಆಗಬೇಕಾಗಿದೆ ಗಣತಿ 👈
👉ಮಳೆ, ಬರ, ಕುಡಿಯುವ ನೀರಿನ ತೀವ್ರತೆ- ಇದನೆಲ್ಲ ಹೇಗೆ ವೈಜ್ಞಾನಿಕ ರೀತಿಯಲ್ಲಿ ಪರಿಹರಿಸಬಹುದು ಎಂಬುದರ ಗಣತಿ ಬೇಕು…ನೈಸರ್ಗಿಕ ಅನಾಹುತಗಳ ವಿರುದ್ಧ ನಾವೆಷ್ಟು ತಯಾರಾಗಿದ್ದೀವಿ ಅನ್ನೋದರ ಲೆಕ್ಕ ಬೇಕು.👈
👉ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹೊಸ ಹೊಸ ಉದ್ಯಮ ಸ್ಥಾಪನೆ ಮಾಡುವ ಕುರಿತು ಗಣತಿ ಆಗಬೇಕಾಗಿದೆ 👈
👉ಕರ್ನಾಟಕದ ಮಕ್ಕಳಿಗೆ Digital Literacy, AI ಹೇಗೆ ಕಲಿಸಬಹುದು ಅನ್ನೋದರ ಗಣತಿ ಆಗಬೇಕಿದೆ..👈
👉ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ personal finance, ಹಣ, ದುಡಿಮೆಯ ಮಹತ್ವ ಅರಿವು ಮೂಡಿಸಲು ಬೇಕಾದ ಕಾರ್ಯಕ್ರಮಗಳ ಬಗ್ಗೆ ಗಣತಿ ಆಗಬೇಕಿದೆ..👈
👉AI,Machine Learning,Data Science ಬಳಸಿಕೊಂಡು ನಾವು ಹೇಗೆ ಮುಂದುವರೆಯ ಬಹುದು ಅನ್ನೋದರ ಗಣತಿ.👈
ಕನ್ನಡ
















